ಕಾಲು ಮುರಿದುಕೊಂಡ ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್: Speedy recovery ಎಂದ ಟ್ರಂಪ್

ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್ ತಮ್ಮ ಮುದ್ದಿನ ನಾಯಿ ಜೊತೆ ಆಟವಾಡುವಾಗ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಾತ್ರಿ ಚುನಾಯಿತ ಅಧ್ಯಕ್ಷರಾಗಿರುವ ಬೈಡನ್​ಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.

ಕಾಲು ಮುರಿದುಕೊಂಡ ಅಮೆರಿಕದ ನಿಯೋಜಿತ ಅಧ್ಯಕ್ಷ ಬೈಡನ್: Speedy recovery ಎಂದ ಟ್ರಂಪ್
ಜೋ ಬಿಡೆನ್ ಮತ್ತು ಡೊನಾಲ್ಡ್ ಟ್ರಂಪ್
Follow us
ಆಯೇಷಾ ಬಾನು
|

Updated on:Dec 02, 2020 | 7:40 AM

ಅಮೆರಿಕಾದ ನಿಯೋಜಿತ ಅಧ್ಯಕ್ಷ ಬೈಡನ್ ತಮ್ಮ ಮುದ್ದಿನ ನಾಯಿ ಜೊತೆ ಆಟವಾಡುವಾಗ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಾತ್ರಿ ಚುನಾಯಿತ ಅಧ್ಯಕ್ಷರಾಗಿರುವ ಬೈಡನ್​ಗೆ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ.

ಅಮೆರಿಕ ಚುನಾವಣೆ ನಂತರ ಆರೋಪಗಳನ್ನು ಮಾಡುತ್ತ ಜಿದ್ದಾ ಜಿದ್ದಿನಲ್ಲಿದ್ದ ಟ್ರಂಪ್, ಬೈಡನ್ ಆರೋಗ್ಯ ಚೇತರಿಸಿಕೊಳ್ಳಬೇಕೆಂದು ಹಾರೈಸಿದ್ದಾರೆ. “ಬೇಗ ಚೇತರಿಸಿಕೊಳ್ಳಿ!” ಎಂದು ಟ್ವೀಟ್ ಮಾಡಿದ್ದಾರೆ.

ಕಾಲು ಮುರಿದುಕೊಂಡ ಬೈಡನ್: ಭಾನುವಾರ ಬೆಳಗ್ಗೆ ಬೈಡನ್ ತಮ್ಮ ಮುದ್ದಿನ ನಾಯಿ ಜೊತೆ ಆಟವಾಡುವಾಗ ಕಾಲು ಜಾರಿ ಬಿದ್ದಿದ್ದರು. ಅವರ ಪಾದದ ಮಧ್ಯ ಭಾಗದಲ್ಲಿ ಚಿಕ್ಕ ಪ್ರಮಾಣದ ಫ್ರಾಕ್ಚರ್ ಆಗಿದೆ. ಹೀಗಾಗಿ ಅವರು ಕೆಲವು ವಾರಗಳ ಮಟ್ಟಿಗೆ ವಾಕಿಂಗ್ ಬೂಟ್ ಧರಿಸುವುದು ಅನಿವಾರ್ಯ ಎಂದು ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ಹೋದಾ ಆರಂಭದ ಎಕ್ಸ್-ರೇಗಳಲ್ಲಿ ಕಾಲು ಮುರಿದ ಬಗ್ಗೆ ಕಂಡು ಬಂದಿರಲಿಲ್ಲ. ಆದರೆ ಅವರ ಕ್ಲಿನಿಕಲ್ ತಪಾಸಣೆಯಿಂದ ಹೆಚ್ಚಿನ ವಿವರವಾದ ಚಿತ್ರಣ ದೊರೆತಿದೆ ಎಂದು ಡಾ.ಕೆವಿನ್ ಒ ಕಾನರ್ ತಿಳಿಸಿದ್ದಾರೆ. ಸಿಟಿ ಸ್ಕ್ಯಾನ್​ನಲ್ಲಿ ಬೈಡನ್ ಕಾಲಿನ ಮೂಳೆ ಸಣ್ಣದಾಗಿ ಮುರಿದಿರುವುದು ಖಚಿತವಾಗಿದೆ.

ಇದನ್ನೂ ಓದಿ: ಬಿಡೆನ್ ಪರ ಎಫ್​ಬಿಐ ಶಾಮೀಲು: ಡೊನಾಲ್ಡ್​ ಟ್ರಂಪ್ ಹೊಸ ಆರೋಪ

Published On - 8:27 am, Tue, 1 December 20