ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಭಯೋತ್ಪಾದಕರಿಂದ ಎರಡು ಬಾರಿ ಅಪಹರಣಕ್ಕೊಳಗಾದ ಕಾಂಗೋ ಮಹಿಳೆಯೊಬ್ಬರು ಪದೇ ಪದೇ ಅತ್ಯಾಚಾರಕ್ಕೊಳಗಾಗಿದ್ದರು. ಅದೇ ಸಮಯದಲ್ಲಿ, ಮಾನವ ಮಾಂಸವನ್ನು ಬಲವಂತವಾಗಿ ಬೇಯಿಸುವಂತೆ ಹಾಗೂ ಆ ಆಹಾರವನ್ನು ತಿನ್ನುವಂತೆ ಒತ್ತಾಯಿಸಲಾಗುತ್ತಿತ್ತು ಎನ್ನುವ ವಿಷಯ ಬೆಳಕಿಗೆ ಬಂದಿದೆ.
ಕಾಂಗೋದ ಹಕ್ಕುಗಳ ಗುಂಪು ಬುಧವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಇದನ್ನು ತಿಳಿಸಿದೆ. ಮಹಿಳಾ ಹಕ್ಕುಗಳ ಗುಂಪಿನ ಮಹಿಳಾ ಸಾಲಿಡಾರಿಟಿ ಫಾರ್ ಇಂಟಿಗ್ರೇಟೆಡ್ ಪೀಸ್ ಅಂಡ್ ಡೆವಲಪ್‌ಮೆಂಟ್ (SOFEPADI) ನ ಅಧ್ಯಕ್ಷ ಜೂಲಿಯನ್ ಲುಸೆಂಗ್ ಈ ವಿಷಯವನ್ನು ತಿಳಿಸಿದರು.
ರಾಯಿಟರ್ಸ್ ಪ್ರಕಾರ, ಯುಎನ್ ಸರ್ಕಾರ ಮತ್ತು ಬಂಡುಕೋರ ಗುಂಪುಗಳ ನಡುವೆ ಕಾದಾಟ ನಡೆಯುತ್ತಲೇ ಇದೆ. ಮೇ ಅಂತ್ಯದಿಂದ ಅಲ್ಲಿ ಹಿಂಸಾಚಾರ ಹೆಚ್ಚಾಗಿದೆ.
ಮಹಿಳೆಯನ್ನು ಕೊಡೆಕೊ ಉಗ್ರಗಾಮಿಗಳು ಅಪಹರಿಸಿದ್ದರು ಆಕೆಯನ್ನು ಪದೇ ಪದೇ ಅತ್ಯಾಚಾರ ಮಾಡಿದ್ದಷ್ಟೇ ಅಲ್ಲದೆ ಆಕೆಗೆ ಮಾನವರ ಮಾಂಸವನ್ನು ಬೇಯಿಸಿ ತಿನ್ನುವಂತೆ ಹಿಂಸೆ ನೀಡಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.
ಕೆಲವು ದಿನಗಳ ನಂತರ ಮಹಿಳೆಯನ್ನು ಬಿಡುಗಡೆ ಮಾಡಲಾಯಿತು, ಆದರೆ ಮನೆಗೆ ಹಿಂದಿರುಗಿದ ನಂತರ ಅವಳನ್ನು ಮತ್ತೊಂದು ಭಯೋತ್ಪಾದಕ ಗುಂಪು ಅಪಹರಿಸಿತು, ಅವರ ಸದಸ್ಯರು ಪದೇ ಪದೇ ಅತ್ಯಾಚಾರ ಎಸಗಿದ್ದರು ಎಂದು ಲುಸೆನ್ಜ್ ಹೇಳಿದರು. ಅದೇ ಸಮಯದಲ್ಲಿ ಮತ್ತೊಮ್ಮೆ ಮಾನವ ಮಾಂಸವನ್ನು ಬೇಯಿಸಿ ತಿನ್ನಲು ಒತ್ತಾಯಿಸಲಾಗುತ್ತಿತ್ತು ಆದಾಗ್ಯೂ, ಮಹಿಳೆ ಅಂತಿಮವಾಗಿ ಬದುಕುಳಿದಿದ್ದಾರೆ ಎಂದಿದ್ದಾರೆ.
Published On - 1:16 pm, Thu, 30 June 22