Citroen C3 Aircross: ಬಹುನೀರಿಕ್ಷಿತ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆ

ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಬಹುನೀರಿ ಸಿ3 ಏರ್ ಕ್ರಾಸ್ ಎಸ್ ಯುವಿ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Citroen C3 Aircross: ಬಹುನೀರಿಕ್ಷಿತ ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆ
ಸಿಟ್ರನ್ ಸಿ3 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆ
Follow us
Praveen Sannamani
|

Updated on: Sep 15, 2023 | 8:04 PM

ಭಾರತದಲ್ಲಿ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಸಿಟ್ರನ್ ಇಂಡಿಯಾ(Citroen India) ಕಂಪನಿಯು ತನ್ನ ಹೊಚ್ಚ ಹೊಸ ಸಿ3 ಏರ್‌ಕ್ರಾಸ್ (C3 Aircross) ಕಂಪ್ಯಾಕ್ಟ್ ಎಸ್ ಯುವಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಹೊಸ ಸಿ3 ಏರ್‌ಕ್ರಾಸ್ ಎಸ್‌ಯುವಿ ಬಿಡುಗಡೆಯೊಂದಿಗೆ ಬೆಸ್ ವೆರಿಯೆಂಟ್ ಬೆಲೆ ಮಾತ್ರ ಹಂಚಿಕೊಂಡಿರುವ ಸಿಟ್ರನ್ ಕಂಪನಿಯು ಅಧಿಕೃತ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹೀಗಾಗಿ ಶೀಘ್ರದಲ್ಲಿಯೇ ಹೊಸ ಕಾರಿನ ಇತರೆ ವೆರಿಯೆಂಟ್ ಗಳ ಬೆಲೆಯನ್ನು ಬಹಿರಂಗಪಡಿಸುವುದಾಗಿ ಹೇಳಿಕೊಂಡಿದ್ದು, ಹೊಸ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಸ್ಕೋಡಾ ಕುಶಾಕ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಮತ್ತು ಹೊಸದಾಗಿ ಬಿಡುಗಡೆಯಾಗಿರುವ ಹೋಂಡಾ ಎಲಿವೇಟ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

Citroen C3 Aircross (5)

ಭಾರತದಲ್ಲಿ ಈಗಾಗಲೇ ಸಿ3, ಇ-ಸಿ3 ಮತ್ತು ಸಿ5 ಏರ್ ಕ್ರಾಸ್ ಎಸ್ ಯುವಿ ಕಾರುಗಳನ್ನು ಮಾರಾಟ ಮಾಡುತ್ತಿರುವ ಸಿಟ್ರನ್ ಕಂಪನಿಯು ಇದೀಗ ಗ್ರಾಹಕರ ಬೇಡಿಕೆ ಆಧರಿಸಿ ಇದೀಗ ಮಧ್ಯಮ ಕ್ರಮಾಂಕದ ಕಂಪ್ಯಾಕ್ಟ್ ಎಸ್ ಯುವಿಯಾಗಿ ಸಿ3 ಏರ್‌ಕ್ರಾಸ್ ಪರಿಚಯಿಸಿದ್ದು, ಹೊಸ ಕಾರು ಯು, ಪ್ಲಸ್ ಮತ್ತು ಮ್ಯಾಕ್ಸ್ ಎನ್ನುವ ಪ್ರಮುಖ ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಇದನ್ನೂ ಓದಿ: ಆಕರ್ಷಕ ಬೆಲೆಗೆ 2023ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ

ಹೊಸ ಕಾರಿನಲ್ಲಿ ಮತ್ತೊಂದು ವಿಶೇಷವೆಂದರೆ ಗ್ರಾಹಕರು 5 ಸೀಟರ್ ಮತ್ತು 7 ಸೀಟರ್ ಮಾದರಿಗಳನ್ನು ಖರೀದಿಸಬಹುದಾಗಿದ್ದು, 7 ಸೀಟರ್ ಮಾದರಿಯು ಪ್ಲಸ್ ಮತ್ತು ಮ್ಯಾಕ್ಸ್ ವೆರಿಯೆಂಟ್ ನಲ್ಲಿ ಮಾತ್ರ ಖರೀದಿಗೆ ಲಭ್ಯವಿರಲಿದೆ. ಇನ್ನುಳಿದಂತೆ ಎಲ್ಲಾ ವೆರಿಯೆಂಟ್ ಗಳಲ್ಲೂ 5 ಸೀಟರ್ ಮಾದರಿಯು ಖರೀದಿಗೆ ಲಭ್ಯವಿರಲಿದ್ದು, 7 ಸೀಟರ್ ಮಾದರಿಯು 5 ಸೀಟರ್ ಮಾದರಿಗಿಂತ ರೂ. 25 ಸಾವಿರದಿಂದ ರೂ. 30 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿರಲಿದೆ.

