ಲಿವರ್​ಪೂಲ್​ನ ಅಡೆಲ್ಫಿ ಹೋಟೆಲ್​ನಲ್ಲಿ ಹೆಣವಾಗಿ ಸಿಕ್ಕ ಯುವತಿಯ ಸಾವು ಆಕಸ್ಮಿಕ ಅಂತ ಪೊಲೀಸರು ಹೇಳಿದ್ದಾರೆ! ಆದರೆ ತನಿಖೆ ಮುಂದುವರಿದಿದೆ!!

ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಯುವತಿಯ ಸಾವು ಆಕಸ್ಮಿಕವಾಗಿ ನಡೆದಿದೆ ಅನುಮಾನಕ್ಕೆ ಕಾರಣವಾಗುವಂಥ ಯಾವುದೇ ಅಂಶ ತಮ್ಮ ಗಮನಕ್ಕೆ ಬರಲಿಲ್ಲ ಅಂತ ಹೇಳಿದ್ದರಿಂದ ಬಂಧಿತ ಮೂವರನ್ನು ಬಿಡುಗಡೆ ಮಾಡಲಾಯಿತು.

ಲಿವರ್​ಪೂಲ್​ನ ಅಡೆಲ್ಫಿ ಹೋಟೆಲ್​ನಲ್ಲಿ ಹೆಣವಾಗಿ ಸಿಕ್ಕ ಯುವತಿಯ ಸಾವು ಆಕಸ್ಮಿಕ ಅಂತ ಪೊಲೀಸರು ಹೇಳಿದ್ದಾರೆ! ಆದರೆ ತನಿಖೆ ಮುಂದುವರಿದಿದೆ!!
ಅಡೆಲ್ಫಿ ಹೋಟೆಲ್ ಮತ್ತು ಕ್ಲೋಯೆ ಹೇನ್ಸ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 01, 2022 | 8:08 AM

ಸೆಪ್ಟೆಂಬರ್ 10ರಂದು ಬೆಳಗಿನ 6.30 ಕ್ಕೆ ಸುಮಾರು 5 ಲಕ್ಷ ಜನಸಂಖ್ಯೆಯ ಲಿವರ್ ಪೂಲ್ (Liverpool) ನಗರದಲ್ಲಿನ ಸುಪ್ರಸಿದ್ಧ ಅಡೆಲ್ಫಿ ಹೋಟೆಲ್ ನಲ್ಲಿ (Adelphi Hotel) 21ರ ಪ್ರಾಯದ ಒಬ್ಬ ಸುಂದರ ಯುವತಿಯ (young woman) ಶವಸಿಕ್ಕಾಗ ಅವಳ ಸಾವಿನ ಬಗ್ಗೆ ಹತ್ತಾರು ಕತೆಗಳು ಹುಟ್ಟಿಕೊಂಡಿದ್ದವು. ಹೋಟೆಲ್ ರೂಮಲ್ಲಿ ಅವಳ ಮೇಲೆ ಆತ್ಯಾಚಾರ ನಡೆಯಿತೆ? ರೂಮಲ್ಲಿ ಅವಳೊಬ್ಬಳೇ ಇದ್ದಳೇ ಅಥವಾ ಯಾವುದದಾರೂ ಪುರುಷ ಇಲ್ಲವೇ ಬಾಯ್ ಫ್ರೆಂಡ್ ಅವಳೊಟ್ಟಿಗೆ ಇದ್ದನೇ? ಸೆಪ್ಟೆಂಬರ 9 ರಾತ್ರಿ ಅವಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರೆ ಆಥವಾ ರೇಪ್ ಆಗಿದ್ದರೆ ಮರಣೋತ್ತರ ಪರೀಕ್ಷೆಯಲ್ಲಿ ಅದು ಗೊತ್ತಾಗುತ್ತದೆ-ಲಿವರ್ ಪೂಲ್ ಜನ ಹಾಗೆ ಮಾತಾಡಿಕೊಂಡಿದ್ದು ಸತ್ಯ. ಪೊಲೀಸರು ತಡಮಾಡದೆ ತನಿಖೆಗಿಳಿದಿದ್ದರು

ಮರ್ಸಿಸೈಡ್ ಪೊಲೀಸರು ಹೊಟೆಲ್ ಗೆ ಆಗಮಿಸಿ ಅವಳಿದ್ದ ರೂಮನ್ನು ಪ್ರವೇಶಿಸಿದರು. ಸತ್ತ ಯುವತಿಯ ಹೆಸರು ಕ್ಲೋಯೆ ಹೇನ್ಸ್ ಅನ್ನೋದನ್ನು ಅವರು ಕೂಡಲೇ ಬಹಿರಂಗಗೊಳಿಸಿದರು. ಅದಾದ ಮೇಲೆ ಅವರು 26, 46 ಮತ್ತು 49 ವರ್ಷ ವಯಸ್ಸಿನ ಮೂವರು ಪುರುಷರನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಆದರೆ ಕೇವಲ ಸ್ವಲ್ಪ ಹೊತ್ತಿನ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.

ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಯುವತಿಯ ಸಾವು ಆಕಸ್ಮಿಕವಾಗಿ ನಡೆದಿದೆ ಅನುಮಾನಕ್ಕೆ ಕಾರಣವಾಗುವಂಥ ಯಾವುದೇ ಅಂಶ ತಮ್ಮ ಗಮನಕ್ಕೆ ಬರಲಿಲ್ಲ ಅಂತ ಹೇಳಿದ್ದರಿಂದ ಬಂಧಿತ ಮೂವರನ್ನು ಬಿಡುಗಡೆ ಮಾಡಲಾಯಿತು.

