AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶಗಳಲ್ಲಿ ಪ್ರಮುಖ ಹುದ್ದೆ ಹೊಂದಿರುವ ಭಾರತ ಮೂಲದ ನಾಯಕರ ಪಟ್ಟಿಗೆ ರಿಷಿ ಸುನಕ್ ಸೇರ್ಪಡೆ

ಪಂಚದಾದ್ಯಂತ ದೀಪಾವಳಿ ಸಂಭ್ರಮಾಚರಣೆ ಹೊತ್ತಲ್ಲೇ 42 ನೇ ವಯಸ್ಸಿನ ರಿಷಿ ಸುನಕ್ ಯುನೈಟೆಡ್ ಕಿಂಗ್ಡಂನ ಪ್ರಧಾನಿ ಪಟ್ಟಕ್ಕೇರಿದ್ದಾರೆ.

ವಿದೇಶಗಳಲ್ಲಿ ಪ್ರಮುಖ ಹುದ್ದೆ ಹೊಂದಿರುವ ಭಾರತ ಮೂಲದ ನಾಯಕರ ಪಟ್ಟಿಗೆ ರಿಷಿ ಸುನಕ್ ಸೇರ್ಪಡೆ
ರಿಷಿ ಸುನಕ್
TV9 Web
| Edited By: |

Updated on:Oct 24, 2022 | 7:55 PM

Share

42 ವರ್ಷದ ರಿಷಿ ಸುನಕ್ (Rishi Sunak) ಅವರು ಸೋಮವಾರ ಬ್ರಿಟಿಷ್  ಪ್ರಧಾನಿಯಾದ (UK PM) ಮೊದಲ ಭಾರತ ಮೂಲದ ವ್ಯಕ್ತಿಯಾಗಿದ್ದಾರೆ. ಪ್ರಪಂಚದಾದ್ಯಂತದ ದೀಪಾವಳಿ ಸಂಭ್ರಮಾಚರಣೆ ಹೊತ್ತಲ್ಲೇ 42 ನೇ ವಯಸ್ಸಿನ ರಿಷಿ ಸುನಕ್ ಯುನೈಟೆಡ್ ಕಿಂಗ್ಡಂನ ಪ್ರಧಾನಿ ಪಟ್ಟಕ್ಕೇರಿದ್ದಾರೆ. ಈ ಮೂಲಕ ವಿಶ್ವದ ಇತರ ದೇಶಗಳಲ್ಲಿ ಪ್ರಧಾನ ಹುದ್ದೆಗೇರಿದ ಭಾರತೀಯ ಮೂಲದವರ ಪಟ್ಟಿಯಲ್ಲಿ ರಿಷಿ ಸುನಕ್ ಸ್ಥಾನಪಡೆದಿದ್ದಾರೆ.

ವಿಶ್ವದಾದ್ಯಂತ ಪ್ರಧಾನ ಹುದ್ದೆಗಳಲ್ಲಿರುವ ಭಾರತ ಮೂಲದವರು

ಕಮಲಾ ಹ್ಯಾರಿಸ್

ಯುಎಸ್ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್ ಅವರ ಪೋಷಕರು ಭಾರತ ಮತ್ತು ಜಮೈಕಾದಿಂದ ವಲಸೆ ಬಂದವರು. ಕಮಲಾ ಹುಟ್ಟಿದ್ದು ಕ್ಯಾಲಿಫೋರ್ನಿಯಾದಲ್ಲಿ. ಅಮೆರಿಕದ ಉಪಾಧ್ಯಕ್ಷೆ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಮತ್ತು ಕಪ್ಪು ಬಣ್ಣದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು . ಕಮಲಾ ಹ್ಯಾರಿಸ್ 2019 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ವಿಮರ್ಶಕರು ಹೇಳುವ ಪ್ರಕಾರ ಕಮಲಾ ಅವರ ಸಾಧನೆಗಳು,ರಾಜಕೀಯದಲ್ಲಿ ಕಪ್ಪು ಮಹಿಳಾ ನಾಯಕರ ಹೊಸ ಪೀಳಿಗೆಯನ್ನು ಉತ್ತೇಜಿಸುತ್ತದೆ.

