China Corona Updates: ಐಸಿಯುಗಳು ಭರ್ತಿಯಾಗುತ್ತಿವೆ, ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಬಗ್ಗೆ WHO ಕಳವಳ

ಚೀನಾ(China)ದಲ್ಲಿ ದಿನದಿಂದ ದಿನಕ್ಕೆ ಕೊರೊನಾ(Corona) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO)ಯು ತೀವ್ರ ನಿಗಾ ಇರಿಸಿದೆ.

China Corona Updates: ಐಸಿಯುಗಳು ಭರ್ತಿಯಾಗುತ್ತಿವೆ, ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ಬಗ್ಗೆ WHO ಕಳವಳ
China Corona
Follow us
TV9 Web
| Updated By: ನಯನಾ ರಾಜೀವ್

Updated on: Dec 22, 2022 | 9:19 AM

ಚೀನಾ(China)ದಲ್ಲಿ ದಿನದಿಂದ ದಿನಕ್ಕೆ ಕೊರೊನಾ(Corona) ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ(WHO)ಯು ತೀವ್ರ ನಿಗಾ ಇರಿಸಿದೆ. ಚೀನಾದಲ್ಲಿ ಐಸಿಯುಗಳು ಭರ್ತಿಯಾಗುತ್ತಿದ್ದು, ಇಡೀ ವಿಶ್ವವನ್ನೇ ಮತ್ತೊಮ್ಮೆ ಆತಂಕಕ್ಕೆ ತಳ್ಳಿದೆ. ಚೀನಾದ ಕೊವಿಡ್ ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಚೀನಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ. ದೇಶವು ಪ್ರಕರಣಗಳಲ್ಲಿ ದೊಡ್ಡ ಏರಿಕೆಯನ್ನು ಅನುಭವಿಸುತ್ತಿರುವುದರಿಂದ ಕೋವಿಡ್ -19 ಕಡಿಮೆ ಮಾಡಲು ಚೀನಾ ಹೆಣಗಾಡುತ್ತಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಡಿಮೆ ವ್ಯಾಕ್ಸಿನೇಷನ್ ಮತ್ತು ಬೂಸ್ಟರ್ ಡೋಸ್ ಮತ್ತು ಹೈಬ್ರಿಡ್ ವಿನಾಯಿತಿ ಕೊರತೆಯಿಂದಾಗಿ ಚೀನಾ ಸರ್ಕಾರವು ಜೀರೋ ಕೋವಿಡ್-19 ನೀತಿಯನ್ನು ತೆಗೆದುಹಾಕಿದರೆ 13 ರಿಂದ 21 ಲಕ್ಷ ಜನರ ಜೀವಕ್ಕೆ ಕುತ್ತು ಎದರಾಗಲಿದೆ ಎಂದು ಲಂಡನ್ ಮೂಲದ ಜಾಗತಿಕ ಆರೋಗ್ಯ ಗುಪ್ತಚರ ಮತ್ತು ವಿಶ್ಲೇಷಣಾ ಸಂಸ್ಥೆಯು ಹೇಳಿದೆ.

ಮತ್ತಷ್ಟು ಓದಿ: China Covid Updates: ಮುಂದಿನ 90 ದಿನಗಳಲ್ಲಿ ಚೀನಾದ ಶೇ.60ರಷ್ಟು ಜನತೆ ಕೊರೊನಾ ಸೋಂಕಿಗೆ ಒಳಗಾಗಬಹುದು: ಲಕ್ಷಾಂತರ ಮಂದಿ ಸಾಯಬಹುದು

ಚೀನಾದಲ್ಲಿ ಮತ್ತೊಮ್ಮೆ ಹುಟ್ಟಿಕೊಂಡಿರುವ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಸಾವಿನ ನಗಾರಿ ಬಾರಿಸುವುದಕ್ಕೂ ಹಲವು ಕಾರಣಗಳಿವೆ. ಒಂದು ಕಡೆಯಲ್ಲಿ ಸರ್ಕಾರದ ನಿರ್ಲಕ್ಷ್ಯವು ಎದ್ದು ಕಾಣುತ್ತಿದ್ದರೆ, ಇನ್ನೊಂದು ಮಗ್ಗಲಿನಲ್ಲಿ ಸಾರ್ವಜನಿಕರ ನಿರ್ಲಕ್ಷ್ಯವೂ ಕಾಣಿಸಿಕೊಳ್ಳುತ್ತಿದೆ.

ವೈದ್ಯಕೀಯ ಸಂಶೋಧನೆಯಲ್ಲೂ ಚೀನಾದ ಲಸಿಕೆಯು ಅಷ್ಟಾಗಿ ಪರಿಣಾಮಕಾರಿಯಾಗಿ ಇಲ್ಲ ಎಂಬುದು ಸಾಬೀತಾಗಿದೆ. ಇಡೀ ಜಗತ್ತು ಇದೀಗ ಮತ್ತೊಮ್ಮೆ ಚೀನಾದ ಕಡೆಗೆ ತಿರುಗಿ ನೋಡುವಂತಾಗಿದೆ.

ಚೀನಾ ಸರ್ಕಾರವು ತನ್ನ ಶೂನ್ಯ-COVID ನೀತಿಯನ್ನು ತೆಗೆದುಹಾಕಲು ಹಾಗೂ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ವ್ಯಾಕ್ಸಿನೇಷನ್‌ಗಳನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಅದರ ವಯಸ್ಸಾದ ಜನರಿಗೆ ಲಸಿಕೆ ನೀಡುವುದು ತೀರಾ ಅವಶ್ಯಕತವಾಗಿದೆ.

ಇಲ್ಲಿಯವರಗೆ ಭಾರತದಲ್ಲಿ ಒಮಿಕ್ರಾನ್ ಉಪತಳಿ BF.7ನ (Omicron subvariant BF.7) ಮೂರು ಪ್ರಕರಣಗಳು ಪತ್ತೆಯಾಗಿವೆ. ಎರಡು ಪ್ರಕರಣ ಗುಜರಾತಿನಲ್ಲಿ ಪತ್ತೆಯಾಗಿದ್ದು ಒಂದು ಒಡಿಶಾದಲ್ಲಿ ಪತ್ತೆಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.ಚೀನಾದಲ್ಲಿ ಕೋವಿಡ್ ಪ್ರಕರಣಗಳು (Covid-19) ಉಲ್ಬಣವಾದ ಹೊತ್ತಲ್ಲೇ ದೇಶದಲ್ಲಿ ಹೊಸ ಪ್ರಕರಣ ಪತ್ತೆಯಾಗಿದೆ.

ಗುಜರಾತಿನಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಒಮಿಕ್ರಾನ್ ಉಪತಳಿ BF.7 ಪತ್ತೆಯಾಗಿರುವುದಾಗಿ ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಹೇಳಿತ್ತು. ಇಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ (Mansukh mandaviya) ಪರಿಶೀಲನಾ ಸಭೆ ನಡೆಸಿದ್ದು, ದೇಶದಲ್ಲಿ ಕೋವಿಡ್ ಪ್ರಕರಣದಲ್ಲಿ ಹೆಚ್ಚಳವೇನೂ ಆಗಿಲ್ಲ. ಆದರೆ ಈಗಿರುವ ಮತ್ತು ಮುಂಬರುವ ರೂಪಾಂತರಿಗಳನ್ನು ಪತ್ತೆ ಹಚ್ಚಲು ಕಟ್ಟುನಿಟ್ಟಿನ ನಿಗಾ ಬೇಕು ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