ಅಮೆರಿಕ ಜೊತೆಗಿನ ಒಪ್ಪಂದದ ಪ್ರಕಾರ ಆಗಸ್ಟ್ 31 ರವರೆಗೆ ತಾಲಿಬಾನ್ ಹೊಸ ಸರ್ಕಾರವನ್ನು ಘೋಷಿಸಲ್ಲ: ವರದಿ

ಪ್ರಸ್ತುತ ಇಲ್ಲಿ ಯಾವುದೇ ಸರ್ಕಾರವಿಲ್ಲ. ಆದರೆ ವಿದೇಶಿ ಪಡೆಗಳು ತಮ್ಮ ಜನರನ್ನು ದೇಶದಿಂದ ಸ್ಥಳಾಂತರಿಸಲು ಹರಸಾಹಸ ಪಡುತ್ತಿವೆ. ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಆಗಸ್ಟ್ 15 ರಂದು ಕಾಬೂಲ್ ತೊರೆದು ಪಂಜಶೀರ್ ಕಣಿವೆಯಲ್ಲಿದ್ದು, ದೇಶದ ಹಂಗಾಮಿ ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದಾರೆ.

ಅಮೆರಿಕ ಜೊತೆಗಿನ ಒಪ್ಪಂದದ ಪ್ರಕಾರ ಆಗಸ್ಟ್ 31 ರವರೆಗೆ ತಾಲಿಬಾನ್ ಹೊಸ ಸರ್ಕಾರವನ್ನು ಘೋಷಿಸಲ್ಲ: ವರದಿ
ತಾಲಿಬಾನ್ ಹೋರಾಟಗಾರರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 20, 2021 | 8:11 PM

ಕಾಬೂಲ್: ಅಫ್ಘಾನಿಸ್ತಾನದಲ್ಲಿರುವ ತನ್ನ ಪಡೆಗಳನ್ನು ಅಮೆರಿಕ ಪೂರ್ಣವಾಗಿ ಹಿಂತೆಗೆದುಕೊಳ್ಳುವವರೆಗೆ ಅಂದರೆ ಆಗಸ್ಟ್ 31ರ ವರೆಗೆ ತಾಲಿಬಾನ್ ಕಾಯಲಿದೆ ಎಂದು ಅಫ್ಘಾನಿಸ್ತಾನ ಅಧಿಕಾರಿಯೊಬ್ಬರು ಮೇಲೆ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಈ ಅಧಿಕಾರಿ ತಾಲಿಬಾನ್ ಜೊತೆ ಮಾತುಕತೆ ನಡೆಸಿದ್ದು ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್‌ ವರದಿ ಮಾಡಿದೆ. ತಾಲಿಬಾನ್ ಪ್ರಮುಖ ಸಂಧಾನಕಾರ ಅನಸ್ ಹಕ್ಕಾನಿ ತನ್ನ ಮಾಜಿ ಸರ್ಕಾರಿ ಸಂವಾದಕರಿಗೆ ತಾಲಿಬಾನ್ ಅಮೆರಿಕ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿದ್ದಾರೆ. ಅಂತಿಮ ವಾಪಸಾತಿ ದಿನಾಂಕ ಮುಗಿಯುವವರೆಗೂ “ಏನೂ ಮಾಡಬೇಡಿ” ಎಂದು ಹಕ್ಕಾನಿ ಹೇಳಿರುವುದಾಗಿ ಅಫ್ಘಾನ್ ಅಧಿಕಾರಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಕಾಬೂಲ್ ಪತನದ ನಂತರ ಆಗಸ್ಟ್ 15 ರಂದು ಅಶ್ರಫ್ ಘನಿ ಹೊರಟು ಹೋದ ನಂತರ ದೇಶವು ಅಸ್ತವ್ಯಸ್ತವಾಗಿದೆ. ಅಂದಿನಿಂದ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿದೆ ಆದರೆ ಆಡಳಿತದ ಬಗ್ಗೆ ಯಾವುದನ್ನೂ ಅಧಿಕೃತಗೊಳಿಸಲಾಗಿಲ್ಲ. ಮೊದಲಿಗೆ, ಅಫ್ಘಾನಿಸ್ತಾನದ ಮಾಜಿ ಸಚಿವ ಅಲಿ ಅಹ್ಮದ್ ಜಲಾಲಿಯವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ ಆಗಲಿದೆ ಎಂದು ವರದಿಯಾಗಿತ್ತು, ಆದರೆ ನಂತರ ತಾಲಿಬಾನಿಗಳು ಒಂದರ ನಂತರ ಒಂದು ಎಂಬಂತೆ ನಗರಗಳನ್ನು ವಶಪಡಿಸುತ್ತಾ ಬಂದಿದ್ದು ಯಾರೊಂದಿಗೂ ಅಧಿಕಾರವನ್ನು ಹಂಚಿಕೊಳ್ಳದೇ ಈಗ ಇಡೀ ದೇಶವನ್ನು ವಶಪಡಿಸಿಕೊಳ್ಳಲು ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜಲಾಲಿ ಕೂಡ ತನ್ನನ್ನು ಅಂತಹ ಹುದ್ದೆಗೆ ಪರಿಗಣಿಸಿಲ್ಲ ಮತ್ತು ಅಂತಹ ಸ್ಥಾನದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಸ್ತುತ ಇಲ್ಲಿ ಯಾವುದೇ ಸರ್ಕಾರವಿಲ್ಲ. ಆದರೆ ವಿದೇಶಿ ಪಡೆಗಳು ತಮ್ಮ ಜನರನ್ನು ದೇಶದಿಂದ ಸ್ಥಳಾಂತರಿಸಲು ಹರಸಾಹಸ ಪಡುತ್ತಿವೆ. ಮಾಜಿ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಆಗಸ್ಟ್ 15 ರಂದು ಕಾಬೂಲ್ ತೊರೆದು ಪಂಜಶೀರ್ ಕಣಿವೆಯಲ್ಲಿದ್ದು, ದೇಶದ ಹಂಗಾಮಿ ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದಾರೆ. ತಾಲಿಬಾನ್‌ಗಳು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದು ತಾಲಿಬಾನ್‌ ಎಲ್ಲ ದೇಶಗಳೊಂದಿಗೆ ಶಾಂತಿಯುತ ಸಂಬಂಧವನ್ನು ಬಯಸುತ್ತವೆ ಮತ್ತು ಯಾವುದೇ ಸೇಡು ತೀರಿಸಿಕೊಳ್ಳುವುದಿಲ್ಲ ಎಂದು ವಿಶ್ವಕ್ಕೆ ಒಂದು ಸಂದೇಶವನ್ನು ರವಾನಿಸಿದೆ. ಶರಿಯಾ ಕಾನೂನಿನ ಅಡಿಯಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ತಾಲಿಬಾನ್ ಹೇಳಿದೆ.

