ಅಮೆರಿಕ: 5 ಮಿಲಿಯನ್ ಡಾಲರ್ ಮೌಲ್ಯದ ಬಂಗಲೆಯಲ್ಲಿ ಭಾರತೀಯ ಮೂಲದ ಕುಟುಂಬದ ಮೃತದೇಹ ಪತ್ತೆ

|

Updated on: Dec 30, 2023 | 2:22 PM

ಟೀನಾ ಮತ್ತು ಅವರ ಪತಿ ರಾಕೇಶ್ ಕಮಲ್ ಈ ಹಿಂದೆ ಎಡುನೋವಾ ಎಂಬ ಈಗ ಕಾರ್ಯನಿರ್ವಹಿಸದ ಶಿಕ್ಷಣ ವ್ಯವಸ್ಥೆಗಳ ಕಂಪನಿಯನ್ನು ನಡೆಸುತ್ತಿದ್ದರು. ಈ ಘಟನೆಯನ್ನು "ಕೌಟುಂಬಿಕ ಹಿಂಸಾಚಾರದ ಪರಿಸ್ಥಿತಿ" ಎಂದು ವಿವರಿಸಿದ  ಡಿಸ್ಟ್ರಿಕ್ಟ್ ಅಟಾರ್ನಿ, ಗಂಡನ ಶವದ ಬಳಿ ಬಂದೂಕು ಕಂಡುಬಂದಿದೆ ಎಂದು ಹೇಳಿದ್ದಾರೆ.

ಅಮೆರಿಕ: 5 ಮಿಲಿಯನ್ ಡಾಲರ್ ಮೌಲ್ಯದ ಬಂಗಲೆಯಲ್ಲಿ ಭಾರತೀಯ ಮೂಲದ ಕುಟುಂಬದ ಮೃತದೇಹ ಪತ್ತೆ
ಸಾವಿಗೀಡಾದ ಕಮಲ್ ಕುಟುಂಬ
Follow us on

ನ್ಯೂಯಾರ್ಕ್ ಡಿಸೆಂಬರ್ 30: ಭಾರತೀಯ ಮೂಲದ ಶ್ರೀಮಂತ ದಂಪತಿ ಮತ್ತು ಅವರ ಹದಿಹರೆಯದ ಮಗಳು ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿರುವ (Massachusetts) ಅವರ 5 ಮಿಲಿಯನ್ ಡಾಲರ್ ಮೌಲ್ಯದ ಬಂಗಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ರಾಕೇಶ್ ಕಮಲ್(57), ಅವರ ಪತ್ನಿ ಟೀನಾ(54) ಮತ್ತು ಅವರ 18 ವರ್ಷದ ಮಗಳು ಅರಿಯಾನಾ ಅವರ ಶವಗಳು ಅವರ ಡೋವರ್ ಮ್ಯಾನ್ಷನ್‌ನಲ್ಲಿ(Dover mansion )ಗುರುವಾರ ರಾತ್ರಿ 7:30 ರ ಸುಮಾರಿಗೆ ಪತ್ತೆಯಾಗಿವೆ ಎಂದು ನಾರ್ಫೋಕ್ ಡಿಸ್ಟ್ರಿಕ್ಟ್ ಅಟಾರ್ನಿ (DA) ಮೈಕೆಲ್ ಮೊರಿಸ್ಸೆ ಹೇಳಿದ್ದಾರೆ. ಡೋವರ್ ಮ್ಯಾಸಚೂಸೆಟ್ಸ್‌ನ ರಾಜಧಾನಿ ಬೋಸ್ಟನ್ ಡೌನ್‌ಟೌನ್‌ನಿಂದ ನೈಋತ್ಯಕ್ಕೆ 32 ಕಿಲೋಮೀಟರ್ ದೂರದಲ್ಲಿದೆ.

