ಉಕ್ರೇನ್‌ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಉಕ್ರೇನ್ ಸೇನೆಯು ಕಂಡುಕೇಳರಿಯದ ರೀತಿಯಲ್ಲಿ ರಷ್ಯಾಕ್ಕೆ ಪ್ರತಿರೋಧ ಒಡ್ಡಿದ್ದು, ಈವರೆಗೆ ರಾಜಧಾನಿ ಕೀವ್ ವಶಪಡಿಸಿಕೊಳ್ಳಲು ರಷ್ಯಾಕ್ಕೆ ಸಾಧ್ಯವಾಗಿಲ್ಲ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ತೆರವು ಕಾರ್ಯಾಚರಣೆಯು ವೇಗವಾಗಿ ನಡೆಯುತ್ತಿದ್ದು, ಸಾಕಷ್ಟು ಸಂಖ್ಯೆಯ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿ ಇಡೀ ಜಗತ್ತಿನ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತಿದೆ. ರಷ್ಯಾದಲ್ಲಿ ಉತ್ಪಾದನೆಯಾಗುವ ಪೆಟ್ರೋಲಿಯಂ ಉತ್ಪನ್ನಗಳಿಗೆ ಅಮೆರಿಕ, ಬ್ರಿಟನ್ ಸೇರಿದಂತೆ ಹಲವು ದೇಶಗಳು ದಿಗ್ಬಂಧನ ವಿಧಿಸಿವೆ. ಭಾರತದಲ್ಲಿ ಈಗಾಗಲೇ ಖಾದ್ಯತೈಲ ಸೇರಿದಂತೆ ಬಹುತೇಕ ಅಗತ್ಯವಸ್ತುಗಳ ಬೆಲೆಗಳು ಏರಿಕೆಯಾಗಿವೆ. ಮುಂದಿನ ದಿನಗಳಲ್ಲಿ ಹಣದುಬ್ಬರ ಇನ್ನಷ್ಟು ಹೆಚ್ಚಿ, ಜನರ ಬದುಕು ಸಂಕಷ್ಟಕ್ಕೆ ಸಿಲುಕಬಹುದು ಎಂಬ ಆತಂಕ ವ್ಯಕ್ತವಾಗಿದೆ.
ರಷ್ಯಾದ ದಾಳಿಯಿಂದಾಗಿ ಪರಮಾಣು ಸ್ಥಾವರ ಸ್ಥಗಿತವಾಗಿದ್ದು, ಚೆರ್ನೋಬಿಲ್ ಪರಮಾಣು ಸ್ಥಾವರದಲ್ಲಿ ವಿಕಿರಣ ಸೋರಿಕೆಯಾಗಿದೆ. ವಿಕಿರಣ ಸೋರಿಕೆ ಅಪಾಯದ ಬಗ್ಗೆ ಉಕ್ರೇನ್ ಅಲರ್ಟ್ ಮಾಡಿದೆ. ವಿದ್ಯುತ್ ಮಾರ್ಗದ ದುರಸ್ತಿಗೆ ಅವಕಾಶ ನೀಡಲು ಮನವಿ ಮಾಡಿದ್ದು, ತಾತ್ಕಾಲಿಕ ಕದನ ವಿರಾಮ ಘೋಷಿಸಲು ರಷ್ಯಾಗೆ ಒತ್ತಾಯಿಸಿದೆ. ವಿದ್ಯುತ್ ಸಂಪರ್ಕ ಕಡಿತವಾದರೆ ವಿಕಿರಣ ಸೋರಿಕೆ ಭೀತಿ ಇದೆ ಎಂದು ಉಕ್ರೇನ್ ಎಚ್ಚರಿಕೆ ನೀಡಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸಿದೆ. ಮರಿಯುಪೋಲ್‌ನಲ್ಲಿ ಆಸ್ಪತ್ರೆಯ ಮೇಲೆ ರಷ್ಯಾ ದಾಳಿ ಮಾಡಿದ್ದು, ಕಟ್ಟಡದ ಅವಶೇಷಗಳಡಿ ಮಕ್ಕಳು ಸಿಲುಕಿರುವ ಸಾಧ್ಯತೆ ಇದೆ.
ಸುಮಿ ನಗರದಿಂದ 600 ಭಾರತೀಯ ವಿದ್ಯಾರ್ಥಿಗಳನ್ನು ಇಂದು ಸ್ಥಳಾಂತರ ಮಾಡಲಾಗಿದೆ. ಪೋಲೆಂಡ್‌ನಿಂದ ವಿದ್ಯಾರ್ಥಿಗಳು ಭಾರತಕ್ಕೆ ವಾಪಸಾಗಲಿದ್ದಾರೆ.
ಉಕ್ರೇನ್‌ಗೆ ಸಹಾಯವನ್ನು ಕೆನಡಾ ಮುಂದುವರಿಸಿದ್ದು, ಉಕ್ರೇನ್‌ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾದ ದಾಳಿಯಿಂದಾಗಿ ಚೆರ್ನೋಬಿಲ್ ಪರಮಾಣು ಸ್ಥಾವರ ಸಂಪೂರ್ಣ ಸ್ಥಗಿತವಾಗಿದೆ. ಚೆರ್ನೋಬಿಲ್‌ನಲ್ಲಿ ಪವರ್ ಕಟ್ನಿಂದ ಸಮಸ್ಯೆಯಾಗಲ್ಲ. ಇಲ್ಲಿನ ಸುರಕ್ಷತೆ ಮೇಲೆ ಯಾವುದೇ ರೀತಿಯ ಸಮಸ್ಯೆಯಾಗಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಮಾಹಿತಿ ನೀಡಿದೆ.
ರಷ್ಯಾ 4 ಲಕ್ಷ ಜನರನ್ನ ಮಾರಿಯುಪೋಲ್ನಲ್ಲಿ ರಷ್ಯಾ ಒತ್ತೆಯಾಳಾಗಿರಿಸಿಕೊಂಡಿದೆ ಎಂದು ರಷ್ಯಾ ವಿರುದ್ಧ ಉಕ್ರೇನ್ ವಿದೇಶಾಂಗ ಇಲಾಖೆ ಆರೋಪ ಮಾಡಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆಯಲ್ಲಿ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗಿದೆ. 8,000 ವಿದ್ಯಾರ್ಥಿಗಳ ರೊಮೇನಿಯಾಕ್ಕೆ ಸ್ಥಳಾಂತರ ಮಾಡಲಾಗಿದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸಿದೆ. ಜೀವ ಭಯದಿಂದ ಜನರು ಉಕ್ರೇನ್ ತೊರೆಯುತ್ತಿದ್ದಾರೆ. 24 ಗಂಟೆಗಳಲ್ಲಿ 1,40,000ಕ್ಕೂ ಹೆಚ್ಚು ಜನ ಉಕ್ರೇನ್ ತೊರೆದಿದ್ದಾರೆ. ಈವರೆಗೆ 20 ಲಕ್ಷಕ್ಕೂ ಹೆಚ್ಚು ಜನ ಉಕ್ರೇನ್ ತೊರೆದಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸಿದೆ. ಹೀಗಾಗಿ ರಷ್ಯಾದ ಹಡಗುಗಳನ್ನು ನಿಷೇಧಿಸುವ ದೇಶಗಳಿಗೆ ರಷ್ಯಾ ಎಚ್ಚರಿಸಿದೆ. ತಮ್ಮ ಬಂದರುಗಳಿಂದ ನಿಷೇಧಿಸುವ ದೇಶಗಳಿಗೆ ತಕ್ಕ ಉತ್ತರವನ್ನ ಕೊಡುತ್ತೆ ಎಂದು ರಷ್ಯಾ ಎಚ್ಚರಿಸಿದೆ.
ಯುದ್ಧ ಸಮಾಪ್ತಿಗೊಳಿಸಲು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ. ಜೊತೆಗೆ ಶಸ್ತ್ರಾಸ್ತ್ರ ಕೆಳಗಿಡುವಂತೆ ರಷ್ಯಾ ಸೇನಾಪಡೆಗೆ ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸಿದೆ. ರಷ್ಯಾದ ದಾಳಿಯಿಂದಾಗಿ ಪರಮಾಣು ಸ್ಥಾವರ ಸ್ಥಗಿತವಾಗಿದೆ. ಚೆರ್ನೋಬಿಲ್ ಪರಮಾಣು ಸ್ಥಾವರ ಸಂಪೂರ್ಣ ಸ್ಥಗಿತ ಮಾಡಲಾಗುತ್ತದೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸಿದ್ದು, ಉಕ್ರೇನ್‌ನ ನೋ-ಫ್ಲೈ ವಲಯವನ್ನು ನ್ಯಾಟೋ ತಳ್ಳಿಹಾಕಿದೆ. ಹೀಗಾಗಿ ನ್ಯಾಟೋ ನಿರ್ಧಾರವನ್ನು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಖಂಡಿಸಿದ್ದಾರೆ.
