BMW X4 M40i: ಪವರ್‌ಫುಲ್‌ ಬಿಎಂಡಬ್ಲ್ಯು ಎಕ್ಸ್4 ಎಂ40ಐ ಕೂಪೆ ಎಸ್ ಯುವಿ ಬಿಡುಗಡೆ

ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ ಹೊಸ ಎಕ್ಸ್4 ಎಂ40ಐ ಕೂಪೆ ಎಸ್ ಯುವಿ ಮಾದರಿಯನ್ನು ಬಿಡುಗಡೆ ಮಾಡಿದೆ.

BMW X4 M40i: ಪವರ್‌ಫುಲ್‌ ಬಿಎಂಡಬ್ಲ್ಯು ಎಕ್ಸ್4 ಎಂ40ಐ ಕೂಪೆ ಎಸ್ ಯುವಿ ಬಿಡುಗಡೆ
ಬಿಎಂಡಬ್ಲ್ಯು ಎಕ್ಸ್4 ಎಂ40ಐ ಕೂಪೆ ಎಸ್ ಯುವಿ ಬಿಡುಗಡೆ
Follow us
TV9 Web
| Updated By: Praveen Sannamani

Updated on: Oct 29, 2023 | 6:35 PM

ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಬಿಎಂಡಬ್ಲ್ಯು(BMW) ತನ್ನ ಹೊಸ ಎಕ್ಸ್4 ಎಂ40ಐ (X4 M40i) ಕೂಪೆ ಎಸ್ ಯುವಿಯನ್ನು ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 96.20 ಲಕ್ಷ ಬೆಲೆ ಹೊಂದಿದೆ.

ಎಕ್ಸ್ ಸರಣಿ ಎಸ್ ಯುವಿ ಕಾರುಗಳ ಮೂಲಕ ತನ್ನದೆ ಆದ ಗ್ರಾಹಕ ವರ್ಗ ಸೃಷ್ಠಿಸಿರುವ ಬಿಎಂಡಬ್ಲ್ಯು ಕಂಪನಿ ಇದೀಗ ಹೊಸ ಎಕ್ಸ್4 ಎಂ40ಐ ಕೂಪೆ ಎಸ್ ಯುವಿ ಪರಿಚಯಿಸಿದ್ದು, ಇದು ಸಂಪೂರ್ಣವಾಗಿ ಸಿಬಿಯು ನೀತಿ ಅಡಿ ಆಮದು ಮಾಡಲಾದ ಆವೃತ್ತಿಯಾಗಿ ಭಾರತದಲ್ಲಿ ಮಾರಾಟಗೊಳ್ಳಲಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ಎಕ್ಸ್4 ಎಂ40ಐ ಕೂಪೆ ಆವೃತ್ತಿಯಲ್ಲಿ 48 ವೊಲ್ಟ್ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಪ್ರೇರಿತ 3.0 ಲೀಟರ್, ಇನ್ ಲೈನ್ 6, ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ 352.7 ಹಾರ್ಸ್ ಪವರ್ ಮತ್ತು 500 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಕಾರು 4.9 ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆದುಕೊಳ್ಳಲಿದ್ದು, ಪ್ರತಿ ಗಂಟೆಗೆ ಗರಿಷ್ಠ 250 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ.

ಇದನ್ನೂ ಓದಿ: ಫೀಚರ್ಸ್ ವಿಚಾರದಲ್ಲಿ ಮಹೀಂದ್ರಾ ಎಕ್ಸ್ ಯುವಿ700 ಹಿಂದಿಕ್ಕಿದ ಟಾಟಾ ಸಫಾರಿ

BMW X4 M40i (1)

