ಕಣ್ಮುಂದೆಯೇ ನಮ್ಮ ಕಚೇರಿ ಕಟ್ಟಡ ಉರುಳಿ ಬಿತ್ತು, ಪ್ರಾಣಭಯದಿಂದ ನಾನು ಓಡಿದೆ: ಇಸ್ರೇಲ್ ವೈಮಾನಿಕ ದಾಳಿಯ ಬಗ್ಗೆ ಪತ್ರಕರ್ತನ ಅನುಭವ ಬರಹ  

Israeli attack: ಸಮಯ ಬೇಗನೆ ಮುಗಿಯುತ್ತಿತ್ತು. ಆ ಕಟ್ಟಡದಲ್ಲಿ ಕುಟುಂಬಗಳೊಂದಿಗೆ ದೀರ್ಘಕಾಲದಿಂದ ವಾಸಿಸುತ್ತಿದ್ದ ಜನರಿದ್ದರು. ಅವರು ಎಲ್ಲಿಗೆ ಹೋಗುತ್ತಿದ್ದಾರೆ? ನಾನು ಆತಂಕದಿಂದ ಯೋಚಿಸಿದೆ. ಅಷ್ಟೊತ್ತಿಗೆ ಜೊತೆಗಿದ್ದ ಕೆಲವು ಪತ್ರಕರ್ತರು ದೃಶ್ಯಗಳನ್ನು ನೇರಪ್ರಸಾರ ಮಾಡಲು ಪ್ರಾರಂಭಿಸಿದ್ದರು.

ಕಣ್ಮುಂದೆಯೇ ನಮ್ಮ ಕಚೇರಿ ಕಟ್ಟಡ ಉರುಳಿ ಬಿತ್ತು, ಪ್ರಾಣಭಯದಿಂದ ನಾನು ಓಡಿದೆ: ಇಸ್ರೇಲ್ ವೈಮಾನಿಕ ದಾಳಿಯ ಬಗ್ಗೆ ಪತ್ರಕರ್ತನ ಅನುಭವ ಬರಹ  
ಗಾಜಾದಲ್ಲಿ ಇಸ್ರೇಲ್ ಸೇನೆ ದಾಳಿ
Follow us
ರಶ್ಮಿ ಕಲ್ಲಕಟ್ಟ
|

Updated on: May 16, 2021 | 7:12 PM

ಗಾಜಾದ ನಿರಾಶ್ರಿತರ ಶಿಬಿರದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಟ್ಟಡಗಳು ಮತ್ತು ಮನೆಗಳು ಮುರಿದುಹೋಗುವ ದೃಶ್ಯಗಳನ್ನು ಮಾಧ್ಯಮಗಳು ಸೆರೆಹಿಡಿದಿದ್ದು, ಅಲ್ಲಿನ ಜನ ಜೀವನ ಮತ್ತಷ್ಟು ಕಷ್ಟಕರವಾಗಿದೆ. ಈ ಹೊತ್ತಲ್ಲಿ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಧೆಯ ಪತ್ರಕರ್ತ ಅಲ್ಲಿನ ದಾಳಿ ಬಗ್ಗೆ, ಕಣ್ಣಾರೆ ಕಂಡ ದೃಶ್ಯಗಳ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಗಾಜಾದಲ್ಲಿ ಇಸ್ರೇಲ್ ವಾಟರ್ ಟವರ್ ಎಂಬ 13 ಅಂತಸ್ತಿನ ಕಟ್ಟಡದ ಮೇಲೆ ಬಾಂಬ್ ದಾಳಿ ನಡೆಸಿತು. ಇದರಲ್ಲಿ ಅಲ್-ಜಜೀರಾ ಮತ್ತು ಅಮೆರಿಕದ ಸುದ್ದಿ ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ಸೇರಿದಂತೆ ಹಲವಾರು ಮಾಧ್ಯಮ ಕಚೇರಿಗಳಿವೆ. ಸಂಸ್ಥೆ ಅಸೋಸಿಯೇಟೆಡ್ ಪ್ರೆಸ್ ವರದಿಗಾರ ಹಂಚಿಕೊಂಡ ಅನುಭವ ಕಥನ ಇಲ್ಲಿದೆ.

