AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Woman ಪದದ ಅರ್ಥ ವಿಸ್ತರಿಸಿದ ಕೇಂಬ್ರಿಜ್ ಡಿಕ್ಷನರಿ, 2022ರಲ್ಲಿ ನಿಘಂಟು ತಜ್ಞರ ಗಮನ ಸೆಳೆದ 5 ಇಂಗ್ಲಿಷ್ ಪದಗಳಿವು

English Dictionary: 2022ರ ವಿದ್ಯಮಾನಗಳನ್ನು ವ್ಯಾಖ್ಯಾನಿಸುವ ಅತಿಮುಖ್ಯ ಪದಗಳನ್ನು ಇಂಗ್ಲಿಷ್ ನಿಘಂಟು ಪ್ರಕಾಶನ ಸಂಸ್ಥೆಗಳು ಸಾರಿವೆ. ಈ ಪೈಕಿ 4 ಪದಗಳು ಕೊವಿಡ್ ಕಾಲದಲ್ಲಿ ಬದಲಾದ ಮನುಷ್ಯ ವರ್ತನೆಗಳನ್ನು ಸೂಚಿಸುತ್ತವೆ ಎನ್ನುವುದು ಗಮನಾರ್ಹ ಸಂಗತಿ.

Woman ಪದದ ಅರ್ಥ ವಿಸ್ತರಿಸಿದ ಕೇಂಬ್ರಿಜ್ ಡಿಕ್ಷನರಿ, 2022ರಲ್ಲಿ ನಿಘಂಟು ತಜ್ಞರ ಗಮನ ಸೆಳೆದ 5 ಇಂಗ್ಲಿಷ್ ಪದಗಳಿವು
ಪ್ರಮುಖ ಇಂಗ್ಲಿಷ್ ನಿಘಂಟುಗಳು
Ghanashyam D M | ಡಿ.ಎಂ.ಘನಶ್ಯಾಮ
|

Updated on:Dec 22, 2022 | 8:41 AM

Share

ಬೆಂಗಳೂರು: ಸದಾ ಹೊಸ ಪದಗಳು ಹಾಗೂ ಕಾಲಕ್ಕೆ ತಕ್ಕ ಅರ್ಥಗಳನ್ನು ಮೈದುಂಬಿಕೊಳ್ಳುವ ಇಂಗ್ಲಿಷ್ ಭಾಷೆಯು 2022ರಲ್ಲಿ ಲಿಂಗ ಸಮಾನತೆಯ ನಿಟ್ಟಿನಲ್ಲಿ ಮಹತ್ವದ ಪ್ರಯತ್ನಗಳಿಗೆ ತೆರೆದುಕೊಂಡಿದೆ. ಜಾಗತಿಕ ಮಹತ್ವ ಪಡೆದಿರುವ ಕೇಂಬ್ರಿಜ್ ನಿಘಂಟು Woman (ವುಮನ್) ಪದದ ಅರ್ಥವನ್ನು ಮರು ವ್ಯಾಖ್ಯಾನ ಮಾಡಿದ್ದು, ಅರ್ಥ ಸಾಧ್ಯತೆಯನ್ನು ವಿಸ್ತರಿಸಿದೆ. ಈವರೆಗೆ ಪ್ರಚಲಿತದಲ್ಲಿದ್ದ ಅರ್ಥಗಳಿಗೆ ಮತ್ತೊಂದು ವಿವರಣೆಯನ್ನು ಸೇರ್ಪಡೆಗೊಳಿಸಿದೆ. ಇದು ಲಿಂಗಪರಿವರ್ತಿರರಿಗೆ ಘನತೆ ತಂದುಕೊಡುವ ಪ್ರಯತ್ನದ ಭಾಗವಾಗಿರುವುದು ಗಮನ ಸೆಳೆಯುವ ಅಂಶ. ಅದೇ ರೀತಿ permacrisis (ಪರ್ಮಾಕ್ರೈಸಿಸ್ – ಕೊಲಿನ್ ನಿಘಂಟು); goblin mode (ಗೊಬ್ಲಿನ್ ಮೋಡ್ – ಆಕ್ಸ್​ಫರ್ಡ್ ನಿಘಂಟು); gaslighting (ಗ್ಯಾಸ್​ಲೈಟಿಂಗ್ – ಮರಿಯಮ್ ವೆಬ್​ಸ್ಟರ್) ಮತ್ತು homer (ಹೊಮರ್ – ಕೇಂಬ್ರಿಜ್) ಪದಗಳು 2022ರ ವಿದ್ಯಮಾನಗಳನ್ನು ವ್ಯಾಖ್ಯಾನಿಸುವ ಅತಿಮುಖ್ಯ ಪದಗಳಾಗಿದ್ದವು ಎಂದು ಇಂಗ್ಲಿಷ್ ನಿಘಂಟು ಪ್ರಕಾಶನ ಸಂಸ್ಥೆಗಳು ಸಾರಿವೆ. ಈ ಪೈಕಿ 4 ಪದಗಳು ಕೊವಿಡ್ ಕಾಲದಲ್ಲಿ ಬದಲಾದ ಮನುಷ್ಯ ವರ್ತನೆಗಳನ್ನು ಸೂಚಿಸುತ್ತವೆ ಎನ್ನುವುದು ಗಮನಾರ್ಹ ಸಂಗತಿ.