ಜೊತೆಗೆ ಹೊಸ ಕಾರಿನಲ್ಲಿರುವ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವು ಉತ್ತಮ ಇಂಧನ ದಕ್ಷತೆ ಕಾಯ್ದಕೊಳ್ಳಲು ಸಹಕಾರಿಯಾಗಿದ್ದು, ಇದರಲ್ಲಿ 20 ಇಂಚಿನ ಡ್ಯಯಲ್ ಸ್ಪೋಕ್ ಅಲಾಯ್ ವ್ಹೀಲ್ ನೊಂದಿಗೆ ರೆಡ್ ಕ್ಯಾಲಿಪರ್ ಡಿಸ್ಕ್ ಬ್ರೇಕ್ ನೀಡಲಾಗಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಎಕ್ಸ್3 ಎಸ್ ಯುವಿ ವಿನ್ಯಾಸ ಆಧರಿಸಿರುವ ಹೊಸ ಎಕ್ಸ್4 ಎಂ40ಐ ಕೂಪೆ ಆವೃತ್ತಿಯಲ್ಲಿ ಗ್ಲಾಸ್ ಮ್ಯಾಟೆ ಬ್ಲ್ಯಾಕ್ ಕಿಡ್ನಿ ಗ್ರಿಲ್, ಗ್ರಿಲ್ ಸರೌಂಡ್, ಸ್ಪೋರ್ಟಿಯಾಗಿರುವ ಎಕ್ಸಾಸ್ಟ್ ಪೈಪ್, ವಿಂಡೋ ಸರೌಂಡ್ ಜೊತೆಗೆ ರೂಫ್ ರೈಲ್ಸ್ ಹೊಂದಿದ್ದು, ಇದರಲ್ಲಿ ಬ್ಲ್ಯಾಕ್ ಶೆಫೈರ್ ಮತ್ತು ಬ್ರೂಕ್ಲಿನಿ ಗ್ರೇ ಬಣ್ಣಗಳ ಆಯ್ಕೆ ನೀಡಲಾಗಿದೆ. ಹಾಗೆಯೇ ಹೊಸ ಕಾರಿನ ಒಳಭಾಗದಲ್ಲಿ ಲೆದರ್ ಡ್ಯಾಶ್ ಬೋರ್ಡ್, ಲೆದರ್ ಸ್ಟೀರಿಂಗ್ ವ್ಹೀಲ್, 12.3 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ, ಡಿಜಿಟಲ್ ಇನ್ಫಾರ್ಮೆಷನ್ ಕ್ಲಸ್ಟರ್, ಪನೊರಮಿಕ್ ಸನ್ ರೂಫ್, ಆ್ಯಂಬಿಯೆಂಟ್ ಲೈಟಿಂಗ್ಸ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ಹರ್ಮನ್ ಕಾರ್ಡನ್ ಸೌಂಡ್ ಸಿಸ್ಟಂ, ವೈರ್ ಲೆಸ್ ಚಾರ್ಜರ್ ಸೌಲಭ್ಯಗಳಿದ್ದು, ಇನ್ನು ಹೆಚ್ಚಿನ ಐಷಾರಾಮಿ ಫೀಚರ್ಸ್ ಬಯಸುವ ಗ್ರಾಹಕರಿಗೆ ಎಂ ಆಕ್ಸೆಸರಿಸ್ ಪ್ಯಾಕೇಜ್ ಲಭ್ಯವಿದೆ.

ಇದನ್ನೂ ಓದಿ: ವಿಶ್ವದ ಪ್ರಥಮ ಸೂಪರ್ ಟೂರರ್ ಆಸ್ಟನ್ ಮಾರ್ಟಿನ್ ಡಿಬಿ12 ಬೆಂಗಳೂರಿನಲ್ಲಿ ಬಿಡುಗಡೆ

BMW X4 M40i (2)

ಸುರಕ್ಷಾ ಸೌಲಭ್ಯಗಳು

ಹೊಸ ಕಾರಿನಲ್ಲಿ ಬಿಎಂಡಬ್ಲ್ಯು ಕಂಪನಿಯು ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ ಸೌಲಭ್ಯವನ್ನು ನೀಡಿದ್ದು, ಇದರೊಂದಿಗೆ 360 ಡಿಗ್ರಿ ಕ್ಯಾಮೆರಾ, 6 ಏರ್ ಬ್ಯಾಗ್ ಗಳು, ಡೈನಾಮಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ಆಟೋ ಹೋಲ್ಡ್, ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಮತ್ತು ಎಲೆಕ್ಟ್ರಾನಿಕ್ ವೆಹಿಕಲ್ ಇಮ್ ಮೊಬಿಲೈಸರ್ ಸೌಲಭ್ಯಗಳಿವೆ.

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