ಒಮಿಕ್ರಾನ್ ಕೊವಿಡ್​ 19 ಸೋಂಕಿನ​ ಕೊನೇ ರೂಪಾಂತರವಲ್ಲ; ಮತ್ತೆಮತ್ತೆ ಎಚ್ಚರಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ

TV9kannada Web Team

TV9kannada Web Team | Edited By: Lakshmi Hegde

Updated on: Feb 12, 2022 | 9:56 AM

ಕೊವಿಡ್ 19 ವೈರಸ್​ ಶುರುವಾದ ಮೇಲೆ ಅದರಿಂದ ಹಲವು ರೂಪಾಂತರಗಳು ಉಂಟಾಗಿದ್ದರೂ, ಜಗತ್ತಿಗೆ ಹೆಚ್ಚು ಬಾಧಿಸಿದವು ಡೆಲ್ಟಾ ಮತ್ತು ಒಮಿಕ್ರಾನ್​. ಅದರಲ್ಲಿ ಡೆಲ್ಟಾ ಅತ್ಯಂತ ಮಾರಣಾಂತಿಕವಾಗಿ ಪರಿಣಮಿಸಿತ್ತು. ಅದಕ್ಕೆ ಹೋಲಿಸದರೆ ಒಮಿಕ್ರಾನ್​ ಗಂಭೀರತೆ ತುಂಬ ಕಡಿಮೆಯಿತ್ತು.

ಒಮಿಕ್ರಾನ್ ಕೊವಿಡ್​ 19 ಸೋಂಕಿನ​ ಕೊನೇ ರೂಪಾಂತರವಲ್ಲ; ಮತ್ತೆಮತ್ತೆ ಎಚ್ಚರಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ
ಸಾಂಕೇತಿಕ ಚಿತ್ರ

ದೆಹಲಿ:  ಜಗತ್ತಿನಲ್ಲಿ ಸದ್ಯ ಕೊರೊನಾ ವೈರಸ್​ ಅಂತ್ಯವಾಗುವ ಲಕ್ಷಣಗಳಿಲ್ಲ. ಒಮಿಕ್ರಾನ್​ (Omicron) ಎಂಬುದು ಕೊರೊನಾದ ಎಂಡಮಿಕ್​ ಅಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್​ ಹೇಳಿದ್ದಾರೆ. ಈಗಾಗಲೇ ವೈರಸ್​ ವಿಕಸನಗೊಂಡಿದ್ದನ್ನು, ರೂಪಾಂತರಗೊಂಡಿದ್ದನ್ನು ನಾವು ನೋಡಿದ್ದೇವೆ. ಮುಂದೆಯೂ ಕೂಡ ಇನ್ನಷ್ಟು ರೂಪಾಂತರಗಳು ಹರಡಬಹುದು. ಜಗತ್ತೀಗ ಕೊರೊನಾ ವೈರಸ್​ನ ಅಂತ್ಯದ ಘಟ್ಟದಲ್ಲಿದೆ ಎಂದು ಭಾವಿಸುವಂತಿಲ್ಲ ಎಂದು ಸೌಮ್ಯಾ ಸ್ವಾಮಿನಾಥನ್​ ತಿಳಿಸಿದ್ದಾರೆ. ಡಬ್ಲ್ಯೂಎಚ್​​ಒ ಪ್ರಧಾನ ನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರೊಂದಿಗೆ ಲಸಿಕೆ ತಯಾರಿಕಾ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲನೆ ಮಾಡಿದ ಬಳಿಕ ಮಾತನಾಡಿದ ಅವರು, ಕೊರೊನಾ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. 

ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯ ಹಲವು ತಜ್ಞರು ಕೊರೊನಾ ಸಾಂಕ್ರಾಮಿಕದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.  ಒಮಿಕ್ರಾನ್​  ಕೊನೇ ರೂಪಾಂತರವಲ್ಲ ಎಂದು ಹೇಳಿದ್ದಾರೆ. ಕೊವಿಡ್​ 19ನ ರೂಪಾಂತರಿಗಳು ವೈಲ್ಡ್​ ಕಾರ್ಡ್​ಗಳಂತೆ. ಸದ್ಯ ಒಮಿಕ್ರಾನ್​​ನ ನಾಲ್ಕು ವಿಭಿನ್ನ ಆವೃತ್ತಿಗಳನ್ನು ಟ್ರ್ಯಾಕ್​ ಮಾಡಲಾಗುತ್ತಿದೆ ಎಂದು ಡಬ್ಲ್ಯೂಎಚ್​ಒ ಕೊವಿಡ್​ 19 ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮಾರಿಯಾ ವ್ಯಾನ್​ ಕೆರ್ಕೋವ್​ ಹೇಳಿದ್ದರು.  ಒಮಿಕ್ರಾನ್​ ಎಂಬುದು ಕೊರೊನಾದ ಇತ್ತೀಚಿನ ರೂಪಾಂತರ. ಆದರೆ ಇದು ಕೊನೇ ರೂಪಾಂತರವಂತೂ ಅಲ್ಲ. ಮುಂದಿನ ರೂಪಾಂತರ ಬರಲು ಸ್ವಲ್ಪ ತಡವಾಗಬಹುದು. ಆದರೆ ಅತ್ಯಂತ ವೇಗವಾಗಿ ಹರಡಬಹುದು, ಹಾಗೇ, ಮಾರಣಾಂತಿಕವಾಗಿಯೂ ಇರಬಹುದು ಎಂದು ಅವರು ಹೇಳಿದ್ದರು. ಅಷ್ಟೇ ಅಲ್ಲ, ಯಾವುದೇ ರೂಪಾಂತರಿಗಳೂ ಬಂದರೂ ಲಸಿಕೆಯೊಂದೇ ಪರಿಹಾರ. ಜಾಗತಿಕವಾಗಿ ಕೊರೊನಾ ಲಸಿಕೆ ನೀಡಿಕೆ  ವೇಗವನ್ನು ಹೆಚ್ಚಿಸಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿ

ಕೊವಿಡ್ 19 ವೈರಸ್​ ಶುರುವಾದ ಮೇಲೆ ಅದರಿಂದ ಹಲವು ರೂಪಾಂತರಗಳು ಉಂಟಾಗಿದ್ದರೂ, ಜಗತ್ತಿಗೆ ಹೆಚ್ಚು ಬಾಧಿಸಿದವು ಡೆಲ್ಟಾ ಮತ್ತು ಒಮಿಕ್ರಾನ್​. ಅದರಲ್ಲಿ ಡೆಲ್ಟಾ ಅತ್ಯಂತ ಮಾರಣಾಂತಿಕವಾಗಿ ಪರಿಣಮಿಸಿತ್ತು. ಅದಕ್ಕೆ ಹೋಲಿಸದರೆ ಒಮಿಕ್ರಾನ್​ ಗಂಭೀರತೆ ತುಂಬ ಕಡಿಮೆಯಿತ್ತು. ಡೆಲ್ಟಾ ಮೊಟ್ಟ ಮೊದಲು ಭಾರತದಲ್ಲಿ ಪತ್ತೆಯಾಗಿದ್ದು 2020ರ ಅಕ್ಟೋಬರ್​​ನಲ್ಲಿ. ಅದರ ಹಿಂದಿನ ಆಲ್ಪಾ ರೂಪಾಂತರಿಗಿಂತಲೂ ಶೇ.50ರಷ್ಟು ವೇಗವಾಗಿ ಹರಡಿತ್ತು. ಹಾಗೇ ಮೂಲ ವೈರಸ್ ಆದ ಕೊರೊನಾ ವೈರಸ್​ಗಿಂತಲೂ ಶೇ.50ರಷ್ಟು ಅಧಿಕ ಸಾಂಕ್ರಾಮಿಕವಾಗಿತ್ತು. ಈ ಡೆಲ್ಟಾ ಭಾರತದಲ್ಲಿ ಎರಡನೇ ಅಲೆಗೆ ಕಾರಣವಾಗಿತ್ತು. ಅದು ಬಿಟ್ಟರೆ ಯುಕೆ, ಇಸ್ರೇಲ್​, ರಷ್ಯಾ, ಆಸ್ಟ್ರೇಲಿಯಾ ಸೇರಿ ಜಗತ್ತಿನ ಇತರ ದೇಶಗಳಿಗೂ ಅತ್ಯಂತ ಹೆಚ್ಚಾಗಿ ಬಾಧಿಸಿತ್ತು.

ಡೆಲ್ಟಾ ನಂತರ ಹುಟ್ಟಿದ್ದು ಒಮಿಕ್ರಾನ್​. 2021ರ ನವೆಂಬರ್​ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್ ಅತ್ಯಂತ ಕಡಿಮೆ ಸಮಯದಲ್ಲಿ ಜಗತ್ತನ್ನು ಆವರಿಸಿದೆ. ಡೆಲ್ಟಾಕ್ಕಿಂತ ನಾಲ್ಕು ಪಟ್ಟು ಹೆಚ್ಚು ವೇಗವಾಗಿ ಹರಡಿದ ಒಮಿಕ್ರಾನ್ ಆರೋಗ್ಯದಲ್ಲಿ ಗಂಭೀರ ಸಮಸ್ಯೆಯನ್ನು ಉಂಟು ಮಾಡಿದ್ದು ತುಂಬ ಕಡಿಮೆ. ಹಾಗೇ, ಇದು ಡೆಲ್ಟಾಕ್ಕಿಂತಲೂ 5 ಪಟ್ಟು ಹೆಚ್ಚು ಮರುಸೋಂಕಿನ ಅಪಾಯ ಹೊಂದಿದೆ. ಸದ್ಯ ಭಾರತದಲ್ಲಿ ನಡೆಯುತ್ತಿರುವ ಮೂರನೇ ಅಲೆಗೆ ಕಾರಣವಾಗಿದ್ದು ಇದೇ ಒಮಿಕ್ರಾನ್ ಸೋಂಕಾಗಿದೆ.  ಒಮಿಕ್ರಾನ್ ಶುರುವಾದಾಗ, ಇದು ಕೊರೊನಾದ ಕೊನೇ ರೂಪಾಂತರ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಅದನ್ನೀಗ ಆರೋಗ್ಯ ತಜ್ಞರು ಅಲ್ಲಗಳೆದಿದ್ದಾರೆ.

ಇದನ್ನೂ ಓದಿ: Hijab Row: ಹಿಜಾಬ್ ಪ್ರಕರಣದ ಮತ್ತಷ್ಟು ಒಳಸುಳಿಗಳು ಲಭ್ಯ; ಇಲ್ಲಿದೆ ಪೂರ್ಣ ಮಾಹಿತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada