China Covid ಚೀನಾದಲ್ಲಿ ಕೋವಿಡ್ ಉಲ್ಬಣ: ರೋಗಿಗಳಿಗೆ ನೆಲದಲ್ಲೇ ಸಿಪಿಆರ್, ರೋಗಿಗಳ ಪರೀಕ್ಷೆ ನಡೆಸಿ ಸುಸ್ತಾಗಿ ಬಿದ್ದ ಡಾಕ್ಟರ್

| Updated By: ರಶ್ಮಿ ಕಲ್ಲಕಟ್ಟ

Updated on: Dec 22, 2022 | 12:57 PM

ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು ತುಂಬಿದ್ದು, ಹಲವರಿಗೆ ವೆಂಟಿಲೇಟರ್ ಸಹಾಯ ನೀಡಲಾಗಿದೆ. ಚೀನಾದ ಸೋಷ್ಯಲ್ ಮೀಡಿಯಾದಲ್ಲಿ ಹರಿದಾಡಿದ ಇನ್ನೊಂದು ವಿಡಿಯೊದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗಲೇ ಡಾಕ್ಟರ್ ಪ್ರಜ್ಞೆ ತಪ್ಪಿ ಬೀಳುತ್ತಿರುವುದನ್ನು ಕಾಣಬಹುದು.

China Covid ಚೀನಾದಲ್ಲಿ ಕೋವಿಡ್ ಉಲ್ಬಣ: ರೋಗಿಗಳಿಗೆ ನೆಲದಲ್ಲೇ ಸಿಪಿಆರ್, ರೋಗಿಗಳ ಪರೀಕ್ಷೆ ನಡೆಸಿ ಸುಸ್ತಾಗಿ ಬಿದ್ದ ಡಾಕ್ಟರ್
ಚೀನಾದಲ್ಲಿ ಕುಸಿದು ಬಿದ್ದ ವೈದ್ಯ (ಸಿಸಿಟಿವಿ ದೃಶ್ಯ)
Follow us on

ಚೀನಾದಲ್ಲಿ ಕೋವಿಡ್ (China Covid) ಉಲ್ಬಣಗೊಂಡಿದ್ದು ರೋಗಗಳಿಗೆ ನೆಲದಲ್ಲಿ ಸಿಪಿಆರ್ (CPR) ನೀಡುತ್ತಿರುವ ಮತ್ತು ಬಿಡುವಿಲ್ಲದೆ ಕೆಲಸ ಮಾಡಿದ ಪರಿಣಾಮ ಡಾಕ್ಟರ್ ಕುಸಿದು ಬಿದ್ದಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಚೀನಾದ ಚಾಂಗ್‌ಕಿಂಗ್‌ ನಗರದಲ್ಲಿ ಕೋವಿಡ್ ಆಸ್ಪತ್ರೆಯೊಂದರಲ್ಲಿ ರೋಗಿಗಳಿಗೆ ನೆಲದಲ್ಲಿಯೇ ವೈದ್ಯರು ಸಿಪಿಆರ್ ನೀಡುತ್ತಿರುವುದು ವಿಡಿಯೊದಲ್ಲಿ ಕಾಣಬಹುದು ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ. ಇಡೀ ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳು(Covid 19) ತುಂಬಿದ್ದು, ಹಲವರಿಗೆ ವೆಂಟಿಲೇಟರ್ ಸಹಾಯ ನೀಡಲಾಗಿದೆ. ಚೀನಾದ ಸೋಷ್ಯಲ್ ಮೀಡಿಯಾದಲ್ಲಿ ಹರಿದಾಡಿದ ಇನ್ನೊಂದು ವಿಡಿಯೊದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗಲೇ ಡಾಕ್ಟರ್ ಪ್ರಜ್ಞೆ ತಪ್ಪಿ ಬೀಳುತ್ತಿರುವುದನ್ನು ಕಾಣಬಹುದು. ದೇಶದಾದ್ಯಂತ ಪ್ರತಿಭಟನೆ ನಂತರ ಚೀನಾ ಸರ್ಕಾರ ದೇಶದಲ್ಲಿ ವಿಧಿಸಿದ್ದ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿದ್ದು ನಂತರ ಕೋವಿಡ್ ಪ್ರಕರಣಗಳು ಧುತ್ತನೆ ಏರಿವೆ. ಅದೇ ವೇಳೆ ಲಾಕ್ ಡೌನ್, ಸಾಮೂಹಿಕ ಪರೀಕ್ಷೆ, ಕ್ವಾರಂಟೈನ್, ಟ್ರ್ಯಾಕಿಂಗ್ ಕೂಡಾ ಮಾಡಲಾಗುತ್ತಿದೆ. ಆದಾಗ್ಯೂ, ಲಸಿಕೆ ಹಾಕದೇ ಇರುವವರಿಗೆ ರೋಗ ತಗಲುವ ಸಾಧ್ಯತೆ ಹೆಚ್ಚಿದ್ದು, ಇಲ್ಲಿನ ಆಸ್ಪತ್ರೆಗಳೂ ರೋಗಿಗಳ ನಿರ್ವಹಣೆಗೆ ಸಕಾಲದಲ್ಲಿ ಸಿದ್ಧವಾಗದೇ ಇರುವುದು ಕೂಡಾ ಇಲ್ಲಿ ಕೋವಿಡ್ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ. ಆಡಳಿತ ಸಂಸ್ಥೆಗಳು ಐಸಿಯು ಸೌಕರ್ಯಗಳನ್ನು ಹೆಚ್ಚಿಸಿದ್ದು, ಆಸ್ಪತ್ರೆಗಳಲ್ಲಿ ರೋಗ ಪಸರಿಸದಂತೆ ಫಿವರ್ ಕ್ಲಿನಿಕ್​​ಗಳನ್ನು ಹೆಚ್ಚಿಸಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ದಿನನಿತ್ಯ ವರದಿಯಾಗುವ ಹೊಸ ಪ್ರಕರಣಗಳ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಕಡಿಮೆಯಾಗಿದೆ. ಕೋವಿಡ್ ಪರೀಕ್ಷೆಯಲ್ಲಿನ ಸ್ಕೇಲಿಂಗ್‌ನಿಂದಾಗಿ ಸಂಖ್ಯೆಗಳನ್ನು ಕಡಿಮೆ ಅಂದಾಜು ಮಾಡಲಾಗಿದೆ ಎಂಬ ಆಂತಕವೂ ಇಲ್ಲಿದೆ.

