ಉಕ್ರೇನಿಯನ್ ಲಕ್ಷಾಧಿಪತಿಯೊಬ್ಬರು (Ukrainian millionaire) ತಾನು ಇತ್ತೀಚಿಗೆ ನಿರ್ಮಿಸಿದ ಮಹಲಿನ ಮೇಲೆ ಬಾಂಬ್ ಹಾಕುವಂತೆ ಸ್ವಂತ ದೇಶದ ಮಿಲಿಟರಿಗೆ ಕೇಳಿಕೊಂಡಿದ್ದಾರೆ. ಈ ಮಹಲನ್ನು ರಷ್ಯಾದ ಪಡೆಗಳು ಆಕ್ರಮಿಸಿಕೊಂಡಿದ್ದು ಕೈವ್‌ಗೆ (Kyiv) ರಾಕೆಟ್‌ಗಳನ್ನು ಹಾರಿಸಲು ಬಳಸುತ್ತಿದ್ದಾರೆ.ಇದನ್ನು ನೋಡಿದ ನಂತರ ತನ್ನ ಮಹಲಿನ ಮೇಲೆ ಬಾಂಬ್ ಹಾಕಿ ಎಂದಿದ್ದಾರೆ ಟ್ರಾನ್ಸ್‌ಇನ್ವೆಸ್ಟ್ ಸರ್ವೀಸ್‌ನ ಸಿಇಒ ಆಂಡ್ರೆ ಸ್ಟಾವ್ನಿಟ್ಸರ್ (Andrey Stavnitser). ತನ್ನ ಮನೆಯಲ್ಲಿ ಸ್ಥಾಪಿಸಲಾದ ವೆಬ್‌ಕ್ಯಾಮ್ ಮೂಲಕ ರಷ್ಯಾದ ಸೈನಿಕರು ಎಲ್ಲಾ ರೀತಿಯ ಮಿಲಿಟರಿ ಉಪಕರಣಗಳನ್ನು ತರುವುದನ್ನು ಆಂಡ್ರೆ ಸ್ಟಾವ್ನಿಟ್ಸರ್ ನೋಡಿದ್ದಾರೆ. ಇದನ್ನು ನೋಡಿದ ನಂತರ ಸ್ಟಾವ್ನಿಟ್ಸರ್ ತನ್ನ ಮಹಲಿನ ಬಗ್ಗೆ ಉಕ್ರೇನ್ ಸಶಸ್ತ್ರ ಪಡೆಗಳಿಗೆ ಮಾಹಿತಿ ನೀಡಿ ಅದನ್ನು ಬಾಂಬ್ನಿಂದ ಹೊಡೆದುರುಳಿಸಲು ಹೇಳಿದರು. “ಇದು ನನಗೆ ಒಂದು ರೀತಿಯ ಸ್ಪಷ್ಟ ನಿರ್ಧಾರವಾಗಿತ್ತು” ಎಂದು ಅವರು ಗುಡ್ ಮಾರ್ನಿಂಗ್ ಬ್ರಿಟನ್ ಶೋಗೆ ತಿಳಿಸಿದರು. ರಷ್ಯಾದ ಸೈನ್ಯವು ತನ್ನ ಮನೆಯನ್ನು ಕಾರ್ಯಾಚರಣೆಗಾಗಿ ಬಳಸುವುದನ್ನು ನೋಡಿ “ಅಸಹ್ಯ” ಅನುಭವಿಸಿದೆ ಎಂದಿದ್ದಾರೆ ಸ್ಟಾವ್ನಿಟ್ಸರ್. ಸ್ಟಾವ್ನಿಟ್ಸರ್ ದೇಶದಿಂದ ಪೋಲೆಂಡ್‌ಗೆ ಪಲಾಯನ ಮಾಡಿದ್ದು ಅವರ ಭದ್ರತಾ ತಂಡದ ಸದಸ್ಯರನ್ನು ಮತ್ತೆ ಮಹಲಿಗೆ ಕಳುಹಿಸಿದ್ದರು. ಅವರ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳಾಗಿ ಮಾಡಲಾಗಿದೆ. ಅವರ ಫೋನ್‌ಗಳನ್ನು ತೆಗೆದುಕೊಂಡ ನಂತರ ವಿವಸ್ತ್ರಗೊಳಿಸಿ ವಿಚಾರಣೆ ನಡೆಸಲಾಯಿತು ಎಂದು ಸ್ಟಾವ್ನಿಟ್ಸರ್ ಹೇಳಿದ್ದಾರೆ. ತನ್ನ ಮಹಲನ್ನು ರಷ್ಯಾದ ಪಡೆಗಳು ಸ್ವಾಧೀನಪಡಿಸಿಕೊಳ್ಳುವುದನ್ನು ನೋಡಿದ್ದೇನೆ. ಅವರು ಹತ್ತಿರದ ಮನೆಗಳನ್ನು ಲೂಟಿ ಮಾಡುತ್ತಿದ್ದಾರೆ, “ಅವರು ಇತರ ಮನೆಗಳನ್ನು ಲೂಟಿ ಮಾಡಿ ಇತರ ಮನೆಗಳಿಂದ ವಸ್ತುಗಳನ್ನು ನನ್ನ ಮನೆಗೆ ತರುವುದನ್ನು ನಾನು ನೋಡಿದೆ ಮತ್ತು ಅಲ್ಲಿಂದ ಟಿವಿಗಳು ಮತ್ತು ಐಪ್ಯಾಡ್‌ಗಳು, ಕಂಪ್ಯೂಟರ್‌ಗಳು, ಇತರ ಜನರ ವೈಯಕ್ತಿಕ ವಸ್ತುಗಳನ್ನು ಟ್ರಕ್‌ಗಳನ್ನು ಲೋಡ್ ಮಾಡುವುದನ್ನು ನೋಡಿ ನನಗೆ ಅಸಹ್ಯವಾಯಿತು. ನನ್ನ ಮನೆಯೊಳಗೆ ನಡೆದಾಡುತ್ತಿರುವ ಕೆಲವು ಜನರನ್ನು ನೋಡಿ ನನಗೆ ಕೊಳಕು ಅನಿಸಿತು.
ಗುಡ್ ಮಾರ್ನಿಂಗ್ ಬ್ರಿಟನ್ ನಲ್ಲಿ ಮಾತನಾಡಿದ ಸ್ಟಾವ್ನಿಟ್ಸರ್ ಅವರು ತಮ್ಮ ಜಮೀನಿನಲ್ಲಿ 12 ಮಿಲಿಟರಿ ವಾಹನಗಳನ್ನು ನಿಲ್ಲಿಸಿರುವುದನ್ನು ನೋಡಿದ್ದೇನೆ ಕೆಲವು ಟೊರ್ನಾಡೊ ರಾಕೆಟ್ ಲಾಂಚರ್ ವ್ಯವಸ್ಥೆಯನ್ನು ಹೊಂದಿದ್ದವು. “ಈ ಉಪಕರಣವು 40 ಕಿಲೋಮೀಟರ್ (25 ಮೈಲುಗಳು) ವ್ಯಾಪ್ತಿಯನ್ನು ಹೊಂದಿದೆ, ಆದ್ದರಿಂದ ಅವರು ಮೂಲತಃ ನನ್ನ ಮನೆಯಿಂದ ಕೈವ್ ಅನ್ನು ಶೂಟ್ ಮಾಡಲು ಪ್ರಾರಂಭಿಸಿದರು” ಎಂದು ಉಕ್ರೇನಿಯನ್ ಮಿಲಿಯನೇರ್ ಹೇಳಿದರು.
“ಉಕ್ರೇನ್ ಗೆಲ್ಲಲು ನಾನು ಸಾಧ್ಯವಿರುವ ಎಲ್ಲವನ್ನೂ ಮಾಡಲು ಬಯಸುತ್ತೇನೆ. ಏಕೆಂದರೆ ನಾವು ಯುರೋಪಿನ ಸುರಕ್ಷತೆಯನ್ನು ರಕ್ಷಿಸುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ ಮತ್ತು ಆ ಕಿಡಿಗೇಡಿಗಳನ್ನು ನಮ್ಮ ಭೂಮಿಯಿಂದ ಹೊರಹಾಕುವುದು ನಮಗೆ ಮುಖ್ಯವಾಗಿದೆ. ನಾನು ಮಾಡಬಹುದಾದದ್ದು ಸ್ವಲ್ಪ ಮಾತ್ರ ಎಂದು ಆಂಡ್ರೆ ಸ್ಟಾವ್ನಿಟ್ಸರ್ ಹೇಳಿದ್ದಾರೆ.
ಇದನ್ನೂ ಓದಿ: ಮಾರಿಯುಪೋಲ್ ವಿಮೋಚನೆಗೊಂಡಿದೆ: ರಷ್ಯಾದ ಪಡೆಗಳನ್ನು ಶ್ಲಾಘಿಸಿದ ಪುಟಿನ್