ಸೂಡಾನ್​​ನಲ್ಲಿ ಚಿನ್ನದ ಗಣಿ ಕುಸಿತ; ಗಣಿಗಾರಿಕೆ ಕೆಲಸ ನಿರ್ಬಂಧಿಸಿದ್ದರೂ ಬಂದು ಕೆಲಸ ಮಾಡಿದ ಕಾರ್ಮಿಕರು, 38 ಮಂದಿ ಸಾವು

ಸೂಡಾನ್​​ನಲ್ಲಿ ಚಿನ್ನದ ಗಣಿ ಕುಸಿತ; ಗಣಿಗಾರಿಕೆ ಕೆಲಸ ನಿರ್ಬಂಧಿಸಿದ್ದರೂ ಬಂದು ಕೆಲಸ ಮಾಡಿದ ಕಾರ್ಮಿಕರು, 38 ಮಂದಿ ಸಾವು
ಚಿನ್ನದ ಗಣಿ

ಗಣಿ ಕುಸಿತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ. ಹಾಗೇ, ಫೇಸ್​ಬುಕ್​ನಲ್ಲಿ ಪೋಸ್ಟ್​ ಕೂಡ ಹಾಕಿದೆ.

TV9kannada Web Team

| Edited By: Lakshmi Hegde

Dec 29, 2021 | 9:17 AM

ಸೂಡಾನ್​​ನ ಪಶ್ಚಿಮ ಕೊರ್ಡೋಫಾನ್ ಪ್ರಾಂತ್ಯದಲ್ಲಿರುವ ಚಿನ್ನದ ಗಣಿಯೊಂದು ಕುಸಿದು ಸುಮಾರು 38 ಮಂದಿ ಮೃತಪಟ್ಟಿದ್ದಾಗಿ ಸ್ಥಳೀಯ ಆಡಳಿತ ತಿಳಿಸಿದೆ. ಈ ಬಗ್ಗೆ ಗಣಿಗಾರಿಕಾ ಕಂಪನಿ ಪ್ರಕಟಣೆ ಹೊರಡಿಸಿದ್ದು, ಉಮ್ಮ ದ್ರೈಸಯಾ ಎಂಬ ಚಿನ್ನದ ಗಣಿಯಲ್ಲಿ ಕುಸಿತವುಂಟಾಗಿ 38 ಜನರು ಮೃತಪಟ್ಟಿದ್ದು ತೀವ್ರ ನೋವು ತಂದಿದೆ ಎಂದು ಹೇಳಿದೆ. ಈ ಗಣಿ ಸೂಡಾನ್​ನ ರಾಜಧಾನಿ ಖರ್ತೋಮ್​​ನಿಂದ 500 ಕಿಮೀ ದೂರದಲ್ಲಿರುವ ಎಲ್ ನುಹುದ್ ಪಟ್ಟಣದ ಸಮೀಪದಲ್ಲಿದೆ. ಇದು ಗಣಿಗಾರಿಕಾ ಕೆಲಸಕ್ಕೆ ಯೋಗ್ಯವಾದ ಗಣಿಯಾಗಿರಲಿಲ್ಲ. ನಾವು ಇಲ್ಲಿ ಕಾರ್ಯಾಚರಣೆ ನಿಲ್ಲಿಸುವಂತೆ ಸೂಚಿಸಿದ್ದೆವು. ಹಾಗೇ, ಇಲ್ಲಿ ಭದ್ರತಾ ಸಿಬ್ಬಂದಿಯನ್ನೂ ನಿಯೋಜಿಸಿದ್ದೆವು. ಆದರೆ ಭದ್ರತಾ ಸಿಬ್ಬಂದಿ ಸಂಜೆ ಮನೆಗೆ ಹೋಗುತ್ತಿದ್ದಂತೆ ಇತ್ತ ಕೆಲಸಗಾರರು ಮತ್ತೆ ಗಣಿಗಾರಿಕೆ ಕೆಲಸ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕಂಪನಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. 

ಗಣಿ ಕುಸಿತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕಂಪನಿ ತಿಳಿಸಿದೆ. ಹಾಗೇ, ಫೇಸ್​ಬುಕ್​ನಲ್ಲಿ ಪೋಸ್ಟ್​ ಕೂಡ ಹಾಕಿದೆ.  ಇನ್ನು ಸೂಡಾನ್​​ನಲ್ಲಿ ಗಣಿಗಾರಿಕೆ ಅತ್ಯಂತ ಮುಖ್ಯ ಕಸುಬು. ರೆಡ್​ ಸೀ, ನಹ್ರ್​ ಅಲ್​ ನೀಲ್, ದಕ್ಷಿಣ ಕೊರ್ಡೊಫಾನ್, ಪಶ್ಚಿಮ ಕೊರ್ಡೊಫಾನ್​  ಸೇರಿ ಬಹುತೇಕ ರಾಜ್ಯಗಳಿಂದ ಸುಮಾರು 2 ಮಿಲಿಯನ್​ ಜನರು ಗಣಿಗಾರಿಕಾ ಉದ್ಯಮದಲ್ಲಿ ಕೆಲಸಗಾರರಾಗಿದ್ದಾರೆ. ಜಾಗತಿಕವಾಗಿ ಒಟ್ಟಾರೆ ಚಿನ್ನದ ಉತ್ಪಾದನೆಯಲ್ಲಿ ಶೇ.75ರಷ್ಟು ಪಾಲು ಈ ಸೂಡಾನ್​ನದ್ದೇ ಆಗಿದೆ ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಪೌಷ್ಟಿಕಾಂಶಗಳ ಆಗರ ಗೆಣಸಿನ ಬಳಕೆಯಿರಲಿ: ಚಳಿಗಾಲದಲ್ಲಿ ಪರಿಪೂರ್ಣ ಆಹಾರವಾಗಲಿದೆ

Follow us on

Most Read Stories

Click on your DTH Provider to Add TV9 Kannada