Car Tips: ಕಾರಿನ ಟೈರ್ ಯಾವ ಸಮಯದಲ್ಲಿ ಬದಲಾಯಿಸಬೇಕು?: ಈ ವಿಚಾರ ನಿಮಗೆ ತಿಳಿದಿರಲಿ
Car Tire Tips in Kannada: ನಿಮ್ಮ ಕಾರಿನ ಟೈರ್‌ಗಳನ್ನು ನೀವು ಸರಿಯಾಗಿ ಜೋಡಣೆ ಮಾಡಿದ್ದರೂ ಅದು ನೇರವಾಗಿ ಚಲಿಸದಿದ್ದರೆ, ಟೈರ್‌ಗಳನ್ನು ಬದಲಾಯಿಸಬೇಕೆಂಬುದರ ಸೂಚನೆಯಾಗಿರಬಹುದು. ಆದಾಗ್ಯೂ, ಇದು ಟೈರ್‌ಗಳಿಂದ ಮಾತ್ರ ಸಂಭವಿಸುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕಾರಿನ ಆಕ್ಸಲ್ ಹಾನಿಗೊಳಗಾಗಿದ್ದರೂ ಸಹ ಅದು ಒರಕ್ಕೋರೆ ಚಲಿಸಬಹುದು.

ವಾಹನದಲ್ಲಿ ಅಳವಡಿಸಲಾದ ಟೈರ್ ಕೂಡ ಒಂದು ನಿರ್ದಿಷ್ಟ ಜೀವಿತಾವಧಿಯನ್ನು ಹೊಂದಿದ್ದು, ಅದರ ಸಮಯದ ಮಿತಿಯ ನಂತರ ಅದನ್ನು ಬದಲಾಯಿಸಬೇಕಾಗುತ್ತದೆ. ಹೀಗೆ ಮಾಡದಿದ್ದರೆ, ನಿಮ್ಮ ವಾಹನವು ಹಲವು ಬಾರಿ ರಸ್ತೆಯ ಮಧ್ಯದಲ್ಲಿ ಪಂಕ್ಚರ್ ಆಗಬಹುದು ಅಥವಾ ಟೈರ್ ಸಿಡಿಯುವ ಸಾಧ್ಯತೆಗಳು ಹೆಚ್ಚಾಗಬಹುದು. ವಾಹನದ ಸುರಕ್ಷತೆಗಾಗಿ ಕಾಲಕಾಲಕ್ಕೆ ಟೈರ್‌ಗಳನ್ನು ಪರಿಶೀಲಿಸುವುದು ಮತ್ತು ಬದಲಾಯಿಸುವುದು ಬಹಳ ಮುಖ್ಯವಾಗುತ್ತದೆ. ಆದ್ದರಿಂದ, ಈ ಸುದ್ದಿಯ ಮೂಲಕ ಕಾರಿನ ಟೈರ್‌ಗಳನ್ನು ಎಷ್ಟು ಸಮಯದ ನಂತರ ಬದಲಾಯಿಸಬೇಕು ಎಂಬುದನ್ನು ತಿಳಿಯಿರಿ.
ನಿಮ್ಮ ಕಾರಿನ ಟೈರ್‌ಗಳನ್ನು ನೀವು ಸರಿಯಾಗಿ ಜೋಡಣೆ ಮಾಡಿದ್ದರೂ ಅದು ನೇರವಾಗಿ ಚಲಿಸದಿದ್ದರೆ, ಟೈರ್‌ಗಳನ್ನು ಬದಲಾಯಿಸಬೇಕೆಂಬುದರ ಸೂಚನೆಯಾಗಿರಬಹುದು. ಆದಾಗ್ಯೂ, ಇದು ಟೈರ್‌ಗಳಿಂದ ಮಾತ್ರ ಸಂಭವಿಸುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕಾರಿನ ಆಕ್ಸಲ್ ಹಾನಿಗೊಳಗಾಗಿದ್ದರೂ ಸಹ ಅದು ಒರಕ್ಕೋರೆ ಚಲಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಅಧಿಕೃತ ಡೀಲರ್‌ಶಿಪ್‌ನಲ್ಲಿ ಕಾರನ್ನು ಪರಿಶೀಲಿಸುವುದು ಮುಖ್ಯ.