‘ಮಧ್ಯಾಹ್ನ 2 ಗಂಟೆ ಆಗಿರಬಹುದು. ನಾನು ಗಾಜಾದ ಅಸೋಸಿಯೇಟೆಡ್ ಪ್ರೆಸ್‌ನ ಎರಡು ಅಂತಸ್ತಿನ ಕಟ್ಟಡದ ಮೇಲಿನ ಮಹಡಿಯಲ್ಲಿ ಸಣ್ಣ ನಿದ್ದೆಯಲ್ಲಿದ್ದೆ. ಇದು 2006ರಿಂದ ನಮ್ಮ ಕಚೇರಿಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಇಲ್ಲಿ ಯಾವುದೇ ಅಸಾಮಾನ್ಯ ಬೆಳವಣಿಗೆಗಳು ಕಂಡುಬಂದಿಲ್ಲ. ಅಷ್ಟು ಹೊತ್ತಲ್ಲಿ ನನ್ನ ತನ್ನ ಸಹೋದ್ಯೋಗಿಗಳ ಕಿರುಚಾಟ ಕೇಳಿ ಗಾಬರಿಯಾದೆ. ಏನಾಗುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ. ಗಾಜಾ ನಗರದಲ್ಲಿ ಏನಾದರೂ ಕೆಟ್ಟ ಘಟನೆ ನಡೆದಿದೆಯೇ? ನನಗೆ ಗೊತ್ತಿಲ್ಲ.

ಶಬ್ದ ಕೇಳಿ ಕೆಳಗಡೆ ಓಡಿಹೋದಾಗ, ತನ್ನ ಸಹೋದ್ಯೋಗಿಗಳು ಹೆಲ್ಮೆಟ್ ಮತ್ತು ಸುರಕ್ಷತಾ ಬಟ್ಟೆಗಳನ್ನು ಧರಿಸಿ ಓಡಿಹೋಗುವುದನ್ನು ನೋಡಿದೆ evacuation! evacuation ! ಎಂದುಅವರು ಜೋರಾಗಿ ಹೇಳುತ್ತಿದ್ದರು. ಅದು ಎಸ್ಕೇಪ್ ನೋಟಿಸ್ ಎಂದು ತಿಳಿದ ತಕ್ಷಣ, ಅದು ಸ್ಪಷ್ಟವಾಗಿಲ್ಲದಿದ್ದರೂ, ನಾನು ಪ್ರಾಣಭಯದಿಂದ ಓಡಿದೆ. ಇಸ್ರೇಲ್ ಸೇನೆ ನಮ್ಮ ಕಟ್ಟಡವನ್ನು ಗುರಿಯಾಗಿಸಿಕೊಂಡಿದೆ ಎಂದು ನಂತರ ತಿಳಿದುಬಂತು. ಕಟ್ಟಡವನ್ನು ನೆಲಸಮಗೊಳಿಸುವ ಮೊದಲು ಅವರು ನಮಗೆ ಎಚ್ಚರಿಕೆ ನೀಡಿದ್ದರು. ನಾನು ಪಡೆದ ಆ ಅಲ್ಪಾವಧಿಯಲ್ಲಿ ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂದು ನಾನು ಈಗ ಅರಿತುಕೊಂಡೆ.

ಈ ವಾರವಷ್ಟೇ ಇಸ್ರೇಲಿ ಸೇನೆ ಮೂರು ಕಟ್ಟಡಗಳನ್ನು ನೆಲಸಮ ಮಾಡಿದೆ. ಕೆಲವೊಮ್ಮೆ ವಿರಾಮದ ಮೊದಲು ಎಚ್ಚರಿಕೆಗಳನ್ನು ನೀಡಲಾಗುತ್ತದೆ. ನಮಗೂ ಆ ರೀತಿಯ ಎಚ್ಚರಿಕೆ ಸಿಕ್ಕಿತು. ಕೇವಲ ಹತ್ತು ನಿಮಿಷಗಳ ಮುಂಗಡ ಎಚ್ಚರಿಕೆ!

ಏನು ತೆಗೆದುಕೊಳ್ಳಬೇಕೆಂದು ತಿಳಿಯುತ್ತಿಲ್ಲ  . ಕೇವಲ ಹತ್ತು ನಿಮಿಷಗಳು ಉಳಿದಿವೆ. ನನ್ನ ಕಣ್ಣ ಮುಂದಿರುವುದನ್ನೆಲ್ಲಾ ಎತ್ತಿಕೊಂಡೆ. ಲ್ಯಾಪ್‌ಟಾಪ್, ಕೆಲವು ವಿದ್ಯುತ್ ಉಪಕರಣಗಳು, ವರ್ಷಗಳಿಂದ ನನ್ನ ಕೆಲಸದ ಸ್ಥಳವಾಗಿದ್ದ ಮೇಜಿನ ಮೇಲೆ ಕೆಲವು ಮೆಮೆಂಟೋಗಳು, ಒಂದು ಕುಟುಂಬ ಚಿತ್ರ, ನನ್ನ ಮಗಳು ನನಗೆ ಉಡುಗೊರೆಯಾಗಿ ನೀಡಿದ ಒಂದು ಕಾಫಿ ಕಪ್ , ಐದು ವರ್ಷಗಳನ್ನು ಪೂರೈಸಿದಕ್ಕಾಗಿ ಅಸೋಸಿಯೇಟೆಡ್ ಪ್ರೆಸ್ ಪ್ರಶಂಸೆಯ ಪ್ರಮಾಣಪತ್ರ ಎಲ್ಲವನ್ನೂ ಬಾಚಿ ಹಿಡಿದು ನಾನು ಓಡಿದೆ . ಭಯ, ಭೀತಿ, ದುಃಖ ಮತ್ತು ಆಶ್ಚರ್ಯದೊಂದಿಗಿನ ಸ್ಥಿತಿ ಅದಾಗಿತ್ತು.

ನಾನು ನನ್ನ ಸಾಮಗ್ರಿಗಳೊಂದಿಗೆ ಕಚೇರಿಯ ಬಾಗಿಲ ಬಳಿ ಹೋಗಿ ಕೊನೆಯದಾಗಿ ನನ್ನ ಎರಡನೇ ಮನೆಯಾಗಿದ್ದ ಆ ಕಚೇರಿಯತ್ತ ಹಿಂತಿರುಗಿ ನೋಡಿದೆ. ಇನ್ನು ಎಂದಿಂದೆಗೂ ಇದು ಹೀಗೆ ಇರುವುದಿಲ್ಲ ಎಂದು ನೆನೆದು ಕಣ್ಣು ಮಂಜಾಯಿತು. ಅಷ್ಟರಲ್ಲಿ ನಮಗೆ ನೀಡಿದ್ದ 10 ನಿಮಿಷ ಕಾಲಾವಧಿ ಮುಗಿಯುತ್ತಾ ಬಂದಿತ್ತು ಹೆಲ್ಮೆಟ್ ಧರಿಸಿ, ನನ್ನ ಪ್ರಾಣ ಉಳಿಸಲು ನಾನು ಕಟ್ಟಡದಿಂದ ಹೊರಗೆ ಓಡಿದೆ. ಹಾಗೆ  ಓಡುತ್ತಾ  ನಾನು ಹನ್ನೊಂದು ಮಹಡಿಗಳನ್ನು ಇಳಿದಿದ್ದೆ. ನಾನು ಪಾರ್ಕಿಂಗ್ ಸ್ಥಳಕ್ಕೆ ಬಂದಾಗ ನನ್ನ ಕಾರು ಮಾತ್ರ ಉಳಿದಿದೆ. ಉಳಿದವರೆಲ್ಲರೂ ಹೋಗಿದ್ದರು . ನಾನು ನನ್ನ ಎಲ್ಲ ವಸ್ತುಗಳನ್ನು ಕಾರಿಗೆ ಎಸೆದು, ಕಾರನ್ನು ಚಾಲನೆ ಮಾಡಿ ಹೊರ ಬಂದೆ.

