AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ಸೇನಾ ಹೆಲಿಕಾಪ್ಟರ್ ಪತನ, ಐವರು ಯೋಧರ ಸಾವು

ಅಮೆರಿಕದ ಸೇನಾ ಹೆಲಿಕಾಪ್ಟರ್​ ಪತನಗೊಂಡಿದ್ದು, ಘಟನೆಯಲ್ಲಿ ಐವರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ಈ ಘಟನೆ ಸಂಭವಿಸಿದೆ, ಸೈಪ್ರಸ್ ಕರಾವಳಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಹೆಲಿಕಾಪ್ಟರ್​ನಲ್ಲಿದ್ದ ಐವರು ಯೋಧರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಮೆರಿಕದ ಸೇನಾ ಹೆಲಿಕಾಪ್ಟರ್ ಪತನ, ಐವರು ಯೋಧರ ಸಾವು
ಹೆಲಿಕಾಪ್ಟರ್ ಪತನImage Credit source: BNN Breaking
ನಯನಾ ರಾಜೀವ್
|

Updated on: Nov 13, 2023 | 7:55 AM

Share

ಅಮೆರಿಕದ ಸೇನಾ ಹೆಲಿಕಾಪ್ಟರ್​ ಪತನಗೊಂಡಿದ್ದು, ಘಟನೆಯಲ್ಲಿ ಐವರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ಈ ಘಟನೆ ಸಂಭವಿಸಿದೆ, ಸೈಪ್ರಸ್ ಕರಾವಳಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಹೆಲಿಕಾಪ್ಟರ್​ನಲ್ಲಿದ್ದ ಐವರು ಯೋಧರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಪಘಾತ ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಬಿಸಲಾಯಿತು, ಮತ್ತು ಅದರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ಹೆಲಿಕಾಪ್ಟರ್​ನಲ್ಲಿದ್ದವರು ಅಮೆರಿಕ ಮಿಲಿಟರಿಯ ವಿಶೇಷ ಕಾರ್ಯಾಚರಣೆಯ ಸಿಬ್ಬಂದಿಯಾಗಿದ್ದರು. ಸೇನಾ ತರಬೇತಿಯ ಭಾಗವಾಗಿ ವಾಯು ಇಂಧನ ತುಂಬುವ ಕಾರ್ಯಾಚರಣೆಯಲ್ಲಿದ್ದರು.

ಸೇನಾ ಸದಸ್ಯರ ಕುಟುಂಬಗಳಿಗೆ ಗೌರವ ಮತ್ತು ರಕ್ಷಣಾ ಇಲಾಖೆಯ ನೀತಿಗೆ ಅನುಗುಣವಾಗಿ ಮೃತರ ಕುಟುಂಬಗಳಿಗೆ ತಿಳಿಸುವವರೆಗೆ ಮೃತ ಸಿಬ್ಬಂದಿಯ ಗುರುತನ್ನು 24 ಗಂಟೆಗಳಲ್ಲಿ ಬಹಿರಂಗಗೊಳಿಸುವುದಿಲ್ಲ ಎಂದು ಯುರೋಪಿಯನ್ ಕಮಾಂಡ್ ಹೇಳಿದೆ.

ಮತ್ತಷ್ಟು ಓದಿ: Army helicopter crash: ಉಕ್ರೇನ್​ನಲ್ಲಿ ಸೇನಾ ಹೆಲಿಕಾಪ್ಟರ್ ಪತನ: ಗೃಹ ಸಚಿವ, ಇಬ್ಬರು ಮಕ್ಕಳು ಸೇರಿ 16 ಜನ ಸಾವು

ವಿಮಾನವು ಯಾವ ಮಿಲಿಟರಿ ಸೇವೆಗೆ ಸೇರಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ವಾಯುಪಡೆಯು ಈ ಪ್ರದೇಶಕ್ಕೆ ಹೆಚ್ಚುವರಿ ಸ್ಕ್ವಾಡ್ರನ್​ಗಳನ್ನು ಕಳುಹಿಸಿದೆ ಮತ್ತು ಯುಎಸ್​ಎಸ್​ ಜೆರಾಲ್ಡ್​ ಆರ್​ ಫೋರ್ಡ್​ ವಇಮಾನವಾಹಕ ನೌಕೆಯು ಪೂರ್ವ ಮೆಡಿಟರೇನಿಯನ್​ನಲ್ಲಿಯೂ ಕಾರ್ಯನಿರ್ವಹಿಸುತ್ತಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