ರಷ್ಯಾ ಉಕ್ರೇನ್ ಮೇಲೆ ಆಕ್ರಮಣ (Russia Attack On Ukraine) ಮಾಡಿ ಇಂದು ಏಳನೇ ದಿನ. ಉಕ್ರೇನಿಯನ್ನರು ರಷ್ಯಾ ವಿರುದ್ಧ ಧೈರ್ಯದಿಂದ ಹೋರಾಡುತ್ತಿದ್ದಾರೆ. ನಾಗರಿಕರೂ ಸಹ ರಷ್ಯಾ ಸೈನಿಕರನ್ನು ಹಿಮ್ಮೆಟ್ಟಿಸಲು ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ. ಬೀದಿಬೀದಿಯಲ್ಲಿ ನಿಂತ ರಷ್ಯಾ ಯೋಧರೊಂದಿಗೆ ಮಾತಿನ ಯುದ್ಧಕ್ಕೆ ಇಳಿಯುತ್ತಿದ್ದಾರೆ. ಈ ಮಧ್ಯೆ ಉಕ್ರೇನ್ ನಾಗರಿಕರು ರಷ್ಯಾದ ಯುದ್ಧ ಟ್ಯಾಂಕ್ಗಳು ಮುಂದೆ ಸಾಗದಂತೆ ತಡೆಯಲು ಅದರ ಮೇಲೆ ಹತ್ತುವ, ಅಡ್ಡಗಟ್ಟುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದು, ವಿಡಿಯೋಗಳು ವೈರಲ್ ಆಗಿವೆ.
ಪೋಲೆಂಡ್, ಹಂಗೇರಿ, ಜೆಕಿಯಾ, ಸ್ಲೋವಾಕಿಯಾ ದೇಶಗಳ ಸಾಂಸ್ಕೃತಿಕ ಮತ್ತು ರಾಜಕೀಯ ಒಕ್ಕೂಟವಾದ ವಿಸೆಗ್ರಾಡ್ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ಉತ್ತರ ಉಕ್ರೇನ್ನಲ್ಲಿರುವ ಬಖ್ಮಾಚ್ ನಗರದ ಚೆರ್ನಿಹಿವ್ ಪ್ರದೇಶದಲ್ಲಿ ಉಕ್ರೇನ್ ನಾಗರಿಕರು ಸಾಹಸವನ್ನೇ ಮಾಡುತ್ತಿದ್ದಾರೆ. ಇಲ್ಲಿ ಹಾದುಹೋಗುವ ರಷ್ಯಾದ ಯುದ್ಧ ಟ್ಯಾಂಕ್ಗಳನ್ನು ತಡೆಯಲು, ಅವುಗಳ ಮೇಲೆ ಹತ್ತುತ್ತಿದ್ದಾರೆ. ಜೋತು ಬೀಳುತ್ತಿದ್ದಾರೆ. ಅಡ್ಡ ಹೋಗುತ್ತಿದ್ದಾರೆ ಎಂದು ವಿಸೆಗ್ರಾಡ್ ತಿಳಿಸಿದೆ.
Ukrainian civilians slow down the Russian advance by climbing on top of enemy tanks trying to pass through the city of Bakhmach in the Chernihiv region.
The bravery of the Ukrainian people is unparalleled.
— Visegrád 24 (@visegrad24) February 26, 2022
✊?Українець кидається під ворожу техніку, щоб окупанти не проїхали pic.twitter.com/cZ29kknqhB
— НВ (@tweetsNV) February 25, 2022
ಉಕ್ರೇನ್ ರಸ್ತೆಯಲ್ಲಿ ನಿಂತಿರುವ ರಷ್ಯಾ ಸೈನಿಕರನ್ನು ಉಕ್ರೇನ್ ನಾಗರಿಕರು ಮಾತನಾಡಿಸುತ್ತಿದ್ದಾರೆ. ಇಲ್ಲೇಕೆ ಬಂದಿರಿ? ನಿಮ್ಮದೇಶದಲ್ಲಿ ನಿಮಗೆ ಮಾಡಲು ಕೆಲಸವಿಲ್ಲವಾ? ಎಂಬಿತ್ಯಾದಿ ವ್ಯಂಗ್ಯ, ಆಕ್ರೋಶ ಭರಿತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಹೀಗೆ ಉಕ್ರೇನ್ ನಾಗರಿಕರು ರಷ್ಯಾ ಸೈನಿಕರನ್ನು ಮಾತನಾಡಿಸುವ ಹಲವು ದೃಶ್ಯಗಳನ್ನು ಒಳಗೊಂಡ ವಿಡಿಯೋವೊಂದನ್ನು ಉಕ್ರೇನಿಯನ್ ವಿದೇಶಾಂಗ ವ್ಯವಹಾರಗಳ ಇಲಾಖೆ ನಿನ್ನೆ ಶೇರ್ ಮಾಡಿಕೊಂಡಿತ್ತು.
ಇದನ್ನೂ ಓದಿ: ಉಕ್ರೇನ್ನ ಐದು ಪ್ರಮುಖ ನಗರಗಳನ್ನು ವಶಡಿಸಿಕೊಳ್ಳಲು ರಷ್ಯಾ ಯಾಕೆ ಹವಣಿಸುತ್ತಿದೆ? ಮಾಹಿತಿ ಇಲ್ಲಿದೆ