
ಟಿಯಾಂಜಿನ್, ಸೆಪ್ಟೆಂಬರ್ 3: ರಷ್ಯಾದ ಜೊತೆ ವ್ಯಾಪಾರ ಸಂಬಂಧ ಹೊಂದಿದೆ ಎಂಬ ಕಾರಣಕ್ಕೆ ಭಾರತದ ಮೇಲೆ ಅಮೆರಿಕ ಸರ್ಕಾರ ಶೇ. 25ರಷ್ಟು ಹೆಚ್ಚುವರಿ ಸುಂಕ (US Tariff) ವಿಧಿಸಿದೆ. ಇದರ ಬೆನ್ನಲ್ಲೇ ಚೀನಾದಲ್ಲಿ ಪುಟಿನ್ ಭಾರತದ ಪರವಾಗಿ ಹೇಳಿಕೆ ನೀಡುವ ಮೂಲಕ ಭಾರತದ ಆರ್ಥಿಕತೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಭಾರತದ ಆರ್ಥಿಕತೆ ಸತ್ತ ಆರ್ಥಿಕತೆ ಎಂದಿದ್ದ ಟ್ರಂಪ್ಗೆ ಟಾಂಗ್ ಕೊಡುವ ರೀತಿಯಲ್ಲಿ ಭಾರತ ದೃತ್ಯ ಆರ್ಥಿಕತೆಯ ದೇಶವಾಗಿದೆ ಎಂದಿದ್ದಾರೆ. ಬೀಜಿಂಗ್‌ನ ಮಿಲಿಟರಿ ಮೆರವಣಿಗೆಯಲ್ಲಿ ಭಾಗವಹಿಸಿದ ಗಂಟೆಗಳ ನಂತರ ಚೀನಾದಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತವನ್ನು ಬೆಂಬಲಿಸಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ಚೀನಾದ ಮೇಲೆ ವಿಧಿಸಲಾಗುತ್ತಿರುವ ಆರ್ಥಿಕ ಒತ್ತಡವನ್ನು ಉದ್ದೇಶಿಸಿ ಮಾತನಾಡುತ್ತಾ ವ್ಲಾಡಿಮಿರ್ ಪುಟಿನ್, ಅವೆರಡೂ ಪ್ರಮುಖ ಆರ್ಥಿಕ ದೈತ್ಯ ರಾಷ್ಟ್ರಗಳು. ಯಾರೂ ಆ ದೇಶಗಳೊಂದಿಗೆ ಆ ರೀತಿಯಲ್ಲಿ ಮಾತನಾಡಬಾರದು. “ನೀವು ಭಾರತ ಅಥವಾ ಚೀನಾದೊಂದಿಗೆ ಹಾಗೆ ಮಾತನಾಡಲು ಸಾಧ್ಯವಿಲ್ಲ. ವಸಾಹತು ಯುಗ ಮುಗಿದಿದೆ. ಇಂದಿನ ಜಾಗತಿಕ ಯುಗದಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ” ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಇದನ್ನೂ ಓದಿ: ಝೆಲೆನ್ಸ್ಕಿ ರಷ್ಯಾಕ್ಕೆ ಬಂದರೆ ಭೇಟಿಗೆ ಸಿದ್ಧ; ಉಕ್ರೇನ್ ಸಂಘರ್ಷದ ಬಗ್ಗೆ ಪುಟಿನ್ ಹೇಳಿಕೆ
“ಈ ಜಗತ್ತಿನಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ. ಭಾರತ ಅಥವಾ ಚೀನಾದಂತಹ ಆರ್ಥಿಕ ದೈತ್ಯ ರಾಷ್ಟ್ರಗಳಿವೆ. ಆದರೆ ಜಾಗತಿಕ ರಾಜಕೀಯ ಅಥವಾ ಭದ್ರತೆಯ ಮೇಲೆ ಯಾವುದೋ ಒಂದು ದೇಶ ಪ್ರಾಬಲ್ಯ ಸಾಧಿಸಬೇಕು ಎಂದು ಇದರ ಅರ್ಥವಲ್ಲ” ಎಂದು ಪುಟಿನ್ ಹೇಳಿದ್ದಾರೆ.
India and China are economic giants says Russian President Vladimir Putin; Emphasises on multipolarity pic.twitter.com/ZdEUaCj6cT
— Sidhant Sibal (@sidhant) September 3, 2025
ನಾವೆಲ್ಲರೂ ಬಹಳ ಕಷ್ಟಪಟ್ಟು ದೇಶ ಕಟ್ಟಿದ್ದೇವೆ. ಕಠಿಣ ಇತಿಹಾಸಗಳ ಮೂಲಕ ನಿರ್ಮಿಸಲಾದ ಭಾರತ, ಚೀನಾ ಅಥವಾ ರಷ್ಯಾದ ನಾಯಕತ್ವವನ್ನು ದುರ್ಬಲಗೊಳಿಸಲು ಪ್ರಯತ್ನಿಸುವುದು ತಪ್ಪು ಎಂದು ಅಮೆರಿಕಕ್ಕೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:28 pm, Wed, 3 September 25