ಲಾಹೋರ್: ಭಾರತದಲ್ಲಿ ಅಲ್ಪಸಂಖ್ಯಾತರನ್ನು ಉಗ್ರಗಾಮಿ ಗುಂಪುಗಳು ಗುರಿಯಾಗಿಸುತ್ತಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ (Imran Khan) ಸೋಮವಾರ ಆರೋಪಿಸಿದ್ದಾರೆ. ಅಂತಹ ಕಾರ್ಯಸೂಚಿಯು ಪ್ರಾದೇಶಿಕ ಶಾಂತಿಗೆ “ನಿಜವಾದ ಮತ್ತು ಪ್ರಸ್ತುತ ಬೆದರಿಕೆಯಾಗಿದೆ” ಎಂದು ಅವರು ಹೇಳಿದ್ದಾರೆ.ಡಿಸೆಂಬರ್‌ನಲ್ಲಿ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಹಿನ್ನೆಲೆಯಲ್ಲಿ ಖಾನ್ ಅವರು ಟ್ವಿಟರ್ನಲ್ಲಿ ಈ ಆರೋಪಗಳನ್ನು ಮಾಡಿದ್ದಾರೆ.ಭಾರತದಲ್ಲಿ ಅಲ್ಪಸಂಖ್ಯಾತರ, ವಿಶೇಷವಾಗಿ 20 ಕೋಟಿ ಮುಸ್ಲಿಂ ಸಮುದಾಯದ ನರಮೇಧದ ಕರೆಯನ್ನು ಬಿಜೆಪಿ ಸರ್ಕಾರ ಬೆಂಬಲಿಸುತ್ತದೆಯೇ ಎಂದು ಖಾನ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಶ್ನಿಸಿದ್ದಾರೆ. ಅಂತರಾಷ್ಟ್ರೀಯ ಸಮುದಾಯವು ಇದನ್ನು ಗಮನಿಸಬೇಕು ಮತ್ತು ಕಾರ್ಯನಿರ್ವಹಿಸಲು ಇದು ಸುಸಮಯವಾಗಿದೆ ಎಂದು ಅವರು ಹೇಳಿದರು.
ಮತ್ತೊಂದು ಟ್ವೀಟ್‌ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ ಖಾನ್, ಉಗ್ರಗಾಮಿ ಕಾರ್ಯಸೂಚಿಯು “ನಮ್ಮ ಪ್ರದೇಶದಲ್ಲಿ ಶಾಂತಿಗೆ ನಿಜವಾದ ಮತ್ತು ಪ್ರಸ್ತುತ ಬೆದರಿಕೆಯಾಗಿದೆ” ಎಂದು ಹೇಳಿದರು.
ಕಳೆದ ತಿಂಗಳು ಪಾಕಿಸ್ತಾನದ ವಿದೇಶಾಂಗ ಕಚೇರಿಯು ಭಾರತದ ಚಾರ್ಜ್ ಡಿ’ಅಫೇರ್ಸ್ ಅನ್ನು ಕರೆಸಿತು ಮತ್ತು ಹರಿದ್ವಾರದ ಸಮಾವೇಶದಲ್ಲಿ ಮಾಡಿದ ಆಪಾದಿತ ದ್ವೇಷದ ಭಾಷಣಗಳ ಬಗ್ಗೆ ತನ್ನ ಕಳವಳವನ್ನು ತಿಳಿಸಿತು.
ವರದಿಯಾದ ದ್ವೇಷದ ಭಾಷಣಗಳನ್ನು ನಾಗರಿಕ ಸಮಾಜ ಮತ್ತು ದೇಶದ ಒಂದು ವರ್ಗದ ಜನರು ತೀವ್ರ ಕಳವಳದಿಂದ ನೋಡಿದ್ದಾರೆ ಎಂದು ಪಾಕಿಸ್ತಾನವು ಭಾರತಕ್ಕೆ ತಿಳಿಸಿತು.
The continuing silence of Modi govt on the call at an extremist Hindutva summit in Dec for genocide of minorities in India, especially the 200 mn Muslim community, begs the question whether the BJP govt supports this call. It is high time international community took note & acted
— Imran Khan (@ImranKhanPTI) January 10, 2022
ಡಿಸೆಂಬರ್ 17-20 ರವರೆಗೆ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ ಅನ್ನು ಜುನಾ ಅಖಾಡಾದ ಯತಿ ನರಸಿಂಹಾನಂದ ಗಿರಿ ಅವರು ಆಯೋಜಿಸಿದ್ದಾರೆ. ಅವರು ಈಗಾಗಲೇ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗಳನ್ನು ಮಾಡಿ ಮತ್ತು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಪೊಲೀಸರ ವಶದಲ್ಲಿದ್ದಾರೆ.
ಸಮಾರಂಭದಲ್ಲಿ ಹಲವಾರು ಭಾಷಣಕಾರರು ಅಲ್ಪಸಂಖ್ಯಾತ ಸಮುದಾಯದ ಜನರನ್ನು ಕೊಲ್ಲಲು ಕರೆ ನೀಡುವ ಉದ್ರೇಕಕಾರಿ ಮತ್ತು ಪ್ರಚೋದನಕಾರಿ ಭಾಷಣಗಳನ್ನು ಮಾಡಿದರು.
ಇತ್ತೀಚೆಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ಜಿತೇಂದ್ರ ನಾರಾಯಣ್ ತ್ಯಾಗಿ ಎಂದು ಹೆಸರು ಬದಲಾಯಿಸಿಕೊಂಡಿದ್ದ ವಸೀಂ ರಿಜ್ವಿ ಮತ್ತು ಗಾಜಿಯಾಬಾದ್‌ನ ದಾಸ್ನಾ ದೇವಸ್ಥಾನದ ಪ್ರಧಾನ ಅರ್ಚಕ ಸಂಸದ್ ಯತಿ ನರಸಿಂಹಾನಂದ್ ಸೇರಿದಂತೆ 15 ಜನರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ.
ಪ್ರಕರಣದ ತನಿಖೆಗಾಗಿ ಐವರು ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಇತ್ತೀಚಿನ ಸಮಾವೇಶದ ವೇಳೆ ದ್ವೇಷಪೂರಿತ ಭಾಷಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ವಿಚಾರಣೆಗೆ ಭಾರತದ ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ. ಎಫ್‌ಐಆರ್ ದಾಖಲು ಮಾಡಿದರೂ ದ್ವೇಷಪೂರಿತ ಭಾಷಣ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಹಿರಿಯ ವಕೀಲ ಕಪಿಲ್ ಸಿಬಲ್ ಸಲ್ಲಿಸಿರುವ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಗಮನಕ್ಕೆ ತಂದಿತು.
ಇದನ್ನೂ ಓದಿ:ABHA: ಡಿಜಿಟಲ್ ಹೆಲ್ತ್ ಮಿಷನ್ಗೆ ಹೊಸ ನಾಮಕಾರಣ, ಗಣರಾಜ್ಯೋತ್ಸವ ದಿನದಂದು ಪ್ರಧಾನಿ ಮೋದಿ ಘೋಷಣೆ
Published On - 10:19 pm, Mon, 10 January 22