  1. Woman (ವುಮನ್): ಕನ್ನಡದಲ್ಲಿ ಮಹಿಳೆ ಎಂಬ ಸಂವಾದಿ ಪದದೊಂದಿಗೆ ಬಳಕೆಯಾಗುವ ಇಂಗ್ಲಿಷ್​ನ ವುಮನ್ ಪದಕ್ಕೆ ಕೇಂಬ್ರಿಜ್ ಡಿಕ್ಷನರಿ ಹೊಸ ವ್ಯಾಖ್ಯಾನವೊಂದನ್ನು ಸೇರ್ಪಡೆ ಮಾಡಿದೆ. ಅದರಂತೆ, ‘ಮಹಿಳೆ ಎಂದರೆ ಪ್ರೌಢ ಮಾನವ ಸ್ತ್ರೀ. ಜನನ ಕಾಲದಲ್ಲಿ ಯಾವುದೇ ಲಿಂಗವಿದ್ದರೂ, ಪ್ರೌಢಾವಸ್ಥೆಗೆ ತಲುಪಿದ ನಂತರ ತನ್ನನ್ನು ತಾನು ಸ್ತ್ರೀ ಎಂದು ಗುರುತಿಸಿಕೊಳ್ಳಲು ಇಚ್ಛಿಸುವವರು’ ಎಂದು ವಿವರಿಸಲಾಗಿದೆ. (adult female human being, a woman can also be an adult who lives and identifies as female though they may have been said to have a different sex at birth). ಈ ವಿವರಣೆಗೆ ಎರಡು ಉದಾಹರಣೆಗಳನ್ನೂ ಒದಗಿಸಲಾಗಿದೆ. ‘ರಾಷ್ಟ್ರೀಯ ಕಚೇರಿಗೆ ಆಯ್ಕೆಯಾದ ಮೊದಲ ಲಿಂಗಪರಿವರ್ತಿತ ಮಹಿಳೆ ಆಕೆ’ ಎಂಬುದು ಒಂದು ಉದಾಹರಣೆ. ‘ಮೇರಿ ಎಂಬಾಕೆ ಮಹಿಳೆಯಾಗಿದ್ದರು. ಆದರೆ ಜನನ ಕಾಲದಲ್ಲಿ ಗಂಡು ಎಂದು ಹೇಳಲಾಗಿತ್ತು’ ಎಂಬ ಮತ್ತೊಂದು ಪದಪ್ರಯೋಗ ಉದಾಹರಣೆಯನ್ನು ಉಲ್ಲೇಖಿಸಲಾಗಿದೆ.
  2. Permacrisis (ಪರ್ಮಾಕ್ರೈಸಿಸ್): ಸುದೀರ್ಘ ಅವಧಿಗೆ ಅಸ್ತಿತ್ವದಲ್ಲಿರುವ ಅಸ್ಥಿರತೆ ಮತ್ತು ಅಭದ್ರತೆಯನ್ನು ತಿಳಿಸಲು ಪರ್ಮಾಕ್ರೈಸಿಸ್ ಪದ ಬಳಸಲಾಗುತ್ತಿದೆ. ಕೊವಿಡ್ ನಿರ್ಬಂಧಗಳು ತಂದೊಡ್ಡಿದ ಸಂಕಷ್ಟ, ರಷ್ಯಾ-ಉಕ್ರೇನ್ ಸಂಘರ್ಷದ ನಂತರ ಇಡೀ ಜಗತ್ತು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂಥ (no-escape) ಪರಿಸ್ಥಿತಿಗೆ ದೂಡಲ್ಪಟ್ಟಿದೆ ಎಂಬುದನ್ನು ಈ ಪದವು ಸಾರಿಹೇಳುತ್ತದೆ. ಹೀಗಾಗಿಯೇ 2022 ಸಂಕೇತಿಸುವ ಮಹತ್ವದ ಪದ ಇದು ಎಂದು ಕೊಲಿನ್ಸ್ ಡಿಕ್ಷನರಿ ಗುರುತಿಸಿದೆ.
  3. Gaslighting (ಗ್ಯಾಸ್​ಲೈಟಿಂಗ್): ಸುಳ್ಳುಸುದ್ದಿ, ಅತಿಮೋಸ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಯಾರನ್ನಾದರೂ ದಾರಿತಪ್ಪಿಸುವುದನ್ನು ಗ್ಯಾಸ್​ಲೈಟಿಂಗ್ ಎನ್ನುತ್ತಾರೆ. ‘ಇತ್ತೀಚಿನ ವರ್ಷಗಳಲ್ಲಿ ಸಮೂಹ ಮಾಧ್ಯಮಗಳು ಮತ್ತು