Citroen C3 Aircross (7)

ಎಂಜಿನ್ ಮತ್ತು ಪರ್ಫಾಮೆನ್ಸ್ ಹೊಸ ಸಿ3 ಏರ್‌ಕ್ರಾಸ್ ಎಸ್‌ಯುವಿಯಲ್ಲಿ ಸಿಟ್ರನ್ ಕಂಪನಿಯು 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಿದ್ದು, ಇದು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 110 ಹಾರ್ಸ್ ಪವರ್ ಮತ್ತು 190 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಇಂಧನ ದಕ್ಷತೆ ಹೊಂದಿರಲಿದೆ. ಸದ್ಯ ಹೊಸ ಕಾರಿನಲ್ಲಿ ಪೆಟ್ರೋಲ್ ಎಂಜಿನ್ ಜೊತೆ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಮಾತ್ರ ನೀಡಲಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಆಟೋಮ್ಯಾಟಿಕ್ ಆವೃತ್ತಿಯು ಬಿಡುಗಡೆಯಾಗುವ ನೀರಿಕ್ಷೆಗಳಿವೆ.

ವಿನ್ಯಾಸ ಮತ್ತು ಫೀಚರ್ಸ್ ಗಳು ಹೊಸ ಸಿ3 ಏರ್ ಕ್ರಾಸ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಸಿ3 ಕಾರು ಮಾದರಿ ಹೋಲಿಕೆಯೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಅತ್ಯಾಧುನಿಕ ವಿನ್ಯಾಸ ಭಾಷೆಯು ಎಸ್‌ಯುವಿ ಪ್ರಿಯರನ್ನ ಸೆಳೆಯಲಿದೆ. ಹೊಸ ಕಾರಿನ ಮುಂಭಾಗದಲ್ಲಿ ಸಿಗ್ನೇಚರ್ ಗ್ರಿಲ್ ಜೊತೆ ವಿಭಜಿತ ಹೆಡ್‌ಲೈಟ್ ಗಳು, ಎಲ್ಇಡಿ ಡಿಆರ್ ಎಲ್ ಗಳಿದ್ದು, ಕಾರಿನ ಒಳಭಾಗದಲ್ಲಿ 10.2 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರಿವರ್ಸ್ ಕ್ಯಾಮೆರಾ, ರಿಯರ್ ಡಿಫಾಗರ್ ಮತ್ತು ಯುಎಸ್ ಬಿ ಚಾರ್ಜಿಂಗ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕೀ ಲೆಸ್ ಎಂಟ್ರಿ ಸೇರಿದಂತೆ ಹಲವು ಕಾರ್ ಟೆಕ್ ಕನೆಕ್ಟೆ ಸೌಲಭ್ಯಗಳನ್ನು ಹೊಂದಿದೆ.

ಇದನ್ನೂ ಓದಿ: ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!

Citroen C3 Aircross (1)

ಸುರಕ್ಷಾ ಸೌಲಭ್ಯಗಳು ಹೊಸ ಕಾರಿನ ಟಾಪ್ ಎಂಡ್ ಮಾದರಿಯಲ್ಲಿ ಸಿಟ್ರನ್ ಕಂಪನಿ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಜೋಡಣೆ ಮಾಡಿದ್ದು, ಸ್ಟ್ಯಾಂಡರ್ಡ್ ಆಗಿ ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಬಿಡಿ, ಇಎಸ್ ಸಿ, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳನ್ನು ಹೊಂದಿದೆ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್