ವಾಗ್ನರ್ ಗ್ರೂಪ್ ಜತೆ ರಷ್ಯಾದ ಸೇನೆ ಜಗಳ; ವ್ಲಾಡಿಮಿರ್ ಪುಟಿನ್​​ಗೆ ಮತ್ತೊಂದು ತಲೆನೋವು

| Updated By: ರಶ್ಮಿ ಕಲ್ಲಕಟ್ಟ

Updated on: Jun 12, 2023 | 7:15 PM

ಶೋಯಿಗು ಅವರೊಂದಿಗೆ ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ ಎಂದ ವ್ಯಾಗ್ನರ್ ಗ್ರೂಪ್ ಅರೆ ಸೈನಿಕ ಸಂಘಟನೆಯು ರಷ್ಯಾದ ಮಿಲಿಟರಿಯೊಂದಿಗೆ ತನ್ನ ಕ್ರಮವನ್ನು ಸಂಘಟಿಸುತ್ತದೆ ಮತ್ತು ಅತ್ಯಂತ ಪರಿಣಾಮಕಾರಿ ರಚನೆಯೊಂದಿಗೆ ಆಳವಾದ ಅನುಭವವನ್ನು ಹೊಂದಿದೆ ಎಂದಿದ್ದಾರೆ.

ವಾಗ್ನರ್ ಗ್ರೂಪ್ ಜತೆ ರಷ್ಯಾದ ಸೇನೆ ಜಗಳ; ವ್ಲಾಡಿಮಿರ್ ಪುಟಿನ್​​ಗೆ ಮತ್ತೊಂದು ತಲೆನೋವು
ಯೆವ್ಗೆನಿ ಪ್ರಿಗೊಝಿನ್
Follow us on

ಉಕ್ರೇನ್‌ನಲ್ಲಿ (Ukraine) ದೇಶದ ಮಿಲಿಟರಿ ಮತ್ತು ಅರೆ ಸೈನಿಕ ಸಂಘಟನೆಗಳ ನಡುವಿನ ಜಗಳ ಹೆಚ್ಚಾಗುತ್ತಿದ್ದಂತೆ ವ್ಯಾಗ್ನರ್ ಗ್ರೂಪ್‌ನ (Wagner Group )ಮುಖ್ಯಸ್ಥರು ರಷ್ಯಾದ ರಕ್ಷಣಾ ಸಚಿವಾಲಯಕ್ಕೆ ತಿರುಗೇಟು ನೀಡಿದ್ದಾರೆ.  ಸ್ವಯಂಸೇವಕ ಸಂಘಟನೆಗಳು ಜುಲೈ 1 ರೊಳಗೆ ರಷ್ಯಾ ಸರ್ಕಾರದೊಂದಿಗೆ ಒಪ್ಪಂದಗಳಿಗೆ ಸಹಿ ಮಾಡಬೇಕಾಗುತ್ತದೆ ಎಂದು ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು (Sergei Shoigu) ಹೇಳಿದ್ದಾರೆ. ರಷ್ಯಾದ ಸಶಸ್ತ್ರ ಪಡೆಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಈ ಕ್ರಮವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪೂರ್ವ ಉಕ್ರೇನ್‌ನಲ್ಲಿ ವಿಶೇಷವಾಗಿ ಬಖ್‌ಮುತ್‌ನಲ್ಲಿ ರಷ್ಯಾದ ಕಾರ್ಯಾಚರಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ವ್ಯಾಗ್ನರ್ ಗ್ರೂಪ್‌ನಂತಹ ಅರೆಸೈನಿಕರನ್ನು ಈ ತೀರ್ಪು ಗುರಿಯಾಗಿಸುತ್ತದೆ. ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಈ ಹಿಂದೆ ಪುಟಿನ್ ಅವರ ಶೆಫ್ ಎಂಬ ಅಡ್ಡ ಹೆಸರು ಹೊಂದಿದ್ದು ರಷ್ಯಾದ ರಕ್ಷಣಾ ಸಚಿವಾಲಯ ಮತ್ತು ಮಾಸ್ಕೋದ ಮಿಲಿಟರಿ ಕಮಾಂಡರ್‌ಗಳೊಂದಿಗೆ ದೀರ್ಘಕಾಲದ ಜಗಗಳದಲ್ಲಿ ತೊಡಗಿದ್ದರು. ರಷ್ಯಾದ ವಿಮರ್ಶಕರಾದ ಯೆವ್ಗೆನಿ ಪ್ರಿಗೋಜಿನ್ ಆ ಆದೇಶಗಳು ಮತ್ತು ಶೋಯಿಗು ರೂಪಿಸುವ ತೀರ್ಪುಗಳು ರಕ್ಷಣಾ ಸಚಿವಾಲಯದ ಉದ್ಯೋಗಿಗಳಿಗೆ ಮತ್ತು ಮಿಲಿಟರಿ ಸಿಬ್ಬಂದಿಗೆ ಅನ್ವಯಿಸುತ್ತವೆ ಎಂದಿದ್ದಾರೆ.

ಶೋಯಿಗು ಅವರೊಂದಿಗೆ ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ ಎಂದ ವ್ಯಾಗ್ನರ್ ಗ್ರೂಪ್ ಅರೆ ಸೈನಿಕ ಸಂಘಟನೆಯು ರಷ್ಯಾದ ಮಿಲಿಟರಿಯೊಂದಿಗೆ ತನ್ನ ಕ್ರಮವನ್ನು ಸಂಘಟಿಸುತ್ತದೆ ಮತ್ತು ಅತ್ಯಂತ ಪರಿಣಾಮಕಾರಿ ರಚನೆಯೊಂದಿಗೆ ಆಳವಾದ ಅನುಭವವನ್ನು ಹೊಂದಿದೆ ಎಂದಿದ್ದಾರೆ.

ಶೋಯಿಗು ಮಿಲಿಟರಿ ರಚನೆಗಳನ್ನು ನಿರ್ವಹಿಸಲು ಸಾಧ್ಯವಿಲ್ಲ ಎಂದು ಯೆವ್ಗೆನಿ ಪ್ರಿಗೋಜಿನ್ ಹೇಳಿದ್ದಾರೆ.

ಇದನ್ನೂ ಓದಿ: Credit Suisse: ದಿವಾಳಿಯಾದ ಕ್ರೆಡಿಟ್ ಸ್ವೀಸ್ ಬ್ಯಾಂಕ್ ಯುಬಿಎಸ್ ತೆಕ್ಕೆಗೆ; ಶ್ರೀಲಂಕಾ, ರಷ್ಯಾ ಸೇರಿದಂತೆ ಹಲವು ದೇಶಗಳಿಂದ ಹೊಸ ಗ್ರಾಹಕರು ಬೇಡ ಎಂದ ಯುಬಿಎಸ್

ಇದಕ್ಕೂ ಮೊದಲು, ಅವರು ಶೋಯಿಗು ಮತ್ತು ರಷ್ಯಾದ ಉನ್ನತ ಕಮಾಂಡರ್ ಜನರಲ್ ವ್ಯಾಲೆರಿ ಗೆರಾಸಿಮೊವ್ ಅವರು ಗುಂಪಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ನಿರಾಕರಿಸುವ ದೇಶದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