Nobel Peace Prize 2023: ಇರಾನ್‌ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದ ನರ್ಗೆಸ್ ಮೊಹಮ್ಮದಿಗೆ ನೊಬೆಲ್ ಶಾಂತಿ ಪ್ರಶಸ್ತಿ

ಇರಾನ್‌ ನರ್ಗೆಸ್ ಮೊಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ ಮತ್ತು ಎಲ್ಲರಿಗೂ ಮಾನವ ಹಕ್ಕುಗಳನ್ನು ನೀಡಬೇಕು ಎಂದು ಹೋರಾಟ ಮಾಡಿದ ದಿಟ್ಟ ಮಹಿಳೆಗೆ ಈ ಗೌರವ ನೀಡಲಾಗಿದೆ.

Nobel Peace Prize 2023: ಇರಾನ್‌ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದ ನರ್ಗೆಸ್ ಮೊಹಮ್ಮದಿಗೆ ನೊಬೆಲ್ ಶಾಂತಿ ಪ್ರಶಸ್ತಿ
Narges Mohammadi
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 06, 2023 | 4:27 PM

ಇರಾನ್‌ ನರ್ಗೆಸ್ ಮೊಹಮ್ಮದಿ ಅವರಿಗೆ 2023ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧದ ಹೋರಾಟ ಮತ್ತು ಎಲ್ಲರಿಗೂ ಮಾನವ ಹಕ್ಕುಗಳನ್ನು ನೀಡಬೇಕು ಎಂದು ಹೋರಾಟ ಮಾಡಿದ ದಿಟ್ಟ ಮಹಿಳೆಗೆ ಈ ಗೌರವ ನೀಡಲಾಗಿದೆ. ಮೊಹಮ್ಮದಿ ಇರಾನ್‌ನ ಪ್ರಮುಖ ಮಾನವ ಹಕ್ಕುಗಳ ಕಾರ್ಯಕರ್ತರಲ್ಲೊಬ್ಬರು, ಅವರು ಮಹಿಳಾ ಹಕ್ಕುಗಳು ಮತ್ತು ಮರಣದಂಡನೆ ರದ್ದುಗೊಳಿಸುವಿಕೆಗಾಗಿ ದೇಶದದ್ಯಾಂತ ಹೋರಾಟ ನಡೆಸಿದ್ದಾರೆ. ಫ್ರಂಟ್ ಲೈನ್ ಡಿಫೆಂಡರ್ಸ್ ಹಕ್ಕುಗಳ ಸಂಘಟನೆಯ ಪ್ರಕಾರ, ನರ್ಗೆಸ್ ಮೊಹಮ್ಮದಿ ಅವರು ಪ್ರಸ್ತುತ ಟೆಹ್ರಾನ್‌ನ ಎವಿನ್ ಜೈಲಿನಲ್ಲಿದ್ದಾರೆ. ಸುಮಾರು 12 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ನರ್ಗೆಸ್ ಮೊಹಮ್ಮದಿ ರಾಜ್ಯದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿ ಅವರನ್ನು ಬಂಧಿಸಲಾಗಿತ್ತು.

