ಸಂಜೆ 4 ಗಂಟೆ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಏನಾಗುತ್ತೆ, ಏನಾದರೂ ಕಾಯಿಲೆ ಇದೆಯೇ?

|

Updated on: Jul 03, 2024 | 11:56 AM

ಅಮೆರಿಕ ಅಧ್ಯಕ್ಷ ಜೋ ಬೈಡನ್ ಆರೋಗ್ಯದ ಬಗ್ಗೆ ಇದೀಗ ಪ್ರಶ್ನೆ ಎದ್ದಿದೆ. ಅವರು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿರಬಹುದು ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಶ್ವೇತಭವನವು ಜೋ ಬೈಡನ್ ಕೇವಲ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಕೆಲಸ ಮಾಡಲು ಸಾಧ್ಯ ಎಂದು ಹೇಳಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಸಂಜೆ 4 ಗಂಟೆ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್​ಗೆ ಏನಾಗುತ್ತೆ, ಏನಾದರೂ ಕಾಯಿಲೆ ಇದೆಯೇ?
ಜೋ ಬೈಡನ್
Follow us on

ಅಮೆರಿಕ ಅಧ್ಯಕ್ಷ ಜೋ ಬೈಡನ್(Joe Biden) ಆರೋಗ್ಯ ಅಷ್ಟು ಸರಿಯಾಗಿಲ್ಲ ಅವರು  ಅಧ್ಯಕ್ಷೀಯ ಚುನಾವಣೆಯ ಅಖಾಡದಿಂದ ಹಿಂದೆ ಸರಿಯಲಿದ್ದಾರೆ ಎನ್ನುವ ಅಂತೆ ಕಂತೆಗಳು ಕೇಳಿಬರುತ್ತಿವೆ. ಪ್ರಸ್ತುತ ಜಗತ್ತಿನಲ್ಲಿ ಹಲವು ಕಡೆ ಯುದ್ಧಗಳು ನಡೆಯುತ್ತಿದೆ. ಮೂರನೇ ಮಹಾಯುದ್ಧದ ಅಪಾಯ ಎದುರಾಗಿದೆ. ಪರಮಾಣು ಶಸ್ತ್ರಾಸ್ತ್ರಗಳು ಅಲರ್ಟ್​ ಮೋಡ್​ನಲ್ಲಿವೆ. ಈ ಸಮಯದಲ್ಲಿ ಸೂಪರ್ ಪವರ್ ಆಗಿರುವ ಅಮೆರಿಕ ಮತ್ತು ಅದರ ಅಧ್ಯಕ್ಷರ ಪಾತ್ರ ಮಹತ್ವದ್ದು, ಪ್ರತಿ 24 ಗಂಟೆಗಳಲ್ಲಿ 18 ಗಂಟೆಗಳ ಕಾಲ ಒಂದು ದೇಶದ ಅಧ್ಯಕ್ಷರ ನೆನಪಿನ ಶಕ್ತಿಯಲ್ಲಿ ಕೊರತೆಯುಂಟಾದರೆ ನಿರ್ಧಾರಗಳು ಏನಾಗಬಹುದು ಎಂದು ಊಹಿಸಿ.

ಚುನಾವಣೆಯನ್ನು ಎದುರಿಸುವ ಸಾಮರ್ಥ್ಯ ಅವರಿಗಿಲ್ಲ, ಹಗಲಿನಲ್ಲಿ 6 ಗಂಟೆಗಳ ಕಾಲ ಕೆಲಸ ಮಾಡುವ ಶಕ್ತಿ ಅವರಲ್ಲಿ ಇನ್ನೂ ಉಳಿದಿದೆಯೇ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಶ್ವೇತಭವನ ಮೂಲಗಳು ಉತ್ತರ ನೀಡಿವೆ, ಬೈಡನ್ ಬೆಳಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಕೆಲಸ ಮಾಡುತ್ತಾರೆ, ಇದಕ್ಕೂ ಮೀರಿ ಅವರು ಕೆಲಸ ಮಾಡಿದರೆ ತೊದಲು ಮಾತು ಅಥವಾ ಬಳಲಿಕೆ ಅವರನ್ನು ಕಾಡುತ್ತದೆ ಎಂದು ಹೇಳಿವೆ.
ಈ ಕುರಿತು ಲೇಖಕ ಟಕರ್ ಕಾರ್ಲ್ಸನ್ ಬೈಡನ್​ಗೆ ಅಲ್ಝೈಮರ್ ಕಾಯಿಲೆ ಇದೆ ಎಂದು ಹೇಳಿದ್ದಾರೆ. ಈ ಕಾಯಿಲೆಯು ವ್ಯಕ್ತಿಯ ನೆನಪಿನ ಶಕ್ತಿಯನ್ನು ಕ್ರಮೇಣವಾಗಿ ಕುಂಠಿತಗೊಳಿಸುತ್ತದೆ.