ಸಾವಿನ ಬಗ್ಗೆ ಪೊಲೀಸರು ಸಿದ್ಧಪಡಿಸಿದ ಫೈಲನ್ನು ವೈದ್ಯಕೀಯ ಪರಾಮರ್ಶೆಗೆ ಕಳಿಸಲಾಗಿದೆ. ಅಲ್ಲಿಂದ ವರದಿ ಸಿಕ್ಕ ಬಳಿಕ ಪ್ರಾಥಮಿಕ ತನಿಖೆಯ ಮರುಪರಿಶೀಲನೆಗೆ ದಿನಾಂಕವನ್ನು ಗೊತ್ತುಪಡಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಏತನ್ಮಧ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಹೇನ್ಸ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ. ಹೇನ್ಸ್ ನಾರ್ಥ್ ವೇಲ್ಸ್ ನ ನಿವಾಸಿ ಅನ್ನೋದು ಸಹ ಬೆಳಕಿಗೆ ಬಂದಿದೆ.

ಅವಳ ಒಬ್ಬ ಫ್ರೆಂಡ್, ‘ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ’ ಅಂತ ಸಂದೇಶ ಪೋಸ್ಟ್ ಮಾಡಿದ್ದಾನೆ. ಮತ್ತೊಬ್ಬ, ‘ಅವಳ ಸಾವು ಹೃದಯವನ್ನು ಘಾಸಿಗೊಳಿಸಿದೆ,’ ಅಂತ ಬರೆದರೆ ಮೂರನೇಯವನು, ‘ಆರ್ ಐ ಪಿ ಬ್ಯೂಟಿಫುಲ್,’ ಅಂತ ಪೋಸ್ಟ್ ಮಾಡಿದ್ದಾನೆ.

ಚೀಫ್ ಡಿಟೆಕ್ಟಿವ್ ಇನ್ಸ್ಪೆಕ್ಟರ್ ಲಿನ್ಸೇ ಆರ್ಮಬಸ್ಟರ್ ಅವರು ಹೇಳಿಕೆಯೊಂದನ್ನು ನೀಡಿ, ‘ನಾವಿನ್ನೂ ತನಿಖೆಯ ಆರಂಭಿಕ ಹಂತದಲ್ಲಿದ್ದೇವೆ, ಯುವತಿಯ ಸಾವಿಗೆ ಕಾರಣವಾದ ಪರಿಸ್ಥಿತಿಯೆಡೆ ನಮ್ಮ ಫೋಕಸ್ ನೆಟ್ಟಿದೆ,’ ಎಂದು ಹೇಳಿದ್ದಾರೆ.

ಸೆಪ್ಟೆಂಬರ್ 10 ರಂದು ಹೋಟೆಲನಲ್ಲಿದ್ದ ಯಾರೇ ಆಗಲಿ, ಅಂದು ಬೆಳಗಿನ ಜಾವ ಯಾವುದಾದರೂ ಅಸಹಜ ಘಟನೆ, ಅವರ ಕಣ್ಣಿಗೆ ಬಿದ್ದಿದ್ದರೆ, ಕೇಳಿಸಿಕೊಂಡಿದ್ದರೆ ದಯವಿಟ್ಟು ಮುಂದೆ ಬಂದು ಪೊಲೀಸರೊಂದಿಗೆ ಅದನ್ನು ಶೇರ್ ಮಾಡಬೇಕೆಂದು ಅಪೀಲ್ ಮಾಡುತ್ತೇನೆ,’ ಎಂದು ಅವರು ಹೇಳಿದ್ದಾರೆ.

ಮೂಲ ಅಡೆಲ್ಫಿ ಹೋಟೆಲನ್ನು ಅಸಲಿಗೆ 1826 ರಲ್ಲಿ ನಿರ್ಮಿಸಲಾಗಿತ್ತು ಆದರೆ 50 ವರ್ಷಗಳ ನಂತರ ಅದನ್ನು ಕೆಡವಿ ಈಗಿರುವ ಕಟ್ಟಡವನ್ನು ನಿರ್ಮಿಸಲಾಯಿತು. 20 ನೇ ಶತಮಾನದಲ್ಲಿ ಈ ಹೋಟೆಲ್ ಗೆ ಅಭೂತಪೂರ್ವ ಜನಪ್ರಿಯತೆ ಸಿಕ್ಕಿತು.

ಟೈಟಾನಿಕ್ ನಂಥ ಹಡಗುಗಳ ಮೂಲಕ ಅಟ್ಲಾಂಟಿಕ್ ಸಾಗರದಲ್ಲಿ ಯಾನ ಮಾಡಿ ಯುನೈಟೆಡ್ ಕಿಂಗ್ಡಮ್ ಗೆ ಬರುತ್ತಿದ್ದ ಆ ಜಮಾನಾದ ಸ್ಥಿತಿವಂತರು ಇದೇ ಹೋಟೆಲ್ ನಲ್ಲಿ ತಂಗುತ್ತಿದ್ದರು.

ನಂತರದ ವರ್ಷಗಳಲ್ಲಿ ಈ ಹೋಟೆಲ್ ಭೇಟಿ ನೀಡಿದ ಖ್ಯಾತನಾಮರಲ್ಲಿ ಸರ್ ವಿನ್ಸ್ಟನ್ ಚರ್ಚಿಲ್, ಫ್ರ್ಯಾಂಕ್ ಸಿನಾತ್ರ, ಜೂಡಿ ಗಾರ್ಲ್ಯಾಂಡ್ ಮತ್ತು ಬಾಬ್ ಡೈಲನ್ ಸೇರಿದ್ದಾರೆ.

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು