ಬುರ್ಜ್ ಖಲೀಫಾದ ಮೇಲಿನ ಮಹಡಿಗೆ ಪ್ರವಾಸಿಗರಿಗೆ ಏಕೆ ಪ್ರವೇಶವಿಲ್ಲ?; ಇಲ್ಲಿದೆ ರಹಸ್ಯ
ಜಗತ್ತಿನ ಯಾರು ಬೇಕಾದರೂ ಬುರ್ಜ್ ಖಲೀಫಾಗೆ ಭೇಟಿ ನೀಡಬಹುದು. ಅದಕ್ಕಾಗಿ ನೀವು ಟಿಕೆಟ್ ಖರೀದಿಸಬೇಕು. ನೀವು ಇಲ್ಲಿ ಭೇಟಿ ನೀಡುವ ಪ್ರತಿಯೊಂದು ಸ್ಥಳವು ತನ್ನದೇ ಆದ ವಿಭಿನ್ನ ಬೆಲೆಗಳನ್ನು ಹೊಂದಿದೆ. ಆದರೆ, ಇಲ್ಲಿನ ಮೇಲಿನ ಮಹಡಿಯಲ್ಲಿ ಏನಿದೆ? ಎಂಬ ಕುತೂಹಲ ನಿಮಗಿದ್ದರೂ ಅಲ್ಲಿಗೆ ತೆರಳಲು ಅನುಮತಿ ಸಿಗುವುದಿಲ್ಲ.
ದುಬೈ: ದುಬೈನಲ್ಲಿರುವ ಬುರ್ಜ್ ಖಲೀಫಾದ ವೈಶಿಷ್ಟ್ಯಗಳು ಇಡೀ ಜಗತ್ತನ್ನು ಆಕರ್ಷಿಸುತ್ತಿವೆ. ಅದಕ್ಕಾಗಿಯೇ ಇದನ್ನು ವಿಶ್ವದ ಅತ್ಯಂತ ಪ್ರಸಿದ್ಧ ಕಟ್ಟಡ ಎಂದು ಕರೆಯಲಾಗುತ್ತದೆ. ಆದರೆ, ಈ ಬುರ್ಜ್ ಖಲೀಫಾ ಬಗ್ಗೆ ನಿಮಗೆ ಗೊತ್ತಿಲ್ಲದ ಕೆಲವು ಸಂಗತಿಗಳ ಮಾಹಿತಿ ಇಲ್ಲಿದೆ. ಬುರ್ಜ್ ಖಲೀಫಾಗೆ ದಿನವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದರಲ್ಲಿರುವ ವೈಶಿಷ್ಟ್ಯಗಳನ್ನು ಕಂಡು ಬೆರಗಾಗುತ್ತಾರೆ. ಆದರೆ, ಪ್ರವಾಸಿಗರು ಈ ಬುರ್ಜ್ ಖಲೀಫಾದ ಅರ್ಧ ಭಾಗಕ್ಕೆ ಮಾತ್ರ ಭೇಟಿ ನೀಡಲು ಅವಕಾಶವಿದೆ. ಸಾವಿರಾರು ರೂ. ಕೊಟ್ಟು ಟಿಕೆಟ್ ಖರೀದಿಸಿದರೂ ಪೂರ್ತಿ ಬುರ್ಜ್ ಖಲೀಫಾ ನೋಡಲು ಅನುಮತಿ ಇಲ್ಲ. ಯಾಕೆ ಎಂದು ಗೊತ್ತೇ?
ಜನರು ಬುರ್ಜ್ ಖಲೀಫಾದ ಮೇಲಿನ ಮಹಡಿಗೆ ಹೋಗಲು ಸಾಧ್ಯವಿಲ್ಲ. ವಿವಿಐಪಿಗಳಿಗೆ ಮಾತ್ರ ಇಲ್ಲಿಗೆ ಪ್ರವೇಶ ನೀಡಲಾಗುತ್ತದೆ. ಸಾಮಾನ್ಯ ವ್ಯಕ್ತಿಗೆ ಇಲ್ಲಿಗೆ ಹೋಗಲು ಅವಕಾಶವಿಲ್ಲ. ಜಗತ್ತಿನ ಯಾರು ಬೇಕಾದರೂ ಬುರ್ಜ್ ಖಲೀಫಾಗೆ ಭೇಟಿ ನೀಡಬಹುದು. ಅದಕ್ಕಾಗಿ ನೀವು ಟಿಕೆಟ್ ಖರೀದಿಸಬೇಕು. ನೀವು ಇಲ್ಲಿ ಭೇಟಿ ನೀಡುವ ಪ್ರತಿಯೊಂದು ಸ್ಥಳವು ತನ್ನದೇ ಆದ ವಿಭಿನ್ನ ಬೆಲೆಗಳನ್ನು ಹೊಂದಿದೆ. ಈ ಟಿಕೆಟ್‌ನೊಂದಿಗೆ ಮಾತ್ರ ನೀವು ಪ್ರವೇಶವನ್ನು ಪಡೆಯಬಹುದು. ಆದರೆ, ಇಲ್ಲಿನ ಮೇಲಿನ ಮಹಡಿಯಲ್ಲಿ ಏನಿದೆ? ಎಂಬ ಕುತೂಹಲ ನಿಮಗಿದ್ದರೂ ಅಲ್ಲಿಗೆ ತೆರಳಲು ಅನುಮತಿ ಸಿಗುವುದಿಲ್ಲ.
