AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video Viral: ನಾನು ಉದ್ಯೋಗಿ, ನಿನ್ನ ಸೇವಕಿಯಲ್ಲ, ಊಟದ ವಿಚಾರವಾಗಿ ಇಂಡಿಗೋ ಗಗನಸಖಿ – ಪ್ರಯಾಣಿಕರ ನಡುವೆ ವಾಗ್ವಾದ

ಇಂಡಿಗೋ ಏರ್ ಹೋಸ್ಟೆಸ್ ಇಸ್ತಾನ್‌ಬುಲ್-ದೆಹಲಿ ವಿಮಾನದಲ್ಲಿ ಊಟದ ವಿಚಾರವಾಗಿ ಇಂಡಿಗೋ ಫ್ಲೈಟ್ ಅಟೆಂಡೆಂಟ್ ಮತ್ತು ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆಯುತ್ತಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Video Viral: ನಾನು ಉದ್ಯೋಗಿ, ನಿನ್ನ ಸೇವಕಿಯಲ್ಲ, ಊಟದ ವಿಚಾರವಾಗಿ ಇಂಡಿಗೋ ಗಗನಸಖಿ - ಪ್ರಯಾಣಿಕರ ನಡುವೆ ವಾಗ್ವಾದ
Video Viral
TV9 Web
| Edited By: |

Updated on:Dec 22, 2022 | 12:09 PM

Share

ಇಂಡಿಗೋ ಏರ್ ಹೋಸ್ಟೆಸ್ ಇಸ್ತಾನ್‌ಬುಲ್-ದೆಹಲಿ ವಿಮಾನದಲ್ಲಿ ಊಟದ ವಿಚಾರವಾಗಿ ಇಂಡಿಗೋ ಫ್ಲೈಟ್ ಅಟೆಂಡೆಂಟ್ ಮತ್ತು ಪ್ರಯಾಣಿಕರ ನಡುವೆ ತೀವ್ರ ವಾಗ್ವಾದ ನಡೆಯುತ್ತಿದ್ದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಮಾನದಲ್ಲಿ ನೀಡಲಾದ ಊಟಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರು ಮತ್ತು ಗಗನಸಖಿ ನಡುವೆ ವಾಗ್ವಾದ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಕುರಿತು ಇಂಡಿಗೋ ಕೂಡ ತ್ವರಿತವಾಗಿ ಪ್ರತಿಕ್ರಿಯಿಸಿತು. ಗುರುಪ್ರೀತ್ ಸಿಂಗ್ ಹನ್ಸ್ ಎಂಬವವರು ತಮ್ಮ ಟ್ವಿಟ್ಟರ್​ನಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನಂತರ ಈ ಫೋಸ್ಟ್​ನ್ನು ಡಿಲಿಟ್ ಮಾಡಿದ್ದಾರೆ. ಕ್ಯಾಬಿನ್ ಸಿಬ್ಬಂದಿಯೊಬ್ಬರು ಪ್ರಯಾಣಿಕರಿಗೆ ಆಹಾರವನ್ನು ನೀಡುತ್ತಿದ್ದರು. ನಂತರ ಗಗನಸಖಿ, ಪ್ರಯಾಣಿಕರೊಂದಿಗೆ ತರ್ಕಿಸಲು ಪ್ರಯತ್ನಿಸಿದ್ದಾರೆ. ಈ ಬಗ್ಗೆ ಸಿಬ್ಬಂದಿ ನಯವಾಗಿ ಮಾತನಾಡುವಂತೆ ವಿನಂತಿಸಿದರು.

ಆದರೆ ಪ್ರಯಾಣಿಕರು ಏರು ಧ್ವನಿಯಲ್ಲಿ ಬಾಯಿ ಮುಚ್ಚು ಎಂದು ಗಗನಸಖಿಯ ಮೇಲೆ ಕಿರುಚಾಡಿದ್ದಾರೆ. ಈ ಇದನ್ನು ಗಮನಿಸಿದ ಗಗನಸಖಿ ಸರ್ ನಿಧಾನವಾಗಿ ಮಾಡನಾಡಿ, ಮಾತಿನಲ್ಲಿ ನಿಗಾ ಇರಲಿ ಎಂದು ಹೇಳಿದ್ದಾರೆ. ನೀವು ಯಾಕೆ ಎಷ್ಟೊಂದು ಕೂಗುಡಾತ್ತಿದ್ದೀರಾ ಎಂದು ಪ್ರಯಾಣಿಕರು ಪ್ರಶ್ನಿಸಿದಾಗ, ಆಕೆ ನೀವು ಯಾಕೆ ನಮ್ಮ ಮೇಲೆ ಕೂಗುಡುತ್ತಿದ್ದೀರಿ ಎಂದು ಹೇಳಿದ್ದಾರೆ

ಇಲ್ಲ, ನನ್ನನ್ನು ಕ್ಷಮಿಸಿ, ಸರ್, ಆದರೆ ನೀವು ಸಿಬ್ಬಂದಿಯೊಂದಿಗೆ ಹಾಗೆ ಮಾತನಾಡವುದು ಸರಿಯಲ್ಲ. ನಾನು ಶಾಂತಿಯುತವಾಗಿ, ಗೌರವದಿಂದ ನಿಮ್ಮ ಮಾತನ್ನು ಕೇಳುತ್ತಿದ್ದೇನೆ, ಆದರೆ ನೀವು ಸಿಬ್ಬಂದಿಯನ್ನು ಗೌರವಿಸಬೇಕು. ನೀವು ನನ್ನೊಂದಿಗೆ ಹಾಗೆ ಮಾತನಾಡುವಂತಿಲ್ಲ. ನಾನಿನ್ನೂ ಇಲ್ಲಿ ಉದ್ಯೋಗಿಯಾಗಿದ್ದೇನೆ, ಎಂದು ಗಗನಸಖಿ ಹೇಳಿದಾಗ, ಮತ್ತೊಬ್ಬ ಕ್ಯಾಬಿನ್ ಸಿಬ್ಬಂದಿ ಮಧ್ಯಪ್ರವೇಶಿಸಿ ವಿಷಯವನ್ನು ಬಗೆಹರಿಸಲು ಪ್ರಯತ್ನಿಸಿದರು.

ಇದನ್ನು ಓದಿ:Video Viral: ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದ ವ್ಯಕ್ತಿ

ಈ ಗಲಾಟೆ ಮತ್ತಷ್ಟು ಹೆಚ್ಚಾಗಿದ್ದು ಪ್ರಯಾಣಿಕರು ನೀವು ನಮ್ಮ ಸೇವಕರು ಎಂದು ಹೇಳಿದಾಗ, ಆಕೆಗೆ ಸೇವಕ ಎಂಬ ಮಾತು ಇನ್ನಷ್ಟು ಕೋಪಕ್ಕೆ ಗುರಿ ಮಾಡಿದೆ. ಹೌದು, ನಾನು ಉದ್ಯೋಗಿ. ನಾನು ನಿನ್ನ ಸೇವಕಿಯಲ್ಲ ಎಂದು ಹೇಳಿದ್ದಾರೆ. ನಂತರ ಮತ್ತೊಬ್ಬ ಸಿಬ್ಬಂದಿ ಬಂದು ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿದೇಶಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Thu, 22 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