5-6 ವರ್ಷಗಳ ಬಳಕೆಯ ನಂತರ ಟೈರ್ ಅನ್ನು ಬದಲಾಯಿಸಬೇಕು:
ಟೈರ್ನ ಹೊರಮೈಯು ಪರಿಪೂರ್ಣವಾಗಿ ಕಂಡುಬಂದರೂ ಸಹ, ಅದರ ರಬ್ಬರ್ನ ಗುಣಮಟ್ಟವು ಕಾಲಾನಂತರದಲ್ಲಿ ಕ್ಷೀಣಿಸುತ್ತದೆ. 5-6 ವರ್ಷಗಳ ಬಳಕೆಯ ನಂತರ ಅದನ್ನು ಬದಲಾಯಿಸಬೇಕು. ಕೆಲವು ತಯಾರಕರು 10 ವರ್ಷಕ್ಕಿಂತ ಹಳೆಯದಾದ ಟೈರ್‌ಗಳನ್ನು ಮಿತವಾಗಿ ಬಳಸಿದ್ದರೂ ಸಹ ಬದಲಾಯಿಸಬೇಕೆಂದು ಶಿಫಾರಸು ಮಾಡುತ್ತಾರೆ.
ಮೈಲೇಜ್:
ಸಾಮಾನ್ಯವಾಗಿ, ಟೈರುಗಳು 40 ರಿಂದ 60 ಸಾವಿರ ಕಿಲೋಮೀಟರ್ಗಳಷ್ಟು ಚಲಿಸಬಹುದು. ನೀವು ನಿಯಮಿತವಾಗಿ ಹೆಚ್ಚು ದೂರದವರೆಗೆ ಓಡಿಸಿದರೆ ಅಥವಾ ಕೆಟ್ಟ ರಸ್ತೆಗಳಲ್ಲಿ ಹೆಚ್ಚು ಓಡಿಸಿದರೆ ಟೈರ್‌ಗಳು ಬೇಗನೆ ಸವೆಯಬಹುದು.
ಟೈರ್ ಸ್ಥಿತಿಯನ್ನು ಪರಿಶೀಲಿಸಿ:
ಟೈರ್ ಟ್ರೆಡ್ ಆಳ ಕನಿಷ್ಠ 1.6 ಮಿಮೀ ಇರಬೇಕು. ಇದಕ್ಕಿಂತ ಕಡಿಮೆ ಇದ್ದರೆ ಟೈರ್ ಬದಲಾಯಿಸಬೇಕಾಗುತ್ತದೆ. ನೀವು ಇದನ್ನು “ಟ್ರೇಡ್ ವೇರ್ ಇಂಡಿಕೇಟರ್” (TWI) ಗಾಗಿ ಪರಿಶೀಲಿಸಬಹುದು. ಟೈರ್ನಲ್ಲಿ ಯಾವುದೇ ಬಿರುಕುಗಳು ಅಥವಾ ಉಬ್ಬುಗಳು ಕಂಡುಬಂದರೆ ಅದನ್ನು ತಕ್ಷಣವೇ ಬದಲಾಯಿಸಿ. ಟೈರ್ನ ಸ್ಥಿತಿ ಸಮವಾಗಿಲ್ಲದಿದ್ದರೆ ವೀಲ್ ಅಲೈನ್ಮೆಂಟ್ ಮಾಡುವ ಮೂಲಕ ಪರಿಶೀಲಿಸಿ. ಹಾಗೆಯೆ ಕೆಟ್ಟ ರಸ್ತೆಗಳಲ್ಲಿ ಅತಿಯಾಗಿ ಓಡಿಸಿದರೆ ಟೈರ್‌ಗಳು ಬೇಗನೆ ಸವೆಯುತ್ತವೆ ಮತ್ತು ಬೇಗನೆ ಬದಲಾಯಿಸಬೇಕಾಗಬಹುದು.
