AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bike Sales: ದ್ವಿಚಕ್ರ ವಾಹನ ಮಾರಾಟದಲ್ಲಿ ಹೀರೋ ನಂ.1 ಪಟ್ಟ ಕಸಿದ ಹೋಂಡಾ!

ದ್ವಿಚಕ್ರ ವಾಹನ ಮಾರಾಟದಲ್ಲಿ ಕಳೆದ ಒಂದು ದಶಕದಿಂದ ಅಗ್ರಸ್ಥಾನದ ಪಟ್ಟ ಕಾಯ್ದುಕೊಂಡಿದ್ದ ಹೀರೋ ಮೋಟೊಕಾರ್ಪ್ ಕಂಪನಿಗೆ ಮೊದಲ ಬಾರಿ ಹಿನ್ನಡೆಯಾಗಿದೆ. ಬೈಕ್ ಮಾರಾಟದಲ್ಲಿ ಹೀರೋ ಕಂಪನಿಗೆ ತ್ರೀವ ಪೈಪೋಟಿ ನೀಡಿರುವ ಹೋಂಡಾ ಟು ವ್ಹೀಲರ್ ಕಂಪನಿ ಇದೀಗ ಮೊದಲ ಸ್ಥಾನಕ್ಕೆ ಜಿಗಿದಿದೆ.

Bike Sales: ದ್ವಿಚಕ್ರ ವಾಹನ ಮಾರಾಟದಲ್ಲಿ ಹೀರೋ ನಂ.1 ಪಟ್ಟ ಕಸಿದ ಹೋಂಡಾ!
ದ್ವಿಚಕ್ರ ವಾಹನ ಮಾರಾಟದಲ್ಲಿ ಹೀರೋ ನಂ.1 ಪಟ್ಟ ಕಸಿದ ಹೋಂಡಾ!
Praveen Sannamani
|

Updated on:Dec 07, 2022 | 8:29 PM

Share

ದ್ವಿಚಕ್ರ ವಾಹನಗಳ(two wheeler) ಮಾರಾಟದಲ್ಲಿ ಕಳೆದ ಒಂದು ದಶಕದಿಂದ ಮೊದಲ ಸ್ಥಾನಕ್ಕಾಗಿ ಹೀರೋ ಮೋಟೊಕಾರ್ಪ್(Hero Motocorp) ಕಂಪನಿ ಜೊತೆ ಪೈಪೋಟಿ ಮಾಡುತ್ತಿರುವ ಹೋಂಡಾ ಟು ವ್ಹೀಲರ್(Honda two wheelers) ಕಂಪನಿ ಇದೀಗ ಹೊಸ ದಾಖಲೆ ನಿರ್ಮಿಸಿದೆ. ಒಂದಾನೊಂದು ಕಾಲದಲ್ಲಿ ಬೈಕ್ ನಿರ್ಮಾಣಕ್ಕಾಗಿ ಒಂದಾಗಿದ್ದ ಹೀರೋ ಮತ್ತು ಹೋಂಡಾ ಕಂಪನಿಗಳು ಇದೀಗ ತಮ್ಮದೇ ಆದ ಜನಪ್ರಿಯತೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಬೈಕ್ ಮಾರಾಟದಲ್ಲಿ ಅಗ್ರಸ್ಥಾನದ ಪಟ್ಟ ಕಾಯ್ದುಕೊಂಡಿದ್ದ ಹೀರೋ ಮೋಟೊಕಾರ್ಪ್ ಕಂಪನಿಗೆ ಮೊದಲ ಬಾರಿ ಹಿನ್ನಡೆಯಾಗಿದೆ.

ಬೈಕ್ ಮಾರಾಟದಲ್ಲಿ ಹೀರೋ ಕಂಪನಿಗೆ ತ್ರೀವ ಪೈಪೋಟಿ ನೀಡಿರುವ ಹೋಂಡಾ ಟು ವ್ಹೀಲರ್ ಕಂಪನಿ ಇದೀಗ ಮೊದಲ ಸ್ಥಾನಕ್ಕೆ ಜಿಗಿದೆ. ಕಳೆದ ಒಂದು ದಶಕದಿಂದ ಮೊದಲ ಸ್ಥಾನಕ್ಕಾಗಿ ಹೀರೋ ಕಂಪನಿ ಜೊತೆ ಪೈಪೋಟಿ ಮಾಡಿದ್ದ ಹೋಂಡಾ ಕಂಪನಿ ಇದೀಗ ಹೊಸ ದಾಖಲೆ ನಿರ್ಮಿಸಿದೆ. ಒಂದಾನೊಂದು ಕಾಲದಲ್ಲಿ ಬೈಕ್ ನಿರ್ಮಾಣಕ್ಕಾಗಿ ಒಂದಾಗಿದ್ದ ಹೀರೋ ಮತ್ತು ಹೋಂಡಾ ಕಂಪನಿಗಳು ಇದೀಗ ತಮ್ಮದೇ ಆದ ಜನಪ್ರಿಯತೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪ್ರತಿಸ್ಪರ್ಧಿ ಕಂಪನಿಗಳ ಯಶಸ್ವಿ ಕಥೆಯೇ ರೋಚಕವಾಗಿದೆ.

