ಭಾರತ ಮೂಲದ ರಿಷಿ ಸುನಕ್ ಬ್ರಿಟನ್ನ ನೂತನ ಪ್ರಧಾನಿಯಾಗಿದ್ದಾರೆ. ಅವರ ಕುಟುಂಬವು ದೇಶವನ್ನು ಬಿಟ್ಟು ಶತಮಾನವೇ ಕಳೆದರೂ ಭಾರತೀಯ ಸಂಸ್ಕೃತಿಯನ್ನು ಉಳಿಸಿಕೊಂಡಿದ್ದಾರೆ. ಕೈಗೆ ಮಂತ್ರಿಸಿದ ದೇವರ ದಾರವೊಂದನ್ನು ಕಟ್ಟಿಕೊಳ್ಳುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉತ್ತುಂಗಕ್ಕೆ ಕರೆದೊಯ್ದಿದ್ದಾರೆ.
ರಿಷಿ ಸುನಕ್ ಅವರು ಅಧಿಕೃತವಾಗಿ ಬ್ರಿಟನ್ ಪ್ರಧಾನಿಯಾದ ಬಳಿಕ ಭಾಷಣಕ್ಕೂ ಮುನ್ನ ಪತ್ನಿ ಅಕ್ಷತಾ ಮೂರ್ತಿ ಎದುರು ದಾರ ಕಟ್ಟಿಸಿಕೊಂಡರು. ಅವರ ಕುಟುಂಬವು ಭಾರತವನ್ನು ಬಿಟ್ಟು ಶತಮಾನಗಳೇ ಕಳೆದರೂ ಇನ್ನೂ ಕೂಡ ಭಾರತೀಯ ಸಂಸ್ಕೃತಿಯನ್ನು ಆಚರಿಸುತ್ತಾರೆ ಎಂಬುದಕ್ಕೆ ಇದೇ ಉತ್ತಮ ಉದಾಹರಣೆಯಾಗಿದೆ.
ರಿಷಿ ಸುನಕ್ ಅವರು 200 ವರ್ಷಗಳ ಬ್ರಿಟನ್ ಇತಿಹಾಸದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ ಪ್ರಧಾನಿ ಹುದ್ದೆಗೇರಿದ ಮೊದಲಿಗರಾಗಿದ್ದಾರೆ. ಅಕ್ಟೋಬರ್ 25ರಂದು ಬ್ರಿಟನ್ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಲಂಡನ್‌ನ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ಬ್ರಿಟನ್ ರಾಜ ಮೂರನೇ ಚಾರ್ಲ್ಸ್ ಭೇಟಿಯಾದ ಬೆನ್ನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬ್ರಿಟನ್ ಪ್ರಧಾನಿಯಾಗಿ ಮೊದಲ ಬಾರಿಗೆ ಭಾಷಣ ಮಾಡಿದ್ದಾರೆ. ಬ್ರಿಟನ್ ಸಂಸತ್ತಿನಲ್ಲಿ ಮೊದಲ ಬಾರಿಗೆ ಭಗವದ್ಗೀತೆಯನ್ನು ಮುಟ್ಟಿ ಪ್ರಮಾಣಸ್ವೀಕಾರ ಮಾಡಿದ ವ್ಯಕ್ತಿ ರಿಷಿ ಸುನಕ್. ರಿಷಿ ಸುನಕ್ ಪೋಷಕರು ಮೂಲತಃ ಭಾರತದವರು. ವೃತ್ತಿಯಿಂದ ಫಾರ್ಮಾಸಿಸ್ಟ್‌ಗಳಾಗಿದ್ದ ಅವರು 1960 ರಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಹೋಗಿ ಅಲ್ಲಿಯೇ ವಾಸವಾಗಿದ್ದರು.
ಅಲ್ಲದೆ, ಇನ್ಫೋಸಿಸ್ ಮುಖ್ಯಸ್ಥ ನಾರಾಯಣ ಮೂರ್ತಿ ಮಗಳು ಅಕ್ಷತ ಮೂರ್ತಿಯನ್ನು ಮದುವೆ ಮಾಡಿಕೊಂಡರು. ಸದ್ಯ ರಿಷಿ ಅವರಿಗೆ ಕೃಷ್ಣ, ಅನೌಷ್ಕ ಎಂಬ ಇಬ್ಬರು ಮಕ್ಕಳಿದ್ದಾರೆ.
ರಿಷಿ ಸುನಕ್ ಅವರಿಗೆ ಭಾರತ.. ಭಾರತ ದೇಶದ ಸಂಪ್ರದಾಯಗಳು ಅಂದ್ರೆ ತುಂಬಾ ಗೌರವ. ದೀಪಾವಳಿ ಸೇರಿದಂತೆ ಎಲ್ಲಾ ಭಾರತೀಯ ಹಬ್ಬಗಳನ್ನು ಆಚರಣೆ ಮಾಡುತ್ತಾರೆ.
ಅಲ್ಲದೆ, ಭಾರತ ದೇಶದ ಸಂಸ್ಕೃತಿ, ಸಂಪ್ರದಾಯಗಳ ಕುರಿತು ತಮಗೆ ತಮ್ಮ ಹೆತ್ತವರು ಹೇಳುತ್ತಿರುತ್ತಾರೆ ಎಂದು ರಿಷಿ ಅವರು ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ. ಹಲವು ಭಾರಿ ತಮ್ಮ ಮಾವ ಹಾಗೂ ಅತ್ತೆಯವರನ್ನು ನೋಡಲು ಹೆಂಡತಿ ಮತ್ತು ಮಕ್ಕಳ ಜೊತೆ ಭಾರತಕ್ಕೆ ಬಂದು ಹೋಗಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:31 am, Wed, 26 October 22