ರಷ್ಯಾ ಹೀಗೆ ಎಷ್ಟು ದಿನ ಯುದ್ಧ ಮುಂದುವರಿಸಲಿದೆ? ಉಕ್ರೇನ್‌ನಲ್ಲಿ ಈಗಿರುವ ಸರ್ಕಾರವನ್ನು ಉರುಳಿಸಿ, ಪೂರ್ತಿಯಾಗಿ ಆ ದೇಶವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತದೆಯಾ? ರಷ್ಯಾವೇ ಉಕ್ರೇನ್‌ಗೆ ಹೊಸ ಅಧ್ಯಕ್ಷನನ್ನು ನೇಮಕ ಮಾಡಲಿದೆಯಾ ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ರಷ್ಯಾ ಇದೀಗ ಹೊರಡಿಸಿರುವ ಒಂದು ಪ್ರಕಟಣೆ ಅತ್ಯಂತ ಮಹತ್ವ ಎನ್ನಿಸಿದೆ. ಉಕ್ರೇನ್ ಸರ್ಕಾರ ಉರುಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲು ರಷ್ಯಾದ ಸೇನಾಪಡೆಗೆ ಯಾವ ಸೂಚನೆಯನ್ನೂ ನೀಡಿಲ್ಲ. ಉಕ್ರೇನ್ನೊಂದಿಗೆ ನಮಗೆ ಇರುವ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ಸಂಧಾನ ಮಾತುಕತೆ ನಡೆಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯವೇ ಹೇಳಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್ ಯುದ್ಧ ಕಾರಣಕ್ಕೆ ಅಡುಗೆ ಎಣ್ಣೆ ಬೆಲೆ ಹೆಚ್ಚಳ ಅಂತ ಹೇಳುತ್ತಿದ್ದಾರೆ. ಇದು ಸುಳ್ಳು ಉಕ್ರೇನ್ ರಷ್ಯಾ ಯುದ್ಧ ಹಿನ್ನಲೆ ಅಡುಗೆ ಎಣ್ಣೆ ಬೆಲೆ ಹೆಚ್ಚಳ ಸುಳ್ಳು ವದಂತಿ. ಚೆನೈನಲ್ಲಿ ಎಲ್ಲ ಅಡುಗೆ ಬೆಲೆ ಜಾಸ್ತಿ ಆಗಿದೆ. ಉಕ್ರೇನ್ ಯುದ್ಧ ಕಾರಣ ಅಂತ ಹೇಳುತ್ತಿದ್ದಾರೆ ಇದು ಸುಳ್ಳು. ಅಲ್ಲೆಲ್ಲ ಆಯಿಲ್ ಸೆಲ್ಸ್ ಮಾರ್ಕೆಟಿಂಗ್ ಹೆಚ್ಚಳ ಆಗುವ ದೃಷ್ಟಿಕೋನದಿಂದ ‘ಕಾನ್ಸೆಪ್ಟ್’ (ಪರಿಕಲ್ಪನೆ) ಮಾಡಿಕೊಂಡಿದ್ದಾರೆ. ನಮ್ಮ ದೇಶದಲ್ಲೆ ಎಲ್ಲ ತರಹದ ಅಡುಗೆ ಎಣ್ಣೆ ತಯಾರು ಆಗುತ್ತದೆ. ಅಡುಗೆ ಎಣ್ಣೆ ಸ್ಟಾಕ್ ಇಲ್ಲ, ಸಿಗಲ್ಲ ಅನ್ನೋದೆಲ್ಲ ಸುಳ್ಳು, ಹಾಗಾಗಿ ಯಾರು ಸುಳ್ಳು ವದಂತಿ ನಂಬಬೇಡಿ ಎಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ಸ್ಟಾರ್ ಲೋಕಲ್ ಮಾರ್ಟ್ ರೀಟೆಲರ್ ಅಮರದೀಪ್ ಟಿವಿ9 ಗೆ ಹೇಳಿಕೆ ನೀಡಿದ್ದಾರೆ.
ಅಡುಗೆ ಎಣ್ಣೆ ಬೆಲೆ ಜಾಸ್ತಿ ಆಗಿದೆ. ಎಣ್ಣೆ ಸಿಗೋದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಅದಕ್ಕಾಗಿ ಅಂಗಡಿಗೆ ಮಧ್ಯಾಹ್ನವೇ ಬಂದಿದ್ದೇವೆ. ಬೆಲೆ ಮಾತ್ರ ಹೆಚ್ಚಾಗಿದೆ. ಆದರೆ ಕೊರತೆಯಿಲ್ಲ. ನಮಗೆ ಅವಶ್ಯಕತೆಗಿಂತ ಹೆಚ್ಚಿಗೆ ಖರೀದಿಸುತ್ತಿದ್ದೇವೆ. ಮುಂದೆ ಸಿಗುತ್ತೊ ಇಲ್ಲವೋ ಎಂಬ ಆತಂಕ ಭಯ ಇದೆ ಎಂದು ಗ್ರಾಹಕಿ ಸೋನಾಲಿ ಹೇಳಿದ್ದಾರೆ.
ಉಕ್ರೇನ್‌ನ ಹಲವು ನಗರಗಳಲ್ಲಿ ಜನರನ್ನು ಸ್ಥಳಾಂತರ ಮಾಡುವುದಕ್ಕೆ ತಾತ್ಕಾಲಿಕವಾಗಿ ಕದನ ವಿರಾಮ ಘೋಷಣೆ ಮಾಡಲಾಗಿದೆ. ಎನರ್ಹೋಡರ್, ಮರಿಯುಪೋಲ್, ಝಪೋರಿಝಿಯಾ, ಸುಮಿ, ಪೋಲ್ಟವಾ, ಇಜಿಯಮ್, ಲೊಜೊವಾ, ಪೊಕ್ರೊವ್ಸ್ಕ್, ವೋಲ್ನೋವಾಖಾ, ವೋರ್ಜೆಲ್, ಬೊರೊಡಿಯಂಕಾ, ಬುಚಾ ಇರ್ಪಿನ್, ಹಾಸ್ಟೊಮೆಲ್, ಕೀವ್ ನಗರಗಳಲ್ಲಿ ಕದನ ವಿರಾಮ ಘೋಷಣೆ ಮಾಡಲಾಗಿದೆ.
ರಷ್ಯಾ- ಉಕ್ರೇನ್ ಮಧ್ಯೆ ಯುದ್ಧದಿಂದ ದಿನಸಿ ಬೆಲೆ ಏರಿಕೆ ಎಂಬ ಸುದ್ದಿ ಹರಿದಾಡುತ್ತಿದ್ದು, ಬಾಗಲಕೋಟೆಯಲ್ಲೂ ಅಡುಗೆ ಎಣ್ಣೆ, ಕೆಲ ದಿನಸಿ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ವಿದ್ಯಾಗಿರಿಯ ಸುಫರ್ ಮಾರುಕಟ್ಟೆಗೆ ಗ್ರಾಹಕರು ಆಗಮಿಸುತ್ತಿದ್ದು, ಅಡುಗೆ ಎಣ್ಣೆ ಒಂದು ಪ್ಯಾಕೆಟ್ಗೆ 40 ರಿಂದ 50 ರೂಪಾಯಿಯಂತೆ ಏರಿಕೆ ಆಗಿದೆ ಎಂದು ಸುಫರ್ ಮಾರುಕಟ್ಟೆ ಅಂಗಡಿ ಮಾಲೀಕ ಬಸವರಾಜ ಹೇಳಿದ್ದಾರೆ.
