ಅಮೆರಿಕನ್ನರ ತಂಟೆಗೆ ಬಂದ್ರೆ ತಾಲಿಬಾನಿಗಳನ್ನ ಸುಮ್ನೇ ಬಿಡಲ್ಲ, ನಾವೇನು ಓಡಿ ಹೋಗಲ್ಲ: ಜೋ ಬೈಡನ್

| Updated By: Skanda

Updated on: Aug 21, 2021 | 7:37 AM

ನಾವು ಏನು ಹೇಳ್ತಿದ್ದೇವೋ ಅದನ್ನೇ ಮಾಡ್ತಿದ್ದೇವೆ. ಇದು ಭಯೋತ್ಪಾದನೆಯನ್ನ ಕೊನೆಗಾಣಿಸುವಂಥ ಟೈಮ್. ನಾವು ಕಾಬೂಲ್​ನ ಏರ್​ಪೋರ್ಟ್​​ ಸುರಕ್ಷಿತಗೊಳಿಸಿದ್ದೇವೆ. ನಾವು ಅಫ್ಘನ್​​ ನಾಗರೀಕರ ಜತೆಗಿರುತ್ತೇವೆ, ಓಡಿ ಹೋಗಲ್ಲ: ಜೋ ಬೈಡನ್

ಅಮೆರಿಕನ್ನರ ತಂಟೆಗೆ ಬಂದ್ರೆ ತಾಲಿಬಾನಿಗಳನ್ನ ಸುಮ್ನೇ ಬಿಡಲ್ಲ, ನಾವೇನು ಓಡಿ ಹೋಗಲ್ಲ: ಜೋ ಬೈಡನ್
ಜೋ ಬೈಡನ್​
Follow us on

ಅಫ್ಘಾನಿಸ್ತಾನವನ್ನು ಆವರಿಸಿಕೊಂಡು ಆತಂಕ ಹುಟ್ಟುಹಾಕುತ್ತಿರುವ ತಾಲಿಬಾನಿಗಳ ವಿರುದ್ಧ ಅಮೆರಿಕ ಅಧ್ಯಕ್ಷ ಬೈಡನ್ ಧ್ವನಿ ಎತ್ತಿದ್ದಾರೆ. ಮುಂದಿನ ವಾರ ನಡೆಯುವ ಜಿ-7 ರಾಷ್ಟ್ರಗಳ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆಯಾಗಲಿದೆ. ತಾಲಿಬಾನ್​ ಉಗ್ರರ ಮೇಲೆ ಒತ್ತಡ ತರುವ ಕೆಲಸ ಮಾಡುತ್ತೇವೆ. ತಾಲಿಬಾನ್​ ಸಂಘಟನೆ ಯಾವತ್ತಿದ್ದರೂ ಅಮೆರಿಕದ ವಿರೋಧಿ. ಅಂತಿಮ ಫಲಿತಾಂಶ ಏನಾಗುತ್ತೆಂದು ನಾನು ಭರವಸೆ ನೀಡಲ್ಲ ಆದರೆ, ಅಫ್ಘಾನಿಸ್ತಾನವನ್ನು ಉಗ್ರರ ನೆಲೆಯಾಗುವುದಕ್ಕೆ ನಾವು ಬಿಡಲ್ಲ ಎಂದು ಹೇಳಿದ್ದಾರೆ.

ಸದ್ಯ ಅಫ್ಘಾನಿಸ್ತಾನದಲ್ಲಿ ಸ್ಥಳಾಂತರ ಕಾರ್ಯಾಚರಣೆ ಅಪಾಯಕಾರಿ. ಅಫ್ಘಾನಿಸ್ತಾನದಲ್ಲಿನ ಸಂಭಾವ್ಯ ದಾಳಿಗಳನ್ನ ಗಮನಿಸುತ್ತಿದ್ದೇವೆ. ಏರ್​ಪೋರ್ಟ್​ ಹಾಗೂ ಅದರ ಸಮೀಪದ ಸ್ಥಳಗಳಲ್ಲಿನ ದಾಳಿಗಳನ್ನು ನೋಡುತ್ತಿದ್ದೇವೆ. ಅಫ್ಘನ್​ನಿಂದ ಬರುವವರಿಗೆ ಅನುಕೂಲ ಮಾಡಿಕೊಡುತ್ತೇವೆ. ಅಲ್ಲಿನ ಜನರ ಜತೆ ನಾವಿದ್ದೇವೆ ಎಂದು ಬೈಡನ್ ಅಭಯ ನೀಡಿದ್ದಾರೆ.