ಇದನ್ನೂ ಓದಿ: ದುಬೈನ ಬುರ್ಜ್ ಖಲೀಫಾದ ಅದ್ಭುತ ದೃಶ್ಯಗಳು; ವೈರಲ್ ವಿಡಿಯೋ
ಬುರ್ಜ್ ಖಲೀಫಾದ ಮೇಲಿನ ಮಹಡಿಯಲ್ಲಿ ಕಾರ್ಪೊರೇಟ್ ಕಚೇರಿ ಮತ್ತು ವಿಶೇಷ ಕಚೇರಿಗಳು ಇವೆ. ಇಲ್ಲಿಗೆ ಸಾಮಾನ್ಯ ಜನರಿಗೆ ಪ್ರವೇಶವಿಲ್ಲ. ನೀವು ಮೇಲಿನ ಮಹಡಿಗೆ ಹೋಗಲು ಬಯಸಿದರೆ ಅದಕ್ಕಾಗಿ ವಿಶೇಷವಾದ ಅನುಮತಿ ಪಡೆಯಬೇಕು. ಆದರೆ ಸಾಮಾನ್ಯ ಜನರಿಗೆ ಭದ್ರತೆ ಮತ್ತು ಗೌಪ್ಯತೆಯ ಕಾರಣಗಳಿಗಾಗಿ ಅನುಮತಿಯನ್ನು ನೀಡುವುದಿಲ್ಲ. ಈ ಕಚೇರಿಯಲ್ಲಿ ಪ್ರವಾಸಿಗರಿಗೆ ಪ್ರವೇಶವಿಲ್ಲ. ದೊಡ್ಡ ಸೆಲೆಬ್ರಿಟಿಗಳು ಮಾತ್ರ ಮೇಲಿನ ಮಹಡಿಗೆ ಹೋಗುವುದಕ್ಕೆ ಮತ್ತು ಇಲ್ಲಿಗೆ ಸಾಮಾನ್ಯ ಜನರಿಗೆ ಪ್ರವೇಶವಿಲ್ಲದಿರುವುದಕ್ಕೆ ಇದೇ ಕಾರಣ.
ಬುರ್ಜ್ ಖಲೀಫಾ ಅತ್ಯಂತ ವೇಗದ ಮತ್ತು ಎತ್ತರದ ಎಲಿವೇಟರ್ ಅನ್ನು ಹೊಂದಿದೆ. ಇದು ಒಟ್ಟು 57 ಲಿಫ್ಟ್‌ಗಳನ್ನು ಹೊಂದಿದೆ. ಅದರ ವೇಗ ಸೆಕೆಂಡಿಗೆ ಸುಮಾರು 10 ಮೀಟರ್. ಬುರ್ಜ್ ಖಲೀಫಾ 7 ವಿಶ್ವ ದಾಖಲೆಗಳನ್ನು ಹೊಂದಿದೆ. ಬುರ್ಜ್ ಖಲೀಫಾ 163 ಮಹಡಿಗಳು, 304 ಹೋಟೆಲ್‌ಗಳು ಮತ್ತು ಒಟ್ಟು 900 ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ.
ಇದನ್ನೂ ಓದಿ: ಬುರ್ಜ್ ಖಲೀಫಾದಲ್ಲಿ ರಿಲೀಸ್ ಆಗಲಿದೆ ‘ಜವಾನ್’ ಟ್ರೇಲರ್? ದಿನಾಂಕ ತಿಳಿಸಿದ ಶಾರುಖ್ ಖಾನ್
2009ರಲ್ಲಿ ನಿರ್ಮಾಣವಾದ ಬುರ್ಜ್ ಖಲೀಫಾ ವಿಶ್ವದ ಅತಿ ಎತ್ತರದ ಕಟ್ಟಡವಾಗಿದ್ದು, 828 ಮೀಟರ್ ಎತ್ತರದಲ್ಲಿದೆ. ಇದು ಐಫೆಲ್ ಟವರ್‌ಗಿಂತ 3 ಪಟ್ಟು ಎತ್ತರ ಮತ್ತು ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ 2 ಪಟ್ಟು ಎತ್ತರವಾಗಿದೆ. ಬುರ್ಜ್ ಖಲೀಫಾ ಕಟಟ್ಡವನ್ನು ಕೇವಲ 6 ವರ್ಷಗಳಲ್ಲಿ ಪೂರ್ಣಗೊಳಿಸಲಾಯಿತು. ಬುರ್ಜ್ ಖಲೀಫಾ ನಿರ್ಮಿಸಲು 3,30,000 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಅನ್ನು ಬಳಸಲಾಗಿದೆ. ಇದು 1,00,000 ಆನೆಗಳ ತೂಕಕ್ಕೆ ಸಮನಾಗಿರುತ್ತದೆ. ಬುರ್ಜ್ ಖಲೀಫಾವನ್ನು ನಿರ್ಮಿಸಲು ಅಗತ್ಯವಿರುವ ಅಲ್ಯೂಮಿನಿಯಂ 5 ಏರ್‌ಬಸ್ A380 ವಿಮಾನಗಳ ತೂಕಕ್ಕೆ ಸಮನಾಗಿದೆ. ಬುರ್ಜ್ ಖಲೀಫಾದ ಮುಂಭಾಗವು ಸಂಪೂರ್ಣವಾಗಿ ಕೈಯಿಂದ ಕತ್ತರಿಸಲ್ಪಟ್ಟ 26,000 ಗಾಜಿನ ಫಲಕಗಳಿಂದ ಮಾಡಲ್ಪಟ್ಟಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