ರಷ್ಯಾ-ಉಕ್ರೇನ್ ನಡುವೆ ಯುದ್ಧ ಹಿನ್ನೆಲೆಯಲ್ಲಿ ಅಡುಗೆ ಎಣ್ಣೆ ಕೊರತೆಯ ವದಂತಿ ಹರಿದಾಡುತ್ತಿದೆ. ಹೀಗಾಗಿ ಅಡುಗೆ ಎಣ್ಣೆ ಕೊರತೆ ವದಂತಿ ಬಗ್ಗೆ ಧಾರವಾಡದಲ್ಲಿ ಕಿರಾಣಿ ವರ್ತಕ ಉದಯ ಹೇಳಿಕೆ ನೀಡಿದ್ದಾರೆ. ಅಡುಗೆ ಎಣ್ಣೆಯ ಕೊರತೆ ಇಲ್ಲ. ಜನ ಎಷ್ಟು ಕೇಳ್ತಾರೋ ಅಷ್ಟು ಎಣ್ಣೆ ಕೊಡಲಾಗುತ್ತಿದೆ. ದರದಲ್ಲಿ ಕೊಂಚ ಏರಿಕೆ ಆಗಿದೆ. ಹೋಲ್ ಸೇಲ್ನವರು ಕೊಂಚ ಏರಿಸಿದ್ದಾರೆ. ಅಷ್ಟು ಬೇಗನೇ ಅಡುಗೆ ಎಣ್ಣೆ ಸಮಸ್ಯೆ ಆಗೋದಿಲ್ಲ. ಇನ್ನೂ ಸುಮಾರು ದಿನ ಯುದ್ಧ ನಡೆದರೆ ಕಷ್ಟವಾಗಬಹುದು. ಇಷ್ಟು ಬೇಗನೇ ಅಭಾವ ಸೃಷ್ಟಿಯಾಗೋದಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಡುಗೆ ಎಣ್ಣೆ ಸಂಗ್ರಹವಿದೆ ಎಂದು ತಿಳಿಸಿದ್ದಾರೆ.
ರಷ್ಯಾ- ಉಕ್ರೇನ್ ಮಧ್ಯೆ ಯುದ್ಧ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಅಡುಗೆ ಎಣ್ಣೆ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಬಳ್ಳಾರಿಯ ಕಾಳಂ ಸ್ಟ್ರೀಟ್ನಲ್ಲಿರುವ ಅಂಗಡಿಗಳಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ದಿನದಿಂದ ದಿನಕ್ಕೆ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಹೆಚ್ಚು ಹೆಚ್ಚು ಎಣ್ಣೆ ಖರೀದಿ ಮಾಡುತ್ತಿದ್ದೇವೆ ಎಂದು ಗ್ರಾಹಕರಿ ತಿಳಿಸಿದರೆ, ಅಡುಗೆ ಎಣ್ಣೆ ಸರಬರಾಜು ಕಡಿಮೆ ಇದೆ ವ್ಯಾಪಾರಸ್ಥರು ಹೇಳಿದ್ದಾರೆ.
ಉಕ್ರೇನ್ನಿಂದ ಮರಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ವ್ಯವಸ್ಥೆ ಮಾಡುವುದಾಗಿ ಸದನದಲ್ಲಿ ಇಂದು (ಮಾರ್ಚ್ 09) ವೈದ್ಯಕೀಯ ಶಿಕ್ಷಣ ಮಂತ್ರಿ ಭರವಸೆ ನೀಡಿದ್ದಾರೆ.
ಪೂರ್ವ ಉಕ್ರೇನ್‌ನ ಸೆವೆರೊಡೊನೆಸ್ಟ್ಕ್‌ನಲ್ಲಿ ರಷ್ಯಾ ದಾಳಿ ನಡೆಸಿದ್ದು, ರಷ್ಯಾ ದಾಳಿಗೆ ಸೆವೆರೊಡೊನೆಸ್ಟ್ಕ್‌ನಲ್ಲಿ 10 ನಾಗರಿಕರು ಬಲಿಯಾಗಿದ್ದಾರೆ.
ಉಕ್ರೇನ್ ಕಾಲಮಾನ ಬೆಳಗ್ಗೆ 9 ಗಂಟೆಯಿಂದ ಉಕ್ರೇನ್‌ನ ಝಪೋರಿಝಿಯಾದಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಲಾಗಿದೆ.
ಉಕ್ರೇನ್‌ನಲ್ಲಿ ಮೃತಪಟ್ಟ ನವೀನ್ ಕುಟುಂಬಸ್ಥರಿಗೆ ಸಿದ್ದರಾಮಯ್ಯ ಸಾಂತ್ವನ ಹೇಳಿದ್ದಾರೆ.ಬಳಿಕ ಮಾತನಾಡಿದ ಅವರು, ಆಹಾರ ತರಲು ಹೋಗಿದ್ದಾಗ ಶೆಲ್ ದಾಳಿಗೆ ನವೀನ್ ಸಾವನ್ನಪ್ಪಿದ್ದಾರೆ. ನವೀನ್‌ಗೆ ಭಾರತದಲ್ಲಿ ಮೆಡಿಕಲ್ ಸೀಟ್ ಸಿಕ್ಕಿರಲಿಲ್ಲ. ಹೀಗಾಗಿ ಎಂಬಿಬಿಎಸ್ ಮಾಡಲು ಉಕ್ರೇನ್‌ಗೆ ಹೋಗಿದ್ದ. ನವೀನ್ ಸಾವು ಇಡೀ ರಾಜ್ಯಕ್ಕೆ ಆಗಿರುವ ನಷ್ಟವಾಗಿದೆ. ನವೀನ್ ಹೆತ್ತವರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಸರ್ಕಾರ ನವೀನ್ ಮೃತದೇಹ ತರುವ ಕೆಲಸ ಮಾಡಬೇಕು. ಇದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ಹೇಳಿದ್ದಾರೆ.
ರಷ್ಯಾ-ಉಕ್ರೇನ್ ಯುದ್ಧ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ಕೇಂದ್ರಿಯ ಬಸ್ ನಿಲ್ದಾಣದ ಮುಂದೆ ಸದ್ಭಾವ ಸತ್ಯಾಗ್ರಹ ನಡೆಸಲಾಗುತ್ತದೆ. ಗಂಗಾವತಿಯ ಪ್ರೀತಿಯ ಮನಸ್ಸುಗಳು ಎಂಬ ವೇದಿಗೆ ನೇತೃತ್ವದಲ್ಲಿ ಯುದ್ಧ ಬೇಡ – ಶಾಂತಿ ಬೇಕು, ಯುದ್ಧ ನಿಲ್ಲಿಸಿ- ಜೀವಸಂಕುಲ ಉಳಿಸಿ ಎಂದು ಘೋಷಣೆ ಕೂಗಿ, ಸತ್ಯಾಗ್ರಹ ನಡೆಸಿದ್ದಾರೆ. 3ನೇ ಜಾಗತಿಕ ಯುದ್ಧದ ಆತಂಕದ ಹಿನ್ನೆಲೆ ಸದ್ಭಾವ ಸತ್ಯಾಗ್ರಹ ನಡೆಸಲಾಗಿದ್ದು, ಹಿರಿಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದಾರೆ.
ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ ಈವರೆಗೆ 12,000ಕ್ಕೂ ಹೆಚ್ಚು ರಷ್ಯಾ ಯೋಧರ ಹತ್ಯೆಯಾಗಿದೆ ಎಂದು ಉಕ್ರೇನ್ ಹೇಳಿದೆ. ರಷ್ಯಾ ಯೋಧರ ಹತ್ಯೆ ಬಗ್ಗೆ ಉಕ್ರೇನ್ನಿಂದ ಮಾಹಿತಿ ನೀಡಲಾಗಿದೆ.
ರಷ್ಯಾಗೆ ರಫ್ತು ನಿರ್ಬಂಧ ಹೇರಿ ಬ್ರಿಟನ್ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೆ ವಿಮಾನ ,ಬಾಹ್ಯಾಕಾಶ ತಂತ್ರಜ್ಞಾನ ರಫ್ತಿಗೂ ಬ್ರಿಟನ್ ನಿರ್ಬಂಧ ಹೇರಿದೆ.
ರಷ್ಯಾವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಣೆ ಮಾಡಿ ಎಂದು ಉಕ್ರೇನ್ ಅಧ್ಯಕ್ಷ ಮನವಿ ಮಾಡಿದ್ದಾರೆ. ಬ್ರಿಟನ್ ಸಂಸದರಿಗೆ ಝೆಲೆನ್ಸ್ಕಿ ಮನವಿ ಮಾಡಿದ್ದಾರೆ.
