ಲಂಡನ್: ಮುಖ್ಯವಾಗಿ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಅನೇಕ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿ ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ( Vijay Mallya) ವಿರುದ್ಧ ಆಸ್ತಿ ಪರಭಾರೆ (mortgage) ಪ್ರಕರಣದಲ್ಲಿ Swiss bank UBS ಬ್ಯಾಂಕ್ ಗೆಲುವು ಸಾಧಿಸಿದೆ. ಸೆಂಟ್ರಲ್ ಲಂಡನ್‌ನಲ್ಲಿನ ವಿಜಯ್ ಮಲ್ಯ ಐಷಾರಾಮಿ ಮನೆ ಮರು ಸ್ವಾಧೀನ ಮತ್ತು ಮಾರಾಟದ ಹಕ್ಕನ್ನು ಯುಬಿಎಸ್ ಬ್ಯಾಂಕ್ ಪಡೆದುಕೊಂಡಿದೆ. ಲಂಡನ್‌ನಲ್ಲಿ 35 ವರ್ಷದ ಮಗ ಸಿದ್ಧಾರ್ಥ, 95 ವರ್ಷದ ತಾಯಿ ಲಲಿತಾ ಅವರ ಜತೆ 66 ವರ್ಷದ ಮಲ್ಯ ವಾಸವಿದ್ದಾನೆ. ಕುತೂಹಲಕಾರಿ ಸಂಗತಿಯೆಂದರೆ 2020ರ ಏಪ್ರಿಲ್ನಿಂದ UBS ಬ್ಯಾಂಕ್‌ಗೆ ಸಾಲ ಮರುಪಾವತಿ ಮಾಡದೆ ಕಾಲ ತಳ್ಳಿಕೊಂಡು ಬಂದಿದ್ದ. ಕೋವಿಡ್ನಿಂದಾಗಿ ಮನೆ ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಸಬೂಬು ಹೇಳಿಕೊಂಡು ಬಂದಿದ್ದ ವಿಜಯ್ ಮಲ್ಯಗೆ ಈಗ ಐಷಾರಾಮಿ ಮನೆಯಿಂದ ಹೊರಬೀಳುವುದು ಅನಿವಾರ್ಯವಾಗಿದೆ.
ಮಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಸೆಂಟ್ರಲ್ ಲಂಡನ್ನಲ್ಲಿರುವ ಪ್ರತಿಷ್ಠಿತ ಮ್ಯಾಡಮ್ ಟುಸ್ಸಾಡ್ ಮೇಣದ ಮ್ಯೂಸಿಯಂ, ರೆಜೆಂಟ್ಸ್ ಪಾರ್ಕ್, ಕಾರ್ನ್ವಾಲ್ ಟೆರೇಸ್ ಆಜುಬಾಜಿನಲ್ಲಿ ಐಷಾರಾಮಿ ಮನೆ ಮಾಡಿಕೊಂಡಿದ್ದ. ಆದರೆ ಇದನ್ನು ಕೋಟ್ಯಂತರ ರೂಪಾಯಿ ಸಾಲಕ್ಕಾಗಿ UBS ಬ್ಯಾಂಕ್‌ಗೆ ಮಾರ್ಟ್ಗೇಜ್ ಮಾಡಿದ್ದ. ಸಾಲ ತೀರಿಸಲು ವಿಜಯ್ ಮಲ್ಯ ಅಸಹಾಯಕನಾಗಿರುವುದರಿಂದ ಮನೆಯನ್ನು ಸ್ವಾಧೀನಪಡಿಸಿಕೊಳ್ಳಲು (repossess and sell) ಅವಕಾಶ ನೀಡಬೇಕೆಂದು ಸ್ವಿಸ್ ಮೂಲ ಯುಬಿಎಸ್ ಬ್ಯಾಂಕ್ ಲಂಡನ್ ಕೋರ್ಟ್ನಲ್ಲಿ ದಾವೆ ಹೂಡಿತ್ತು. ವಿಜಯ್ ಮಲ್ಯ Rose Capital Ventures Limite ಗೆ ಸುಮಾರು 200 ಕೋಟಿ ರೂಪಾಯಿ ಸಾಲ ತೀರಿಸಬೇಕಿದೆ.
ಅಂದಹಾಗೆ ವಿಜಯ್ ಮಲ್ಯ ಈ ಮನೆಯನ್ನು ಬಿಟ್ಟರೆ ಸೀದಾ ನಾಳೆಯೇ ಬೀದಿಗೆ ಬರುತ್ತಾರೆ ಅಂತೇನೂ ಇಲ್ಲ. ಏಕೆಂದರೆ ಮಲ್ಯ ಲಂಡನ್‌ನಲ್ಲಿ ಇಂತಹುದೇ ಇನ್ನೂ ಅನೇಕ ವೈಭವೋಪೇತ ಮನೆಗಳನ್ನು ಹೊಂದಿದ್ದಾರೆ!
ಇದನ್ನೂ ಓದಿ:
Vijay Mallya: ವಿಜಯ್ ಮಲ್ಯ ದಿವಾಳಿ ಎಂದ ಬ್ರಿಟನ್ ಕೋರ್ಟ್
ಉದ್ಯಮಿ ವಿಜಯ್ ಮಲ್ಯ ವಿರುದ್ಧ ಆಸ್ತಿ ಪರಭಾರೆ ಕೇಸ್ ಗೆದ್ದ UBS ಬ್ಯಾಂಕ್ ಕುರಿತಾದ ANI ಟ್ವೀಟ್:
UBS bank wins the right to repossess and sell fugitive businessman Vijay Mallya’s luxury home in London where he stays with his son & 95-year-old mother
(File photo) pic.twitter.com/VIg3ZJ6YIm
— ANI (@ANI) January 18, 2022
Published On - 7:23 am, Wed, 19 January 22