ತಂತ್ರಜ್ಞಾನವನ್ನು ಜನರನ್ನು ದಾರಿತಪ್ಪಿಸಲು ಬಳಸಲಾಗುತ್ತಿದೆ. ತಪ್ಪುಗ್ರಹಿಕೆಯನ್ನು ತಿಳಿಸಿಹೇಳಲು ಗ್ಯಾಸ್​ಲೈಟಿಂಗ್​ ಪದವನ್ನು ಬಳಸಲಾಗುತ್ತಿದೆ. ಹೀಗಾಗಿಯೇ ಇದು ವರ್ಷದ ಪದವಾಗಿ ಪರಿಗಣಿತವಾಗಿದೆ’ ಎಂದು ಮರಿಯಮ್ ವೆಬ್​ಸ್ಟರ್ ಡಿಕ್ಷನರಿ ವಿವರಿಸಿದೆ.
  4. Goblin Mode (ಗೊಬ್ಲಿನ್ ಮೋಡ್): ಅತ್ಯಾಸೆ, ಸೋಮಾರಿತನ, ತಾನೇ ಸರ್ವಸ್ವ ಎನ್ನುವ ಧಾಟಿಯ ವರ್ತನೆಯನ್ನು ಬಿಂಬಿಸುವ ಪದ. ಸಾಮಾಜಿಕ ಕಟ್ಟಲೆಗಳನ್ನು ಅಥವಾ ನಿರೀಕ್ಷೆಗಳನ್ನು ತಿರಸ್ಕರಿಸುವ ಮನಃಸ್ಥಿತಿಯನ್ನು ಇದು ಬಿಂಬಿಸುತ್ತದೆ. ಕೊವಿಡ್​ನಿಂದಾಗಿ ಮನುಷ್ಯರು ಏಕಾಂಗಿಯಾಗಿದ್ದರಿಂದ ಇಂಥ ಮನೋಭಾವ ಬೆಳೆಯಿತು. ನಮ್ಮ ಸ್ವಂತ ವ್ಯಕ್ತಿತ್ವಗಳನ್ನು ಇತರರಿಂದ ಬೇಕಾದಂತೆ ಮರೆಮಾಚುವ ಹುನ್ನಾರವಾಗಿಯೂ ಈ ಪದವನ್ನು ಬಳಸಲಾಗುತ್ತದೆ ಎಂದು ಆಕ್ಸ್​ಫರ್ಡ್​ ಡಿಕ್ಷನರಿ ಹೇಳಿದೆ.
  5. Homer (ಹೋಮರ್): ಕುಶಲ ಕೆಲಸಗಾರನೊಬ್ಬರ ಗ್ರಾಹಕರ ಮನೆಯಲ್ಲಿ ನಿರ್ವಹಿಸುವ ಕೆಲಸ. ಉದಾಹರಣೆಗೆ ಕ್ಷೌರಿಕನೊಬ್ಬ ಗ್ರಾಹಕರ ಮನೆಗೆ ತೆರಳಿ ಹೇರ್​ಕಟ್, ಶೇವಿಂಗ್ ಮಾಡುವುದು. ಕೆಲವೊಮ್ಮೆ ತಾವು ಕೆಲಸ ಮಾಡುವ ಸಂಸ್ಥೆಯ ಮಾಲೀಕರಿಗೆ ತಿಳಿಯದೇ ಈ ರೀತಿ ಗ್ರಾಹಕರ ಮನೆಗೆ ತೆರಳಿ ಸೇವೆ ಒದಗಿಸುವ ಪ್ರವೃತ್ತಿಯನ್ನು ಕೇಂಬ್ರಿಜ್ ಡಿಕ್ಷನರಿ ಹೋಮರ್ ಎಂದು ವ್ಯಾಖ್ಯಾನಿಸಿದೆ. ಕೊವಿಡ್ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಅನಿವಾರ್ಯತೆಗಳು ಹೋಮರ್​ಗೆ ಈ ಅರ್ಥವನ್ನು ನೀಡಿದವು. ಅಲ್ಲಿಯವರೆಗೆ ಹೋಮರ್​ ಎನ್ನುವ ಪದವು ಗ್ರೀಕ್​ ಮಹಾಕವಿಯ ಹೆಸರಾಗಿ ಮತ್ತು ಬೇಸ್​ಬಾಲ್​ನ ಸ್ಕೋರ್ ಆಗಿ ಮಾತ್ರವೇ ಪ್ರಚಲಿತದಲ್ಲಿತ್ತು.

ಇದನ್ನೂ ಓದಿ: Ayushmati Clinic: ಮಹಿಳೆಯರಿಗಾಗಿ ಪ್ರತ್ಯೇಕ ‘ಆಯುಷ್ಮತಿ ಕ್ಲಿನಿಕ್‌ : ಆರೋಗ್ಯ ಸಚಿವ ಸುಧಾಕರ್‌ ಪ್ರಕಟ

ಮತ್ತಷ್ಟು ವಿಶೇಷ ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:32 am, Thu, 22 December 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