Video: ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಹತ್ಯೆಗೆ ಯತ್ನ, ಬಾಡಿಗಾರ್ಡ್ಸ್​ಗಳು ಜೀವ ಕಾಪಾಡಿದ್ದು ಹೇಗೆ?

|

Updated on: May 16, 2024 | 9:36 AM

ಗುಂಡಿನ ದಾಳಿಯಲ್ಲಿ ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಲೋವಾಕಿಯಾದ ರಾಜಧಾನಿ ಬ್ರಾಟಿಸ್ಲಾವಾದ ಹ್ಯಾಂಡ್ಲೋವಾ ನಗರದಲ್ಲಿ ಆತನ ಮೇಲೆ ಹಲವಾರು ಗುಂಡುಗಳನ್ನು ಹಾರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಬಾಡಿಗಾರ್ಡ್​ಗಳು ಹೇಗೆ ಅವರ ಜೀವ ರಕ್ಷಿಸಿದ್ದಾರೆ ಎನ್ನುವ ವಿಡಿಯೋ ಇಲ್ಲಿದೆ.

Video: ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಹತ್ಯೆಗೆ ಯತ್ನ, ಬಾಡಿಗಾರ್ಡ್ಸ್​ಗಳು ಜೀವ ಕಾಪಾಡಿದ್ದು ಹೇಗೆ?
ರಾಬರ್ಟ್​ ಫಿಕೊ
Follow us on

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್​ ಫಿಕೊ(Robert Fico) ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ತಕ್ಷಣವೇ ಬಾಡಿಗಾರ್ಡ್ಸ್​ ಕಾರ್ಯಪ್ರವೃತ್ತರಾಗಿ ಹೇಗೆ ಪ್ರಾಣ ಉಳಿಸಿದರು ಎನ್ನುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಹ್ಯಾಂಡ್ಲೋವಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಫಿಕೊ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಂಡ್ಲೋವಾದಲ್ಲಿ ನಡೆದ ಸರ್ಕಾರಿ ಸಭೆಯ ನಂತರ ಈ ಘಟನೆ ನಡೆದಿದೆ.

ಸ್ಲೋವಾಕಿಯಾದ ಟ್ರೆನ್ಸಿನ್ ಪ್ರದೇಶದ ಗಣಿಗಾರಿಕೆ ಪಟ್ಟಣವಾಗಿದೆ, ಅಲ್ಲಿ ಸರ್ಕಾರಿ ಸಭೆ ನಡೆದ ಸಾಂಸ್ಕೃತಿಕ ಭವನದ ಹೊರಗೆ ಪಿಎಂ ಫಿಕೊ ಮೇಲೆ ಶೂಟರ್ ಗುಂಡು ಹಾರಿಸಿದ್ದಾನೆ. ಘಟನೆ ವೇಳೆ ಅಲ್ಲೇ ಇದ್ದ ಪೊಲೀಸರು ಕೂಡಲೇ ಕೃತ್ಯವೆಸಗಿದ ವ್ಯಕ್ತಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಸೆಪ್ಟೆಂಬರ್​ನಲ್ಲಿ ನಡೆದ ಚುನಾವಣೆಯಲ್ಲಿ ಫಿಕೊ ಅಧಿಕಾರಕ್ಕೇರಿದ್ದರು.

ಮತ್ತಷ್ಟು ಓದಿ: ಸ್ಲೋವಾಕಿಯಾ ಪ್ರಧಾನಿ ರಾಬರ್ಟ್ ಫಿಕೊ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ

ನಾಲ್ಕು ಗುಂಡುಗಳು ಫಿಕೊ ಹೊಟ್ಟೆಗೆ ತಗುಲಿದೆ. ಫಿಕೊ ಅವರನ್ನು ಹ್ಯಾಂಡ್ಲೋವಾ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯುವಾಗ ಪ್ರಜ್ಞೆ ಇತ್ತು ಮತ್ತು ಬುಲೆಟ್ ಗಾಯಗಳಿಗೆ ಚಿಕಿತ್ಸೆ ನೀಡಲಾಯಿತು.

ಸ್ಲೋವಾಕಿಯಾದಲ್ಲಿ ಯುರೋಪಿಯನ್ ಪಾರ್ಲಿಮೆಂಟ್ ಚುನಾವಣೆಗಳಿಗೆ ಕೇವಲ 3 ವಾರಗಳು ಬಾಕಿ ಇವೆ. ಈ ವೇಳೆ ಈ ಗುಂಡಿನ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಪ್ರಧಾನಿ ರಾಬರ್ಟ್ ಫಿಕೊ ಮೇಲಿನ ಕೆಟ್ಟ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇಂತಹ ಹಿಂಸಾಚಾರಕ್ಕೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ ಮತ್ತು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಎಂದು ಇಯು ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಹೇಳಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