ಕಠ್ಮಂಡು ಮೇಯರ್ಗೆ ಬೆಳಗಾವಿಯ ನಂಟು; ನೇಪಾಳದ ಪ್ರಧಾನಿ ಹುದ್ದೆಯ ರೇಸ್ನಲ್ಲಿರುವ ಬಾಲೇಂದ್ರ ಶಾ ಯಾರು?
ಪ್ರಧಾನಿ ಕೆ.ಪಿ ಶರ್ಮಾ ಓಲಿ ಮತ್ತು ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರ ರಾಜೀನಾಮೆಗೆ ಕಾರಣವಾದ ಹಿಂಸಾತ್ಮಕ ಪ್ರತಿಭಟನೆಗಳ ನಂತರ ನೇಪಾಳವು ಇಂದು ಕೊಂಚಸಹಜ ಸ್ಥಿತಿಗೆ ಮರಳುತ್ತಿದೆ. ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಅದರ ಬೆನ್ನಲ್ಲೇ ಮುಂದಿನ ಪ್ರಧಾನಿ ಹುದ್ದೆಯ ರೇಸ್ನಲ್ಲಿ ಬಾಲೇಂದ್ರ ಶಾ ಹೆಸರು ಮುಂಚೂಣಿಯಲ್ಲಿದೆ. ಕರ್ನಾಟಕದ ಬೆಳಗಾವಿಯಲ್ಲಿ ಅಧ್ಯಯನ ಮಾಡುವುದರಿಂದ ಹಿಡಿದು ನೇಪಾಳದ ಪ್ರಧಾನಿ ಹುದ್ದೆಗೆ ಜನರಲ್ ಝಡ್ ಅವರ ನೆಚ್ಚಿನ ಆಯ್ಕೆಯಾಗುವವರೆಗೆ ಬಾಲೆನ್ ಎಂದೇ ಕರೆಸಿಕೊಳ್ಳುವ ಬಾಲೇಂದ್ರ ಶಾ ಬಗ್ಗೆ ನಿಮಗೆಷ್ಟು ಗೊತ್ತು?

ಬೆಂಗಳೂರು, ಸೆಪ್ಟೆಂಬರ್ 10: ನೇಪಾಳದಲ್ಲಿ ಯುವಜನರ ಪ್ರತಿಭಟನೆಯ ಬಳಿಕ ಪ್ರಧಾನಿ ಮತ್ತು ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ. ಈಗ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನೂ ಆಯ್ಕೆ ಮಾಡಲಾಗಿದೆ. ಆದರೆ, ನೇಪಾಳದ (Nepal Protest) ಮುಂದಿನ ಪ್ರಧಾನಿ ಹುದ್ದೆಗೆ ಕಠಮಂಡುವಿನ ಮೇಯರ್ ಬಾಲೇಂದ್ರ ಶಾ ಅಥವಾ ಬಾಲೆನ್ ಶಾ ಅವರ ಹೆಸರು ಗಟ್ಟಿಯಾಗಿ ಕೇಳಿಬರುತ್ತಿದೆ. ಈ ಬಾಲೆನ್ ಶಾಗೂ ಕರ್ನಾಟಕಕ್ಕೂ ನಂಟಿದೆ ಎಂಬ ವಿಷಯ ಅನೇಕರಿಗೆ ಗೊತ್ತಿಲ್ಲ. ಇವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಲ್ಲಿ ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ. ವಿಟಿಯು ಹಳೆಯ ವಿದ್ಯಾರ್ಥಿಯಾಗಿರುವ ಅವರು 2016 ಮತ್ತು 2018ರ ನಡುವೆ ತಮ್ಮ ಸ್ನಾತಕೋತ್ತರ ಪದವಿ ಕೋರ್ಸ್ ಅನ್ನು ಪೂರ್ಣಗೊಳಿಸಿದರು.
ಬಾಲೆನ್ ಎಂದು ಹೆಚ್ಚು ಪ್ರಸಿದ್ಧರಾಗಿರುವ ಅವರು ನೇಪಾಳದ ರಾಜಧಾನಿ ಕಠ್ಮಂಡುವಿನ ಪ್ರಸ್ತುತ ಮೇಯರ್. ರಾಜಕೀಯಕ್ಕೆ ಅವರ ಪ್ರವೇಶವನ್ನು ಅಸಾಂಪ್ರದಾಯಿಕವೆಂದು ಪರಿಗಣಿಸಲಾಗಿತ್ತು. ಆದರೆ ನೇಪಾಳ ದೇಶ ಈಗ ಎದುರಿಸುತ್ತಿರುವ ಬಿಕ್ಕಟ್ಟಿನ ನಡುವೆ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಿ ಯುವಜನರ ಗುಂಪು ಬಾಲೆನ್ ಶಾ ಅವರನ್ನು ಪರಿಗಣಿಸಿದೆ. ಬಾಲೆನ್ ಶಾ 1990ರಲ್ಲಿ ಕಠ್ಮಂಡುವಿನಲ್ಲಿ ಮೈಥಿಲ್ ಮಾಧೇಸಿ ಮೂಲದ ನೇವರ್ ಬೌದ್ಧ ಕುಟುಂಬದಲ್ಲಿ ಜನಿಸಿದರು. ನೇಪಾಳದ ಜನಪ್ರಿಯ ರ್ಯಾಪರ್ ಕೂಡ ಆಗಿರುವ ಅವರ ಸಾಹಿತ್ಯವು ಭ್ರಷ್ಟಾಚಾರ, ಅಸಮಾನತೆ ಮತ್ತು ದೇಶದಲ್ಲಿನ ಬದಲಾವಣೆಗಳ ಬೇಡಿಕೆಯ ಸುತ್ತ ಸುತ್ತುತ್ತದೆ.
