World Asteroid Day 2022: ತುಂಗುಸ್ಕಾ ಘಟನೆಯ ವಾರ್ಷಿಕೋತ್ಸವದ ಇತಿಹಾಸ, ಮಹತ್ವ ಮತ್ತು ಥೀಮ್ ಬಗ್ಗೆ ತಿಳಿಯೋಣ ಬನ್ನಿ

ಸೌರವ್ಯೂಹದಲ್ಲಿರುವ ಬಹಳ ಸಣ್ಣ ಗ್ರಹವೆಂದರೆ ಅದು ಕ್ಷುದ್ರಗ್ರಹ. ಈ ಗ್ರಹಗಳು ಭೂಮಿ ಮೇಲೆ ಮಾಡಿದ ಅನಾಹುತದ ಇತಿಹಾಸ, ಕ್ಷುದ್ರಗ್ರಹ ದಿನದ ಮಹತ್ವ, ಈ ಬಾರಿಯ ಥೀಮ್ ಇತ್ಯಾದಿಗಳ ಮಾಹಿತಿ ಇಲ್ಲಿದೆ ನೀಡಿ.

World Asteroid Day 2022: ತುಂಗುಸ್ಕಾ ಘಟನೆಯ ವಾರ್ಷಿಕೋತ್ಸವದ ಇತಿಹಾಸ, ಮಹತ್ವ ಮತ್ತು ಥೀಮ್ ಬಗ್ಗೆ ತಿಳಿಯೋಣ ಬನ್ನಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Rakesh Nayak Manchi

Updated on:Jun 30, 2022 | 9:12 AM

World Asteroid Day 2022: ಸೌರವ್ಯೂಹದಲ್ಲಿರುವ ಬಹಳ ಸಣ್ಣ ಗ್ರಹವೆಂದರೆ ಅದು ಕ್ಷುದ್ರಗ್ರಹ(Asteroid). ಮಂಗಳ ಹಾಗೂ ಗುರು ಗ್ರಹಗಳ ನಡುವೆ ಅಸಂಖ್ಯಾತ ಕ್ಷುದ್ರಗ್ರಹಗಳಿದ್ದು, ಇವುಗಳು ಮಿಲಿಯಾಂತರ ವರ್ಷಗಳ ಹಿಂದೆ ಚೂರುಚೂರಾದ ಗ್ರಹಗಳಿಂದ ಹುಟ್ಟಿಕೊಂಡಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಇಂಥ ಕ್ಷುದ್ರಗಳಿಗೂ ಒಂದು ದಿನ ಇದೆ ಎಂದು ನಿಮಗೆ ತಿಳಿದಿದೆಯೇ? ತುಂಗುಸ್ಕಾ ಘಟನೆಯ ನೆನಪಿನಲ್ಲಿ ಪ್ರತಿವರ್ಷ ಜೂ.30ರಂದು ವಿಶ್ವ ಕ್ಷುದ್ರಗ್ರಹ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಆಚರಣೆಯ ಇತಿಹಾಸ(History), ಮಹತ್ವ(Significance) ಮತ್ತು ಥೀಮ್(Theme) ಬಗ್ಗೆ ಈ ಸುದ್ದಿ ಮೂಲಕ ತಿಳಿಯೋಣ.

ಏನಿದು ತುಂಗುಸ್ಕಾ ಘಟನೆ?

1908ರ ಜೂ.30ರಂದು ಸೈಬೀರಿಯಾದ ತುಂಗುಸ್ಕಾ ಎಂಬ ಪ್ರದೇಶದಲ್ಲಿ ಕ್ಷುದ್ರಗ್ರಹಗಳು ಅಪ್ಪಳಿಸಿ ಅಪಾರ ಪ್ರಮಾಣದಲ್ಲಿ ಹಾನಿಗೊಳಿಸಿತ್ತು. ಈ ದುರ್ಘನೆಯಲ್ಲಿ ರಷ್ಯಾದ 80,000 ಚದರ ಕಿಲೋಮೀಟರ್ ಅರಣ್ಯ ಪ್ರದೇಶದಲ್ಲಿದ್ದ ಸುಮಾರು 2000 ಮಿಲಿಯನ್ ಮರಗಳು ನಾಶವಾಗಿದ್ದವು.