ಶುಕ್ರವಾರ ಮಸೀದಿಗಳಲ್ಲಿ ಯಾವುದೇ ತಾಲಿಬಾನ್ ಬಂದೂಕುಧಾರಿಗಳು ಮಸೀದಿಗಳ ಪ್ರವೇಶದ್ವಾರದಲ್ಲಿ ಕಾವಲು ಕಾಯುತ್ತಿರಲಿಲ್ಲ ಅಥವಾ ಹಿಂದಿನಂತೆ ವಸ್ತ್ರ ಸಂಹಿತೆಗಳನ್ನು ಜಾರಿಗೊಳಿಸಿರುವುದು ಕಂಡುಬಂದಿಲ್ಲ. ಈ ಶುಕ್ರವಾರದ ಪ್ರಾರ್ಥನೆಗಳನ್ನು ಐಕ್ಯತೆಗಾಗಿ ಮನವಿ ಮಾಡಲು ಮತ್ತು ಜನರು ದೇಶದಿಂದ ಪಲಾಯನವಾಗದಂತೆ ನೋಡಿಕೊಳ್ಳಲು ತಾಲಿಬಾನ್ ಇಮಾಮ್‌ಗಳಿಗೆ ಒತ್ತಾಯಿಸಿದೆ ಎಂದು ವರದಿಗಳು ಹೇಳಿವೆ.

ತಾಲಿಬಾನ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ಅಫ್ಘಾನಿಸ್ತಾನ ಸ್ವಾತಂತ್ರ್ಯದ 102 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಗಸ್ಟ್ 19 ರಂದು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಅನ್ನು ಘೋಷಿಸಿದೆ.