ಮುಖ್ಯವಾಹಿನಿಯ ಮಾಧ್ಯಮಗಳು ಈ ಸತ್ಯವನ್ನು ದೇಶದಿಂದ ಮರೆಮಾಚುತ್ತಿವೆ ಎಂದು ಆರೋಪಿಸಿದ್ದರು.
ಬೈಡನ್ ಬದಲಿಗೆ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಬಹುದು ಎನ್ನುವ ಕೂಗು ಕೇಳಿಬರುತ್ತಿದೆ.

World Alzheimer’s Day: ಅಲ್ಜೈಮರ್​ ಖಾಯಿಲೆಯ ಆರಂಭಿಕ ಲಕ್ಷಣಗಳ ಬಗ್ಗೆ ಗಮನಕೊಡಿ

ಅಮೆರಿಕದ ಮಾಧ್ಯಮಗಳ ವರ್ತನೆ ಆಘಾತಕಾರಿಯಾಗಿದೆ. ಡೆಮಾಕ್ರೆಟಿಕ್ ಪಕ್ಷದಿಂದ ಅಧ್ಯಕ್ಷೀಯ ರೇಸ್​ನಲ್ಲಿ ಜೋ ಬೈಡನ್ ಮುಂದುವರೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಬೈಡನ್ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ ಎಂದು ಸಿಬಿಎಸ್ ನ್ಯೂಸ್ ಸಮೀಕ್ಷೆ ಬಹಿರಂಗಪಡಿಸಿದೆ. ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಅನರ್ಹರು ಎಂದು ಹೇಳಿವೆ.

ಅಧ್ಯಕ್ಷೀಯ ಚುನಾವಣೆ ಹತ್ತಿರದಲ್ಲಿದೆ. ಟ್ರಂಪ್ ಜನಪ್ರಿಯತೆ ಹೆಚ್ಚುತ್ತಿದೆ. ಆದರೆ ಬೈಡನ್ ಅವರ ಆರೋಗ್ಯ ಮತ್ತು ಫಿಟ್‌ನೆಸ್ ಡೆಮಾಕ್ರಟಿಕ್ ಪಕ್ಷದ ಒತ್ತಡವನ್ನು ಹೆಚ್ಚಿಸುತ್ತಿದೆ.

ಟ್ರಂಪ್ ಮತ್ತು ಬಿಡೆನ್ ಅಧ್ಯಕ್ಷೀಯ ಚರ್ಚೆಯನ್ನು ನಡೆಸಿದಾಗ, ಬೈಡನ್ ಕೆಮ್ಮುತ್ತಿದ್ದರು. ಎಡವುತ್ತಿದ್ದರು, ನಾಲಿಗೆ ತೊದಲುತ್ತಿತ್ತು. ಈ ಮೊದಲು ಇಟಲಿಗೆ ಜಿ7 ಸಭೆಗೆ ಹೋದಾಗ ಇದ್ದಕ್ಕಿದ್ದಂತೆ ಎಲ್ಲೋ ನಡೆದುಕೊಂಡು ಹೋಗಿಬಿಡುತ್ತಿದ್ದರು. ಕೆಲವೊಮ್ಮೆ ವಿಮಾನ ಹತ್ತುವಾಗಲೂ ಎಡವಿದ್ದರು. ಈ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಬೈಡನ್ ಆರೋಗ್ಯ ತುಂಬಾ ಪ್ರಮುಖವಾಗುತ್ತದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 11:56 am, Wed, 3 July 24