ಇದನ್ನೂ ಓದಿ: ಪ್ರತಿಭಟನಾಕಾರರ ಕಿಚ್ಚಿಗೆ ಸುಟ್ಟು ಕರಕಲಾದ ನೇಪಾಳದ ಅತಿ ಎತ್ತರದ ಹೋಟೆಲ್
Balen Shah, Mayor of Kathmandu, ex Rapper, independent candidate. Has wet dreams of Greater Nepal which includes Bihar’s Mithila region. Anti India, known for encouraging violence.
Met the US Ambassador, believed to be the force behind the protests, popular with Nepali… pic.twitter.com/FbANwXgeRS
— Lone Wolf Ratnakar (@sadaashree) September 10, 2025
ಅವರು ನೇಪಾಳದಲ್ಲಿ ಸಿವಿಲ್ ಎಂಜಿನಿಯರಿಂಗ್ ಅನ್ನು ಅಧ್ಯಯನ ಮಾಡಿದರು. ನಂತರ ಕರ್ನಾಟಕದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (ವಿಟಿಯು) ಸ್ಟ್ರಕ್ಷರಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. 2022ರಲ್ಲಿ ಅವರು ಕಠ್ಮಂಡುವಿನ ಮೇಯರ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಭಾಗವಹಿಸಿದರು. ಇತರ ಹಳೆಯ ಪಕ್ಷಗಳ ಸ್ಪರ್ಧಿಗಳನ್ನು ಸೋಲಿಸಿ 61,000ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದರು.
Balen, your time is now. Take control and lead us to greater good.
— ईन्जल (@gooneriinjal) September 9, 2025
ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ನಿಷೇಧವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೂ, ಬಾಲೆನ್ ಶಾ ಅವರು ಜನರಲ್ ಝಡ್ ಪ್ರತಿಭಟನೆಗಳಿಗೆ ತಮ್ಮ ಬೆಂಬಲವನ್ನು ತೋರಿಸಲು ಫೇಸ್‌ಬುಕ್‌ನಲ್ಲಿ ಪೋಸ್ಟ್ಗಳನ್ನು ಮಾಡುತ್ತಲೇ ಇದ್ದಾರೆ. ಸರ್ಕಾರ ವಿರೋಧಿ ಪ್ರತಿಭಟನೆಗಳ ನಡುವೆ, ಯುವ ಪ್ರತಿಭಟನಾಕಾರರ ಬೆಂಬಲ ಪಡೆದಿರುವ ಕಠ್ಮಂಡು ಮೇಯರ್ ಬಾಲೇಂದ್ರ ಶಾ ಅವರನ್ನು ಮುಂದಿನ ಪ್ರಧಾನಿ ಎಂದೇ ಬಿಂಬಿಸಲಾಗುತ್ತಿದೆ.
ಇದನ್ನೂ ಓದಿ: ನೇಪಾಳದಲ್ಲಿ ಮಿತಿ ಮೀರಿದ ಹಿಂಸಾಚಾರ; ಪ್ರತಿಭಟನಾಕಾರರಿಂದ ಮಾಜಿ ಪ್ರಧಾನಿಯ ಪತ್ನಿಯ ಸಜೀವ ದಹನ!
ನೇಪಾಳದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದಾರೆ.
🌟🇳🇵 Breaking: Mayor Balen Shah to Represent PM Post & Sapath Grahan — Follow us for updates Historic moment in Kathmandu: Balen Shah represents PM post, oath-taking underway. Hope for stability & progress!#BalenShah #NepalPolitics #SapathGrahan #NepalGovernment #BreakingNepal pic.twitter.com/OEA3gM8l7t
— TikTube X News (@TikTubeXNews) September 10, 2025
“ಪ್ರಿಯ ಬಾಲೆನ್, ಈಗ ಸಮಯ ಬಂದಿದೆ. ದಯವಿಟ್ಟು ಮುಂದೆ ಬಂದು ದೇಶವನ್ನು ಮುನ್ನಡೆಸಿರಿ. ಇಡೀ ನೇಪಾಳ ನಿಮ್ಮೊಂದಿಗಿದೆ” ಎಂದು ಬಳಕೆದಾರರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಾಲೆನ್ ಮುಂದಿನ ಪ್ರಧಾನಿಯಾದರೆ ಅದು “ಪೀಳಿಗೆಯ ಬದಲಾವಣೆ”ಯನ್ನು ಸೂಚಿಸುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. “ಮೇಯರ್‌ನಿಂದ ರಾಷ್ಟ್ರೀಯ ನಾಯಕನಾಗಿ, ಅವರ ಭ್ರಷ್ಟಾಚಾರ ವಿರೋಧಿ ಇಮೇಜ್ ಮತ್ತು ವಿದ್ಯಾರ್ಥಿಗಳ ಬೆಂಬಲ ಅವರನ್ನು ಈ ಚಳವಳಿಯ ನೇತಾರನನ್ನಾಗಿ ಮಾಡುತ್ತದೆ. ನೇಪಾಳವು ಹೊಸ ರಾಜಕೀಯ ಯುಗದ ಹುಟ್ಟಿಗೆ ಸಾಕ್ಷಿಯಾಗಬಹುದು” ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:47 pm, Wed, 10 September 25