ಆದರೆ ತಾಲಿಬಾನ್ ದೇಶವನ್ನು ಹೇಗೆ ಆಳುತ್ತದೆ? ಆಡಳಿತ ವ್ಯವಸ್ಥೆಯು ಪ್ರಜಾಪ್ರಭುತ್ವವಾಗಿರುವುದಿಲ್ಲ ಏಕೆಂದರೆ “ಪ್ರಜಾಪ್ರಭುತ್ವವು ಈ ದೇಶದಲ್ಲಿ ಯಾವುದೇ ಆಧಾರವನ್ನು ಹೊಂದಿಲ್ಲ” ಎಂದು ತಾಲಿಬಾನ್ ನಾಯಕರಾದ ವಹೀದುಲ್ಲಾ ಹಾಶಿಮಿ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ,. ಅಫ್ಘಾನ್ ಸೈನಿಕರು ಮತ್ತು ಪೈಲಟ್‌ಗಳನ್ನು ಆಹ್ವಾನಿಸುವ ಸೈನ್ಯವನ್ನು ನವೀಕರಿಸುವ ಗುರಿಯನ್ನು ತಾಲಿಬಾನ್ ಹೊಂದಿದ್ದು, ಕೌನ್ಸಿಲ್ ದೈನಂದಿನ ವ್ಯವಹಾರಗಳನ್ನು ನಿರ್ವಹಿಸುತ್ತದೆ ಎಂದಿದ್ದಾರೆ ಹಾಶಿಮಿ.

ಆದರೆ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದೆ ತಾಲಿಬಾನ್‌ಗೆ “ಆಡಳಿತ ನಡೆಸಲು” ಯಾವುದೇ ಆತುರವಿಲ್ಲ ಎಂಬುದು ಕಾಣುತ್ತದೆ. ಅದೇ ವೇಳೆ ಆಗಸ್ಟ್ 31 ರ ನಂತರ ಏನಾಗಬಹುದು ಎಂಬ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಹಕ್ಕಾನಿಯ ಹೇಳಿಕೆಯು ಆಗಸ್ಟ್ 31 ರ ನಂತರ ಧಾರ್ಮಿಕ ಚಳುವಳಿಯು ಏನು ಯೋಜಿಸುತ್ತಿದೆ ಮತ್ತು ಮುಂದಿನ ಸರ್ಕಾರದಲ್ಲಿ ತಾಲಿಬಾನ್ ಅಲ್ಲದ ಅಧಿಕಾರಿಗಳನ್ನು ಸೇರಿಸುವ ಭರವಸೆಯನ್ನು ಉಳಿಸಿಕೊಳ್ಳುತ್ತದೆಯೇ ಎಂಬ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತದೆ. ಮುಂದಿನ ಸರ್ಕಾರದಲ್ಲಿ ತಾಲಿಬಾನ್ ಅಲ್ಲದ ಅಧಿಕಾರಿಗಳನ್ನು ಸೇರಿಸಿಕೊಳ್ಳುವ ಭರವಸೆಯನ್ನು ಅವರು ಉಳಿಸಿಕೊಳ್ಳುತ್ತಾರೆಯೇ? ಎಂಬ ಪ್ರಶ್ನೆ ಬಾಕಿ ಉಳಿದಿದೆ. ಇಲ್ಲಿಯವರೆಗೆ ಅಫ್ಘಾನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆಗಳನ್ನು ಬದಲಿಸುವ ಯಾವುದೇ ಯೋಜನೆ ಅಥವಾ ಬದಲಿ ವ್ಯವಸ್ಥೆ ಹೇಗಿರತ್ತದೆ ಎಂಬುದನ್ನು ತಾಲಿಬಾನ್ ಹೇಳಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: Afghanistan Economy: ಲಾರಿ ಹತ್ತಿದ ಹಪ್ಪಳದಂತಾದ ಅಫ್ಘಾನಿಸ್ತಾನದ ಆರ್ಥಿಕತೆ; ತಾಲಿಬಾನ್​ ತಾಳಿ ಉಳಿಯೋದು ಕಷ್ಡ

ಇದನ್ನೂ ಓದಿ: ತಾಲಿಬಾನ್ ಅಗ್ರಗಣ್ಯ ನಾಯಕ ಹೈಬತುಲ್ಲಾಹ್ ಅಖುಂದ್ಜಾದಾ ಪಾಕಿಸ್ತಾನ ಸೇನೆಯ ವಶದಲ್ಲಿದ್ದಾನೆಯೇ?

(Taliban might wait till August 31 when the United States is scheduled to complete the withdrawal of its forces from the country)

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್