ಆಸ್ಟ್ರೇಲಿಯಾದ ಗ್ರಾಮೀಣ ಪ್ರದೇಶದಲ್ಲಿ ಗುಂಡಿನ ಚಕಮಕಿ: ಇಬ್ಬರು ಪೊಲೀಸರು ಸೇರಿ 6 ಜನ ಸಾವು

| Updated By: ಆಯೇಷಾ ಬಾನು

Updated on: Dec 13, 2022 | 7:25 AM

ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಹುಡುಕಾಟಕ್ಕೆ ಪೊಲೀಸರು ತೆರಳಿದ್ದ ವೇಳೆ ಗುಂಡಿನ ದಾಳಿ ನಡೆದಿದ್ದು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ 6 ಜನರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

ಆಸ್ಟ್ರೇಲಿಯಾದ ಗ್ರಾಮೀಣ ಪ್ರದೇಶದಲ್ಲಿ ಗುಂಡಿನ ಚಕಮಕಿ: ಇಬ್ಬರು ಪೊಲೀಸರು ಸೇರಿ 6 ಜನ ಸಾವು
ಸಾಂದರ್ಭಿಕ ಚಿತ್ರ
Follow us on

ಸಿಡ್ನಿ: ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್ ರಾಜ್ಯದ ನಿರ್ಜನ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ 6 ಜನರು ಮೃತ ಪಟ್ಟಿದ್ದಾರೆ. ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಹುಡುಕಾಟಕ್ಕೆ ಪೊಲೀಸರು ತೆರಳಿದ್ದ ವೇಳೆ ಗುಂಡಿನ ದಾಳಿ ನಡೆದಿದ್ದು ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿ 6 ಜನರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ.

ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬನ ಹುಡುಕಾಟದಲ್ಲಿದ್ದ ಪೊಲೀಸ್ ಅಧಿಕಾರಿಗಳು ಕ್ವೀನ್ಸ್‌ಲ್ಯಾಂಡ್ ರಾಜಧಾನಿ ಬ್ರಿಸ್ಬೇನ್‌ನ ವಾಯುವ್ಯಕ್ಕೆ 300 ಕಿಮೀ ದೂರದಲ್ಲಿರುವ ವೈಯಾಂಬಿಲ್ಲಾದಲ್ಲಿನ ನಿವಾಸವನ್ನು ಸಮೀಪಿಸಿದ್ದಾರೆ. ಈ ವೇಳೆ ಡಿ.12ರ ಸಂಜೆ ಸುಮಾರು 4.30ಕ್ಕೆ ಇಬ್ಬರು ಶಸ್ತ್ರಸಜ್ಜಿತ ಅಪರಾಧಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ರಾಜ್ಯ ಪೊಲೀಸರು ಪ್ರಾಥಮಿಕ ಮಾಹಿತಿಯನ್ನು ನೀಡಿದ್ದಾರೆ.

ಇದನ್ನೂ ಓದಿ: ಜಾಗತಿಕ ಮಟ್ಟದ ಶಾಂತಿ ಸೂತ್ರ ಶೃಂಗಸಭೆಗೆ ಕರೆ ನೀಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ

ಇನ್ನು ಸ್ಥಳದಲ್ಲಿದ್ದ ಮತ್ತಿಗೆ ರೀತಿಯ ಪರಿಸ್ಥಿತಿಗೆ ತಜ್ಞ ಅಧಿಕಾರಿಗಳು ಮತ್ತು ವಾಯು ಬೆಂಬಲ ಪಡೆ ಸ್ಪಂದಿಸಿದ ನಂತರ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಓರ್ವ ಸಾರ್ವಜನಿಕ ಸಹ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಈ ಘಟನೆ ಸಂಬಂಧ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಹಾಗೂ ಈ ಘಟನೆಯನ್ನು ಇದೊಂದು ಭಯಾನಕ ಹಾಗೂ ಹೃದಯ ವಿದ್ರಾವಕ ಘಟನೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ. “ಕರ್ತವ್ಯದಲ್ಲಿದ್ದಾಗ ಪ್ರಾಣ ಕಳೆದುಕೊಂಡ ಕ್ವೀನ್ಸ್‌ಲ್ಯಾಂಡ್ ಪೊಲೀಸ್ ಅಧಿಕಾರಿಗಳು ಮತ್ತು ಮೃತರ ಕುಟುಂಬ, ಸ್ನೇಹಿತರಿಗೆ ಇದೊಂದು ಭಯಾನಕ ಮತ್ತು ಹೃದಯ ವಿದ್ರಾವಕ ದಿನ” ಎಂದು ವಿವರಿಸಿದ್ದಾರೆ.

ಕ್ವೀನ್ಸ್‌ಲ್ಯಾಂಡ್ ಪೊಲೀಸ್ ಕಮಿಷನರ್ ಕಟರೀನಾ ಕ್ಯಾರೊಲ್ ಮಾತನಾಡಿ, ಈ ಗುಂಡಿನ ದಾಳಿಯು ಇತ್ತೀಚಿನ ದಿನಗಳಲ್ಲಿ ರಾಜ್ಯ ಪೊಲೀಸರು ಒಂದು ಘಟನೆಯಲ್ಲಿ ಅನುಭವಿಸಿದ ಅತಿದೊಡ್ಡ ಜೀವಹಾನಿಯಾಗಿದೆ. ಸಾವುಗಳು ಸೇರಿದಂತೆ ಘಟನೆ ಸಂಬಂಧ ತನಿಖೆ ಮಾಡಲಾಗುವುದು ಎಂದು ಕ್ಯಾರೊಲ್ ಹೇಳಿದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