ಮಿತ್ರರಾಷ್ಟ್ರಗಳು ನಮ್ಮ ವಿಶ್ವಾಸಾರ್ಹತೆ ಪ್ರಶ್ನಿಸಿದ್ದನ್ನ ನೋಡಿಲ್ಲ. ನಾವು ತೆಗೆದುಕೊಂಡ ನಿರ್ಧಾರಕ್ಕೆ ಈಗಲೂ ಬದ್ಧರಿದ್ದೇವೆ. ಅಫ್ಘನ್​ನಲ್ಲಿ ಎಷ್ಟು US ನಾಗರೀಕರಿದ್ದಾರೆಂದು ಪರಿಶೀಲಿಸ್ತಿದ್ದೇವೆ. ಅಲ್ಲಿರುವ ಎಲ್ಲಾ ಅಮೆರಿಕನ್ನರನ್ನ ವಾಪಸ್ ಕರೆತರ್ತೇವೆ. 18 ಸಾವಿರ ಅಮೆರಿಕನ್ನರು, 6 ಸಾವಿರ ಸೈನಿಕರ ಏರ್​ಲಿಫ್ಟ್​ ಆಗಿದೆ. ಸದ್ಯ ಏರ್​​ಪೋರ್ಟ್​​​ಗೆ ಬರುತ್ತಿರುವ ನಾಗರಿಕರನ್ನ ನಿರ್ಬಂಧಿಸುತ್ತಿಲ್ಲ. US ನಾಗರೀಕರನ್ನು ನಿರ್ಬಂಧಿಸುತ್ತಿರುವ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಒಂದುವೇಳೆ ಅಮೆರಿಕನ್ನರ ಮೇಲೆ ದಾಳಿಯಾದರ ನಾವು ಸಹಿಸುವುದಿಲ್ಲ ಎಂದು ತಾಲಿಬಾನ್​​ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.

ನಾವು ಏನು ಹೇಳ್ತಿದ್ದೇವೋ ಅದನ್ನೇ ಮಾಡ್ತಿದ್ದೇವೆ. ಇದು ಭಯೋತ್ಪಾದನೆಯನ್ನ ಕೊನೆಗಾಣಿಸುವಂಥ ಟೈಮ್. ನಾವು ಕಾಬೂಲ್​ನ ಏರ್​ಪೋರ್ಟ್​​ ಸುರಕ್ಷಿತಗೊಳಿಸಿದ್ದೇವೆ. ನಾವು ಅಫ್ಘನ್​​ ನಾಗರೀಕರ ಜತೆಗಿರುತ್ತೇವೆ, ಓಡಿ ಹೋಗಲ್ಲ. ಈಗಾಗಲೇ ಜುಲೈನಿಂದ 18 ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಕಾಬೂಲ್‌ನಿಂದ 13,000 ಜನರನ್ನ ಸ್ಥಳಾಂತರ ಮಾಡಿದ್ದೇವೆ. ಅಮೆರಿಕಕ್ಕೆ ಬರಬೇಕೆನ್ನುವ ಅಫ್ಘನ್ ನಾಗರೀಕರಿಗೆ ಸ್ವಾಗತ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