ಭಾರತವು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯಾಗಿದ್ದು, ಪ್ರಮುಖ ಕಂಪನಿಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಒಂದಾದೊಂದು ಕಾಲದಲ್ಲಿ ಜಂಟಿಯಾಗಿ ದ್ವಿಚಕ್ರ ವಾಹನ ಉತ್ಪಾದನೆ ಮಾಡುತ್ತಿದ್ದ ಹೀರೋ ಮೋಟೊಕಾರ್ಪ್ ಮತ್ತು ಹೋಂಡಾ ಟು ವ್ಹೀಲರ್ ಕಂಪನಿಗಳು ಪ್ರತ್ಯೇಕಗೊಂಡ ನಂತರವೂ ದ್ವಿಚಕ್ರ ಮಾರಾಟದಲ್ಲಿ ಅಗ್ರಸ್ಥಾನದಲ್ಲಿವೆ. ತಮ್ಮದೇ ಆದ ಗ್ರಾಹಕ ವರ್ಗವನ್ನು ಹೊಂದಿರುವ ಈ ಎರಡು ಕಂಪನಿಗಳು ನಂ.1 ಪಟ್ಟಕ್ಕಾಗಿ ಭಾರೀ ಪೈಪೋಟಿ ನಡೆಸುತ್ತಿವೆ.

ದೇಶಿಯ ಮಾರುಕಟ್ಟೆಯಲ್ಲಿನ ದ್ವಿಚಕ್ರ ವಾಹನ ಮಾರಾಟದಲ್ಲಿ ಹೀರೋ ಮತ್ತು ಹೋಂಡಾ ಕಂಪನಿಗಳ ನಡುವೆ ಭರ್ಜರಿ ಪೈಪೋಟಿ ಶುರುವಾಗಿದೆ. ಕಳೆದ ಒಂದು ದಶಕದಿಂದ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ಹೀರೋ ಮೋಟೊಕಾರ್ಪ್ ಪಟ್ಟವನ್ನು ಇದೀಗ ಹೋಂಡಾ ಅಲಂಕರಿಸಿದೆ. ಜಂಟಿಯಾಗಿದ್ದ ಸಂದರ್ಭದಲ್ಲೂ ನಂ.1 ಸ್ಥಾನ ಕಾಯ್ದುಕೊಂಡಿದ್ದ ಈ ಎರಡು ಕಂಪನಿಗಳು ಇದೀಗ ಪ್ರತ್ಯೇಕ ಕಾರ್ಯಾಚರಣೆ ನಂತರವೂ ಮೊದಲೆರಡು ಸ್ಥಾನಗಳಲ್ಲಿ ಮುಂದುವರೆದಿವೆ. ಬಜೆಟ್ ಬೆಲೆಯೊಂದಿಗೆ ಅತಿ ಹೆಚ್ಚು ಇಂಧನ ದಕ್ಷತೆಯ ಬೈಕ್ ಉತ್ಪನ್ನಗಳ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಹೊಂದಿರುವ ಎರಡು ಕಂಪನಿಗಳಲ್ಲಿ ಇದೀಗ ಹೋಂಡಾ ನಂ.1 ಬೈಕ್ ಮಾರಾಟ ಕಂಪನಿಯಾಗಿ ಹೊರಹೊಮ್ಮಿದೆ.

2022ರ ನವೆಂಬರ್ ಅವಧಿಯ ಬೈಕ್ ಮಾರಾಟದಲ್ಲಿ ಶೇ. 38ರಷ್ಟು ಬೆಳವಣಿಗೆ ಸಾಧಿಸಿರುವ ಹೋಂಡಾ ಟು ವ್ಹೀಲರ್ ಕಂಪನಿಯು ಹೀರೋ ಮೋಟೊಕಾರ್ಪ್ ಕಂಪನಿಗೆ ಶಾಕ್ ನೀಡಿದೆ. ಬಜೆಟ್ ಮಾದರಿಗಳೊಂದಿಗೆ ಪ್ರೀಮಿಯಂ ಬೈಕ್ ಮಾದರಿಗಳನ್ನು ಸಹ ಮಾರಾಟ ಮಾಡುವ ಹೋಂಡಾ ಕಂಪನಿ ಹೆಚ್ಚಿನ ಮಟ್ಟದ ಲಾಭಾಂಶ ದಾಖಲಿಸಿದೆ. ಕಳೆದ ತಿಂಗಳು ನವೆಂಬರ್ ನಲ್ಲಿ ಹೀರೋ ಮೋಟೊಕಾರ್ಪ್ ಕಂಪನಿಯು ಒಟ್ಟು 3.80 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದರೆ ಹೋಂಡಾ ಕಂಪನಿಯು 3.54 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಬೈಕ್ ಮಾರಾಟದಲ್ಲಿ ಹೀರೋ ಕಂಪನಿಯು ಅಗ್ರಸ್ಥಾನದಲ್ಲಿದ್ದರೂ ವಾರ್ಷಿಕ ಬೆಳವಣಿಯಲ್ಲಿ ಹೋಂಡಾ ಕಂಪನಿಯು ಅಗ್ರಸ್ಥಾನದಲ್ಲಿದೆ.

