Covid 19: ಒಂದು ವಾರದೊಳಗೆ ಯುರೋಪ್ಗೆ ಅಪ್ಪಳಿಸಲಿದೆ ಹೊಸ ಕೋವಿಡ್-19 ಅಲೆ
ಒಂದು ವಾರದೊಳಗೆ ಯುರೋಪ್ಗೆ ಹೊಸ ಕೋವಿಡ್ ಅಲೆ ಅಪ್ಪಳಿಸಲಿದೆ ಎಂದು ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಲಸಿಕೆಗಳ ಪೂರೈಕೆಗಿಂತ ವೈರಸ್ನ ಹೊಸ ರೂಪಾಂತರಗಳು ವೇಗವಾಗಿ ವಿಕಸನಗೊಳ್ಳುತ್ತಿವೆ ಎಂದು ಹೇಳಲಾಗಿದೆ.
ಒಂದು ವಾರದೊಳಗೆ ಯುರೋಪ್ಗೆ ಹೊಸ ಕೋವಿಡ್ ಅಲೆ ಅಪ್ಪಳಿಸಲಿದೆ ಎಂದು ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಲಸಿಕೆಗಳ ಪೂರೈಕೆಗಿಂತ ವೈರಸ್ನ ಹೊಸ ರೂಪಾಂತರಗಳು ವೇಗವಾಗಿ ವಿಕಸನಗೊಳ್ಳುತ್ತಿವೆ ಎಂದು ಹೇಳಲಾಗಿದೆ. ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿಯು ಕೋವಿಡ್ ಸಾಂಕ್ರಾಮಿಕ ರೋಗವು ಇನ್ನೂ ಮುಗಿದಿಲ್ಲ, ಹೊಸ ರೂಪಾಂತರಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೇಳಿದೆ.
ಕಳೆದ ವಾರ BQ.1 ಎಂದು ಕರೆಯಲ್ಪಡುವ ಈ ಹೊಸ Omicron ರೂಪಾಂತರಗಳಲ್ಲಿ ಒಂದು ಐದು ದೇಶಗಳಲ್ಲಿ ಪತ್ತೆಯಾಗಿತ್ತು. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಆಂಡ್ ಕಂಟ್ರೋಲ್ ಪ್ರಕಾರ ಕೊರೊನಾದ ಹೊಸ ರೂಪಾಂತರಿಯು ನವೆಂಬರ್ ಮಧ್ಯದಿಂದ ಡಿಸೆಂಬರ್ವರೆಗೆ ಪ್ರಬಲ ಪರಿಣಾಮ ಬೀರಲಿದೆ ಎಂದು ಹೇಳಿದೆ.
ಕೋವಿಡ್ ವಿರುದ್ಧ ಲಸಿಕೆಗಳು ಇನ್ನೂ ಪರಿಣಾಮಕಾರಿಯಾಗಿವೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ. ಅದೇ ಸಮಯದಲ್ಲಿ, ಯುರೋಪಿಯನ್ ಆರೋಗ್ಯ ಅಧಿಕಾರಿಗಳು ಈ ಚಳಿಗಾಲದಲ್ಲಿ ಹರಡಬಹುದಾದ ಇನ್ಫ್ಲುಯೆನ್ಸ ವೈರಸ್ ವಿರುದ್ಧ ಲಸಿಕೆಗಳನ್ನು ಪಡೆಯಲು ಜನರಲ್ಲಿ ಮನವಿ ಮಾಡಿದ್ದಾರೆ. BQ.1.1 ಸಬ್‌ವೇರಿಯಂಟ್ ಕನಿಷ್ಠ 29 ದೇಶಗಳಲ್ಲಿ ಹರಡಿದೆ.
ಓಮಿಕ್ರಾನ್ ಹೊಸ ರೂಪಾಂತರಗಳಾದ BA.5.1.7 ಮತ್ತು BF.7 ಅನ್ನು ಓಮಿಕ್ರಾನ್ ಸ್ಪಾನ್ ಎಂದು ಸಹ ಕರೆಯುತ್ತಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಪ್ರಪಂಚದೆಲ್ಲೆಡೆ ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಕ್ರಮೇಣ ಇಳಿಮುಖವಾಗುತ್ತಿದ್ದರೂ ಈ ವೈರಸ್ ನಿರಂತರವಾಗಿ ಹೊಸ ಹಾಗೂ ಹೆಚ್ಚು ರೂಪಾಂತರಗಳಾಗಿ ವಿಕಸನಗೊಳ್ಳುತ್ತಿರುವುದೇ ಈಗ ಆರೋಗ್ಯ ತಜ್ಞರ ಆತಂಕವನ್ನು ಹೆಚ್ಚಿಸಿದೆ.
ಚೀನಾದಲ್ಲಿ ಹರಡುತ್ತಿರುವ ಓಮಿಕ್ರಾನ್ ಸ್ಪಾನ್ ಅಕ್ಟೋಬರ್ 11 ರಂದು, ಓಮಿಕ್ರಾನ್ ಸ್ಪಾನ್ ಎಂಬ ಓಮಿಕ್ರಾನ್ ಹೊಸ ರೂಪಾಂತರ, BA.5.1.7 ಮತ್ತು BF 7 ಗಳು ಚೀನಾದ ಮಂಗೋಲಿಯಾದ ಪ್ರದೇಶದಲ್ಲಿ ಕಂಡುಬಂದಿದೆ. ಇದೀಗ ಚೀನಾದ ಹಲವು ಜಿಲ್ಲೆಗಳಿಗೂ ವೇಗವಾಗಿ ಹರಡುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