ರಷ್ಯಾದಲ್ಲಿ ಕೆಎಫ್ ಸಿ, ಪಿಜ್ಜಾ ಹಟ್ ವ್ಯವಾಹಾರ ನಿರ್ಬಂಧಿಸಿದೆ. ರಷ್ಯಾದಲ್ಲಿ 1000 ಕೆಎಫ್ ಸಿ ಹಾಗೂ 50 ಪಿಜ್ಜಾ ಮಳಿಗೆಗಳನ್ನು ಬಂದ್ ಮಾಡಿದೆ.
ಉಕ್ರೇನ್‌ನಲ್ಲಿ ನವೀನ್ ಜೊತೆಗೆ ಎಂಬಿಬಿಎಸ್ ಓದಲು ತೆರಳಿದ್ದ ಅಮೀತ್, ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ ನಿವಾಸದಲ್ಲಿ ಹೇಳಿಕೆ ನೀಡಿದ್ದಾರೆ. ನವೀನ್ ಜ್ಯೂನಿಯರ್ ಎನ್ನುವುದಕ್ಕಿಂತ ಒಳ್ಳೆಯ ಸ್ನೇಹಿತ. ಸರಕಾರಕ್ಕೆ ಕೈ ಮುಗಿದು ಕೇಳುತ್ತೇವೆ. ನವೀನ್ ಮೃತದೇಹ ಬರಲಿ. ನವೀನ್ ಮೃತದೇಹ ಎಂದು ಹೇಳಲು ನಮ್ಮಿಂದ ಆಗುತ್ತಿಲ್ಲ. ನವೀನ್ನನ್ನು ಸರಕಾರ ಕರೆದುಕೊಂಡು ಬರಬೇಕು. ನವೀನ್ ಪೋಷಕರು ನವೀನ್ಗಾಗಿ ಕಾಯುತ್ತಿದ್ದಾರೆ. ನಾನು ಮಲಗಿದ್ದೆ, ಬೆಳಿಗ್ಗೆ ನಾಲ್ಕು ಗಂಟೆಗೆ ಚಿಕ್ಕಮ್ಮನ ಜೊತೆ ಮಾತಾಡಿದ್ದೆ. ಮಾತಾಡಿ ನಾನು ಮಲಗಿದ್ದೆ. ಬಾಂಬ್ ಬ್ಲಾಸ್ಟ್ ಆಗಿರೋ ಸದ್ದು ಕೇಳಿ ಎದ್ದು ನೋಡಿದೆ. ಆಗ ನವೀನ್ ಇರಲಿಲ್ಲ. 8.10 ವೇಳೆಗೆ ಬೊಂಬಾಡಿಂಗ್ ಸೌಂಡ್ ಆಯ್ತು. ನವೀನ್ ಫೋನ್ ರಿಸೀವ್ ಮಾಡಲಿಲ್ಲ. ಉಕ್ರೇನ್‌ನ ಲೇಡಿ ನವೀನ್ನ ಫೋನ್ ರಿಸೀವ್ ಮಾಡಿ ಉಕ್ರೇನಿ ಭಾಷೆಯಲ್ಲಿ ಮಾತನಾಡಿದರು. ಬಂಕರ್ನಲ್ಲಿದ್ದ ಮತ್ತೊಬ್ಬ ಲೇಡಿಗೆ ಫೋನ್ ಕೊಟ್ಟೆವು. ಅವರು ಅಳಲು ಶುರು ಮಾಡಿದರು ಅಂತ ತಿಳಿಸಿದರು.
ಉಕ್ರೇನ್ ದೇಶದ ಕೀವ್, ಖಾರ್ಕೀವ್, ವಿನಯಟಿಷಿಯಾ , ವಸಿಲಕಿವ್ ಮೇಲೆ ವಾಯು ದಾಳಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಉಕ್ರೇನ್ ಜನರಿಗೆ ಬಂಕರ್ , ಮನೆಗಳಲ್ಲಿ ಆಶ್ರಯ ಪಡೆಯಲು ಸೂಚನೆ ನೀಡಲಾಗಿದೆ. ಉಕ್ರೇನ್ ಸೇನೆ , ಸರ್ಕಾರದಿಂದ ವಾಯುದಾಳಿ ನಡೆಯುವ ಬಗ್ಗೆ ಸೈರನ್ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಉಕ್ರೇನ್, ರಷ್ಯಾ ನಡುವೆ ಯುದ್ಧ ಅಡುಗೆ ಎಣ್ಣೆ ಮೇಲೆ ಪ್ರಭಾವ ಬೀರಿದೆ. ಸೂಪರ್ ಮಾರ್ಕೆಟ್ ಗಳಲ್ಲಿ ಅಡುಗೆ ಎಣ್ಣೆ ಮಿತಿಗೊಳಿಸಿದ್ದು, ಗ್ರಾಹಕರಿಗೆ ಇಂತಿಷ್ಟೇ ಅಡುಗೆ ಎಣ್ಣೆಗಳನ್ನು ನೀಡುತ್ತಿದೆ. ಬೇಡಿಕೆ ಮತ್ತು ಆಮದು ವ್ಯತಿರಿಕ್ತವಾಗಿರುವ ಕಾರಣ
ಸೂಪರ್ ಮಾರ್ಕೆಟ್ ಗಳಲ್ಲಿ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಸ್ಟಾಕ್ ನೋಡಿಕೊಂಡು ಅಡುಗೆ ಎಣ್ಣೆ ಮಾರಾಟ ಮಾಡಲಾಗುತ್ತಿದೆ. ವೋರ್, ರಿಲಯನ್ಸ್ ಮಾರ್ಟ್ ಗಳಲ್ಲಿ ಅಡುಗೆ ಎಣ್ಣೆ ಮಿತಿಗೊಳಿಸಿ ಒಬ್ಬರಿಗೆ ಇಂತಿಷ್ಟೇ ಮೀಟರ್ ಅಡುಗೆ ಎಣ್ಣೆ ಮಾರಾಟ ಮಾಡಲಾಗುತ್ತಿದೆ.
ಉಕ್ರೇನ್ ನ ಖಾರ್ಕೀವ್ ನಗರದ ಖಾರ್ಕೀವ್ ಯುನಿವರ್ಸಿಟಿಯಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ಓದುತ್ತಿದ್ದ ಮನೋಜ್ ಕುಮಾರ ತವರಿಗೆ ವಾಪಸ್ಸಾಗಿದ್ದಾರೆ. ಇಂದು ಬೆಳಿಗ್ಗೆ ಬಾಗಲಕೋಟೆಯ ವಿದ್ಯಾಗಿರಿಯಲ್ಲಿರುವ ನಿವಾಸಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಹೂಮಾಲೆ ಹಾಕಿ, ಆರತಿ ಎತ್ತಿ, ದೃಷ್ಠಿ ತೆಗೆದು ಕುಟುಂಬಸ್ಥರು ಬರಮಾಡಿಕೊಂಡಿದ್ದಾರೆ.
ಯುದ್ಧ ಭೂಮಿ ಉಕ್ರೇನ್ ನಿಂದ 13 ದಿನದ ಬಳಿಕ ವೈದ್ಯಕೀಯ ವಿದ್ಯಾರ್ಥಿ ವಿವೇಕ ತವರಿಗೆ ವಾಪಸ್ ಆಗಿದ್ದಾರೆ. ವಿವೇಕ್ ಬೀದರ್ ನ ಸಿದ್ಧರಾಮಯ್ಯ ಬಡಾವಣೆ ನಿವಾಸಿ. 14 ದಿನದ ವನವಾಸದ ಬಳಿಕ ತಾಯ್ನಾಡಿಗೆ ಬಂದಿದ್ದಾರೆ. ತವರಿಗೆ ವಾಪಸ್ ಆಗಲು ಭಾರತದ ರಾಯಭಾರಿ ನಮಗೆ ತುಂಬಾ ಸಹಾಯ ಮಾಡಿದೆ ಎಂದು ಹೇಳಿದ್ದಾರೆ. ವಿವೇಕ ಕಾರ್ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಓದುತ್ತಿದ್ದರು.
