Vladimir Putin India Visit: ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಲಿದ್ದಾರಾ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್?
ಭಾರತದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಉಪಸ್ಥಿತಿಯ ಸಾಧ್ಯತೆ ಹೆಚ್ಚಿದೆ.
ಭಾರತದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಉಪಸ್ಥಿತಿಯ ಸಾಧ್ಯತೆ ಹೆಚ್ಚಿದೆ. ವ್ಲಾಡಿವೋಸ್ಟಾಕ್‌ನಲ್ಲಿ ನಡೆಯಲಿರುವ ಈಸ್ಟರ್ನ್ ಎಕನಾಮಿಕ್ ಫೋರಮ್ (EEF) ಸಮ್ಮೇಳನದ ದಿನಾಂಕವನ್ನು ರಷ್ಯಾ ಬದಲಾಯಿಸಿದೆ. ಈ ಸಮ್ಮೇಳನವು ಈಗ ಸೆಪ್ಟೆಂಬರ್ 9-10 ರ ಬದಲಿಗೆ 12 ಮತ್ತು 15 ಸೆಪ್ಟೆಂಬರ್ ನಡುವೆ ನಡೆಯಲಿದೆ. ಅಂತಾರಾಷ್ಟ್ರೀಯ ಘಟನೆಗಳಿಂದಾಗಿ ಈಸ್ಟರ್ನ್ ಎಕನಾಮಿಕ್ ಫೋರಂನ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ರಷ್ಯಾ ಹೇಳಿದೆ. ಗಮನಾರ್ಹವಾಗಿ, G20 ಶೃಂಗಸಭೆಯು ಭಾರತದಲ್ಲಿ ಸೆಪ್ಟೆಂಬರ್ 9-10 ರಂದು ನಡೆಯಲಿದೆ. ಇದರಿಂದ ಪುಟಿನ್ ಭಾರತಕ್ಕೆ ಬರುವ ಸಾಧ್ಯತೆ ಹೆಚ್ಚಿದೆ.
ಒಂದು ವೇಳೆ ವ್ಲಾಡಿಮಿರ್ ಪುಟಿನ್ ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಅವರು ಭಾಗವಹಿಸಿದರೆ, ಉಕ್ರೇನ್ ಯುದ್ಧದ ನಂತರ ಪುಟಿನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ನಾಯಕರು ಮೊದಲ ಬಾರಿಗೆ ಮುಖಾಮುಖಿಯಾಗಬಹುದು. ರಷ್ಯಾದ ಅಧ್ಯಕ್ಷ ಪುಟಿನ್ 2021 ರಲ್ಲಿ ಇಟಲಿ ಮತ್ತು 2022 ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಜಿ 20 ಶೃಂಗಸಭೆಗಳಲ್ಲಿ ಭಾಗವಹಿಸಲಿಲ್ಲ.
ಮತ್ತಷ್ಟು ಓದಿ: Volodymyr Zelensky: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಆತ್ಮೀಯರಿಂದಲೇ ಕೊಲೆಯಾಗುತ್ತಾರೆ: ವೊಲೊಡಿಮಿರ್ ಝೆಲೆನ್ಸ್ಕಿ
ಇದರೊಂದಿಗೆ, ಜೂನ್/ಜುಲೈನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ (ಎಸ್‌ಸಿಒ) ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಭಾಗವಹಿಸುವ ನಿರೀಕ್ಷೆಯಿದೆ. ಆದಾಗ್ಯೂ, ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಈ ಬಗ್ಗೆ ಕೇಳಿದಾಗ, ಅದನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಿದರು. ಆದರೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಕಳೆದ ವರ್ಷ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ20 ನಾಯಕರ ವೇದಿಕೆಗೆ ರಷ್ಯಾದ ನಿಯೋಗd ನೇತೃತ್ವವನ್ನು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ವಹಿಸಿದ್ದರು. G20 ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷರಿಗೆ ಭಾರತವು ಔಪಚಾರಿಕ ಆಹ್ವಾನವನ್ನು ನೀಡಿದೆ. ಕ್ರೆಮ್ಲಿನ್ ಕೂಡ ಅದನ್ನು ಒಪ್ಪಿಕೊಂಡಿದೆ. ಜಿ 20 ನಾಯಕರ ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10 ರಂದು ನವದೆಹಲಿಯಲ್ಲಿ ನಡೆಯಲಿದೆ. ಇದು ಪ್ರಪಂಚದ ಪ್ರಮುಖ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಿಗೆ ಉತ್ತಮ ವೇದಿಕೆಯಾಗಿದೆ.
G-20 ದೇಶಗಳ ಗುಂಪು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್ ಸೇರಿವೆ.
ಜಾಗತಿಕ ಜಿಡಿಪಿಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಪಾಲು ಜಿ7 ದೇಶಗಳಿಗಿಂತ ಹೆಚ್ಚಾಗಿದೆ ಎಂಬ ಪಾಶ್ಚಿಮಾತ್ಯ ವಿಶ್ಲೇಷಕರ ವರದಿಯ ಬಗ್ಗೆ ಹೇಳಿ ಎಂಬ ಮಾಧ್ಯಮದವರ ಪ್ರಶ್ನೆಗೆ ಪೆಸ್ಕೋವ್ ಈ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದು, ಈ ತಜ್ಞರ ಸಂಶೋಧನೆಗಳನ್ನು ಲೆಕ್ಕಿಸದೆ , ಬ್ರಿಕ್ಸ್ ದೇಶಗಳ ಆರ್ಥಿಕ ಪ್ರಭಾವವನ್ನು ನಾವು ಜಗತ್ತಿಗೆ ತೋರಿಸಬೇಕಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ವಿದೇಶಾಂಗ ಸಚಿವ ಸರ್ಗೆ ಲಾವ್ರೊವ್ ಅವರು ಜಿ20 ನಾಯಕರ ವೇದಿಕೆಯಲ್ಲಿ ರಷ್ಯಾದ ನಿಯೋಗದ ನೇತೃತ್ವವಹಿಸಿದ್ದರು. 2020 ಮತ್ತು 2021ರಲ್ಲಿ ಪುಟಿನ್ ವಿಡಿಯೋ ಲಿಂಕ್ ಮೂಲಕ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