ನವದೆಹಲಿ: ಕ್ವಾಡ್ ಶೃಂಗಸಭೆಗಾಗಿ (Quad summit) ಜಪಾನ್‌ಗೆ ತಮ್ಮ ಎರಡು ದಿನಗಳ ಭೇಟಿಗೆ ತೆರಳಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಮಂಗಳವಾರ ವಾಪಾಸಾಗಿದ್ದಾರೆ. ಕ್ವಾಡ್ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿರುವ ಪ್ರಧಾನಿ ಮೋದಿ ಅಲ್ಲಿಗೆ ಬಂದಿದ್ದ ಪ್ರತಿಯೊಂದು ದೇಶದ ನಾಯಕರಿಗೂ ಭಾರತೀಯ ಕುಶಲಕರ್ಮಿಗಳು ಕೈಯಿಂದ ತಯಾರಿಸಿದ ಉಡುಗೊರೆಗಳನ್ನು ನೀಡಿದ್ದಾರೆ. ಯಾವ ದೇಶದವರಿಗೆ ಭಾರತದಿಂದ ಏನೇನು ಉಡುಗೊರೆ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿದೆ.
ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಸಂಜಿ ಕಲಾಕೃತಿಯನ್ನು ಉಡುಗೊರೆಯಾಗಿ ನೀಡಿದರು. ಕಾಗದದ ಮೇಲೆ ಕೈ ಕತ್ತರಿಸುವ ವಿನ್ಯಾಸದ ಈ ಕಲಾಕೃತಿಯು ಉತ್ತರ ಪ್ರದೇಶದ ಮಥುರಾದಲ್ಲಿ ಪ್ರಸಿದ್ಧವಾಗಿದೆ. ಸಾಂಪ್ರದಾಯಿಕವಾಗಿ ಶ್ರೀಕೃಷ್ಣನ ಕಥೆಗಳ ಲಕ್ಷಣಗಳನ್ನು ಕೊರೆಯಚ್ಚುಗಳಲ್ಲಿ ರಚಿಸಲಾಗಿದೆ. ಈ ಕೊರೆಯಚ್ಚುಗಳನ್ನು ಕತ್ತರಿ ಅಥವಾ ಬ್ಲೇಡ್ ಬಳಸಿ ಕತ್ತರಿಸಲಾಗುತ್ತದೆ. ಸೂಕ್ಷ್ಮವಾದ ಸಂಜಿಯನ್ನು ಸಾಮಾನ್ಯವಾಗಿ ತೆಳುವಾದ ಕಾಗದದ ಹಾಳೆಗಳಿಂದ ಜೋಡಿಸಲಾಗುತ್ತದೆ. (Source)
PM @narendramodi’s gift to Australian PM: Gond Art Painting
Gond paintings are one of the most admired tribal art form. The word ‘Gond’ comes from the expression ‘Kond’ which means ‘green mountain’. pic.twitter.com/aUwPOrQpem
— Prasar Bharati News Services पी.बी.एन.एस. (@PBNS_India) May 24, 2022
ಜೋ ಬೈಡೆನ್‌ಗೆ ಉಡುಗೊರೆಯಾಗಿ ನೀಡಿದ ಸಂಜಿ ಫಲಕವು ಮಥುರಾದಿಂದ ಠಾಕುರಾಣಿ ಘಾಟ್‌ನ ವಿಷಯವನ್ನು ಆಧರಿಸಿದೆ. ಇನ್ನೂ ವಿಶೇಷವೆಂದರೆ ಇದನ್ನು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು ರಚಿಸಿದ್ದಾರೆ.
ಇದನ್ನೂ ಓದಿ: Quad summit 2022 ಟೋಕಿಯೊದಲ್ಲಿ ನಡೆಯುತ್ತಿರುವ ಕ್ವಾಡ್ ಶೃಂಗಸಭೆಯಲ್ಲಿ ಚರ್ಚೆಯಾದ ವಿಷಯಗಳೇನು? ಕ್ವಾಡ್ ನಾಯಕರು ಹೇಳಿದ್ದೇನು?