ಇದನ್ನೂ ಓದಿ: World Social Media Day: ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗರು ಇವರೆ ನೋಡಿ

ಆಚರಣೆಯ ಇತಿಹಾಸ

ಸೈಬೀರಿಯಾದ ತುಂಗುಸ್ಕಾ ಘಟನೆಯ ನೆನಪಿಗಾಗಿ ಜೂನ್ 30 ರಂದು ಆಚರಿಸಲಾಗುವ ವಿಶ್ವ ಕ್ಷುದ್ರಗ್ರಹ ದಿನವು ವಿಶ್ವಸಂಸ್ಥೆ ಅನುಮೋದಿತ ಜಾಗತಿಕ ಜಾಗೃತಿ ಅಭಿಯಾನ ಕಾರ್ಯಕ್ರಮವಾಗಿದೆ. ಡಿಸೆಂಬರ್ 2016 ರಲ್ಲಿ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಷ್ಯಾದ ಒಕ್ಕೂಟದ ಸೈಬೀರಿಯಾದ ಮೇಲೆ 1908, ಜೂನ್ 30ರಂದು ಸಂಭವಿಸಿದ ತುಂಗುಸ್ಕಾ ಪ್ರಭಾವದ ಬಗ್ಗೆ ಪ್ರತಿ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಾರ್ಷಿಕೋತ್ಸವ ಆಚರಣೆಯ ನಿರ್ಣಯವನ್ನು ಅಂಗೀಕರಿಸಲಾಯಿತು.

ಕ್ಷುದ್ರಗ್ರಹದ ಪ್ರಭಾವದ ಅಪಾಯದ ಬಗ್ಗೆ ಹಾಗೂ ಭವಿಷ್ಯದಲ್ಲಿ ತುಂಗುಸ್ಕಾ ಘಟನೆಯಂಥ ಅನಾಹುತಗಳನ್ನು ಎದುರಿಸಲು ಕ್ಷುದ್ರಗ್ರಹಗಳ ಬಗ್ಗೆ ಅರಿವು, ಹಾನಿ ತಪ್ಪಿಸಲು ಜಾಗತಿಕ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ಬಿಕ್ಕಟ್ಟಿನ ಸಂವಹನ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದೇ ಕ್ಷುದ್ರಗ್ರಹ ದಿನದ ಆಚರಣೆಯ ಉದ್ದೇಶವಾಗಿದೆ.

ಮಹತ್ವ

ಕ್ಷುದ್ರಗ್ರಹವು ಭೂಮಿಗೆ ಘರ್ಷಣೆ ಮಾಡಬಹುದಾದ ವಿನಾಶಕಾರಿ ಪರಿಣಾಮಗಳನ್ನು ವಿಶ್ವ ಕ್ಷುದ್ರಗ್ರಹ ದಿನದಂದು ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ಬ್ರಹ್ಮಾಂಡದ ಸೃಷ್ಟಿಯಲ್ಲಿ ಕ್ಷುದ್ರಗ್ರಹಗಳು ವಹಿಸಿದ ಭಾಗ, ಅವುಗಳ ಸಂಪನ್ಮೂಲಗಳ ಸಂಭಾವ್ಯ ಬಳಕೆಗಳು, ಕ್ಷುದ್ರಗ್ರಹಗಳು ಹೇಗೆ ಹೆಚ್ಚಿನ ಸಂಶೋಧನೆಗೆ ದಾರಿ ಮಾಡಿಕೊಡುತ್ತವೆ, ನಾವು ಕ್ಷುದ್ರಗ್ರಹಗಳ ಪರಿಣಾಮಗಳಿಂದ ಭೂಮಿಯನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ಈ ಆಚರಣೆ ಮೂಲಕ ತಿಳಿದುಕೊಳ್ಳಬಹುದು.

ಈ ಬಾರಿಯ ಥೀಮ್ ಏನು?

ಒಂದೊಂದು ಥೀಮ್ ಇಟ್ಟುಕೊಂಡು ಪ್ರತಿ ವರ್ಷ ಕ್ಷುದ್ರಗ್ರಹ ದಿನವನ್ನು ಆಚರಿಸಲಾಗುತ್ತಿದೆ. ಈ ಬಾರಿ ‘ಚಿಕ್ಕದು ಸುಂದರವಾಗಿದೆ’ ಎಂಬ ಥೀಮ್​ ಮೂಲಕ ಆಚರಿಸಲಾಗುತ್ತಿದೆ.

ಇದನ್ನೂ ಓದಿ: World Social Media Day 2022: ಇಂದು ಸಾಮಾಜಿಕ ಮಾಧ್ಯಮ ದಿನ; ಸೋಷಿಯಲ್ ಮೀಡಿಯಾದ ಇತಿಹಾಸ, ಪ್ರಾಮುಖ್ಯತೆ ಬಗ್ಗೆ ತಿಳಿಯೋಣ ಬನ್ನಿ

Published On - 9:12 am, Thu, 30 June 22

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