ಇನ್ನು ಈ ನೊಬೆಲ್​​ ಪ್ರಶಸ್ತಿಯನ್ನು ಪಡೆದ 19ನೇ ಮಹಿಳೆ ನರ್ಗೆಸ್ ಮೊಹಮ್ಮದಿ. 2021ರಲ್ಲಿ ರಷ್ಯಾದ ಡಿಮಿಟ್ರಿ ಮುರಾಟೊವ್ ಈ ಪ್ರಶಸ್ತಿಯನ್ನು ಪಡೆದಿದ್ದರು. ಇನ್ನು ನರ್ಗೆಸ್ ಮೊಹಮ್ಮದಿ ಅವರು ಕಟ್ಟುನಿಟ್ಟಾದ ಹಿಜಾಬ್ ಮಾನದಂಡಗಳನ್ನು ಉಲ್ಲಂಘಿಸಿದಕ್ಕೆ, ದೇಶದlಲ್ಲಿ ನೈತಿಕ ಪೊಲೀಸ್​​​​ಗಿರಿ ನಡೆಸಿ, 22 ವರ್ಷದ ಮಹ್ಸಾ ಅಮಿನಿಯ ಸಾವಿನ ಕುರಿತು ಇರಾನ್‌ನಲ್ಲಿ ತಿಂಗಳುಗಟ್ಟಲೆ ಪ್ರತಿಭಟನೆಯನ್ನು ನಡೆಸಿದ್ದಾರೆ. ಇದಕ್ಕಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿಯ ವಿಜೇತರನ್ನು ನಾರ್ವೆಯ ತಜ್ಞರ ಸಮಿತಿಯು 350 ನಾಮನಿರ್ದೇಶನಗಳ ಪಟ್ಟಿಯಿಂದ ಇವರನ್ನು ಆಯ್ಕೆ ಮಾಡಿದೆ. ಈ ಹಿಂದೆ ಇದೆ ಪ್ರಶಸ್ತಿಯನ್ನು ನೆಲ್ಸನ್ ಮಂಡೇಲಾ, ಬರಾಕ್ ಒಬಾಮಾ, ಮಿಖಾಯಿಲ್ ಗೋರ್ಬಚೇವ್, ಆಂಗ್ ಸಾನ್ ಸೂ ಕಿ ಮತ್ತು ವಿಶ್ವಸಂಸ್ಥೆಯ ಇತರ ಸಾಧಕರಿಗೆ ನೀಡಲಾಗಿತ್ತು.

ಇದನ್ನೂ ಓದಿ: ನಾರ್ವೆ ಲೇಖಕ ಜಾನ್ ಫಾಸ್ಸೆಗೆ ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ

ನೊಬೆಲ್​​ ಶಾಂತಿ ಪ್ರಶಸ್ತಿಯಲ್ಲಿ ಇಲ್ಲಿಯವರೆಗೆ ಐದನೇ ಕ್ಷೇತ್ರಗಳಿಗೆ ನೀಡಲಾಗಿದೆ. ನಾರ್ವೆಯ ಬರಹಗಾರ ಜಾನ್ ಫಾಸ್ಸೆ ಅವರಿಗೆ ಸಾಹಿತ್ಯಕ್ಕಾಗಿ ಪ್ರಶಸ್ತಿಯನ್ನು ನೀಡಿತು. ಬುಧವಾರ, ರಸಾಯನಶಾಸ್ತ್ರದ ಪ್ರಶಸ್ತಿಯನ್ನು ಯುಎಸ್ ವಿಜ್ಞಾನಿಗಳಾದ ಮೌಂಗಿ ಬವೆಂಡಿ, ಲೂಯಿಸ್ ಬ್ರೂಸ್ ಮತ್ತು ಅಲೆಕ್ಸಿ ಎಕಿಮೊವ್ ನೀಡಲಾಗಿದೆ.

ಭೌತಶಾಸ್ತ್ರದ ನೊಬೆಲ್​​​ನ್ನು ಮಂಗಳವಾರ ಫ್ರೆಂಚ್-ಸ್ವೀಡಿಷ್ ಭೌತಶಾಸ್ತ್ರಜ್ಞ ಅನ್ನೆ ಎಲ್’ಹುಲ್ಲಿಯರ್, ಫ್ರೆಂಚ್ ವಿಜ್ಞಾನಿ ಪಿಯರೆ ಅಗೋಸ್ಟಿನಿ ಮತ್ತು ಹಂಗೇರಿಯನ್ ಮೂಲದ ಫೆರೆಂಕ್ ಕ್ರೌಸ್ಜ್ ನೀಡಿದ್ದಾರೆ. ಹಂಗೇರಿಯನ್-ಅಮೆರಿಕನ್ ಕ್ಯಾಟಲಿನ್ ಕರಿಕೊ ಮತ್ತು ಅಮೇರಿಕನ್ ಡ್ರೂ ವೈಸ್‌ಮನ್ ಅವರು ಸೋಮವಾರ ವೈದ್ಯಕೀಯದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:53 pm, Fri, 6 October 23

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