NATO ಸದಸ್ಯತ್ವ ಬೇಡ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್ ಸ್ಕಿ ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ನ್ಯಾಟೋ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ಈ ಬಗ್ಗೆ ನ್ಯಾಟೋ ವಿದೇಶಾಂಗ ಸಚಿವರು ಚರ್ಚೆ ನಡೆಸಲಿದ್ದಾರೆ. ಇನ್ನು ಮಾರ್ಚ್ 16 ರಂದು ನ್ಯಾಟೋ ರಾಷ್ಟ್ರಗಳ ರಕ್ಷಣಾ ಸಚಿವರ ಸಭೆ ನಡೆಯಲಿದೆ.
ಉಕ್ರೇನ್‌ಗೆ ಅಮೆರಿಕ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಮ್ಯಾಕ್ ಡೊನಾಲ್ಡ್ ಬರ್ಗರ್ ಶಾಪ್, ವೀಸಾ, ಮಾಸ್ಟರ್ ಕಾರ್ಡ್ ಸೇವೆ, ನೆಟ್ ಫ್ಲಿಕ್ಸ್ನಲ್ಲಿ ಸಿನಿಮಾ ಪ್ರದರ್ಶನ ಬಿಡುಗಡೆ, ಆ್ಯಪಲ್ ಕಂಪನಿಯ ಐ ಫೋನ್ ಮಾರಾಟವನ್ನು ಬಂದ್ ಮಾಡಲಾಗಿದೆ. ಅಷ್ಟೇ ಅಲ್ಲದೆ ರಷ್ಯಾದಲ್ಲಿ ಈಗ ಟ್ವಿಟರ್ ಬಳಕೆಗೂ ನಿರ್ಬಂಧ ಹೇರಲಾಗಿದೆ. ಜತೆಗೆ ರಷ್ಯಾದಲ್ಲಿ ಕೋಕಾ ಕೋಲಾ ಕಂಪನಿಯ ಕೋಲಾ ಮಾರಾಟ ಹಾಗೂ ಸ್ಟಾರ್ ಬಕ್ಸ್ ಕಂಪನಿಯಿಂದ ಕಾಫಿ ಮಳಿಗೆಗಳನ್ನೂ ಕೂಡ ಬಂದ್ ಮಾಡಲಾಗಿದೆ.
ರಷ್ಯಾ ಸೇನೆ ವಿರುದ್ಧ ಹೋರಾಡಿ ಉಕ್ರೇನ್ ನಟ ಪಾಷ ಲೀ ಮೃತಪಟ್ಟಿದ್ದಾರೆ. ಉಕ್ರೇನ್ ಸೇನೆ ಜತೆ ಸೇರಿ ರಷ್ಯಾ ವಿರುದ್ಧ ಹೋರಾಡಿದ ಪಾಷ ಲೀ(33) ಮೃತಪಟ್ಟಿದ್ದಾರೆ.
ನಮ್ಮ ಮಗ ಮನೆಗೆ ಮರಳಲು ಮಾಧ್ಯಮಗಳು ಕಾರಣ ಅಂತ ಹಾಸನದ ಗಗನ್ ಗೌಡ ತಾಯಿ ಸುಜಾತಾ ಹೇಳಿಕೆ ನೀಡಿದ್ದಾರೆ. 12 ದಿನಗಳ ಭಯ, ಆತಂಕದ ಬಳಿಕ ಗಗನ್ ಗೌಡ ವಾಪಸ್ ಆಗಿದ್ದಾನೆ. ನಮಗೆ ಧೈರ್ಯ ಹೇಳಿದ್ದೇ ನೀವುಗಳು. ಸಚಿವರು, ದೇವೇಗೌಡರ ಎಲ್ಲರು ನಮಗೆ ಸಹಕಾರ ನೀಡಿದ್ದರು. ಖಂಡಿತಾ ನನ್ನ ಮಗ ವಾಪಸ್ ಬರ್ತಾನೆ ಎಂದು ಕೊಂಡಿರಲಿಲ್ಲ. ಮಗನನ್ನ ಕಳೆದುಕೊಂಡೆವು ಎನ್ನೋ ಭಯ ಇತ್ತು. ನವೀನ್ ಸಾವಿನ ಬಳಿಕ ನಿಜಕ್ಕೂ ನಮಗೆ ನಂಬಿಕೆ ಹೋಗಿತ್ತು. ಈಗ ಮಗ ಮರುಹುಟ್ಟು ಪಡೆದು ಮನೆಗೆ ಬಂದಿದ್ದಾನೆ ಅಂತ ಸುಜಾತಾ ಹೇಳಿದರು.
ಜಾಗತೀಕರಣದ ಈ ಕಾಲದಲ್ಲಿ ಸ್ವಾವಲಂಬನೆಯ ಮಾತೇ ಅಪ್ರಸ್ತುತವಾಗಬಹುದು ಎನ್ನುವಷ್ಟರ ಮಟ್ಟಿಗೆ ಒಂದು ದೇಶ ಮತ್ತೊಂದು ದೇಶದ ಮೇಲೆ ಅವಲಂಬಿತವಾಗಿದೆ
Link: https://t.co/SOazWjrxwU#IndianEconomy #VladimirPutin #VolodymyrrZelensky #GlobalEconomy
— TV9 Kannada (@tv9kannada) March 9, 2022
ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ರಷ್ಯಾ, ಸ್ನೇಹಿಯಲ್ಲದ ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಅಲ್ಬೇನಿಯಾ, ಅಂಡೋರಾ, ಆಸ್ಟ್ರೇಲಿಯಾ, ಗ್ರೇಟ್ ಬ್ರಿಟನ್, ಜರ್ಸಿ, ಅಂಗುಯಿಲಾ, ಬ್ರಿಟಿಷ್ ವರ್ಜಿನ್ ದ್ವೀಪಗಳು, ಜಿಬ್ರಾಲ್ಟರ್, ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳು, ಐಸ್ಲ್ಯಾಂಡ್, ಕೆನಡಾ, ಲಿಚ್ಟೆನ್‌ಸ್ಟೈನ್, ಮೈಕ್ರೋನೇಷಿಯಾ, ಮೊನಾಕೊ, ನ್ಯೂಜಿಲೆಂಡ್, ನಾರ್ವೆ, ದಕ್ಷಿಣ ಸೇರಿವೆ ಕೊರಿಯಾ, ಸ್ಯಾನ್ ಮರಿನೋ, ಉತ್ತರ ಮ್ಯಾಸಿಡೋನಿಯಾ, ಸಿಂಗಾಪುರ್, ಯುನೈಟೆಡ್ ಸ್ಟೇಟ್ಸ್, ತೈವಾನ್, ಉಕ್ರೇನ್, ಮಾಂಟೆನೆಗ್ರೊ, ಸ್ವಿಟ್ಜರ್ಲೆಂಡ್ ಮತ್ತು ಜಪಾನ್ ಹೆಸರಿದೆ.
ಉಕ್ರೇನ್‌ಗೆ ಅಮೆರಿಕ ಏರ್‌ಬೇಸ್‌ನಿಂದ ಫೈಟರ್ ಜೆಟ್ ಕಳಿಸಲು ಮನವಿ ಮಾಡಿದ್ದಾರೆ. ಆದರೆ ಪೋಲೆಂಡ್ ಮನವಿಯನ್ನು ಅಮೆರಿಕ ತಿರಸ್ಕಾರ ಮಾಡಿದೆ.
ಹಾಸನದ ಗಗನ್ ಗೌಡ ಉಕ್ರೇನ್ನಿಂದ ಮನೆಗೆ ಮರಳಿದ್ದಾರೆ. 9 ದಿನ ಬಂಕರ್, ಮೂರು ದಿನ ಬೇರೊಬ್ಬರ ಮನೆಯಲ್ಲಿ ಆಶ್ರಯ ಪಡೆದು ಯುದ್ದ ಭೂಮಿಯಿಂದ ಗಗನ್ ಮರಳಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಸುಮಿ ನಗರದಿಂದ ಪೊಲಟವಗೆ ಭಾರತೀಯರನ್ನ ಶಿಫ್ಟ್ ಮಾಡಲಾಗುತ್ತಿದೆ. ಪೊಲಟವದಿಂದ ರೈಲಿನ ಮೂಲಕ ಬೇರಡೆ ಸ್ಥಳಾಂತರ ಮಾಡಲಾಗುತ್ತಿದೆ. ಭಾರತದ 694 ವಿದ್ಯಾರ್ಥಿಗಳು ಸುಮಿ ನಗರದಲ್ಲಿ ಸಿಲುಕಿದ್ದರು. ಪೋಲೆಂಡ್, ಹಂಗೇರಿಗೆ ಭಾರತದ ವಿದ್ಯಾರ್ಥಿಗಳನ್ನ ಶಿಫ್ಟ್ ಮಾಡಲಾಗುತ್ತಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ 2 ಮಿಲಿಯನ್ ಜನರು ಉಕ್ರೇನ್ ತೊರೆದಿದ್ದಾರೆ. 8 ಲಕ್ಷ ಮಕ್ಕಳು ಸೇರಿ 2 ಮಿಲಿಯನ್ ಜನ ಉಕ್ರೇನ್ ತೊರೆದಿದ್ದಾರೆ.