ಕಟ್ಟಡದ ಸಮೀಪವಿರುವ ಕಟ್ಟಡದ ಮಾಲೀಕರು ಫೋನ್‌ನಲ್ಲಿ ಇಸ್ರೇಲಿ ಸೈನ್ಯದಲ್ಲಿ   ಇನ್ನೂ ಸ್ವಲ್ಪ ಸಮಯ ನೀಡುವಂತೆ ಕೇಳಿಕೊಂಡರು. ಆದರೆ ಅಧಿಕಾರಿಯು ಒಂದು ಕ್ಷಣ ಸಹ ಹೆಚ್ಚು ಅವಕಾಶ ನೀಡಲಾಗುವುದಿಲ್ಲ ಎಂದು ಉತ್ತರಿಸಿದರು. ಎಲ್ಲರೂ ಕಟ್ಟಡದಿಂದ ಹೊರಗೆ ಹೋಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದರೆ ಮತ್ತೊಮ್ಮೆ ಕಟ್ಟಡಕ್ಕೆ ಪ್ರವೇಶಿಸಬಹುದು ಎಂದು ಅವರು ಹೇಳಿದರು.

ಸಮಯ ಬೇಗನೆ ಮುಗಿಯುತ್ತಿತ್ತು. ಆ ಕಟ್ಟಡದಲ್ಲಿ ಕುಟುಂಬಗಳೊಂದಿಗೆ ದೀರ್ಘಕಾಲದಿಂದ ವಾಸಿಸುತ್ತಿದ್ದ ಜನರಿದ್ದರು. ಅವರು ಎಲ್ಲಿಗೆ ಹೋಗುತ್ತಿದ್ದಾರೆ? ನಾನು ಆತಂಕದಿಂದ ಯೋಚಿಸಿದೆ. ಅಷ್ಟೊತ್ತಿಗೆ ಜೊತೆಗಿದ್ದ ಕೆಲವು ಪತ್ರಕರ್ತರು ದೃಶ್ಯಗಳನ್ನು ನೇರಪ್ರಸಾರ ಮಾಡಲು ಪ್ರಾರಂಭಿಸಿದ್ದರು. ನೋಡುವಾಗ, ಆಕಾಶದಲ್ಲಿ ಕೆಲವು ಡ್ರೋನ್‌ಗಳು ಕಾಣಿಸಿಕೊಂಡವು ಮತ್ತು ಕಟ್ಟಡದ ಮೇಲೆ ಬಾಂಬ್ ಬೀಳಲಾರಂಭಿಸಿದವು. ನನ್ನ ಕಣ್ಣ ಮುಂದೆ, ದೊಡ್ಡ ಕಟ್ಟಡವು ಧುತ್ತನೆ ಬೀಳಲು ಪ್ರಾರಂಭಿಸಿತು. ಹೊಗೆ ಮತ್ತು ಧೂಳಿನಲ್ಲಿ ನಾವು ಕಾಣಿಸದಾದವು.ಆಗಲೂ ನನ್ನ ಜೇಬಿನಲ್ಲಿ ನನ್ನ ಕಚೇರಿ ಕೋಣೆಯ ಕೀಲಿ ಸುರಕ್ಷಿತವಾಗಿತ್ತು.

ನಾನು ಕಂಡ ಅತೀ ಭಯಾನಕ ದೃಶ್ಯ ಅದಾಗಿತ್ತು. ಆದರೆ ಯಾರೂ ಈ ದಾಳಿಯಲ್ಲಿ ಸತ್ತಿಲ್ಲ ಅಥವಾ ಗಾಯಗೊಂಡಿಲ್ಲ ಎಂದು ನೆನಪಿಸಿಕೊಂಡಾಗ ಸಮಾಧಾನವಾಯಿತು.

