Chief Twit: ಡೀಲ್ ಮುಗಿಯುವ ಮೊದಲೇ ಟ್ವಿಟರ್ ಬಯೋ ಬದಲಿಸಿದ ಎಲಾನ್ ಮಸ್ಕ್

Elon Musk: ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಟ್ವಿಟರ್ ಕಚೇರಿಗೆ ತಂದಿದ್ದ ಮಸ್ಕ್, ‘ಟ್ವಿಟರ್ ಕಚೇರಿಗೆ ಹೋಗುತ್ತಿದ್ದೇನೆ. ಅದು ನನ್ನೊಂದಿಗೆ ಬೆರೆತುಕೊಳ್ಳಲಿ’ ಎಂದು ವಿಡಿಯೊ ಪೋಸ್ಟ್ ಮಾಡಿದ್ದರು.

Chief Twit: ಡೀಲ್ ಮುಗಿಯುವ ಮೊದಲೇ ಟ್ವಿಟರ್ ಬಯೋ ಬದಲಿಸಿದ ಎಲಾನ್ ಮಸ್ಕ್
ಎಲಾನ್ ಮಸ್ಕ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 27, 2022 | 9:10 AM

ಟೆಸ್ಲಾ ಕಂಪನಿಯ ಮುಖ್ಯಸ್ಥ ಎಲಾನ್ ಮಸ್ಕ್ (Elon Musk) ತಮ್ಮ ಟ್ವೀಟ್ ಖಾತೆಯಲ್ಲಿರುವ ವೈಯಕ್ತಿಕ ವಿವರಗಳನ್ನು ಬದಲಿಸಿದ್ದಾರೆ. 44 ಶತಕೋಟಿ ಡಾಲರ್ ಮೊತ್ತದ ಟ್ವೀಟ್ ಖರೀದಿ ಪ್ರಕ್ರಿಯೆ ಮುಗಿಯುವ ಮೊದಲೇ ತಮ್ಮನ್ನು ತಾವು ‘Chief Twit’ (ಟ್ವಿಟರ್ ಮುಖ್ಯಸ್ಥ) ಎಂದು ಕರೆದುಕೊಂಡಿದ್ದಾರೆ. ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಸ್ಯಾನ್​ಫ್ರಾನ್ಸಿಸ್ಕೊ ನಗರದಲ್ಲಿರುವ ಟ್ವಿಟರ್ ಕಂಪನಿಯ ಕೇಂದ್ರ ಕಚೇರಿಗೆ ಬುಧವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಕೈಲಿ ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಟ್ವಿಟರ್ ಕಚೇರಿಗೆ ತಂದರು. ‘ಟ್ವಿಟರ್ ಕಚೇರಿಗೆ ಹೋಗುತ್ತಿದ್ದೇನೆ. ಅದು ನನ್ನೊಂದಿಗೆ ಬೆರೆತುಕೊಳ್ಳಲಿ’ (Entering Twitter HQ – let that sink in!) ಎಂದು ಈ ವಿಡಿಯೊಗೆ ಒಕ್ಕಣೆ ಬರೆದುಕೊಂಡಿದ್ದಾರೆ.

ಮಸ್ಕ್ ಭೇಟಿಗೂ ಮುನ್ನ ಟ್ವಿಟರ್​ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಲೆಸ್ಲಿ ಬರ್​ಲೆಂಡ್ ಎಲ್ಲ ಸಿಬ್ಬಂದಿಗೂ ಕಳಿಸಿದ್ದ ಇಮೇಲ್​ನಲ್ಲಿ ‘ವಹಿವಾಟು ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಟ್ವಿಟರ್​ನ ಸ್ಯಾನ್​ಫ್ರಾನ್ಸಿಸ್ಕೊ ಕಚೇರಿಗೆ ಮಸ್ಕ್ ಬರಲಿದ್ದಾರೆ’ ಎಂದು ಹೇಳಿದ್ದರು. ಟ್ವಿಟರ್ ಖರೀದಿ ಪ್ರಕ್ರಿಯೆಯು ಕಳೆದ ಏಪ್ರಿಲ್ ತಿಂಗಳಿಂದ ಚರ್ಚೆಯಲ್ಲಿದೆ. ಹಲವು ನಾಟಕೀಯ ಬೆಳವಣಿಗೆಗಳೂ ನಡೆದವು. ನಕಲಿ ಖಾತೆಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ, ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಟ್ವಿಟರ್​ನ ಉನ್ನತ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ಮಸ್ಕ್ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.

ಇದನ್ನು ವಿರೋಧಿಸಿ ಟ್ವಿಟರ್​ ಮಸ್ಕ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿತ್ತು. ‘ಖರೀದಿ ಒಪ್ಪಂದ ಉಲ್ಲಂಘಿಸಲು ಮಸ್ಕ್ ನಕಲಿ ಖಾತೆಗಳ ನೆಪ ಹೇಳುತ್ತಿದ್ದಾರೆ’ ಎಂದು ಟ್ವಿಟರ್ ದೂರಿತ್ತು.

ಕಾನೂನು ಸಮರ ಮುಂದುವರಿದರೆ ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯ ಪ್ರಬಲಗೊಂಡ ನಂತರ ಮಸ್ಕ್ ಟ್ವೀಟರ್ ಖರೀದಿ ಪ್ರಕ್ರಿಯೆ ಮುಂದುವರಿಸಿದರು. ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಅ 28ಕ್ಕೆ ಮುಂದೂಡಿ, ಅಷ್ಟರೊಳಗೆ ವಹಿವಾಟು ಅಂತಿಮ ಘಟ್ಟಕ್ಕೆ ಬರಬೇಕು ಎಂದಿದ್ದರು. ಟ್ವಿಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಮಸ್ಕ್ ಅವರಿಗೆ ಇನ್ನು ಕೇವಲ ಒಂದು ದಿನದ ಅವಕಾಶವಿದೆ.

ಇದನ್ನೂ ಓದಿ: Elon Musk: ಎಲಾನ್ ಮಸ್ಕ್ ಮಾಲೀಕರಾದರೆ ಟ್ವಿಟರ್​ನ 75% ಉದ್ಯೋಗಿಗಳ ವಜಾ; ವರದಿ

Published On - 9:09 am, Thu, 27 October 22