ಪ್ರವಿಂದ್ ಜುಗ್ನಾಥ್

2017 ರಿಂದ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರ ಪೂರ್ವಜರು ಉತ್ತರ ಪ್ರದೇಶದಿಂದ ಬಂದವರು. ಜುಗ್ನಾಥ್ ಅವರು ಅಹಿರ್ಸ್ ಹಿಂದೂ ಕುಟುಂಬದಲ್ಲಿ ಜನಿಸಿದರು.

ಆಂಟೋನಿಯೊ ಕೋಸ್ಟಾ

2015 ರಿಂದ ಪೋರ್ಚುಗಲ್‌ನ ಪ್ರಧಾನ ಮಂತ್ರಿ ಆಂಟೋನಿಯೊ ಕೋಸ್ಟಾ ಪೋರ್ಚುಗೀಸ್ ಮತ್ತು ಭಾರತೀಯ ಮೂಲದವರು. ಗೋವಾದಲ್ಲಿ ಕೋಸ್ಟಾ ಅವರನ್ನು ಪ್ರೀತಿಯಿಂದ ಬಾಬುಷ್ ಎಂದು ಕರೆಯುತ್ತೆ

ಪೃಥ್ವಿರಾಜ್‌ಸಿಂಗ್ ರೂಪನ್

ಪೃಥ್ವಿರಾಜ್‌ಸಿಂಗ್ ರೂಪನ್ ಅವರು 2019 ರಿಂದ ಮಾರಿಷಸ್‌ನ ಏಳನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೂಪನ್ ಭಾರತೀಯ ಆರ್ಯ ಸಮಾಜ ಹಿಂದೂ ಕುಟುಂಬದಲ್ಲಿ ಜನಿಸಿದವರು

ಚಾನ್ ಸಂತೋಖಿ

ಚಂದ್ರಿಕಾಪರ್ಸಾದ್ “ಚಾನ್” ಸಂತೋಖಿ ಒಬ್ಬ ಸುರಿನಾಮಿ ರಾಜಕಾರಣಿ ಮತ್ತು ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಅವರು 2020 ರಿಂದ ಸುರಿನಾಮ್‌ನ 9 ನೇ ಅಧ್ಯಕ್ಷರಾಗಿದ್ದಾರೆ. ಅವರು 1959 ರಲ್ಲಿ ಸುರಿನಾಮ್ ಜಿಲ್ಲೆಯ ಲೆಲಿಡಾರ್ಪ್‌ನಲ್ಲಿ ಇಂಡೋ-ಸುರಿನಾಮಿಸ್ ಹಿಂದೂ ಕುಟುಂಬದಲ್ಲಿ ಜನಿಸಿದರು.

ಮೊಹಮ್ಮದ್ ಇರ್ಫಾನ್ ಅಲಿ

ಮೊಹಮದ್ ಇರ್ಫಾನ್ ಅಲಿ ಅವರು ಗಯಾನಾದ ಒಂಬತ್ತನೇ ಕಾರ್ಯಕಾರಿ ಅಧ್ಯಕ್ಷರಾಗಿ ಆಗಸ್ಟ್ 2, 2020 ರಂದು ಪ್ರಮಾಣ ವಚನ ಸ್ವೀಕರಿಸಿದರು. ಅವರು ವೆಸ್ಟ್ ಕೋಸ್ಟ್ ಡೆಮಾರಾರಾದಲ್ಲಿನ ಲಿಯೊನೊರಾದಲ್ಲಿ ಮುಸ್ಲಿಂ, ಇಂಡೋ-ಗಯಾನೀಸ್ ಕುಟುಂಬದಲ್ಲಿ ಜನಿಸಿದರು.

Published On - 7:54 pm, Mon, 24 October 22

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