ಶುಕ್ರವಾರ ಗಾಜಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ನಮ್ಮ ತೋಟ ನಾಶವಾಗಿತ್ತು. ಇದೀಗ ಕಚೇರಿ ಕಟ್ಟಡವೂ ನಾಶವಾಯಿತು . ಕಚೇರಿ ಕಟ್ಟಡ ಸುರಕ್ಷಿತವಾಗಿರುತ್ತದೆ ಎಂದು ನಾನು ಭಾವಿಸಿದ್ದೆ. ಎಪಿ ಮತ್ತು ಅಲ್ ಜಜೀರಾ ಕಚೇರಿಗಳು ಒಂದೇ ಕಟ್ಟಡದಲ್ಲಿವೆ. ಸುರಕ್ಷಿತ ಮತ್ತು ಹೆಚ್ಚು ಗುರಿರಹಿತ ಎಂದು ನಿರೀಕ್ಷಿಸಲಾಗಿದ್ದ ಈ ಕಟ್ಟಡವು ಈಗ ನೆಲಸಮವಾಗಿದೆ.

ನಾನು ಹುಟ್ಟಿ ಬೆಳೆದ ದೇಶ ಗಾಜಾ. ಈಗ ನಾನು ನನ್ನ ಸಹೋದರರು ಮತ್ತು ತಾಯಿ ವಾಸಿಸುವ ಸ್ಥಳದಲ್ಲಿದ್ದೇನೆ. ಇದು ಸುರಕ್ಷಿತ ಎಂದು ಹೇಳಬಹುದು. ಆದರೆ ಇದು ಇಲ್ಲಿಯೂ ಸುರಕ್ಷಿತವಲ್ಲ, ಏಕೆಂದರೆ ಗಾಜಾದಲ್ಲಿ ಸುರಕ್ಷಿತ ತಾಣವಿಲ್ಲ.

ಗಾಜಾದ ಪ್ರತಿಯೊಬ್ಬ ಮನುಷ್ಯನು ಈಗ ಕೆಟ್ಟ ಭಯದಲ್ಲಿ ಬದುಕುತ್ತಾನೆ. ಸೋಮವಾರದಿಂದ ದಾಳಿಯಲ್ಲಿ 145 ಜನರು ಸಾವನ್ನಪ್ಪಿದ್ದಾರೆ. ನನ್ನ ಕೆಲಸ ಮತ್ತು ಜೀವನವನ್ನು ಗಟ್ಟಿಗೊಳಿಸಿದ ಆ ಕಾಂಕ್ರೀಟ್ ಟೆಂಟ್ ಅನ್ನು ನೋಡುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆ ಇರಲಿಲ್ಲ. ಮುಂದಿನ ದಿನಗಳಲ್ಲಿ ಸಾವಿನ ಸುದ್ದಿ, ದುರಂತಗಳು ನಮಗಾಗಿ ಕಾಯದೇ ಇರಲಿ ಎಂಬುದೇ ನನ್ನ ಪ್ರಾರ್ಥನೆ. ಇದು ಈಗ ಗಾಜಾದ ಪ್ರತಿಯೊಬ್ಬ ಮನುಷ್ಯನ ಪ್ರಾರ್ಥನೆಯಾಗಿರುತ್ತದೆ.

ಇದನ್ನೂ ಓದಿ: ಗಾಜಾದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳ ಕಚೇರಿಗಳಿದ್ದ 13 ಅಂತಸ್ತಿನ ಕಟ್ಟಡ ಧ್ವಂಸಗೊಳಿಸಿದ ಇಸ್ರೇಲ್​

ಇಸ್ರೇಲ್‌ನಲ್ಲಿ ಹಮಾಸ್ ರಾಕೆಟ್ ದಾಳಿಯಲ್ಲಿ ಮೃತಪಟ್ಟ ಕೇರಳದ ಸೌಮ್ಯ ಸಂತೋಷ್ ಅಂತ್ಯ ಸಂಸ್ಕಾರ ಇಂದು

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