ಉಕ್ರೇನ್ ದಾಳಿಗೂ ಮುನ್ನ ಪುಟಿನ್ ಯುಕೆ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದರು: ಬೋರಿಸ್ ಜಾನ್ಸನ್

|

Updated on: Jan 30, 2023 | 10:28 AM

ಉಕ್ರೇನ್​(Ukraine) ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ನಮ್ಮ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಬೆದರಿಕೆ ಹಾಕಿದ್ದರು ಎಂದು ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.

ಉಕ್ರೇನ್ ದಾಳಿಗೂ ಮುನ್ನ ಪುಟಿನ್ ಯುಕೆ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದರು: ಬೋರಿಸ್ ಜಾನ್ಸನ್
ಬೋರಿಸ್ ಜಾನ್ಸನ್
Follow us on

ಉಕ್ರೇನ್​(Ukraine) ಮೇಲೆ ದಾಳಿ ನಡೆಸುವುದಕ್ಕೂ ಮುನ್ನ ನಮ್ಮ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಬೆದರಿಕೆ ಹಾಕಿದ್ದರು ಎಂದು ಯುಕೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಫೆಬ್ರವರಿ 24 ರಂದು ಆಕ್ರಮಣಕ್ಕೂ ಸ್ವಲ್ಪ ಮೊದಲು ಫೋನ್ ಕರೆಯಲ್ಲಿ ಪುಟಿನ್ ಬೋರಿಸ್​ ಜಾನ್ಸನ್​ನಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ವಾಸ್ತವವಾಗಿ ಜಾನ್ಸನ್ ಹಾಗೂ ಇತರೆ ಪಾಶ್ಚಿಮಾತ್ಯ ನಾಯಕರು ಉಕ್ರೇನ್​ಗೆ ಬೆಂಬಲವನ್ನು ತೋರಿಸಲು ಮತ್ತು ರಷ್ಯಾದ ಆಕ್ರಮಣವನ್ನು ತಡೆಯಲು ಕೈವ್​ಗೆ ಸಹಾಯ ಮಾಡಿದ್ದರು.

ಕಳೆದ ವರ್ಷ ಜುಲೈನಲ್ಲಿ ಬ್ರಿಟನ್‌ನ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಪ್ರಧಾನಿ ಹುದ್ದೆ ತೊರೆಯಬೇಕಾಗಿ ಬಂದಿತ್ತು ಎಂಬುದು ಗಮನಾರ್ಹ. ವಾಸ್ತವವಾಗಿ, ಕೊರೊನಾ ಲಾಕ್‌ಡೌನ್ ಸಮಯದಲ್ಲಿ, ಮಾಜಿ ಪ್ರಧಾನಿಯವರು ಪ್ರಧಾನಿ ನಿವಾಸದಲ್ಲಿ ಪಾರ್ಟಿ ಮಾಡಿದ್ದಕ್ಕಾಗಿ ಜನರು ಟೀಕೆ ಮಾಡಿದ್ದರು. ಈ ಕಾರಣದಿಂದಾಗಿ ಅವರು ಪ್ರಧಾನಿ ಹುದ್ದೆಯನ್ನು ತೊರೆಯಬೇಕಾಯಿತು. ಈ ಪಾರ್ಟಿಯಿಂದಾಗಿ, ಜಾನ್ಸನ್‌ಗೆ ದಂಡವನ್ನೂ ವಿಧಿಸಲಾಯಿತು ಮತ್ತು ಜಾನ್ಸನ್ ರಾಣಿ ಎಲಿಜಬೆತ್‌ಗೆ ಕ್ಷಮೆಯಾಚಿಸಬೇಕಾಯಿತು.

ಮತ್ತಷ್ಟು ಓದಿ: Russia-Ukraine War: ಉಕ್ರೇನ್​ನ ಅಪಾರ್ಟ್​ಮೆಂಟ್ ಮೇಲೆ ರಷ್ಯಾದ ಕ್ಷಿಪಣಿ ದಾಳಿ; 30 ಮಂದಿ ಸಾವು, 12 ಜನರ ಸ್ಥಿತಿ ಗಂಭೀರ

ರಷ್ಯಾವು ಕಳೆದ ಡಿಸೆಂಬರ್​ನಲ್ಲಿ ಉಕ್ರೇನ್ ಮೇಲೆ ಮತ್ತೆ ಕ್ಷಿಪಣಿ ದಾಳಿ ನಡೆಸಿತ್ತು. ರಾಜಧಾನಿ ಕೀವ್ ಸೇರಿದಂತೆ ಉಕ್ರೇನ್‌ನ ಹಲವು ಪ್ರದೇಶಗಳ ಮೇಲೆ ಪುಟಿನ್ ಪಡೆ 120 ಕ್ಷಿಪಣಿಗಳಿಂದ ಏಕಕಾಲಕ್ಕೆ ದಾಳಿ ನಡೆಸಿತ್ತು. ಇದು ರಾಷ್ಟ್ರೀಯ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಅತಿದೊಡ್ಡ ದಾಳಿಯಾಗಿತ್ತು.

ಕೀವ್ ಮತ್ತು ಖಾರ್ಕಿವ್ ಪಟ್ಟಣಗಳ ಮೇಲೆ ದಾಳಿ ನಡೆಸಿರುವ ಕ್ಷಿಪಣಿಗಳು ಹಲವು ಕಟ್ಟಡಗಳ ಮೇಲೆ ಬಿದ್ದುತ್ತು.
ರಷ್ಯಾ ವಾಯು ಮತ್ತು ಜಲ ಮಾರ್ಗಗಳ ಮೂಲಕ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಜನ ಎಚ್ಚರಿಕೆಯಿಂದ ಇರಬೇಕೆಂದು ಉಕ್ರೇನ್ ಸೈನ್ಯ ಎಚ್ಚರಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