ಒಗ್ಗೂಡಿ, ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಿ: ಬ್ರಿಟನ್ ಪ್ರಧಾನಿಯಾದ ನಂತರ ಪಕ್ಷದ ನಾಯಕರಿಗೆ ರಿಷಿ ಸುನಕ್ ಮೊದಲ ಸಂದೇಶ

| Updated By: ರಶ್ಮಿ ಕಲ್ಲಕಟ್ಟ

Updated on: Oct 24, 2022 | 10:04 PM

ಮಗೆ ಈಗ ಸ್ಥಿರತೆ ಮತ್ತು ಏಕತೆಯ ಅಗತ್ಯವಿದೆ, ಮತ್ತು ನಮ್ಮ ಪಕ್ಷ ಮತ್ತು ನಮ್ಮ ದೇಶವನ್ನು ಒಟ್ಟಿಗೆ ತರಲು ನಾನು  ಆದ್ಯತೆ ನೀಡುತ್ತೇನೆ ಎಂದು ಅವರು ಹೇಳಿದರು.

ಒಗ್ಗೂಡಿ, ರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಿ: ಬ್ರಿಟನ್ ಪ್ರಧಾನಿಯಾದ ನಂತರ ಪಕ್ಷದ ನಾಯಕರಿಗೆ ರಿಷಿ ಸುನಕ್ ಮೊದಲ ಸಂದೇಶ
ರಿಷಿ ಸುನಕ್
Follow us on

ಆರ್ಥಿಕತೆ ಬಿಕ್ಕಟ್ಟನ್ನು ಸರಿಪಡಿಸುವುದಾಗಿ ಭರವಸೆ ನೀಡಿರುವ ರಿಷಿ ಸುನಕ್ (Rishi Sunak )ಅವರು ಕನ್ಸರ್ವೇಟಿವ್ ಪಾರ್ಟಿಯನ್ನು (Conservative Party) ಒಗ್ಗೂಡಿಸಲು ಕರೆ ನೀಡಿದರು. ಲಿಜ್ ಟ್ರಸ್ ರಾಜೀನಾಮೆ ನಂತರ ಯುಕೆ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದ ನಂತರ ಮಾತನಾಡಿದ ರಿಷಿ, ಈ ವರ್ಷ ಇಬ್ಬರು ಪ್ರಧಾನ ಮಂತ್ರಿಗಳನ್ನು ಬದಲಿಸಿದ ನಂತರ ತಮ್ಮ ಪಕ್ಷವು ಒಗ್ಗೂಡಬೇಕಾಗಿದೆ ಎಂದು ಹೇಳಿದರು.  ಪೆನ್ನಿ ಮೊರ್ಡಾಂಟ್ 10 ಡೌನಿಂಗ್ ಸ್ಟ್ರೀಟ್‌ನ ರೇಸ್ ನಿಂದ ಕೊನೇ ಕ್ಷಣದಲ್ಲಿ ಹಿಂದೆ ಸರಿದ ನಂತರ ರಿಷಿ ಸುನಕ್ ಅವರನ್ನು ಪ್ರಧಾನಿಯಾಗಿ ಘೋಷಿಸಲಾಯಿತು.  ಜುಲೈನಲ್ಲಿ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಸರ್ಕಾರವನ್ನು ತೊರೆದ ನಂತರ ಮತ್ತು ಕೊನೆಯ ಟೋರಿ ನಾಯಕತ್ವದ ಸ್ಪರ್ಧೆಯಲ್ಲಿ ಟ್ರಸ್ ವಿರುದ್ಧ ಸೋತ ನಂತರ, ಸುನಕ್ ಅವರ ರಾಜಕೀಯ ಅದೃಷ್ಟದಲ್ಲಿ ಇದು ಗಮನಾರ್ಹ ತಿರುವು ಆಗಿದೆ. ನಮಗೆ ಈಗ ಸ್ಥಿರತೆ ಮತ್ತು ಏಕತೆಯ ಅಗತ್ಯವಿದೆ, ಮತ್ತು ನಮ್ಮ ಪಕ್ಷ ಮತ್ತು ನಮ್ಮ ದೇಶವನ್ನು ಒಟ್ಟಿಗೆ ತರಲು ನಾನು  ಆದ್ಯತೆ ನೀಡುತ್ತೇನೆ ಎಂದು ಅವರು ಹೇಳಿದರು.

ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸವಾಲುಗಳನ್ನು ಜಯಿಸಬೇಕಾದ ಅಗತ್ಯವಿದೆ. ನಾನು ನಿಮಗೆ ಸಮಗ್ರತೆ ಮತ್ತು ನಮ್ರತೆಯಿಂದ ಸೇವೆ ಸಲ್ಲಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಬ್ರಿಟಿಷ್ ಜನರಿಗಾಗಿ ನಾನು ದಿನವಿಡೀ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದರು.

ತಾನು ತುಂಬಾ ಋಣಿಯಾಗಿರುವ ದೇಶವನ್ನು ಮರಳಿ ನೀಡಲು ಈ ಗೆಲವು ತನ್ನ ಜೀವನದ “ಮಹಾನ್ ಸವಲತ್ತು” ಎಂದು ಕರೆದ ಸುನಕ್, ತನ್ನ ಸಂಸದೀಯ ಸಹೋದ್ಯೋಗಿಗಳ ಬೆಂಬಲವನ್ನು ಹೊಂದಲು ಮತ್ತು ಟೋರಿ ನಾಯಕನಾಗಿ ಆಯ್ಕೆಯಾಗಿದಕ್ಕೆ ವಿನೀತನಾಗಿದ್ದೇನೆ ಎಂದು  ಅವರು ಹೇಳಿದ್ದಾರೆ

47ನೇ ಹರೆಯದ ಮಾಜಿ ಹಣಕಾಸು ಮಂತ್ರಿ ಯುಕೆಯ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾಗಿದ್ದಾರೆ. ಅವರು ಮಧ್ಯಾಹ್ನದವರೆಗೆ (ಸ್ಥಳೀಯ ಕಾಲಮಾನ) ಮುನ್ನಡೆಯನ್ನು ಹೊಂದಿದ್ದರು. ಅರ್ಧಕ್ಕಿಂತ ಹೆಚ್ಚು ಟೋರಿ ಸಂಸದರು ಭಾರತೀಯ ಮೂಲದ ರಿಷಿಗೆ ತಮ್ಮ ಬೆಂಬಲವನ್ನು ನೀಡಿದರು.

ಸುನಕ್ ತನ್ನ ಕೊನೆಯ ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಆಯ್ಕೆಯಿಂದ ಹೊರಗುಳಿದ ನಂತರ ಪ್ರಧಾನಿ ಸ್ಪರ್ಧೆ ಗೆದ್ದರು. ತನ್ನ ಸಹವರ್ತಿ ಟೋರಿ ಸಂಸದರಿಂದ ಕಡ್ಡಾಯವಾಗಿ 100 ನಾಮನಿರ್ದೇಶನಗಳನ್ನು ಪಡೆಯಲು ವಿಫಲವಾದ ನಂತರ ಹೊಸ ಪ್ರಧಾನ ಮಂತ್ರಿಗೆ ಬೆಂಬಲವನ್ನು ಘೋಷಿಸಿದರು.