ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಜತ್, ನನ್ನ ಮಗನಿಗೆ ಕೇವಲ 13ವರ್ಷ. ಆತನಿಗೆ ಕೊವಿಡ್ 19 ಲಸಿಕೆಯನ್ನೂ ನೀಡಲಾಗಿಲ್ಲ. ಆದರೆ ಈ ಮೆಸೇಜ್ ನೋಡಿ ನಾನೂ ಕಂಗಾಲಾದೆ. ಹಾಗೇ, ಸರ್ಟಿಫಿಕೇಟ್ ಕೂಡ ಡೌನ್ಲೋಡ್ ಮಾಡಿದೆ. ಅದನ್ನೂ ನೋಡಿ ಮತ್ತೂ ದಿಗಿಲಾಯಿತು ಎಂದು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಮನೀಶ್ ಮಹೇಶ್ವರಿ ವಿರುದ್ಧ ದಾಖಲಾಗುತ್ತಿರುವ ಎರಡನೇ ಎಫ್ಐಆರ್ ಇದಾಗಿದೆ. ಕಳೆದ ವಾರ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದ ಪೋಸ್ಟ್ ಶೇರ್ ಆದ ಬೆನ್ನಲ್ಲೇ ಮಹೇಶ್ವರಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಇನ್ನು ಎಸ್.ಜೈಶಂಕರ್ ಅವರ ಗ್ರೀಸ್ ಪ್ರವಾಸದ ವೇಳೆ ಎರಡೂ ದೇಶಗಳು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿವೆ. ಮುಖ್ಯವಾಗಿ ಪೂರ್ವ ಮೆಡಿಟರೇನಿಯನ್, ಸೈಪ್ರಸ್ ಮತ್ತು ಲಿಬಿಯಾದ ಇತ್ತೀಚೆಗಿನ ಬೆಳವಣಿಗೆ ಕುರಿತು ವ್ಯಾಪಕ ಚರ್ಚೆ ನಡೆದಿದೆ.
ಲಾಹೋರ್: ಪಾಕಿಸ್ತಾನದ ಲಾಹೋರ್ನ ಜನವಸತಿ ಪ್ರದೇಶದಲ್ಲಿ ಸ್ಫೋಟಗೊಂಡ ಪರಿಣಾಮ ಇಬ್ಬರು ಮೃತಪಟ್ಟಿದ್ದು, 17 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಮುಂಬೈ ಉಗ್ರದಾಳಿಯ ಮಾಸ್ಟರ್ ಮೈಂಡ್ ಆಗಿರುವ, ಜಮಾತ್ ಉದ್ ದವಾಹ್ ಸಂಘಟನೆ ಮುಖ್ಯಸ್ಥ ಹಫೀಜ್ ಮಹಮ್ಮದ್ ಸೈಯದ್ನ ಜೋಹಾರ್ ಪಟ್ಟಣದಲ್ಲಿರುವ ನಿವಾಸದ ಸಮೀಪವೇ ಸ್ಫೋಟಗೊಂಡಿದ್ದಾಗಿ ವರದಿಯಾಗಿದೆ. ಸ್ಥಳದಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ �
ಠಾಕೂರ್ ಅವರು ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದವರು. ನಮ್ಮ ಮನೆಯ ಸುತ್ತಮುತ್ತ ಲಿಕ್ಕರ್ ದಂಧೆ ನಡೆಯುತ್ತಿದೆ ಎಂದು ಫೆ.22ರಂದು ಪೊಲೀಸರು ಇಲ್ಲಿಗೆ ಆಗಮಿಸಿದ್ದರು. ಈ ಪ್ರದೇಶದ ಹಲವು ಮನೆಗಳಲ್ಲಿ ಹುಡುಕಾಟ ನಡೆಸಿದರು ಎಂದು ಆರೋಪಿಸಿದ್ದಾರೆ.
ಸುಮಾರು 1530 ಗರ್ಭಿಣಿ-ಬಾಣಂತಿಯರನ್ನು ಅಧ್ಯಯನದಲ್ಲಿ ಒಳಪಡಿಸಿಕೊಳ್ಳಲಾಗಿತ್ತು. ಅವರಲ್ಲಿ 1,143 ಮಂದಿ ಮೊದಲ ಅಲೆಯಲ್ಲಿ ಕೊವಿಡ್ 19 ಸೋಂಕಿಗೆ ಒಳಗಾದವರು ಹಾಗೂ 387 ಮಂದಿ ಸೋಂಕಿಗೆ ಒಳಗಾದವರಾಗಿದ್ದರು.
ಅತ್ತೆಗೆ ಕೊರೊನಾ ತಗುಲಿದ ಬಳಿಕ ಅವರನ್ನು ಪ್ರತ್ಯೇಕವಾಗಿ ಇಟ್ಟು, ಆಹಾರ, ಅಗತ್ಯವಸ್ತುಗಳನ್ನು ನೀಡಲಾಗುತ್ತಿತ್ತು. ಅವರ ಮೊಮ್ಮಕ್ಕಳಿಗೂ ಅಲ್ಲಿಗೆ ಹೋಗಲು ಕೊಡುತ್ತಿರಲಿಲ್ಲ ಎಂದು ಸೋಂಕಿತ ಸೊಸೆ ಹೇಳಿದ್ದಾರೆ.
ಚೋಕ್ಸಿ ಡೊಮಿನಿಕಾದಲ್ಲಿ ಬಂಧಿತರಾಗಿ, ಕಾನೂನು ಪ್ರಕ್ರಿಯೆಗಳು ಶುರುವಾದ ಬೆನ್ನಲ್ಲೇ ಅವರ ಅಣ್ಣ ಚೇತನ್ ಚಿನು ಭಾಯ್ ಚೋಕ್ಸಿ ಫೀಲ್ಡ್ಗೆ ಇಳಿದಿದ್ದಾರೆ. ಮೇ 29ರಂದು ಖಾಸಗಿ ಜೆಟ್ನಲ್ಲಿ ಡೊಮಿನಿಕಾವವನ್ನು ತಲುಪಿದ್ದಾರೆ.
ಪಶ್ಚಿಮ ಬಂಗಾಳ ಅದೆಷ್ಟೋ ಕ್ರಾಂತಿಕಾರಿಗಳ ನಾಡು. ಅಧ್ಯಾತ್ಮ ನಾಯಕರ ಹುಟ್ಟೂರು..ಸಮಾಜ ಸುಧಾಕರು ಹುಟ್ಟಿ ಬೆಳೆದ ಪ್ರದೇಶ. ಆದರೆ ಇಂದು ಇಲ್ಲಿ ಬರೀ ರಕ್ತದೋಕುಳಿಯೇ ಕಾಣಿಸುತ್ತಿದೆ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಎಲ್ಲ ರಾಜ್ಯ ಸರ್ಕಾರಗಳನ್ನೊಳಗೊಂಡು ಸಭೆ ನಡೆಸಲಿದ್ದು, ಉನ್ನತ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಸಭೆ ಬಳಿಕ ಸಿಬಿಎಸ್ಇ ಬಗ್ಗೆ ಪ್ರಕಟಣೆ ಹೊರಬೀಳಲಿದೆ. ಈ ನಿರ್ಧಾರ ಕುತೂಹಲ ಮೂಡಿಸಿದೆ.