Best CNG Cars: ಆಫೀಸ್ ಹೋಗಲು ನಿಮಗೆ ಅಗ್ಗದ ಕಾರು ಬೇಕಾದ್ರೆ ಈ CNG ಕಾರ್ ನೋಡಿ
ಮಳೆಗಾಲಕ್ಕು ಮುನ್ನ ಬದಲಾಯಿಸಿ:
ಸರಿಯಾದ ಸಮಯಕ್ಕೆ ಕಾರಿನ ಟೈರ್‌ಗಳನ್ನು ಬದಲಾಯಿಸದಿದ್ದರೆ ಭಾರಿ ನಷ್ಟವಾಗಬಹುದು. ಸವೆದ ಟೈರ್‌ಗಳು ಪಂಕ್ಚರ್ ಆಗುವ ಅಪಾಯವಿರುತ್ತದೆ. ಇಷ್ಟೇ ಅಲ್ಲ, ಅವು ನಯವಾದ ಮೇಲ್ಮೈಗಳಲ್ಲಿ ಸ್ಕಿಡ್ ಆಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಒದ್ದೆಯಾದ ರಸ್ತೆಯಲ್ಲಿ ಸವೆದ ಟೈರ್‌ಗಳು ಕಾರನ್ನು ನಿಲ್ಲಿಸುವುದು ಅಪಾಯ. ಅಂತಹ ಪರಿಸ್ಥಿತಿಯಲ್ಲಿ, ಮಳೆಗಾಲಕ್ಕೆ ಮುಂಚಿತವಾಗಿ ಹಳೆಯ ಸವೆದುಹೋದ ಟೈರ್‌ಗಳನ್ನು ಬದಲಾಯಿಸುವುದು ಒಳ್ಳೆಯ ನಿರ್ಧಾರ.
ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ:
ಟೈರ್ನಲ್ಲಿ ಸರಿಯಾದ ಒತ್ತಡವನ್ನು ಕಾಪಾಡಿಕೊಳ್ಳುವುದು ಮುಖ್ಯ. ಕಡಿಮೆ ಗಾಳಿ ತುಂಬಿದ ಟೈರ್‌ಗಳು ಬೇಗನೆ ಸವೆಯಬಹುದು. ನೀವು ಟೈರ್‌ಗಳ ಸ್ಥಿತಿಯನ್ನು ನಿರ್ಲಕ್ಷಿಸಿದರೆ, ಅದು ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ. ದೋಷಪೂರಿತ ಟೈರ್ ವಾಹನದ ಹಿಡಿತವನ್ನು ದುರ್ಬಲಗೊಳಿಸುತ್ತದೆ, ಸ್ಕಿಡ್ ಆಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಮಯಕ್ಕೆ ಟೈರ್ ಬದಲಾಯಿಸುವುದು ಬಹಳ ಮುಖ್ಯ.
ಕಾರಿನ ಟೈರ್‌ಗಳಲ್ಲಿ ಉತ್ತಮ ಹಿಡಿತ ಇರಬೇಕು, ಇದರಿಂದಾಗಿ ಬ್ರೇಕ್ ಹಾಕುವಾಗ ಕಾರು ಸಮಯಕ್ಕೆ ನಿಲ್ಲುತ್ತದೆ ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸುವುದಿಲ್ಲ. ಬ್ರೇಕ್ ಹಾಕುವಾಗ ನಿಮ್ಮ ಕಾರು ಜಾರುತ್ತಿದ್ದರೆ, ಟೈರ್ ಬದಲಾಯಿಸುವ ಸಮಯ ಬಂದಿದೆ ಎಂದು ನೀವು ಅರ್ಥಮಾಡಿಕೊಳ್ಳಬಹುದು.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 am, Sun, 16 February 25