ಯುದ್ದ ಪೀಡಿತ ಉಕ್ರೇನ್ ದೇಶದಿಂದ ವಿಜಯಪುರದ ಮತ್ತೋರ್ವ ವಿದ್ಯಾರ್ಥಿನಿ ಸುರಕ್ಷಿತವಾಗಿ ವಾಪಸ್ ಮನೆಗೆ ಬಂದಿದ್ದಾರೆ.
ನಗರದ ಸಾಯಿ ಪಾರ್ಕ್ ನಿವಾಸಿ ರಕ್ಷಾ ಕಂಬಾಗಿ ಆಗಮಿಸಿದ್ದಾರೆ. ಹೂಗುಚ್ಚ ನೀಡಿ ಶಾಲು ಹೊದಿಸಿ ಮಗಳನ್ನು ಪೋಷಕರು ಮನೆಗೆ ಬರ ಮಾಡಿಕೊಂಡರು. ಮಗಳಿಗೆ ಕೇಕ್ ತಿನ್ನಿಸಿ ತಾಯಿ ಹಾಗೂ ಸಹೋದರರು ಖುಷಿ ಪಟ್ಟರು.
ಭಾರತ ಸರ್ಕಾರ ಉಕ್ರೇನ್‌ನಲ್ಲಿ ಸಿಲುಕಿರುವ ಬಾಂಗ್ಲಾದೇಶದವರನ್ನು ಸ್ಥಳಾಂತರಿಸುತ್ತಿದೆ. ಭಾರತೀಯ ವಿದ್ಯಾರ್ಥಿಗಳ ಜತೆ ನೇಪಾಳ, ಟುನಿಶಿಯಾ ವಿದ್ಯಾರ್ಥಿಗಳಿಗೂ ಕೂಡಾ ಭಾರತ ಸರ್ಕಾರ ಸಹಾಯ ಮಾಡುತ್ತಿದೆ.
ಸೂರ್ಯಕಾಂತಿ ಎಣ್ಣೆ , ಪ್ರಾಣಿ, ತರಕಾರಿ ಕೊಬ್ಬುಗಳು ಮತ್ತು ತೈಲಗಳು, ತೈಲಗಳು, ಯಂತ್ರೋಪಕರಣಗಳು, ಪರಮಾಣು ರಿಯಾಕ್ಟರ್‌ಗಳು, ಬಾಯ್ಲರ್‌ಗಳು, ಆಹಾರ ಉದ್ಯಮದ ತ್ಯಾಜ್ಯಗಳು, ಪ್ರಾಣಿಗಳ ಮೇವು ಪ್ಲಾಸ್ಟಿಕ್ಸ್, ಆಪ್ಟಿಕಲ್, ಫೋಟೋ, ತಾಂತ್ರಿಕ, ವೈದ್ಯಕೀಯ ಉಪಕರಣ, ಮರ ಮತ್ತು ಮರದ ಲೇಖನಗಳು, ಮರದ ಇದ್ದಿಲು, ಕಬ್ಬಿಣ ಮತ್ತು ಉಕ್ಕು, ಅದಿರು ಸ್ಲ್ಯಾಗ್ ಮತ್ತು ಬೂದಿ, ವಿಮಾನ, ಬಾಹ್ಯಾಕಾಶ ನೌಕೆ, ಕಬ್ಬಿಣ ಅಥವಾ ಉಕ್ಕಿನ ಲೇಖನಗಳು, ವಿದ್ಯುತ್, ಎಲೆಕ್ಟ್ರಾನಿಕ್ ಉಪಕರಣಗಳು, ಉಪ್ಪು, ಗಂಧಕ, ಮಣ್ಣು, ಕಲ್ಲು, ಪ್ಲಾಸ್ಟರ್, ಸುಣ್ಣ ಮತ್ತು ಸಿಮೆಂಟ್, ಔಷಧೀಯ ಉತ್ಪನ್ನಗಳು, ಕಚ್ಚಾ ಚರ್ಮವನ್ನು ಉಕ್ರೇನ್ ಭಾರತಕ್ಕೆ ರಫ್ತು ಮಾಡುತ್ತದೆ.
ದೆಹಲಿಯಲ್ಲಿರುವ ಉಕ್ರೇನ್ ರಾಜತಾಂತ್ರಿಕ ಕಚೇರಿಗೆ ಕೆಲವರು ಲಿಖಿತ ಪ್ರಸ್ತಾವ ನೀಡಿದ್ದಾರೆ.
Link: https://t.co/ah7kYlRvFo#UkraineVsRussia #IndiansForUkraine #RussiaUkraineConflict
— TV9 Kannada (@tv9kannada) March 9, 2022
ಯುರೋಪಿಯನ್ ಯೂನಿಯನ್ನಿಂದ ಉಕ್ರೇನ್‌ಗೆ 500 ಮಿಲಿಯನ್ ಡಾಲರ್ ನೆರವು ನೀಡಲಾಗಿದೆ. ರಷ್ಯಾ ಉಕ್ರೇನ್ ಮೇಲೆ ನಿರಂತರ ಯುದ್ಧ ನಡೆಸುತ್ತಿರುವ ಹಿನ್ನಲೆಯಲ್ಲಿ ಯುರೋಪಿಯನ್ ಒಕ್ಕೂಟದಿಂದ ಉಕ್ರೇನ್‌ಗೆ ಮಾನವೀಯ ನೆರವು ನೀಡಲಾಗಿದೆ.
ರಷ್ಯಾದಲ್ಲಿ ಸೋಡಾ ಮಾರಾಟ, ಕೋಕಾ-ಕೋಲಾ ಕಂಪನಿಯ ವ್ಯವಹಾರಗಳನ್ನು ಪೆಪ್ಸಿ ಕಂಪನಿ ಸ್ಥಗಿತಗೊಳಿಸಿದೆ. ಉಕ್ರೇನ್ ಮೇಲಿನ ಯುದ್ಧವನ್ನು ಮುಂದುವರೆಸಿದ ಹಿನ್ನಲೆಯಲ್ಲಿ ಪೆಪ್ಸಿ ಕಂಪನಿಗಳು ಈ ನಿರ್ಧಾರ ಕೈಗೊಂಡಿವೆ. ಇನ್ನು ಮೆಕ್ ಡಾನಲ್ಡ್ಸ್ ಕೂಡ ಸುಮಾರು 800 ಸ್ಥಳಗಳಲ್ಲಿ ಉತ್ಪನ್ನಗಳ ಮಾರಾಟವನ್ನು ಸ್ಥಗಳಿಸುತ್ತಿದೆ ಎಂದು ವರದಿ ತಿಳಿಸಿದೆ.
ಸೆಪ್ಟೆಂಬರ್ 9ರವರೆಗೆ ವಿದೇಶಿ ಕರೆನ್ಸಿ ಮಾರಾಟವನ್ನು ರಷ್ಯಾ ಸಸ್ಪೆಂಡ್ ಮಾಡಿದೆ. ವಿದೇಶಿ ಕರೆನ್ಸಿ ಮಾರಾಟವನ್ನುರಷ್ಯಾ ಅಮಾನತು ಮಾಡಿದೆ ಎಂದು ರಷ್ಯಾ ಸೆಂಟ್ರಲ್ ಬ್ಯಾಂಕ್ ಉಲ್ಲೇಖಿಸಿ ವರದಿಯಾಗಿದೆ.
