ಅವಳಿ ಜವಳಿ ಸಹೋದರ-ಸಹೋದರಿಯರು ಮದುವೆ ಆದ್ಮೇಲೆ ಈಗ ಒಟ್ಟಿಗೇ ತಾಯಾಂದಿರೂ ಆಗ್ತಿದಾರೆ!

|

Updated on: Aug 17, 2020 | 6:22 PM

ಅಮೆರಿಕದಲ್ಲಿ ಇಬ್ಬರು ಸುಂದರ ಅವಳಿ ಸಹೋದರಿಯರು,ಇಬ್ಬರು ಅವಳಿ ಯುವಕರನ್ನು ಮದುವೆಯಾಗಬೇಕೆಂದು ಆಶಿಸುತ್ತಿದ್ದರು.. ಆ ಆಸೆ ಈಡೇರಿತು. ನಂತರ.. ಇತ್ತೀಚೆಗೆ ಇಬ್ಬರು ಅವಳಿ ಸಹೋದರಿಯರು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದೇವೆ ಎಂದು ಘೋಷಿಸಿ ಕೊಂಡಿದ್ದಾರೆ. ಬ್ರಿಟಾನಿ ಮತ್ತು ಬ್ರಿಯಾನಾ ಡೀನ್ ಇಬ್ಬರೂ same to same ಅವಳಿಗಳಾಗಿದ್ದು, ಜೋಶ್ ಮತ್ತು ಜೆರೆಮಿ ಸ್ಯಾಲಿಯರ್ಸ್ ಎಂಬಿಬ್ಬರು Ditto ಅವಳಿ ಸಹೋದರರನ್ನು ಮದುವೆಯಾದರು. ಈ ಅವಳಿ ದಂಪತಿ ಜೋಡಿಗಳು ಒಂದೇ ಇನ್​ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದು, ಆ ಖಾತೆಯಲ್ಲಿ ತಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು […]

ಅವಳಿ ಜವಳಿ ಸಹೋದರ-ಸಹೋದರಿಯರು ಮದುವೆ ಆದ್ಮೇಲೆ ಈಗ ಒಟ್ಟಿಗೇ ತಾಯಾಂದಿರೂ ಆಗ್ತಿದಾರೆ!
Follow us on

ಅಮೆರಿಕದಲ್ಲಿ ಇಬ್ಬರು ಸುಂದರ ಅವಳಿ ಸಹೋದರಿಯರು,ಇಬ್ಬರು ಅವಳಿ ಯುವಕರನ್ನು ಮದುವೆಯಾಗಬೇಕೆಂದು ಆಶಿಸುತ್ತಿದ್ದರು.. ಆ ಆಸೆ ಈಡೇರಿತು. ನಂತರ.. ಇತ್ತೀಚೆಗೆ ಇಬ್ಬರು ಅವಳಿ ಸಹೋದರಿಯರು ಒಂದೇ ಸಮಯದಲ್ಲಿ ಗರ್ಭಿಣಿಯರಾಗಿದ್ದೇವೆ ಎಂದು ಘೋಷಿಸಿ ಕೊಂಡಿದ್ದಾರೆ.

ಬ್ರಿಟಾನಿ ಮತ್ತು ಬ್ರಿಯಾನಾ ಡೀನ್ ಇಬ್ಬರೂ same to same ಅವಳಿಗಳಾಗಿದ್ದು, ಜೋಶ್ ಮತ್ತು ಜೆರೆಮಿ ಸ್ಯಾಲಿಯರ್ಸ್ ಎಂಬಿಬ್ಬರು Ditto ಅವಳಿ ಸಹೋದರರನ್ನು ಮದುವೆಯಾದರು.

ಈ ಅವಳಿ ದಂಪತಿ ಜೋಡಿಗಳು ಒಂದೇ ಇನ್​ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದು, ಆ ಖಾತೆಯಲ್ಲಿ ತಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ಜೊತೆಯಾಗಿ ಹಂಚಿಕೊಳ್ಳುತ್ತಾರೆ! ಇತ್ತೀಚೆಗೆ ಈ ಜೋಡಿಗಳು ಒಂದೇ ಬಾರಿಗೆ ತಾವಿಬ್ಬರೂ ಗರ್ಭಿಣಿಯಾರಾಗಿರುವ ಸಂಗತಿಯನ್ನೂ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಆಗಸ್ಟ್ 14ರಂದು ಈ ವಿಚಾರವನ್ನು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಹಂಚಿಕೊಂಡಿರುವ ಅವಳಿ-ಜವಳಿ ದಂಪತಿಗಳು, ತಮಗೆ ಹುಟ್ಟುವ ಮಕ್ಕಳೂ ಸಹ ಕೇವಲ ಸೋದರ ಸಂಬಂಧಿಗಳು ಮಾತ್ರವಲ್ಲದೆ, ಅನುವಂಶಿಕ ಒಡಹುಟ್ಟಿದವರಾಗಿದ್ದಾರೆ. ಈ ಮಕ್ಕಳ ಬರುವಿಕೆಯನ್ನು ನಾವುಗಳು ಕಾತರದಿಂದ ಕಾಯುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.