ಯಾವ ದೇಶವಾದರೂ ಡ್ರಗ್ ಅಡಿಕ್ಟ್ಗಳಿಗೆ ಅಧಿಕೃತವಾಗಿ ಹೆರಾಯಿನ್ ಮತ್ತು ಕೊಕೇನ್ ಸೇವಿಸಲು ತಾನೇ ಪ್ರತ್ಯೇಕ ಕೊಠಡಿ ನಿರ್ಮಿಸಿಕೊಡಲು ಸಾಧ್ಯವೇ? ಈ ರೀತಿಯ ಕೆಲಸವನ್ನು ಬ್ರಿಟನ್ ಮಾಡಿದೆ! ಡ್ರಗ್ಸ್ ಸೇವನೆಗೆ ಸಂಬಂಧಿಸಿದ ಸಾವುಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ರೀತಿ ಮಾಡಿರುವ ಇಂಗ್ಲೆಂಡ್ ಸರ್ಕಾರ ಅಕ್ರಮ ಡ್ರಗ್ಸ್ಗಳ ಅಧಿಕೃತ ಬಳಕೆಯ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದಿದೆ.
ಇದು ಸ್ಕಾಟಿಷ್ ಸರ್ಕಾರದಿಂದ ಬೆಂಬಲಿತವಾದ ಒಂದು ಪ್ರಾಯೋಗಿಕ ಯೋಜನೆಯಾಗಿದೆ. ಈ ರೀತಿಯ ಮೊದಲ ರೂಂ ಈ ಮೊದಲು ಗ್ಲ್ಯಾಸ್ಗೋದ ಪೂರ್ವ ತುದಿಯಲ್ಲಿ ಕಾಣಿಸಿಕೊಂಡಿದೆ. ಅಲ್ಲಿ ಡ್ರಗ್ಸ್ ಬಳಕೆದಾರರು ವೈದ್ಯಕೀಯ ತಜ್ಞರ ಮೇಲ್ವಿಚಾರಣೆಯಲ್ಲಿ ಡ್ರಗ್ಸ್ ತೆಗೆದುಕೊಳ್ಳಬಹುದಾಗಿದೆ. ಈ ಯೋಜನೆಗೆ ಗ್ಲಾಸ್ಗೋದ ಇಂಟಿಗ್ರೇಷನ್ ಜಾಯಿಂಟ್ ಬೋರ್ಡ್ ಬುಧವಾರ ಅಧಿಕೃತ ಒಪ್ಪಿಗೆ ನೀಡಿದೆ.
ಇದನ್ನೂ ಓದಿ: ಕ್ಯಾಪ್ಸೂಲ್ ಮಾತ್ರೆ ಮಾದರಿಯಲ್ಲಿ ಡ್ರಗ್ಸ್ ಸಾಗಾಟ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಮಹಿಳೆ
ಈ ಯೋಜನೆಯು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಈ ರೂಮುಗಳಲ್ಲಿ ಕಾನೂನುಬಾಹಿರ ಮಾದಕ ದ್ರವ್ಯಗಳನ್ನು ಸೇವಿಸುವ ಬಳಕೆದಾರರಿಗೆ ಕಾನೂನು ಕ್ರಮದಿಂದ ವಿನಾಯಿತಿ ನೀಡಲು ವಿಶೇಷ ಕಾನೂನು ವ್ಯವಸ್ಥೆಗಳನ್ನು ಮಾಡಿದ ನಂತರ ಇದೀಗ ಹಸಿರು ನಿಶಾನೆ ತೋರಿಸಲಾಗಿದೆ. ಇಲ್ಲಿ ಡ್ರಗ್ಸ್ ಸೇವಿಸುವವರಿಗೆ ಕಾನೂನು ಪ್ರಕಾರವಾಗಿ ಯಾವುದೇ ಶಿಕ್ಷೆ ವಿಧಿಸುವುದಿಲ್ಲ.
BBC ವರದಿಯ ಪ್ರಕಾರ, ಈ ಯೋಜನೆಯು ವ್ಯಕ್ತಿಗಳಿಗೆ ಡ್ರಗ್ಸ್ ಸಂಬಂಧಿತ ಹಾನಿಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಡ್ರಗ್ಸ್ ಸೇವಿಸುವವರಿಗೆ ಚಿಕಿತ್ಸೆ, ಆರೈಕೆ ಮತ್ತು ಚೇತರಿಕೆಗೆ ಅವಕಾಶಗಳನ್ನು ಒದಗಿಸುತ್ತದೆ.
ಡ್ರಗ್ಸ್ ಬಳಕೆಯ ಕೊಠಡಿಗಳ ಸ್ಥಾಪನೆಯು ಬಿಕ್ಕಟ್ಟನ್ನು ಪರಿಹರಿಸಲು ಸ್ಕಾಟಿಷ್ ಸರ್ಕಾರವು ಕೈಗೊಂಡ ವ್ಯಾಪಕ ಪ್ರಯತ್ನಗಳ ಪ್ರಮುಖ ಅಂಶವಾಗಿದೆ. ಡ್ರಗ್ಸ್ನಿಂದ ಉಂಟಾಗುತ್ತಿರುವ ಸಾವು ಇತರ ಯುರೋಪಿಯನ್ ಪ್ರದೇಶಕ್ಕಿಂತ ಇಲ್ಲಿ ಹೆಚ್ಚಿನ ಸಾವುಗಳಿಗೆ ಕಾರಣವಾಗಿದೆ.
ಇದನ್ನೂ ಓದಿ: ಮಂಗಳೂರು: ಡ್ರಗ್ ಪೆಡ್ಲರ್ನನ್ನು ಬಂಧಿಸಿದ ಸಿಸಿಬಿ, 2.50 ಲಕ್ಷ ಮೌಲ್ಯದ ಮಾದಕವಸ್ತು ವಶಕ್ಕೆ
2020ರಲ್ಲಿ ಡ್ರಗ್ಸ್ ಸಂಬಂಧಿತ ಸಾವಿನ ಸಂಖ್ಯೆ 1,339ಕ್ಕೆ ತಲುಪಿದೆ. 2021ರಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ನಂತರ 2022ರಲ್ಲಿ ಸರಿಸುಮಾರು ಶೇ. 20ರಷ್ಟು ಗಮನಾರ್ಹ ಕುಸಿತ ಕಂಡುಬಂದಿದ್ದು, 1,051ಕ್ಕೆ ಇಳಿಕೆಯಾಗಿದೆ. ಡ್ರಗ್ಸ್ ಬಳಕೆಯ ಕೊಠಡಿಯನ್ನು ರಚಿಸುವ ಈ ಯೋಜನೆಗೆ ಸ್ಕಾಟಿಷ್ ನ್ಯಾಷನಲ್ ಪಾರ್ಟಿ, ಲೇಬರ್ ಮತ್ತು ಲಿಬರಲ್ ಡೆಮಾಕ್ರಟ್ ರಾಜಕಾರಣಿಗಳು ಬೆಂಬಲವನ್ನು ನೀಡಿದ್ದಾರೆ.
ಡ್ರಗ್ಸ್ ಬಳಕೆದಾರರು ಈ ಯೋಜನೆಯನ್ನು ಅದ್ಭುತ ಯೋಜನೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.