ಉಕ್ರೇನ್‌ನಲ್ಲಿ ರಷ್ಯಾ 14ನೇ ದಿನಕ್ಕೆ ಯುದ್ಧವನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ರಷ್ಯಾದಲ್ಲಿ ಪೆಪ್ಸಿ ಕಂಪನಿ ಉತ್ಪನ್ನಗಳ ಮಾರಾಟ ಸ್ಥಗಿತಗೊಳಿಸಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದ ಹಿನ್ನೆಲೆ ಈವರೆಗೆ ಸುಮಿ ನಗರದಲ್ಲಿದ್ದ 5 ಸಾವಿರ ಜನರ ಸ್ಥಳಾಂತರ ಮಾಡಲಾಗಿದೆ.
ರಷ್ಯಾ ಸೇನೆ ಉಕ್ರೇನ್‌ನಲ್ಲಿ ಯುದ್ಧ ಮುಂದುವರಿಸಿದೆ. ಝೈಟೊಮಿರ್, ಖಾರ್ಕಿವ್‌ನ ವಸತಿ ಪ್ರದೇಶದಲ್ಲಿ ದಾಳಿ ನಡೆಸಿದೆ. ದಾಳಿಯಲ್ಲಿ ಇಂದು ಮೂವರು ಮಕ್ಕಳು ಸೇರಿದಂತೆ 7 ಜನ ಸಾವನ್ನಪ್ಪಿದ್ದಾರೆ.
ಉಕ್ರೇನ್‌ನ ಮರಿಯುಪೋಲ್‌ನಲ್ಲಿ ಕುಡಿಯಲು ನೀರು ಸಿಗದೆ 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ರಷ್ಯಾ ಸೇನೆ ನಗರಕ್ಕೆ ದಿಗ್ಬಂಧನ ವಿಧಿಸಿದ ಹಿನ್ನೆಲೆ ಮೂಲಸೌಕರ್ಯಗಳು ಸಿಗದೆ ಬಾಲಕಿ ಮೃತಪಟ್ಟಿದ್ದಾಳೆ.
ಉಕ್ರೇನ್‌ನ ವಿನ್ನಿಟ್ಸಿಯಾದಲ್ಲಿ ರಷ್ಯಾ ಸೇನೆ ಏರ್‌ಸ್ಟ್ರೈಕ್ ನಡೆಸುತ್ತಿದೆ. ಹೀಗಾಗಿ ನಾಗರಿಕರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ವಾಷಿಂಗ್ಟನ್‌ನ ಒಂದು ರಸ್ತೆಗೆ ಝೆಲೆನ್‌ಸ್ಕಿ ಹೆಸರು ಮರುನಾಮಕರಣ ಮಾಡಲಾಗಿದೆ. ರಷ್ಯಾದ ರಾಯಭಾರ ಕಚೇರಿ ರಸ್ತೆಗೆ ಮರುನಾಮಕರಣ ಮಾಡಲಾಗಿದ್ದು, ಧರಣಿನಿರತರು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೆಸರಿಟ್ಟಿದ್ದಾರೆ.
ಉಕ್ರೇನ್ ರಷ್ಯಾ ಯುದ್ದದ ಹಿನ್ನೆಲೆ ಪ್ರತಿ ಲೀಟರ್ ಅಡುಗೆ ಎಣ್ಣೆ ಬೆಲೆ 10-15 ರೂಪಾಯಿ ಏರಿಕೆಯಾಗಿದೆ. ಎರಡ್ಮೂರು ದಿನದ ಹಿಂದೆ 175 ರೂಪಾಯಿ ಫಾರ್ಚುನ್ ಎಣ್ಣೆ ಬೆಲೆ ಇಂದು 180 ರಿಂದ 190 ಕ್ಕೆ ಏರಿಕೆಯಾಗಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದವರಿಸಿದ ಹಿನ್ನೆಲೆ ರಷ್ಯಾದಲ್ಲಿ ಕೊಕಾ ಕೋಲಾ ಕಂಪನಿಯ ವ್ಯವಹಾರ ಸ್ಥಗಿತವಾಗಿದೆ.
ಪಾಕಿಸ್ತಾನದ ಯುವತಿ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾಳೆ. ಉಕ್ರೇನ್‌ನ ಕೀವ್‌ನಲ್ಲಿ ಪಾಕ್‌ನ ಅಸ್ಮಾ ಶಾಫೀಕ್ ಸಿಲುಕಿದ್ದಳು. ಅಸ್ಮಾ ಶಾಫೀಕ್ ಸ್ಥಳಾಂತರಿಸಲು ಅಧಿಕಾರಿಗಳಿಂದ ಸಹಾಯ ಮಾಡಲಾಗಿದೆ. ಭಾರತದ ರಾಯಭಾರ ಕಚೇರಿ ಅಧಿಕಾರಿಗಳು ಸಹಾಯ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು, ಪ್ರಧಾನಿ ಮೋದಿಗೆ ಯುವತಿ ಧನ್ಯವಾದ ತಿಳಿಸಿದ್ದಾಳೆ. ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾಳೆ.
NATO ಸದಸ್ಯತ್ವ ಪಡೆಯುವ ಆಸೆಯನ್ನು ಉಕ್ರೇನ್ ಕೈಬಿಟ್ಟಿದೆ. ಜತೆಗೆ 2 ಪ್ರಾಂತ್ಯಗಳ ಸ್ವಾಯತ್ತತೆ ಬಗ್ಗೆಯೂ ರಾಜಿಗೆ ಸಿದ್ಧವಾಗಿದೆ. ರಾಜಿಗೆ ಸಿದ್ಧ ಅಂತ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. NATO ಪಡೆಗಳಿಗೆ ರಷ್ಯಾ ಬಗ್ಗೆ ಹೆದರಿಕೆ ಇದೆ. ಮಂಡಿಯೂರಿ NATO ಸದಸ್ಯತ್ವ ಕೇಳಲಾಗಲ್ಲ.
ಹೀಗಾಗಿ ನ್ಯಾಟೋ ಸದಸ್ಯತ್ವ ಪಡೆಯಲ್ಲ ಅಂತ ಝೆಲೆನ್‌ಸ್ಕಿ ಹೇಳಿದ್ದಾರೆ.
ಯುದ್ದ ಭೂಮಿಯಿಂದ ನಾಲ್ವರು ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಒಟ್ಟು ಇದುವರೆಗೆ ತುಮಕೂರಿಗೆ 22 ವಿದ್ಯಾರ್ಥಿಗಳು ವಾಪಸ್ ಆಗಿದ್ದಾರೆ. ಇನ್ನೂ ಇಬ್ಬರು ವಿದ್ಯಾರ್ಥಿಗಳು ಬರುತ್ತಿರುವುದಾಗಿ ಮಾಹಿತಿಯಿದೆ. ಸದ್ಯ ಒಂದೆ ಮನೆಯ ರೂಪಶ್ರೀ, ಸುಮಂತ್ ಹಾಗೂ ರವಿತೇಜ ಸಂಪತ್ ಕುಮಾರ್ ವಾಪಸ್ ಆಗಿದ್ದಾರೆ. ಮಕ್ಕಳನ್ನ ಕಂಡು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಬ್ರಿಟನ್ ರಷ್ಯಾದ ಇಂಧನ ಆಮದು ನಿಷೇಧಿಸಿದೆ. ಆದರೆ ಇಂಥ ನಿರ್ಬಂಧ ವಿಧಿಸುವ ಉದ್ದೇಶ ತಮಗಿಲ್ಲ ಎಂದು ಐರೋಪ್ಯ ಒಕ್ಕೂಟ ಸ್ಪಷ್ಟಪಡಿಸಿದೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಈ ನಡೆ ಖಂಡಿಸಿ ಹಲವು ದೇಶಗಳ ಕಂಪನಿಗಳು ರಷ್ಯಾದಲ್ಲಿ ಸೇವೆ ಸ್ಥಗಿತಗೊಳಿಸಿವೆ. ಇದೀಗ ಮೆಕ್ಡೊನಾಲ್ಡ್ ಕಂಪನಿಯು ರಷ್ಯಾದಲ್ಲಿರುವ ಎಲ್ಲ ರೆಸ್ಟೋರೆಂಟ್ ಸೇವೆಗಳನ್ನು ಮುಚ್ಚುವುದಾಗಿ ಹೇಳಿಕೆ ನೀಡಿದೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಆಪರೇಷನ್ ಗಂಗಾ ಕಾರ್ಯಾಚರಣೆಯಲ್ಲಿ ಉಕ್ರೇನ್ನಿಂದ ಇಂದು 410 ವಿದ್ಯಾರ್ಥಿಗಳ ಏರ್ಲಿಫ್ಟ್ ಮಾಡಲಾಗುವುದು. 2 ವಿಶೇಷ ವಿಮಾನಗಳಲ್ಲಿ ಈ ವಿದ್ಯಾರ್ಥಿಗಳು ಬರಲಿದ್ದಾರೆ. ಫೆ 22ರಿಂದ ಈವರೆಗೆ 75 ವಿಮಾನಗಳ ಮೂಲಕ ಸುಮಾರು 18,000 ವಿದ್ಯಾರ್ಥಿಗಳ ಏರ್ಲಿಫ್ಟ್ ಮಾಡಲಾಗಿದೆ.
