Vijay Mallya: ವಿಜಯ್ ಮಲ್ಯ ದಿವಾಳಿ ಎಂದ ಬ್ರಿಟನ್ ಕೋರ್ಟ್

|

Updated on: Jul 26, 2021 | 11:32 PM

ವಿಜಯ್ ಮಲ್ಯ ವಿರುದ್ಧ ಇಂಗ್ಲೆಂಡ್ ಹೈಕೋರ್ಟ್ ದಿವಾಳಿತನದ ಆದೇಶ ಹೊರಡಿಸಿದೆ.

Vijay Mallya: ವಿಜಯ್ ಮಲ್ಯ ದಿವಾಳಿ ಎಂದ ಬ್ರಿಟನ್ ಕೋರ್ಟ್
ವಿಜಯ್ ಮಲ್ಯ (ಸಂಗ್ರಹ ಚಿತ್ರ)
Follow us on

ಉದ್ಯಮಿ ವಿಜಯ್ ಮಲ್ಯ ವಿರುದ್ಧ ಬ್ರಿಟನ್ ಹೈಕೋರ್ಟ್ ದಿವಾಳಿತನದ ಆದೇಶ ಹೊರಡಿಸಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್​ ತನಗೆ ವಿಜಯ್ ಮಲ್ಯ ಅವರಿಂದ ಬರಬೇಕಿರುವ ಬಾಕಿ ಮೊತ್ತವನ್ನು ಹಿಂಪಡೆಯಲು ವಿಶ್ವದ ವಿವಿದೆಡೆ ಇರುವ ವಿಜಯ ಮಲ್ಯ ಹೊಂದಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡಿದೆ.

ವಿಜಯ್ ಮಲ್ಯ ಅವರು ಬ್ಯಾಂಕ್​ಗಳಿಗೆ ಪಾವತಿಸಬೇಕಿರುವ ಬಾಕಿ ಮೊತ್ತವನ್ನು ನಿಗದಿತ ಅವಧಿಯೊಳಗೆ ನೀಡಲು ಶಕ್ತರಾಗಿರುವಂತೆ ತೋರುವುದಿಲ್ಲ ಎಂದು ಬ್ರಿಟನ್​ನ ಕೋರ್ಟ್​ ಅಭಿಪ್ರಾಯ ವ್ಯಕ್ತಪಡಿಸಿದೆ. ಜತೆಗೆ ವಿಜಯ್ ಮಲ್ಯ ಈ ಆದೇಶವನ್ನು ಪ್ರಶ್ನಿಸುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಸಹ ಕೋರ್ಟ್​ ಪುರಸ್ಕರಿಸಿಲ್ಲ.

ಬ್ರಿಟನ್​ ಕೋರ್ಟ್​ನ ಈ ಆದೇಶದ ಪ್ರಕಾರ ಮುಂದಿನ ದಿನಗಳಲ್ಲಿ ಉದ್ಯಮಿ ವಿಜಯ್ ಮಲ್ಯ ಅವರಿಂದ ಬಾಕಿ ಹಣ ಹಿಂಪಡೆಯಲು ಬ್ಯಾಂಕ್​ಗಳಿಗೆ ಸಹಾಯವಾಗಲಿದೆ ಎಂದು ಹೇಳಲಾಗಿದೆ. ಉದ್ಯಮಿ ವಿಜಯ್ ಮಲ್ಯ ಸಾಲ ಹಿಂಪಡೆಯುವ ಪ್ರಕರಣವನ್ನು ಒಂದು ತಾರ್ಕಿಕ ಅಂತ್ಯ ಕಾಣುವಂತೆ ಮಾಡಬೇಕು ಎಂದು ಬ್ಯಾಂಕ್​ಗಳ ಒಕ್ಕೂಟ ಕೋರ್ಟ್​ಗೆ ಮನವಿ ಸಲ್ಲಿಸಿತ್ತು. 9 ವಿವಿಧ ಬ್ಯಾಂಕ್​ಗಳಿಗೆ 9 ಸಾವಿರ ಕೋಟಿ ಸಾಲವನ್ನು ಮರು ಪಾವತಿಸಿದೇ ಉದ್ಯಮಿ ವಿಜಯ್ ಮಲ್ಯ ವಿದೇಶಕ್ಕೆ ಪರಾರಿಯಾಗಿದ್ದರು.

ಇದನ್ನೂ ಓದಿ: 

How To: ಉಳಿತಾಯಕ್ಕೆ ಅತ್ಯುತ್ತಮ ಮಾರ್ಗ, ಮ್ಯೂಚುವಲ್​ ಫಂಡ್ ಹೂಡಿಕೆಗೆ ಇಲ್ಲಿದೆ ಐದು ಸರಳ ಟಿಪ್ಸ್​

ನಾ ಕಂಡ ಯಡಿಯೂರಪ್ಪ: ವರದಿಗಾರ ರಾಮ್ ಮೈಸೂರು ವಿಶೇಷ ಬರಹ

(UK court declares fugitive businessman vijay mallya bankrupt)

Published On - 10:55 pm, Mon, 26 July 21