Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಜಾದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳ ಕಚೇರಿಗಳಿದ್ದ 13 ಅಂತಸ್ತಿನ ಕಟ್ಟಡ ಧ್ವಂಸಗೊಳಿಸಿದ ಇಸ್ರೇಲ್​

ಈ ಕಟ್ಟಡ ಕೇವಲ ಅಂತಾರಾಷ್ಟ್ರೀಯ ಮಾಧ್ಯಮಗಳ ಕಚೇರಿಯನ್ನಷ್ಟೇ ಅಲ್ಲ, ಹಮಾಸ್ ಉಗ್ರ ಸಂಘಟನೆಯ ಕಚೇರಿಯನ್ನೂ ಒಳಗೊಂಡಿದೆ. ಹಾಗಾಗಿಯೇ ಕಟ್ಟಡವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್​ ಸೈನ್ಯಾಧಿಕಾರಿಗಳು ತಿಳಿಸಿದ್ದಾರೆ.

ಗಾಜಾದಲ್ಲಿ ಅಂತಾರಾಷ್ಟ್ರೀಯ ಮಾಧ್ಯಮಗಳ ಕಚೇರಿಗಳಿದ್ದ 13 ಅಂತಸ್ತಿನ ಕಟ್ಟಡ ಧ್ವಂಸಗೊಳಿಸಿದ ಇಸ್ರೇಲ್​
ಏರ್​ಸ್ಟ್ರೈಕ್​
Follow us
Lakshmi Hegde
|

Updated on:May 15, 2021 | 11:43 PM

ಇಸ್ರೇಲ್​ ಮತ್ತು ಪ್ಯಾಲೆಸ್ಟೀನ್​ ನಡುವೆ ದಾಳಿ-ಪ್ರತಿದಾಳಿ ಮುಂದುವರಿದಿದ್ದು, ಮೊನ್ನೆ ಹಮಾಸ್​ ನಡೆಸಿದ್ದ ರಾಕೆಟ್​ ದಾಳಿಗೆ ಪ್ರತಿಯಾಗಿ ಇಂದು ಇಸ್ರೇಲ್​ ವೈಮಾನಿಕ ದಾಳಿ ನಡೆಸಿದೆ. ಗಾಜಾವನ್ನು ಗುರಿಯಾಗಿಸಿಕೊಂಡು ನಡೆಸಿದ ಈ ದಾಳಿಯಿಂದ ಗಾಜಾ ಸ್ಟ್ರಿಪ್​ನಲ್ಲಿದ್ದ 13 ಅಂತಸ್ತಿನ ಕಟ್ಟಡ ನೆಲಸಮಗೊಂಡಿದೆ. ಈ ಕಟ್ಟಡದಲ್ಲಿ ಅಲ್​ ಜಝೀರಾ ಸೇರಿ ಹಲವು ಮಾಧ್ಯಮಗಳ ಕಚೇರಿಯೂ ಇತ್ತು ಎಂದು ಅಲ್​ ಜಝೀರಾ ಟ್ವೀಟ್ ಮಾಡಿದೆ. ಇಸ್ರೇಲ್​ನ ರಾಕೆಟ್​ ದಾಳಿಗೆ ಗಾಜಾ ಸ್ಟ್ರಿಪ್​ ಸುತ್ತಲಿನ ಪ್ರದೇಶ ಹೊಗೆಯಿಂದ ಕೂಡಿತ್ತು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರತಿನಿಧಿಗಳು ತಿಳಿಸಿದ್ದಾರೆ.