ಉಕ್ರೇನ್‌ನಲ್ಲಿ 14ನೇ ದಿನವೂ ಯುದ್ಧ ಮುಂದುವರಿದಿದ್ದು ಮೈಕೊಲೈವ್‌ನಲ್ಲಿ ರಷ್ಯಾ ಸೇನೆಯ ಹೆಲಿಕಾಪ್ಟರ್ ಧ್ವಂಸಗೊಂಡಿದೆ. ಹೆಲಿಕಾಪ್ಟರ್ ಹೊಡೆದುರುಳಿಸಿದ್ದಾಗಿ ಹಾಗೂ ರಷ್ಯಾ ಟ್ಯಾಂಕ್ ವಶಕ್ಕೆ ಪಡೆದಿದ್ದಾಗಿ ಉಕ್ರೇನ್ ಸೇನೆಯು ಹೇಳಿಕೆ ನೀಡಿದೆ.
ಉಕ್ರೇನ್‌ನ ಸುಮಿ ನಗರದಲ್ಲಿ ರಷ್ಯಾ ಸೇನೆ ನಡೆಸಿದ ವಾಯುದಾಳಿಯಲ್ಲಿ 16 ವರ್ಷದ ಸಮರಕಲೆಗಳ ಚಾಂಪನಿಯನ್ ಆರ್ಟ್ಯೋಮ್ ಪ್ರಯಿಮೆಂಕೊ ಅವರ ಕುಟುಂಬ ಸಾವನ್ನಪ್ಪಿದೆ.
ರಷ್ಯಾ ದಾಳಿಯಿಂದ ಉಕ್ರೇನ್‌ನ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ನ್ಯಾಟೊ ಸದಸ್ಯತ್ವ ಪಡೆಯುವ ಆಸೆ ಕೈಬಿಟ್ಟಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಎರಡು ಪ್ರಾಂತ್ಯಗಳ ಸ್ವಾಯತ್ತತೆ ಸೇರಿದಂತೆ ರಷ್ಯಾದ ಹಲವು ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ್ದಾರೆ. ಮಂಡಿಯೂರಿ ನ್ಯಾಟೊ ಸದಸ್ಯತ್ವ ಕೇಳಲು ಆಗುವುದಿಲ್ಲ. ಹೀಗಾಗಿ ನ್ಯಾಟೋ ಸದಸ್ಯತ್ವ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಕ್ರೇನ್‌ಗೆ ನ್ಯಾಟೋ ಸದಸ್ಯತ್ವ ಕೊಡಿ ಎಂದು ಇನ್ನೆಂದೂ, ಯಾರೆದುರೂ ಮಂಡಿಯೂರುವುದಿಲ್ಲ; ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಿರ್ಧಾರ#VolodymyrZelenski #NATO https://t.co/nP3ArPNKLE
— TV9 Kannada (@tv9kannada) March 9, 2022
ಉಕ್ರೇನ್-ರಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 9ರವರೆಗೆ ವಿದೇಶಿ ಕರೆನ್ಸಿ ಮಾರಾಟವನ್ನು ರಷ್ಯಾ ನಿರ್ಬಂಧಿಸಿದೆ. ರಷ್ಯಾದ ಕೇಂದ್ರೀಯ ಬ್ಯಾಂಕ್ ಈ ನಿರ್ಬಂಧವನ್ನು ಘೋಷಿಸಿದೆ.
ರಷ್ಯಾ ಉಕ್ರೇನ್ ನಡುವಣ ಯುದ್ಧಭೂಮಿಯಲ್ಲಿ ಸಿಲುಕಿದ್ದ ಮೈಸೂರಿನ ಹುಣಸೂರು ಉದಯಗಿರಿ ಬಡಾವಣಿ ವಿದ್ಯಾರ್ಥಿ ಪ್ರಜ್ವಲ್ ಮನೆಗೆ ಹಿಂದಿರುಗಿದ್ದಾರೆ. ಎಂಬಿಬಿಎಸ್‌ಗಾಗಿ ಇವರು ಉಕ್ರೇನ್‌ಗೆ ಹೋಗಿದ್ದರು. ಸೆಕ್ಯುರಿಟಿ ಗಾರ್ಡ್ ಆಗಿದ್ದ ತಂದೆ ಕಪನಯ್ಯ ಸಾಲ ಮಾಡಿ ಮಗನನ್ನು ಉಕ್ರೇನ್‌ಗೆ ಕಳುಹಿಸಿದ್ದರು. ಮೂರನೇ ವರ್ಷದ ಕೋರ್ಸ್ ಮುಗಿಸಿದ್ದ ಪ್ರಜ್ವಲ್ ಇನ್ನು 6 ಸೆಮಿಸ್ಟರ್ ಓದಿದ್ದರೆ ಡಾಕ್ಟರ್ ಆಗಿರುತ್ತಿದ್ದರು. ಇದೀಗ ಡಾಕ್ಟರ್ ಕನಸು ಭಗ್ನಗೊಂಡಿರುವ ಕುಟುಂಬ ನಿರಾಸೆಯಲ್ಲಿ ಮುಳುಗಿದೆ.
14ನೇ ದಿನವೂ ಉಕ್ರೇನ್-ರಷ್ಯಾ ಯುದ್ಧ ಮುಂದುವರಿದಿದೆ. ಯುದ್ಧದಿಂದ ಉಕ್ರೇನ್‌ನಲ್ಲಿ ಈವರೆಗೆ 1,335 ಸಾವುನೋವಾಗಿದೆ. ಈ ಪೈಕಿ 38 ಮಕ್ಕಳು ಸೇರಿದಂತೆ 473 ನಾಗರಿಕರು. ಗಾಯಗೊಂಡವರ ಸಂಖ್ಯೆಯೂ ಹೆಚ್ಚಾಗಿದೆ. 71 ಮಕ್ಕಳು ಸೇರಿ 861 ನಾಗರಿಕರು ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ನಿಗಾ ಸಂಸ್ಥೆಯು ಮಾಹಿತಿ ನೀಡಿದೆ.
ರಷ್ಯಾದಿಂದ ತೈಲೋತ್ಪನ್ನ ಆಮದು ಮಾಡಿಕೊಳ್ಳುವುದನ್ನು ಬ್ರಿಟನ್ ಸಂಪೂರ್ಣವಾಗಿ ನಿರ್ಬಂಧಿಸಿದೆ. ಹಂತಹಂತವಾಗಿ ಆಮದು ನಿರ್ಬಂಧ ಜಾರಿಯಾಗಲಿದ್ದು, 2022ರ ಅಂತ್ಯದ ವೇಳೆಗೆ ಈ ನಿರ್ಬಂಧ ಆದೇಶ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಲಿದೆ ಎಂದು ಬ್ರಿಟನ್ ಸ್ಪಷ್ಟಪಡಿಸಿದೆ.
ರಷ್ಯಾದಿಂದ ಪೂರೈಕೆಯಾಗುತ್ತಿರುವ ನೈಸರ್ಗಿಕ ಅನಿಲಕ್ಕೆ ಈ ನಿರ್ಬಂಧಗಳು ಸದ್ಯಕ್ಕೆ ಅನ್ವಯಿಸುವುದಿಲ್ಲ ಎಂದು ಬ್ರಿಟನ್ ಸ್ಪಷ್ಟಪಡಿಸಿದೆ
Link: https://t.co/VD0DMcDLQ0#PetroleumImports #RussianOil #RussiaUkraine
— TV9 Kannada (@tv9kannada) March 9, 2022
Published On - 7:46 am, Wed, 9 March 22