ಹತ್ತಕ್ಕೂ ಹೆಚ್ಚು ಬಜೆಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಹೀರೋ ಕಂಪನಿಯು ಕಳೆದ ತಿಂಗಳು ಹೋಂಡಾ ಕಂಪನಿಗಿಂತಲೂ ಕಡಿಮೆ ಬೆಳವಣಿಗೆ ಸಾಧಿಸಿದೆ. ಕಳೆದ ತಿಂಗಳು ವಾರ್ಷಿಕ ಬೆಳವಣಿಯಲ್ಲಿ ಹೀರೋ ಕಂಪನಿ ಶೇ. 15 ರಷ್ಟು ಬೆಳವಣಿಗೆ ಸಾಧಿಸಿದರೆ ಹೋಂಡಾ ಕಂಪನಿಯು ಶೇ. 38 ರಷ್ಟು ಬೆಳಣಿಗೆ ಸಾಧಿಸಿದೆ. ಇನ್ನುಳಿದಂತೆ ವಾರ್ಷಿಕ ಬೆಳಣಿಗೆಯಲ್ಲಿ ರಾಯಲ್ ಎನ್ ಫೀಲ್ಡ್, ಸುಜುಕಿ ಕಂಪನಿಗಳು ಕೂಡಾ ಉತ್ತಮ ಬೆಳವಣಿಗೆ ಸಾಧಿಸಿದ್ದು, ಹೋಂಡಾ ದ್ವಿಚಕ್ರ ವಾಹನಗಳಿಗೆ ಭರ್ಜರಿ ಬೇಡಿಕೆ ದಾಖಲಾಗುತ್ತಿದೆ. ವಿವಿಧ ಮಾದರಿಯ ಬೈಕ್ ಮತ್ತು ಸ್ಕೂಟರ್ ಗಳ ಮಾರಾಟದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಂಪನಿ ಪ್ರೀಮಿಯಂ ಬೈಕ್ ಗಳ ಮಾರಾಟದಲ್ಲೂ ಗಮನಸೆಳೆಯುತ್ತಿದೆ.

2010ರಲ್ಲಿ ಹೀರೋ ಜೊತೆಗಿನ ಜಂಟಿ ಉದ್ಯಮದಿಂದ ಬೇರ್ಪಟ್ಟ ಹೋಂಡಾ ಕಂಪನಿಯು ಸದ್ಯ ಪ್ರತ್ಯೇಕ ಕಾರ್ಯಾಚರಣೆ ಹೊಂದಿದ್ದು, ಭಾರತೀಯ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಲವಾರು ಹೊಸ ಮಾದರಿಗಳನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವಾ, ಡಿಯೋ, ಗ್ರಾಜಿಯಾ ಸ್ಕೂಟರ್ ಗಳ ಜೊತೆಗೆ ಯುನಿಕಾರ್ನ್, ಎಸ್ ಪಿ 125, ಎಕ್ಸ್ ಬ್ಲೇಡ್, ಹಾರ್ನೆಟ್, ಲಿವೋ ಮತ್ತು ಶೈನ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಇದರೊಂದಿಗೆ ಹೋಂಡಾ ಕಂಪನಿಯು ಪ್ರೀಮಿಯಂ ಬೈಕ್ ಮಾದರಿಗಳಿಗಾಗಿ ಬಿಗ್ ವಿಂಗ್ ಪ್ಲ್ಯಾಟ್ ಫಾರ್ಮ್ ಹೊಂದಿದ್ದು, ಇದರಲ್ಲಿ ಸಿಬಿ300ಎಫ್, ಹೈನೆಸ್ ಸಿಬಿ3500, ಸಿಬಿ350 ಆರ್ ಎಸ್, ಸಿಬಿ500 ಎಕ್ಸ್, ಸಿಬಿ650ಆರ್ ಸಿಬಿಆರ್ 650ಆರ್, ಸಿಬಿಆರ್ 1000 ಆರ್ ಆರ್ ಮತ್ತು ಆಫ್ರಿಕಾ ಟ್ವಿನ್ ಬೈಕ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

Published On - 4:27 pm, Wed, 7 December 22