Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್, ಲಾಕ್​ಡೌನ್ ನಡುವೆ ಭಾರೀ ಕುಸಿತ ಕಂಡ ಕಾಂಡೋಮ್ ಉದ್ಯಮ; ಕಾರಣ ಇಲ್ಲಿದೆ

ವಿಶ್ವಾದ್ಯಂತ ಪ್ರತಿ ಐದು ಕಾಂಡೋಮ್‌ಗಳಲ್ಲಿ ಒಂದನ್ನು ತಯಾರಿಸುವ ಮಲೇಷ್ಯಾ ಮೂಲದ ಕಂಪನಿಯು ಈಗ ಕಾಂಡೋಮ್ ಮಾರಾಟದಲ್ಲಿ ನಷ್ಟ ಉಂಟಾಗಿರುವುದರಿಂದ ವೈದ್ಯಕೀಯ ಹ್ಯಾಂಡ್ ಗ್ಲೌಸ್​ ತಯಾರಿಕೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ.

ಕೊವಿಡ್, ಲಾಕ್​ಡೌನ್ ನಡುವೆ ಭಾರೀ ಕುಸಿತ ಕಂಡ ಕಾಂಡೋಮ್ ಉದ್ಯಮ; ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 10, 2022 | 3:58 PM

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಕಾಂಡೋಮ್​ಗಳ (Condom) ಬಳಕೆಯು ಶೇ. 40ರಷ್ಟು ಕುಸಿದಿರುವುದರಿಂದ ವಿಶ್ವದ ಅತಿದೊಡ್ಡ ಕಾಂಡೋಮ್ ತಯಾರಕ ಕಂಪನಿಗಳು ಕೂಡ ಕೊರೊನಾವೈರಸ್ (Coronavirus) ಹಾವಳಿ ಶುರುವಾದ ನಂತರ ಸಂಕಷ್ಟ ಎದುರಿಸುತ್ತಿದ್ದಾರೆ. ಮೂಲಗಳ ಪ್ರಕಾರ, ಕೊವಿಡ್ (COVID 19) ಮೊದಲ ಅಲೆಯ ಬಳಿಕ ಲೈಂಗಿಕ ಕ್ರಿಯೆಯಲ್ಲಿ ಕಾಂಡೋಮ್ ಬಳಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.

ಕೊರೊನಾವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್‌ ವಿಧಿಸಿ, ವರ್ಕ್ ಫ್ರಂ ಹೋಂ ಆಯ್ಕೆ ನೀಡಿದ್ದರೂ ಜನರು ಲೈಂಗಿಕ ಕ್ರಿಯೆಯ ವೇಳೆ ಗರ್ಭ ನಿರೋಧಕ ಅಥವಾ ಕಾಂಡೋಮ್ ಬಳಸುವ ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂದು ನಿಕ್ಕಿ ಏಷ್ಯಾ ವರದಿ ಮಾಡಿದೆ. ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೋಟೆಲ್‌ಗಳು ಮತ್ತು ಲೈಂಗಿಕ ಸ್ವಾಸ್ಥ್ಯ ಕೇಂದ್ರಗಳನ್ನು ಮುಚ್ಚುವುದು, ವಿವಿಧ ಸರ್ಕಾರಗಳು ಕಾಂಡೋಮ್ ಹ್ಯಾಂಡ್‌ಔಟ್ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿರುವುದು ಕರೇಕ್ಸ್‌ನ ಕಾಂಡೋಮ್‌ಗಳ ಮಾರಾಟದ ಕುಸಿತಕ್ಕೆ ಕಾರಣವಾಯಿತು ಎಂದು ಕರೇಕ್ಸ್​ ಬಿಎಚ್​ಡಿಯ ಮುಖ್ಯಸ್ಥ ಗೋಹ್ ಮಿಯಾಹ್ ಕಿಯಾಟ್ ಹೇಳಿದ್ದಾರೆ.

ವಿಶ್ವಾದ್ಯಂತ ಪ್ರತಿ ಐದು ಕಾಂಡೋಮ್‌ಗಳಲ್ಲಿ ಒಂದನ್ನು ತಯಾರಿಸುವ ಮಲೇಷ್ಯಾ ಮೂಲದ ಕಂಪನಿಯು ಈಗ ಕಾಂಡೋಮ್ ಮಾರಾಟದಲ್ಲಿ ನಷ್ಟ ಉಂಟಾಗಿರುವುದರಿಂದ ವೈದ್ಯಕೀಯ ಹ್ಯಾಂಡ್ ಗ್ಲೌಸ್​ ತಯಾರಿಕೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದೆ. ಹಾಗೇ, ಈ ವರ್ಷದ ಮಧ್ಯದಲ್ಲಿ ಥೈಲ್ಯಾಂಡ್‌ನಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲು ಯೋಜಿಸಿದೆ ಎಂದು ಗೋಹ್ ತಿಳಿಸಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ಪ್ರಪಂಚದಾದ್ಯಂತದ ಸರ್ಕಾರಗಳು ಲಾಕ್‌ಡೌನ್‌ಗಳನ್ನು ಹೇರಿದ್ದರಿಂದ ಜನರು ಮನೆಯಲ್ಲಿಯೇ ಇರಬೇಕಾಯಿತು. ಕರೆಕ್ಸ್ ಡ್ಯುರೆಕ್ಸ್‌ನಂತಹ ಬ್ರ್ಯಾಂಡ್‌ಗಳು ತನ್ನದೇ ಆದ ವಿಶೇಷ ಕಾಂಡೋಮ್‌ಗಳಾದ ಡ್ಯೂರಿಯನ್-ಫ್ಲೇವರ್‌ಗಳನ್ನು ಉತ್ಪಾದಿಸುತ್ತದೆ. ಇದು ವರ್ಷಕ್ಕೆ 5 ಬಿಲಿಯನ್ ಕಾಂಡೋಮ್‌ಗಳನ್ನು ಉತ್ಪಾದಿಸುತ್ತದೆ ಮತ್ತು 140ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ.

ಇದನ್ನೂ ಓದಿ: ರಾತ್ರಿ 10ಗಂಟೆವರೆಗೂ ಕೊವಿಡ್ 19 ಲಸಿಕೆ ನೀಡಬಹುದು; ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಕೇಂದ್ರ ಸರ್ಕಾರದ ಸೂಚನೆ

ಕೊವಿಡ್ ನಿಯಮ ಉಲ್ಲಂಘಿಸಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾದ ಎಂ.ಪಿ ರೇಣುಕಾಚಾರ್ಯ; ಬಳಿಕ ಕ್ಷಮೆಯಾಚನೆ