ಇನ್ನು ಏರ್​ಸ್ಟ್ರೈಕ್​ ನಡೆಸುವುದಕ್ಕೂ ಮೊದಲು ಇಸ್ರೇಲ್​ ಸೈನ್ಯ ಕಟ್ಟಡದ ಮಾಲೀಕರಲ್ಲಿ ಒಬ್ಬರಾದ ಜವಾದ್​ ಮೆಹೆಂದಿ ಎಂಬುವರಿಗೆ ಕರೆ ಮಾಡಿತ್ತು. ಈ ಕಟ್ಟಡ ಕೇವಲ ಅಂತಾರಾಷ್ಟ್ರೀಯ ಮಾಧ್ಯಮಗಳ ಕಚೇರಿಯನ್ನಷ್ಟೇ ಅಲ್ಲ, ಹಮಾಸ್ ಉಗ್ರ ಸಂಘಟನೆಯ ಕಚೇರಿಯನ್ನೂ ಒಳಗೊಂಡಿದೆ. ಹಾಗಾಗಿಯೇ ಕಟ್ಟಡವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದೇವೆ ಎಂದು ಇಸ್ರೇಲ್​ ಸೈನ್ಯಾಧಿಕಾರಿಗಳು ತಿಳಿಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕೂಡ ಇಸ್ರೇಲ್​ ಗಾಜಾದಲ್ಲಿ ದಾಳಿ ನಡೆಸಿತ್ತು. ಇನ್ನು ಇಸ್ರೇಲ್ ಭೂಸೇನೆ ಕೂಡ ಸುಮಾರು 9 ಸಾವಿರ ಸೈನಿಕರೊಂದಿಗೆ ದಾಳಿಗೆ ಸಜ್ಜಾಗಿದೆ. ಹಮಾಸ್​ ಬಂಡುಕೋರರನ್ನು ಬಗ್ಗುಬಡೆಯುವುದೇ ನಮ್ಮ ಗುರಿ. ಇದಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆ, ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.

ಇದನ್ನೂ ಓದಿ: ಟಗ್ ಮುಳುಗಡೆ ಪ್ರಕರಣ: ಪತ್ತೆಯಾದ 9 ಮಂದಿ ರಕ್ಷಣೆಗೆ ಗಾಳಿ ಮಳೆ ಅಡ್ಡಿ; ನಾಳೆ ಮುಂಜಾನೆವರೆಗೆ ಸಮುದ್ರದಲ್ಲೇ ಇರುವ ಅನಿವಾರ್ಯತೆ

Published On - 11:41 pm, Sat, 15 May 21

ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಮಾರಿಗುಡಿ ದೇವಾಲಯಕ್ಕೆ ಬಂದ ಸುನಿಲ್ ಶೆಟ್ಟಿಗೆ ಸಿಕ್ಕ ಉಡುಗೊರೆ ಏನು?
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ಓಂ ಪ್ರಕಾಶ್ ಕೊಲೆ: ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಳಿಕೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ವಿರಾಟ್ ಕೊಹ್ಲಿಯ ಅಪರೂಪದ ಸಂಭ್ರಮಾಚರಣೆ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಕೃನಾಲ್ ಪಾಂಡ್ಯ ಅದ್ಭುತ ರನ್ನಿಂಗ್ ಕ್ಯಾಚ್; ವಿಡಿಯೋ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಜನಿವಾರ ತೆಗೆಸಿದ ವಿವಾದ: ಸಚಿವರು, ಶಾಸಕರಿಗೆ ಮಂತ್ರಾಲಯ ಶ್ರೀ ಎಚ್ಚರಿಕೆ
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಮಾರಿಗುಡಿ ದೇವಾಲಯದಲ್ಲಿ ಆದ ವಿಶಿಷ್ಟ ಅನುಭವದ ಬಗ್ಗೆ ಸುನಿಲ್ ಶೆಟ್ಟಿ ಮಾತು
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಜನಿವಾರ ವಿವಾದ: ಬೀದರ್ ವಿದ್ಯಾರ್ಥಿಗೆ ಫ್ರೀ ಇಂಜಿನಿಯರಿಂಗ್ ಸೀಟ್ ಭಾಗ್ಯ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಧರ್ಮಸ್ಥಳ ಮಂಜುನಾಥ, ವೀರೇಂದ್ರ ಹೆಗ್ಗಡೆಯವರ ಆಶಿರ್ವಾದ ಪಡೆದ ಡಿಕೆಶಿ
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು
ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ ಬಗ್ಗೆ ಗೃಹ ಸಚಿವ ಹೇಳಿದ್ದಿಷ್ಟು