3 ಜಿಲ್ಲೆಗಳು ತಾಲಿಬಾನಿಗಳಿಂದ ಮುಕ್ತ
ತಾಲಿಬಾನಿಗಳ ಕಪಿಮುಷ್ಠಿಗೆ ಸಿಲುಕಿರುವ ಅಫ್ಘಾನಿಸ್ತಾನದಲ್ಲಿ ಆಶಾಕಿರಣವೆಂಬಂತೆ ಅಚ್ಚರಿಯ ಬೆಳವಣಿಗೆಯೊಂದು ನಡೆದಿದ್ದು, ಸ್ಥಳೀಯರ ಹೋರಾಟದ ಫಲವಾಗಿ 3 ಜಿಲ್ಲೆಗಳು ತಾಲಿಬಾನ್​ ಹಿಡಿತದಿಂದ ಮುಕ್ತವಾಗಿವೆ. ಬಾಗಲನ್ ಪ್ರಾಂತ್ಯದ 3 ಜಿಲ್ಲೆಗಳು ಇದೀಗ ತಾಲಿಬಾನ್ ಕೈತಪ್ಪಿದ್ದು, ಸ್ಥಳೀಯರ ಕೆಚ್ಚೆದೆಯ ಹೋರಾಟಕ್ಕೆ ಪ್ರತಿಫಲ ದೊರೆತಿದೆ. ತಾಲಿಬಾನ್ ವಿರುದ್ಧ ಹೋರಾಡಿ 3 ಜಿಲ್ಲೆಗಳು ಯಶಸ್ಸು ಕಂಡ ಸುದ್ದಿ ಹೊರಬೀಳುತ್ತಲೇ ಎಲ್ಲರಲ್ಲೂ ಹೊಸ ಭರವಸೆಯ ಕಿರಣವೊಂದು ಮೂಡಿದಂತಾಗಿದ್ದು, ಅಫ್ಘಾನಿಸ್ತಾನದ ಸಮಸ್ತರಿಗೂ ತಾಲಿಬಾನಿಗಳ ವಿರುದ್ಧ ಸೆಟೆದು ನಿಲ್ಲುವ ಶಕ್ತಿ ಸಿಗಲಿ ಎಂದು ಆಶಿಸುವಂತಾಗಿದೆ.

ಅಫ್ಘಾನಿಸ್ತಾನದಲ್ಲಿ ಆತಂಕ ಬಿತ್ತಿರುವ ತಾಲಿಬಾನ್​ ಉಗ್ರರು ಬಾಯಲ್ಲಿ ಶಾಂತಿಯ ಮಾತುಗಳನ್ನು ಆಡುತ್ತಿದ್ದರೂ ತಮ್ಮ ಕ್ರೌರ್ಯವನ್ನು ಬಿಟ್ಟಿಲ್ಲ. ಯಾರೂ ದೇಶ ಬಿಟ್ಟು ಹೋಗಬೇಡಿ, ಮಹಿಳೆಯರಿಗೆ ತೊಂದರೆ ಮಾಡುವುದಿಲ್ಲ, ಸರ್ಕಾರಿ ನೌಕರರು ಕೆಲಸಕ್ಕೆ ಹಾಜರಾಗಿ ಎಂದೆಲ್ಲಾ ಹೇಳುವ ತಾಲಿಬಾನಿ ಉಗ್ರರು ಇಂದು ಪೊಲೀಸ್​ ಅಧಿಕಾರಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹೀಗೆ ಕ್ರೌರ್ಯತೆ ಮೆರೆಯುವವರ ವಿರುದ್ಧ 3 ಜಿಲ್ಲೆಗಳ ಜನರು ತಿರುಗಿ ಬಿದ್ದಿರುವುದು ನಿಜಕ್ಕೂ ಸಾಹಸಗಾಥೆಯಾಗಿದ್ದು, ಸ್ಥಳೀಯರ ಹೋರಾಟದಿಂದಾಗಿ ಸದರಿ ಜಿಲ್ಲೆಗಳು ತಾಲಿಬಾನ್ ಹಿಡಿತದಿಂದ ಮುಕ್ತಗೊಂಡಿವೆ.

(US President Joe Biden warns Taliban and says America will not let terrorists to stay in Afghanistan)

ಇದನ್ನೂ ಓದಿ:
ಅಮೆರಿಕ ಜೊತೆಗಿನ ಒಪ್ಪಂದದ ಪ್ರಕಾರ ಆಗಸ್ಟ್ 31 ರವರೆಗೆ ತಾಲಿಬಾನ್ ಹೊಸ ಸರ್ಕಾರವನ್ನು ಘೋಷಿಸಲ್ಲ: ವರದಿ 

ಅಫ್ಘಾನಿಸ್ತಾನಕ್ಕೆ ದುಡ್ಡು ಕೊಡಲು ಐಎಂಎಫ್​ ನಕಾರ, ರಿಸರ್ವ್ ಬ್ಯಾಂಕ್​ ಹಣ ಅಮೆರಿಕಾ ಪಾಲು; ತಾಲಿಬಾನಿಗಳ ಆದಾಯ ಏನು?