ಭಾರತದೊಂದಿಗೆ ಉತ್ತಮ ಬಾಂಧವ್ಯ ಬೇಕು, ಆದರೆ ಕಾಶ್ಮೀರ ಸಮಸ್ಯೆ ಪರಿಹರಿಸದೆ ಶಾಂತಿ ಸಾಧ್ಯವಿಲ್ಲ: ಶಹಬಾಜ್ ಷರೀಫ್

Shehbaz Sharif ಈ ಹಿಂದೆ ಪಾಕಿಸ್ತಾನದಲ್ಲಿ ಅಧಿಕಾರದಲ್ಲಿದ್ದ ಇಮ್ರಾನ್ ಖಾನ್ ಅವರ "ಸರ್ಕಾರವನ್ನು ಹೊರಹಾಕಲು ವಿದೇಶಿ ಪಿತೂರಿ" ನಡೆದಿದೆ ಎಂಬ ಖಾನ್ ಅವರ ಆರೋಪವನ್ನು "ನಾಟಕ" ಎಂದು ಕರೆದ ಶಹಬಾಜ್, ಇಮ್ರಾನ್ ಖಾನ್ ಆ ಆರೋಪಗಳನ್ನು ಸಾಬೀತುಪಡಿಸಿದರೆ ರಾಜೀನಾಮೆ ನೀಡುವುದಾಗಿ ಪ್ರತಿಜ್ಞೆ ಮಾಡಿದರು.

ಭಾರತದೊಂದಿಗೆ ಉತ್ತಮ ಬಾಂಧವ್ಯ ಬೇಕು, ಆದರೆ ಕಾಶ್ಮೀರ ಸಮಸ್ಯೆ ಪರಿಹರಿಸದೆ ಶಾಂತಿ ಸಾಧ್ಯವಿಲ್ಲ: ಶಹಬಾಜ್ ಷರೀಫ್
ಶಹಬಾಜ್ ಶರೀಫ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Apr 11, 2022 | 11:32 PM

ಇಸ್ಲಾಮಾಬಾದ್: ಪಾಕಿಸ್ತಾನದ 23 ನೇ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ನಂತರ ಪಾಕಿಸ್ತಾನದ (Pakistan) ಸಂಸತ್ತನ್ನುದ್ದೇಶಿಸಿ ಸೋಮವಾರ ಮಾಡಿದ ಭಾಷಣದಲ್ಲಿ ಶಹಬಾಜ್ ಷರೀಫ್ (Shehbaz Sharif) ಅವರು ಭಾರತದೊಂದಿಗೆ “ಉತ್ತಮ ಸಂಬಂಧ” ಭಾರತವನ್ನು ಬಯಸುತ್ತಾರೆ ಎಂದು ಹೇಳಿದ್ದಾರೆ. ಅದೇ ವೇಳೆ ಕಾಶ್ಮೀರ (Kashmir) ಸಮಸ್ಯೆಯನ್ನೂ ಅವರು  ಪ್ರಸ್ತಾಪಿಸಿದರು. “ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ ಆದರೆ ಕಾಶ್ಮೀರ ಸಮಸ್ಯೆಗೆ ಪರಿಹಾರವಿಲ್ಲದೆ ಬಾಳಿಕೆ ಬರುವ ಶಾಂತಿ ಸಾಧ್ಯವಿಲ್ಲ” ಎಂದು ಶೆಹಬಾಜ್ ಹೇಳಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.  ಈ ಹಿಂದೆ ಪಾಕಿಸ್ತಾನದಲ್ಲಿ ಅಧಿಕಾರದಲ್ಲಿದ್ದ ಇಮ್ರಾನ್ ಖಾನ್ ಅವರ “ಸರ್ಕಾರವನ್ನು ಹೊರಹಾಕಲು ವಿದೇಶಿ ಪಿತೂರಿ” ನಡೆದಿದೆ ಎಂಬ ಖಾನ್ ಅವರ ಆರೋಪವನ್ನು “ನಾಟಕ” ಎಂದು ಕರೆದ ಶಹಬಾಜ್, ಇಮ್ರಾನ್ ಖಾನ್ ಆ ಆರೋಪಗಳನ್ನು ಸಾಬೀತುಪಡಿಸಿದರೆ ರಾಜೀನಾಮೆ ನೀಡುವುದಾಗಿ ಪ್ರತಿಜ್ಞೆ ಮಾಡಿದರು.  ಪಾಕಿಸ್ತಾನದಲ್ಲಿ ತನ್ನ ಸರ್ಕಾರದ ಪತನದ ಹಿಂದೆ ಖಾನ್ ಆರೋಪಿಸಿದ “ವಿದೇಶಿ ಪಿತೂರಿ” ಗೆ ಸಂಬಂಧಿಸಿದ ಪತ್ರವನ್ನು ಉಲ್ಲೇಖಿಸಿದ ಷರೀಫ್, “ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿಯು ವಿದೇಶಿ ಪಿತೂರಿ ಎಂದು ಕರೆಯಲ್ಪಡುವ ವಿವಾದಾತ್ಮಕ ಪತ್ರದ ಬಗ್ಗೆ ವಿಚಾರಣೆ ಮಾಡುತ್ತದೆ. ಇದು ಷಡ್ಯಂತ್ರ ಸಾಬೀತಾದರೆ ರಾಜೀನಾಮೆ ನೀಡಿ ಮನೆಗೆ ಹೋಗುತ್ತೇನೆ” ಎಂದು ಹೇಳಿದ್ದಾರೆ.  ಹಿಂದಿನ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸರ್ಕಾರವನ್ನು ಉರುಳಿಸುವ ಪಿತೂರಿಯಲ್ಲಿ ಅಮೆರಿಕ ಭಾಗಿಯಾಗಿದೆ ಎಂದು ಖಾನ್ ಹೇಳಿದ್ದರು.  70ರ ಹರೆಯದ ಪಿಎಂಎಲ್-ಎನ್ ನಾಯಕ ಷರೀಫ್ ಅವರನ್ನು ಪಾಕಿಸ್ತಾನದ ಹೊಸ ಪ್ರಧಾನಿಯಾಗಿ ದೇಶದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಶಾಸಕರು ಅವಿರೋಧವಾಗಿ ಆಯ್ಕೆ ಮಾಡಿದರು. ಷರೀಫ್ 174 ಮತಗಳನ್ನು ಪಡೆದರು. ಅಂದರೆ ಚುನಾವಣೆಯಲ್ಲಿ ಗೆಲ್ಲಲು 172 ಸರಳ ಬಹುಮತಕ್ಕಿಂತ ಎರಡು ಹೆಚ್ಚು.