ಪ್ರಧಾನಿ ಮೋದಿ ತಮ್ಮ ಆಸ್ಟ್ರೇಲಿಯಾದ ಸಹವರ್ತಿ ಆಂಥೋನಿ ಅಲ್ಬನೀಸ್ ಅವರಿಗೆ ಗೊಂಡ ವರ್ಣಚಿತ್ರವನ್ನು ಉಡುಗೊರೆಯಾಗಿ ನೀಡಿದರು. ಅತ್ಯಂತ ಮೆಚ್ಚುಗೆ ಪಡೆದ ಬುಡಕಟ್ಟು ಕಲಾ ಪ್ರಕಾರಗಳಲ್ಲಿ ಒಂದಾದ ಈ ಚಿತ್ರಕಲೆ ಚುಕ್ಕೆಗಳು ಮತ್ತು ರೇಖೆಗಳಿಂದ ರಚಿಸಲ್ಪಟ್ಟಿದೆ. ಗೊಂಡ ಕಲೆ ಆಸ್ಟ್ರೇಲಿಯಾದ ಮೂಲನಿವಾಸಿ ಕಲೆಗೆ ಹೋಲುತ್ತದೆ ಎಂದು ಪರಿಗಣಿಸಲಾಗಿದೆ. ಆದಿವಾಸಿಗಳು ಸೃಷ್ಟಿಯ ಬಗ್ಗೆ ಗೊಂಡರಂತೆ ತಮ್ಮದೇ ಆದ ಕಥೆಗಳನ್ನು ಹೊಂದಿದ್ದಾರೆ.
PM @narendramodi’s gift to Australian PM: Gond Art Painting
Gond paintings are one of the most admired tribal art form. The word ‘Gond’ comes from the expression ‘Kond’ which means ‘green mountain’. pic.twitter.com/aUwPOrQpem
— Prasar Bharati News Services पी.बी.एन.एस. (@PBNS_India) May 24, 2022
ರೋಗನ್ ಪೇಂಟಿಂಗ್ ಇರುವ ಮರದ ಕೈಯಿಂದ ಕೆತ್ತಿದ ಪೆಟ್ಟಿಗೆಯನ್ನು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ರೋಗನ್ ಪೇಂಟಿಂಗ್ ಗುಜರಾತಿನ ಕಚ್ ಜಿಲ್ಲೆಯಲ್ಲಿ ಅಭ್ಯಾಸ ಮಾಡುವ ಬಟ್ಟೆಯ ಮುದ್ರಣದ ಕಲೆಯಾಗಿದೆ. ಈ ಕರಕುಶಲತೆಯಲ್ಲಿ ಬೇಯಿಸಿದ ಎಣ್ಣೆ ಮತ್ತು ತರಕಾರಿಯಿಂದ ಮಾಡಿದ ಬಣ್ಣವನ್ನು ಲೋಹದ ಬ್ಲಾಕ್ (ಮುದ್ರಣ) ಅಥವಾ ಸ್ಟೈಲಸ್ (ಪೇಂಟಿಂಗ್) ಬಳಸಿ ಬಟ್ಟೆಯ ಮೇಲೆ ಹಾಕಲಾಗುತ್ತದೆ. 20ನೇ ಶತಮಾನದ ಅಂತ್ಯದಲ್ಲಿ ಈ ಕರಕುಶಲತೆಯು ಬಹುತೇಕ ನಾಶವಾಗಿದೆ. ರೋಗನ್ ಚಿತ್ರಕಲೆಯನ್ನು ಈಗ ಕೇವಲ ಒಂದು ಕುಟುಂಬ ಮಾತ್ರ ಅಭ್ಯಾಸ ಮಾಡುತ್ತಿದೆ.
PM @narendramodi’s gift to President of US: Sanjhi Art
Sanjhi, the art of hand cutting designs on paper, is a typical art form of Mathura in Uttar Pradesh, the legendary home of Lord Krishna. pic.twitter.com/YdSqkbl1Ws
— Prasar Bharati News Services पी.बी.एन.एस. (@PBNS_India) May 24, 2022
ಮರದ ಮೇಲೆ ಕೈಯಲ್ಲಿ ಕೆತ್ತನೆ ಮಾಡುವುದು ದೇಶದ ಪ್ರಸಿದ್ಧ ಸ್ಮಾರಕಗಳಿಂದ ತೆಗೆದ ಸಾಂಪ್ರದಾಯಿಕ ಜಾಲಿ ವಿನ್ಯಾಸಗಳಿಂದ ಪ್ರೇರಿತವಾದ ಒಂದು ಸಂಕೀರ್ಣವಾದ ಕಲೆಯಾಗಿದೆ. ಕ್ವಾಡ್ ಸಂವಾದವು ಭಾರತ, ಅಮೆರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾವನ್ನು ಒಳಗೊಂಡಿದೆ. ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರ ಆಹ್ವಾನದ ಮೇರೆಗೆ ಟೋಕಿಯೊಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಶೃಂಗಸಭೆಯ ಹೊರತಾಗಿ ಅಮೆರಿಕಾದ ಅಧ್ಯಕ್ಷ ಬೈಡೆನ್, ಕಿಶಿಡಾ ಮತ್ತು ಆಸ್ಟ್ರೇಲಿಯಾದ ನೂತನ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ಪ್ರತ್ಯೇಕ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Wed, 25 May 22