US Drone: ಕಪ್ಪು ಸಮುದ್ರದ ಬಳಿ ಅಮೆರಿಕದ ಮಿಲಿಟರಿ ಡ್ರೋನ್​ಗೆ ರಷ್ಯಾದ ಯುದ್ಧ ವಿಮಾನ ಡಿಕ್ಕಿ, ಪರಿಸ್ಥಿತಿ ಉದ್ವಿಗ್ನ

ಉಕ್ರೇನ್​ಗೆ ಬೆಂಬಲ ನೀಡಿದ್ದಕ್ಕಾಗಿ ಅಮೆರಿಕದ ಮೇಲೂ ಸಮರ ಸಾರಲು ರಷ್ಯಾ ಸಜ್ಜಾಗುತ್ತಿದೆ. ಇದೀಗ ಅಮೆರಿಕದ ಮಿಲಿಟರಿ ಡ್ರೋನ್​ ಒಂದನ್ನು ರಷ್ಯಾ ನಾಶ ಪಡಿಸಿ ಕಪ್ಪು ಸಮುದ್ರಕ್ಕೆ ಎಸೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.

US Drone: ಕಪ್ಪು ಸಮುದ್ರದ ಬಳಿ ಅಮೆರಿಕದ ಮಿಲಿಟರಿ ಡ್ರೋನ್​ಗೆ ರಷ್ಯಾದ ಯುದ್ಧ ವಿಮಾನ ಡಿಕ್ಕಿ, ಪರಿಸ್ಥಿತಿ ಉದ್ವಿಗ್ನ
ಅಮೆರಿಕದ ಡ್ರೋನ್
Image Credit source: The New York Times

Updated on: Mar 15, 2023 | 8:19 AM

ಉಕ್ರೇನ್​ಗೆ ಬೆಂಬಲ ನೀಡಿದ್ದಕ್ಕಾಗಿ ಅಮೆರಿಕದ ಮೇಲೂ ಸಮರ ಸಾರಲು ರಷ್ಯಾ ಸಜ್ಜಾಗುತ್ತಿದೆ. ಇದೀಗ ಅಮೆರಿಕದ ಮಿಲಿಟರಿ ಡ್ರೋನ್​ ಒಂದನ್ನು ರಷ್ಯಾ ನಾಶ ಪಡಿಸಿ ಕಪ್ಪು ಸಮುದ್ರಕ್ಕೆ ಎಸೆದಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ರಷ್ಯಾದ ಎಸ್​ಯು-27 ಫೈಟರ್ ಜೆಟ್ ಯುಎಸ್​ ಮಿಲಿಟರಿ ಡ್ರೋನ್​ಗೆ ಡಿಕ್ಕಿ ಹೊಡೆದಿದೆ. ಈ ಘಟನೆಯು ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇದೆ.

ಯುಎಸ್ ಮಿಲಿಟರಿ ಡ್ರೋನ್ ಪತನದ ಘಟನೆಯ ಬಗ್ಗೆ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ನೆಡ್ ಪ್ರೈಸ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ನಾವು ರಷ್ಯಾದ ರಾಯಭಾರಿ ಅನಾಟೊಲಿ ಆಂಟೊನೊವ್ ಅವರ ಬಳಿ ಮಾತನಾಡಿದ್ದು, ರಷ್ಯಾದಲ್ಲಿನ ಯುಎಸ್ ರಾಯಭಾರಿ ಲಿನ್ ಟ್ರೇಸಿ ಕೂಡ ರಷ್ಯಾದ ವಿದೇಶಾಂಗ ಸಚಿವಾಲಯಕ್ಕೆ ಬಲವಾದ ಸಂದೇಶವನ್ನು ರವಾನಿಸಿರುವುದಾಗಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: Volodymyr Zelensky: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಆತ್ಮೀಯರಿಂದಲೇ ಕೊಲೆಯಾಗುತ್ತಾರೆ: ವೊಲೊಡಿಮಿರ್ ಝೆಲೆನ್ಸ್ಕಿ

ನಮ್ಮ MQ-9  ಮಿಲಿಟರಿ ಡ್ರೋನ್ ಅಂತರಾಷ್ಟ್ರೀಯ ನೀರಿನ ಮೇಲೆ ದಿನನಿತ್ಯದ ಹಾರಾಟ ನಡೆಸುತ್ತಿತ್ತು. ಈ ಸಮಯದಲ್ಲಿ, ರಷ್ಯಾದ ಜೆಟ್ ಉದ್ದೇಶಪೂರ್ವಕವಾಗಿ ಅಮೆರಿಕದ ಡ್ರೋನ್ ಮುಂದೆ ಬಂದಿತು ಮತ್ತು ಡಿಕ್ಕಿಯ ನಂತರ ಅದು ಕಪ್ಪು ಸಮುದ್ರಕ್ಕೆ ಬಿದ್ದಿತು. ಮಾನವ ರಹಿತ ಡ್ರೋನ್ ಸಂಪೂರ್ಣ ಹಾನಿಗೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾವೇನು ಮಾಡಿಲ್ಲ, ಮೊದಲೇ ಡ್ರೋನ್ ಬಿದ್ದಿದೆ
ತನ್ನ ಯುದ್ಧ ವಿಮಾನವು ಅಮೆರಿಕದ ಡ್ರೋನ್‌ಗೆ ಡಿಕ್ಕಿ ಹೊಡೆದಿಲ್ಲ, ಆದರೆ ಡ್ರೋನ್ ಆಗಲೇ ಕಪ್ಪು ಸಮುದ್ರಕ್ಕೆ ಬಿದ್ದಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿದೆ.

ಅವರ ಯುದ್ಧ ವಿಮಾನವು ಯಾವುದೇ ಶಸ್ತ್ರಾಸ್ತ್ರವನ್ನು ಬಳಸಲಿಲ್ಲ. ಬದಲಿಗೆ ಡ್ರೋನ್ ಮೊದಲೇ ಕಪ್ಪು ಸಮುದ್ರಕ್ಕೆ ಬಿದ್ದಿದೆ. ಯುಎಸ್ ಮಿಲಿಟರಿ ಡ್ರೋನ್ ರಷ್ಯಾದ ಗಡಿಯಲ್ಲಿ ವೇಗವಾಗಿ ಸುಳಿದಾಡುತ್ತಿತ್ತು ಅದಕ್ಕಾಗಿಯೇ ಪತನಗೊಂಡಿದೆ ಎಂದು ರಷ್ಯಾ ಹೇಳಿಕೊಂಡಿದೆ.

ವಿಮಾನದಿಂದ ತೈಲ ಸೋರಿಕೆಯಾಗುತ್ತಿತ್ತು, ಅನಿವಾರ್ಯವಾಗಿ ನಾವು ಕಪ್ಪು ಸಮುದ್ರದೊಳಗೆ ಜೆಟ್ ಇಳಿಸಬೇಕಿತ್ತು, ಆಗ ಉದ್ದೇಶಪೂರ್ವಕವಾಗಿ ಡ್ರೋನ್ ಅಡ್ಡ ಬಂದಿತ್ತು ಎಂದು ರಷ್ಯಾ ಸಮಜಾಯಿಷಿ ನೀಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published On - 8:18 am, Wed, 15 March 23