ಚೀನಾ ಮಂಗಳವಾರ 3,101 ಹೊಸ ರೋಗಲಕ್ಷಣದ ಕೋವಿಡ್ ಸೋಂಕುಗಳನ್ನು ವರದಿ ಮಾಡಿದೆ ಅದರಲ್ಲಿ 3,049 ಸ್ಥಳೀಯವಾಗಿ ವರದಿಯಾದ ಪ್ರಕರಣಗಳು. ಇದರೊಂದಿಗೆ, ರೋಗಲಕ್ಷಣಗಳೊಂದಿಗೆ ದೃಢಪಡಿಸಿದ ಒಟ್ಟು ಪ್ರಕರಣಗಳ ಸಂಖ್ಯೆ 386,276 ಕ್ಕೆ ತಲುಪಿದೆ.

ಏತನ್ಮಧ್ಯೆ, ವೈರಸ್‌ನಿಂದ ಸಾವುಗಳನ್ನು ದಾಖಲಿಸಲು ಬಳಸುವ ಮಾನದಂಡಗಳನ್ನು ಬದಲಾಯಿಸಿದ ನಂತರ ಡಿಸೆಂಬರ್ 20 ರಂದು ಕೋವಿಡ್ -19 ನಿಂದ ಒಬ್ಬ ವ್ಯಕ್ತಿಯೂ ಸಾವನ್ನಪ್ಪಿಲ್ಲ ಎಂದು ಬೀಜಿಂಗ್ ಬುಧವಾರ ಹೇಳಿದೆ. ಚೀನಾ ಸರ್ಕಾರದ ಪ್ರಕಾರ, ವೈರಸ್‌ನಿಂದ ಉಂಟಾದ ಉಸಿರಾಟದ ವೈಫಲ್ಯದಿಂದ ನೇರವಾಗಿ ಸಾಯುವವರನ್ನು ಮಾತ್ರ ಕೋವಿಡ್ ಸಾವಿನ ಅಂಕಿಅಂಶಗಳ ಅಡಿಯಲ್ಲಿ ಎಣಿಸಲಾಗುತ್ತದೆ.

ಇದನ್ನೂ ಓದಿ: ಉಕ್ರೇನ್ ಎಂದೂ ಒಂಟಿಯಲ್ಲ ನಿಮ್ಮ ಜತೆ ನಾವಿದ್ದೇವೆ ಎಂದು ಅಭಯ ನೀಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಇದರರ್ಥ ವೈರಸ್‌ನ ಪರಿಣಾಮಗಳಿಂದ ಸಂಭವಿಸುವ ಹೆಚ್ಚಿನ ಸಾವುಗಳನ್ನು ಇನ್ನು ಮುಂದೆ ಎಣಿಕೆ ಮಾಡಲಾಗುವುದಿಲ್ಲ. ದೇಶದ ಸಾವುನೋವು ಗಣತಿ ಪರಿಷ್ಕರಿಸಿದಾಗ ಮತ್ತು ಬೀಜಿಂಗ್‌ನಲ್ಲಿ ಒಂದು ಸಾವನ್ನು ಒಟ್ಟು ಮೊತ್ತದಿಂದ ತೆಗೆದುಹಾಕಿದಾಗ ಮಾನದಂಡದಲ್ಲಿನ ಬದಲಾವಣೆಯು ಪ್ರತಿಫಲಿಸುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ಸತ್ತವರನ್ನು ದಹನ ಮಾಡಲು ಅಧಿಕಾರಿಗಳು ಓಡುತ್ತಿರುವಾಗ ಚೀನಾದ ಪ್ರಮುಖ ನಗರಗಳಲ್ಲಿನ ಸ್ಮಶಾನಗಳು 24 ಗಂಟೆಗಳೂ ತುಂಬಿರುತ್ತವೆ ಎಂದು  ವರದಿಯಾಗಿದೆ. ಚಾಂಗ್‌ಕಿಂಗ್‌ನಲ್ಲಿ, ಶವಗಳನ್ನು ಇಡಲು ಸ್ಥಳಾವಕಾಶವಿಲ್ಲ ಎಂದು ಒಬ್ಬ ಸ್ಮಶಾನದ ಕೆಲಸಗಾರ ಹೇಳಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