ದೇಶವು ಐತಿಹಾಸಿಕ ಬಜೆಟ್, ವ್ಯಾಪಾರ ಕೊರತೆಯತ್ತ ಸಾಗುತ್ತಿದೆ ಎಂದ ನೂತನ ಪ್ರಧಾನಿ ಶಹಬಾಜ್ ಷರೀಫ್ ಪಾಕಿಸ್ತಾನವು ದೇಶದ ಇತಿಹಾಸದಲ್ಲಿ ಅತಿದೊಡ್ಡ ಬಜೆಟ್ ಕೊರತೆ ಮತ್ತು ವ್ಯಾಪಾರ ಕೊರತೆಯತ್ತ ಸಾಗುತ್ತಿದೆ ಎಂದು ಶಹಬಾಜ್ ಹೇಳಿಕೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ನಿರ್ಗಮಿಸುತ್ತಿರುವ ಇಮ್ರಾನ್ ಖಾನ್ ಸರ್ಕಾರವು ಆರ್ಥಿಕತೆಯನ್ನು ತಪ್ಪಾಗಿ ನಿರ್ವಹಿಸಿದೆ ಎಂದು ಅವರು ಆರೋಪಿಸಿದರು. ನಮ್ಮ ಹೊಸ ಸರ್ಕಾರವು ಅದನ್ನು ಮರಳಿ ಟ್ರ್ಯಾಕ್ಗೆ ತರಲು ದೊಡ್ಡ ಸವಾಲನ್ನು ಎದುರಿಸುತ್ತಿದೆ ಎಂದು ಶಹಬಾಜ್ ಹೇಳಿದ್ದಾರೆ.  ಷರೀಫ್ ಅವರು ಯುರೋಪಿಯನ್ ಯೂನಿಯನ್ (ಇಯು) ನೊಂದಿಗೆ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮುಂದಿನ ವರ್ಷ ಸಾಮಾನ್ಯೀಕೃತ ಆದ್ಯತೆಗಳ ಯೋಜನೆ (GSP) ಜೊತೆಗೆ ಸ್ಥಾನಮಾನವನ್ನು ವಿಸ್ತರಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಇದನ್ನೂ ಓದಿ:Shehbaz Sharif: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶೆಹಬಾಜ್ ಷರೀಫ್ ಅವಿರೋಧ ಆಯ್ಕೆ

Published On - 11:29 pm, Mon, 11 April 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು