Harley-Davidson X440: ಅಚ್ಚರಿ ಬೆಲೆಗೆ ಬಿಡುಗಡೆಗೊಂಡ ಹಾರ್ಲೆ ಡೇವಿಡ್ಸನ್ ಎಕ್ಸ್440 ಬೈಕ್

ವಿಶ್ವ ಪ್ರಸಿದ್ದ ಅಮೆರಿಕಾ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹಾರ್ಲೆ ಡೇವಿಡ್ಸನ್ ತನ್ನ ಬಹುನೀರಿಕ್ಷಿತ ಎಕ್ಸ್440 ಬೈಕ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Harley-Davidson X440: ಅಚ್ಚರಿ ಬೆಲೆಗೆ ಬಿಡುಗಡೆಗೊಂಡ ಹಾರ್ಲೆ ಡೇವಿಡ್ಸನ್ ಎಕ್ಸ್440 ಬೈಕ್
ಹಾರ್ಲೆ ಡೇವಿಡ್ಸನ್ ಎಕ್ಸ್440 ಬೈಕ್ ಬಿಡುಗಡೆ
Follow us
Praveen Sannamani
|

Updated on: Jul 04, 2023 | 3:46 PM

ಐಷಾರಾಮಿ ಬೈಕ್ ಉತ್ಪಾದನಾ ಕಂಪನಿ ಹಾರ್ಲೆ ಡೇವಿಡ್ಸನ್(Harley-Davidson) ತನ್ನ ಬಹುನೀರಿಕ್ಷಿತ ಎಕ್ಸ್440(X440) ಬೈಕ್ ಮಾದರಿಯನ್ನು ಹೀರೋ ಮೊಟೋಕಾರ್ಪ್ ಜೊತೆಗಿನ ಸಹಭಾಗಿತ್ವ ಯೋಜನೆಯಡಿ ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2.29 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಹೊಸ ಹಾರ್ಲೆ ಡೇವಿಡ್ಸನ್ ಎಕ್ಸ್440 ಬೈಕ್ ಮಾದರಿಯು ಗ್ರಾಹಕರ ಬೇಡಿಕೆ ಆಧರಿಸಿ ಡೆನಿಮ್, ವಿವಿಡ್ ಮತ್ತು ಎಸ್ ಎಂಬ ಮೂರು ಪ್ರಮುಖ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದರಲ್ಲಿ ಡೆನಿಮ್ ವೆರಿಯೆಂಟ್ ಎಕ್ಸ್ ಶೋರೂಂ ಪ್ರಕಾರ ರೂ. 2.29 ಲಕ್ಷ ಬೆಲೆ ಹೊಂದಿದ್ದರೆ ವಿವಿಡ್ ರೂ. 2.49 ಲಕ್ಷ ಮತ್ತು ಎಸ್ ವೆರಿಯೆಂಟ್ ರೂ. 2.69 ಲಕ್ಷ ಬೆಲೆ ಹೊಂದಿದೆ.

Harley-Davidson X440 (1)

ಭಾರತೀಯ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಬಜೆಟ್ ಬೆಲೆಯಲ್ಲಿ ಹೊಸ ಬೈಕ್ ಸಿದ್ದಪಡಿಸಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು 350 ಸಿಸಿ ವಿಭಾಗದ ಪ್ರಮುಖ ಕ್ಲಾಸಿಕ್ ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಿದೆ. ಹೊಸ ಯೋಜನೆಗಾಗಿ ಹಾರ್ಲೆ ಕಂಪನಿಯು ಹೀರೋ ಮೊಟೋಕಾರ್ಪ್ ಜೊತೆಗೆ ಮಹತ್ವ ಒಪ್ಪಂದ ಮಾಡಿಕೊಂಡಿದ್ದು, ಎಂಜಿನ್ ಮತ್ತು ತಂತ್ರಜ್ಞಾನವನ್ನು ಜಂಟಿಯಾಗಿ ಬಳಕೆ ಮಾಡಿಕೊಳ್ಳಲಿವೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ

ಭಾರತದಲ್ಲಿ ಹಾರ್ಲೆ ಡೇವಿಡ್ಸನ್ ಎಕ್ಸ್440 ಬೈಕ್ ಮಾದರಿಯ ಉತ್ಪಾದನೆ, ಮಾರಾಟ ಮತ್ತು ಗ್ರಾಹಕರ ಸೇವೆಗಳನ್ನು ಹೀರೋ ಮೊಟೋಕಾರ್ಪ್ ಕಂಪನಿಯು ನಿರ್ವಹಿಸಲಿದ್ದು, ಹೊಸ ಯೋಜನೆ ಯಶಸ್ವಿಯಾದಲ್ಲಿ ಪಾಲುದಾರಿಕೆ ಯೋಜನೆ ಅಡಿ ಮತ್ತಷ್ಟು ಹೊಸ ಬಜೆಟ್ ಕ್ಲಾಸಿಕ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಲಾಗಿದೆ.

ಹೊಸ ಎಕ್ಸ್440 ಬೈಕ್ ಮಾದರಿಯು ಸದ್ಯ ಮಾರುಕಟ್ಟೆಯಲ್ಲಿರುವ 350 ಸಿಸಿ ಯಿಂದ 500 ಸಿಸಿ ವಿಭಾಗದಲ್ಲಿ ಪ್ರಮುಖ ಕ್ಲಾಸಿಕ್ ಮತ್ತು ಅಡ್ವೆಂಚರ್ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡಲಿದ್ದು, ಹೊಸ ಬೈಕಿನಲ್ಲಿ 440 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಜೋಡಣೆ ಹೊಂದಿದೆ. ಇದು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 27 ಹಾರ್ಸ್ ಪವರ್ ಮತ್ತು 38 ಎನ್ಎಂ ಟಾರ್ಕ್ ಉತ್ಪಾದನೆಗೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.

Harley-Davidson X440 (3)

ಇನ್ನು ಹೊಸ ಬೈಕ್ ರೆಟ್ರೋ ಲುಕ್ ನೊಂದಿಗೆ ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ವಿನ್ಯಾಸ ಮತ್ತು ಫೀಚರ್ಸ್ ಹೊಂದಿರಲಿದ್ದು, ಮಸ್ಕ್ಯೂಲರ್ ಫ್ಯೂಲ್ ಟ್ಯಾಂಕ್, ಆಲ್ ಎಲ್ಇಡಿ ಹೆಡ್ ಲ್ಯಾಂಪ್ಸ್ ಮತ್ತು ಡೈಮಂಡ್ ಕಟ್ ಅಲಾಯ್ ವ್ಹೀಲ್, 3ಡಿ ಬ್ಯಾಡ್ಜಿಂಗ್ ಮತ್ತು ಸ್ಪೋರ್ಟಿಯಾಗಿರುವ ಎಕ್ಸಾಸ್ಟ್ ಗಮನಸೆಳೆಯುತ್ತದೆ. ಹಾಗೆಯೇ ಆಂಬಿಯೆಂಟ್ ಲೈಟ್ ಸೆನ್ಸಾರ್‌ ಹೊಂದಿರುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಕಾಲ್ ಅಲರ್ಟ್, ಮ್ಯೂಸಿಕ್ ಕಂಟ್ರೋಲ್ ಮತ್ತು ಗೇರ್ ಇಂಡಿಕೇಟರ್ ಒಳಗೊಂಡಿರಲಿದೆ.

ಇದನ್ನೂ ಓದಿ: ಒಲಾ ಎಲೆಕ್ಟ್ರಿಕ್ ಶಾಕ್..! ಗ್ರಾಹಕರಿಗೆ 130 ಕೋಟಿ ರೂ ರೀಫಂಡ್; ಕಾರಣ ಏನು?

ಹೊಸ ಬೈಕ್ ಮಾದರಿಯಲ್ಲಿ ಹಾರ್ಲೆ ಕಂಪನಿಯು ಆಕರ್ಷಕ ಬೆಲೆಯಲ್ಲೂ ಕೂಡಾ ಸುರಕ್ಷತೆಗೆ ಆದ್ಯತೆ ನೀಡಿದ್ದು, ಹೊಸ ಬೈಕಿನ ಮುಂಭಾಗದ ಚಕ್ರದಲ್ಲಿ ಸೆಗ್ಮೆಂಟ್ ಫಸ್ಟ್ 320 ಎಂಎಂ ಡಿಸ್ಕ್ ಬ್ರೇಕ್ ಜೊತೆಗೆ ಡ್ಯುಯಲ್ ಚಾನೆಲ್ ಎಬಿಎಸ್ ಜೋಡಣೆ ಮಾಡಿದೆ. ಇದರೊಂದಿಗೆ ಹೊಸ ಬೈಕ್ ಒಟ್ಟಾರೆಯಾಗಿ 190.5 ಕೆಜಿ ತೂಕ ಹೊಂದಿದ್ದು, ಇದರಲ್ಲಿರುವ ಮಸ್ಟರ್ಡ್ ಡೆನಿಮ್, ಮೆಟಾಲಿಕ್ ಡಾರ್ಕ್ ಸಿಲ್ವರ್, ಮೆಟಾಲಿಕ್ ಥಿಕ್ ಸಿಲ್ವರ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