ಟೀನಾ ಮತ್ತು ಅವರ ಪತಿ ಈ ಹಿಂದೆ ಎಡುನೋವಾ ಎಂಬ ಈಗ ಕಾರ್ಯನಿರ್ವಹಿಸದ ಶಿಕ್ಷಣ ವ್ಯವಸ್ಥೆಗಳ ಕಂಪನಿಯನ್ನು ನಡೆಸುತ್ತಿದ್ದರು. ಈ ಘಟನೆಯನ್ನು “ಕೌಟುಂಬಿಕ ಹಿಂಸಾಚಾರದ ಪರಿಸ್ಥಿತಿ” ಎಂದು ವಿವರಿಸಿದ  ಡಿಸ್ಟ್ರಿಕ್ಟ್ ಅಟಾರ್ನಿ, ಗಂಡನ ಶವದ ಬಳಿ ಬಂದೂಕು ಕಂಡುಬಂದಿದೆ ಎಂದು ಹೇಳಿದರು. ಎಲ್ಲಾ ಮೂರು ಕುಟುಂಬ ಸದಸ್ಯರನ್ನು ಗುಂಡಿಕ್ಕಿ ಕೊಲ್ಲಲಾಗಿದೆಯೇ ಎಂದು ಹೇಳಲು ಅವರು ನಿರಾಕರಿಸಿದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಘಟನೆಯನ್ನು ಕೊಲೆ-ಆತ್ಮಹತ್ಯೆ ಎಂದು ಉಲ್ಲೇಖಿಸಬೇಕೆ ಎಂದು ನಿರ್ಧರಿಸುವ ಮೊದಲು ವೈದ್ಯಕೀಯ ಪರೀಕ್ಷಕರ ತೀರ್ಪಿಗಾಗಿ ತಾನು ಕಾಯುತ್ತಿದ್ದೇನೆ ಎಂದು ಮೊರಿಸ್ಸೆ ಹೇಳಿದ್ದಾರೆ. ಏತನ್ಮಧ್ಯೆ,ಹತ್ಯೆಯ ಉದ್ದೇಶವನ್ನು ಊಹಿಸಲು  ಡಿಸ್ಟ್ರಿಕ್ಟ್ ಅಟಾರ್ನಿ ನಿರಾಕರಿಸಿದರು.

ದಂಪತಿ ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ಆನ್‌ಲೈನ್ ದಾಖಲೆಗಳು ತೋರಿಸುತ್ತವೆ. ಒಂದು ಅಥವಾ ಎರಡು ದಿನಗಳಲ್ಲಿ ಅವರ ಸುದ್ದಿಯೇ ಇಲ್ಲ ಎಂದು ಅರಿತ ನಂತರ ಸಂಬಂಧಿಕರು ಮನೆಗೆ ಬಂದಾಗ ಈ ಕುಟುಂಬ ಶವವಾಗಿ ಪತ್ತೆಯಾಗಿದ್ದು ಕಂಡುಬಂದಿದೆ.

ಈ ಕುಟುಂಬದ ಬಗ್ಗೆ ಯಾವುದೇ ಪೊಲೀಸ್ ವರದಿಗಳಿಲ್ಲ, ಯಾವುದೇ ಸಮಸ್ಯೆಗಳಿಲ್ಲ, ಯಾವುದೇ ಕೌಟುಂಬಿಕ ಸಮಸ್ಯೆಗಳಿಲ್ಲ, ಆ ಮನೆಯಲ್ಲಿ ಅಥವಾ ಇಡೀ ನೆರೆಹೊರೆಯಲ್ಲಿ ನನಗೆ ತಿಳಿದಿರುವ ಏನೂ ಇಲ್ಲ” ಎಂದು ಮೊರಿಸ್ಸೆ ಹೇಳಿದರು. ಹತ್ಯೆಗಳ ತನಿಖೆ ನಡೆಯುತ್ತಿದೆ.  ತನಿಖಾಧಿಕಾರಿಗಳು ರಾತ್ರಿಯಿಡೀ ಅಪರಾಧದ ಸ್ಥಳದಲ್ಲಿ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು. ತನಿಖೆಯು ಅತ್ಯಂತ ಪ್ರಾಥಮಿಕ ಹಂತದಲ್ಲಿದ್ದರೂ, ಈ ಸಮಯದಲ್ಲಿ ಲಭ್ಯವಿರುವ ಪುರಾವೆಗಳು ಯಾವುದೇ ಹೊರಗಿನ ವ್ಯಕ್ತಿ ಶಾಮೀಲಾಗಿರುವ ಬಗ್ಗೆ ಸೂಚಿಸುವುದಿಲ್ಲ, ಆದರೆ ಇದು ಕೌಟುಂಬಿಕ ಹಿಂಸೆಯ ಮಾರಣಾಂತಿಕ ಘಟನೆ ಎಂದು ಸೂಚಿಸುತ್ತದೆ ಎಂದು ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಘಟನೆಗೆ ಸಂಬಂಧಿಸಿದಂತೆ ಡೋವರ್ ಸಮುದಾಯಕ್ಕೆ ಯಾವುದೇ ಅಪಾಯವಿದೆ ಎಂದು ನಂಬಲಾಗಿಲ್ಲ.” ಕುಟುಂಬದ ವಿಸ್ತಾರವಾದ ಮಹಲು – $5.45 ಮಿಲಿಯನ್ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ. ಇದು ಒಂದು ವರ್ಷದ ಹಿಂದೆ ಸ್ವತ್ತುಮರುಸ್ವಾಧೀನಕ್ಕೆ ಹೋಯಿತು ಮತ್ತು ಮ್ಯಾಸಚೂಸೆಟ್ಸ್ ಮೂಲದ ವಿಲ್ಸಂಡೇಲ್ ಅಸೋಸಿಯೇಟ್ಸ್ LLC ಗೆ $ 3 ಮಿಲಿಯನ್‌ಗೆ ಮಾರಾಟವಾಯಿತು ಎಂದು ದಿ ಪೋಸ್ಟ್ ವರದಿ ಮಾಡಿದೆ.

ಇದನ್ನೂ ಓದಿ: ಸುಟ್ಟ ಮುಖ, ಬೆತ್ತಲೆಯಾದ ದೇಹಗಳು ಪತ್ತೆ; ಹಮಾಸ್ ದಾಳಿ ವೇಳೆ ಲೈಂಗಿಕ ದೌರ್ಜನ್ಯದ ಭೀಕರತೆ ಬಿಚ್ಚಿಟ್ಟ ವರದಿ

ಕಮಲ್‌ 19,000 ಚದರ ಅಡಿ ಎಸ್ಟೇಟ್ ಅನ್ನು ಖರೀದಿಸಿದ್ದು ಇದು11 ಮಲಗುವ ಕೋಣೆಗಳನ್ನು ಹೊಂದಿದೆ ದಾಖಲೆಗಳ ಪ್ರಕಾರ 2019 ರಲ್ಲಿ ಇದರ ಮೌಲ್ಯ 4 ಮಿಲಿಯನ್‌ ಯುಎಸ್ ಡಾಲರ್ ಆಗಿದೆ.

ಆ ಸಮಯದಲ್ಲಿ ಕುಟುಂಬದ ಸದಸ್ಯರು ಮಾತ್ರ ಮಹಲಿನಲ್ಲಿ ವಾಸಿಸುತ್ತಿದ್ದರು. ಈ ಪ್ರದೇಶವು ರಾಜ್ಯದ ಅತ್ಯಂತ ಶ್ರೀಮಂತ ಪ್ರದೇಶಗಳಲ್ಲಿ ಒಂದಾಗಿದೆ, ಇದು “ಒಂದು ಉತ್ತಮ ನೆರೆಹೊರೆ, ಸುರಕ್ಷಿತ ಸಮುದಾಯವಾಗಿದೆ. ಅವರ ಕಂಪನಿಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು ಆದರೆ ಡಿಸೆಂಬರ್ 2021 ರಲ್ಲಿ ವಿಸರ್ಜಿಸಲಾಯಿತು, ರಾಜ್ಯ ದಾಖಲೆಗಳು ತೋರಿಸುತ್ತವೆ ಎಂದು ಡಿಸ್ಟ್ರಿಕ್ಟ್ ಅಟಾರ್ನಿ ಹೇಳಿದ್ದಾರೆ.

ಟೀನಾ ಕಮಲ್ ಅವರನ್ನು ಎಡುನೋವಾ ಅವರ ವೆಬ್‌ಸೈಟ್‌ನಲ್ಲಿ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಮಾಡಲಾಗಿತ್ತು. ಅವರು ಭಾರತದಲ್ಲಿನ ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯದ ಹಳೇ ವಿದ್ಯಾರ್ಥಿ ಆಗಿದ್ದರು. EduNova ವೆಬ್‌ಸೈಟ್‌ನಲ್ಲಿ ಮಾಹಿತಿ ಪ್ರಕಾರ, ಕಮಲ್ ಬೋಸ್ಟನ್ ವಿಶ್ವವಿದ್ಯಾಲಯ ಮತ್ತು MIT ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದರು.

ಎಡುನೋವಾದಲ್ಲಿ ಕೆಲಸ ಮಾಡುವ ಮೊದಲು, ಅವರು “ಶಿಕ್ಷಣ-ಸಮಾಲೋಚನೆ ಕ್ಷೇತ್ರದಲ್ಲಿ ಅನೇಕ ಕಾರ್ಯನಿರ್ವಾಹಕ ಸ್ಥಾನಗಳನ್ನು ಹೊಂದಿದ್ದರು” ಎಂದು ಹೇಳಲಾಗಿದೆ. ಏತನ್ಮಧ್ಯೆ, ದಂಪತಿಯ ಮಗಳು ಮಿಡಲ್ಬರಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಳು. ಲಿಂಕ್ಡ್ಇನ್ ನಲ್ಲಿನ ಮಾಹಿತಿಯಂತೆ ಈಕೆ ನ್ಯುರೋಸಯನ್ಸ್ ಕಲಿಯುತ್ತಿದ್ದಳು.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