ಇಯರ್ ಎಂಡ್ ಆಫರ್: ಮಹೀಂದ್ರಾ ಕಾರುಗಳ ಮೇಲೆ ರೂ. 1 ಲಕ್ಷದ ತನಕ ಡಿಸ್ಕೌಂಟ್
ಮಹೀಂದ್ರಾ ಕಂಪನಿಯು ತನ್ನ ಪ್ರಮುಖ ಎಸ್ ಯುವಿ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ ಮಾಡಿದ್ದು, ಪ್ರಮುಖ ಕಾರುಗಳ ಖರೀದಿ ಮೇಲೆ ರೂ. 1 ಲಕ್ಷದ ತನಕ ಆಫರ್ ನೀಡುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ(Car Sales) ಮುಂಚೂಣಿ ಹೊಂದಿರುವ ಮಹೀಂದ್ರಾ(Mahindra) ಕಂಪನಿಯು ತನ್ನ ಪ್ರಮುಖ ಎಸ್ ಯುವಿ ಕಾರುಗಳ ಖರೀದಿ ಮೇಲೆ ಡಿಸೆಂಬರ್ ಅವಧಿಯ ಆಫರ್ ಘೋಷಣೆ ಮಾಡಿದ್ದು, ವರ್ಷಾಂತ್ಯದಲ್ಲಿ ಎಸ್ ಯುವಿ ಕಾರು ಖರೀದಿದಾರರಿಗೆ ಇದೊಂದು ಸುವರ್ಣಾವಕಾಶ ಎನ್ನಬಹುದು. ಮಹೀಂದ್ರಾ ಹೊಸ ಆಫರ್ ಗಳಲ್ಲಿ ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಗಳು ಲಭ್ಯವಿದ್ದು, ರೂ. 20 ಸಾವಿರದಿಂದ ರೂ. 1 ಲಕ್ಷದ ತನಕ ಉಳಿತಾಯ ಮಾಡಬಹುದಾಗಿದೆ. ಹಾಗಾದಾರೆ ಯಾವ ಕಾರಿನ ಮೇಲೆ ಎಷ್ಟು ಆಫರ್ ಲಭ್ಯವಿದೆ ಎಂಬುವುದನ್ನು ಇಲ್ಲಿ ತಿಳಿಯೋಣ ಬನ್ನಿ..
ಎಕ್ಸ್ ಯುವಿ300
ಕಂಪ್ಯಾಕ್ಟ್ ಎಸ್ ಯುವಿಯಾಗಿರುವ ಎಕ್ಸ್ ಯುವಿ300 ಕಾರು ಖರೀದಿಯ ಮೇಲೆ ಮಹೀಂದ್ರಾ ಕಂಪನಿಯು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 53 ಸಾವಿರದಿಂದ ರೂ. 1 ಲಕ್ಷದ ತನಕ ಆಫರ್ ನೀಡುತ್ತಿದೆ. ಎಕ್ಸ್ ಯುವಿ300 ಕಾರಿನ ಡಬ್ಲ್ಯು8(ಒ) ವೆರಿಯೆಂಟ್ ಖರೀದಿಯ ಮೇಲೆ ಹೆಚ್ಚಿನ ಆಫರ್ ಲಭ್ಯವಿದ್ದು, ಟರ್ಬೊ ಸ್ಪೋಟ್ ಆವೃತ್ತಿಯ ಮೇಲೂ ರೂ. 60 ಸಾವಿರ ಡಿಸ್ಕೌಂಟ್ ಸಿಗಲಿದೆ.
ಇದನ್ನೂ ಓದಿ: ತಾಂತ್ರಿಕ ಸಮಸ್ಯೆಯಿಂದಾಗಿ ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ ಎನ್ ಹಿಂಪಡೆದ ಮಹೀಂದ್ರಾ
ಬೊಲೆರೊ ನಿಯೋ
ಹೊಸ ಬೊಲೆರೊ ನಿಯೋ ಎಸ್ ಯುವಿ ಕಾರಿನ ಖರೀದಿಯ ಮೇಲೆ ಮಹೀಂದ್ರಾ ಕಂಪನಿಯು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 68 ಸಾವಿರದಿಂದ ರೂ. 95 ಸಾವಿರ ತನಕ ಆಫರ್ ನೀಡುತ್ತಿದೆ. ಬೊಲೆರೊ ನಿಯೋ ಎಸ್ ಯುವಿಯ ಎನ್ 10 ವೆರಿಯೆಂಟ್ ಗಳ ಮೇಲೆ ಹೆಚ್ಚಿನ ಆಫರ್ ಲಭ್ಯವಿದ್ದು, ಎಂಟ್ರಿ ಲೆವಲ್ ಎಸ್ ಯುವಿ ಖರೀದಿದಾರರಿಗೆ ಇದೊಂದು ಅತ್ಯುತ್ತಮ ಆಫರ್ ಎನ್ನಬಹುದು.
ಬೊಲೆರೊ
ಮಹೀಂದ್ರಾ ಕಂಪನಿಯು ಜನಪ್ರಿಯ ಬೊಲೆರೊ ಎಸ್ ಯುವಿ ಖರೀದಿಯ ಮೇಲೂ ವಿವಿಧ ವೆರಿಯೆಂಟ್ ಆಧರಿಸಿ ರೂ. 33 ಸಾವಿರದಿಂದ ರೂ. 95 ಸಾವಿರ ತನಕ ಆಫರ್ ಘೋಷಣೆ ಮಾಡಿದೆ. ಬೊಲೆರೊ ಎಸ್ ಯುವಿಯ ಬಿ8 (ಒ) ವೆರಿಯೆಂಟ್ ಮೇಲೆ ಹೆಚ್ಚಿನ ಆಫರ್ ನೀಡುತ್ತಿದ್ದು, ಎಸ್ ಯುವಿ ಖರೀದಿದಾರರಿಗೆ ಇದೊಂದು ಅತ್ಯುತ್ತಮ ಅವಕಾಶ ಎನ್ನಬಹುದು.
ಮರಾಜೊ
ಎಂಪಿವಿ ಮಾದರಿಯಾದ ಮರಾಜೊ ಖರೀದಿ ಮೇಲೆ ಮಹೀಂದ್ರಾ ಕಂಪನಿಯು ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ. 60,200 ರಿಂದ ರೂ. 67,200 ತನಕ ಆಫರ್ ಘೋಷಣೆ ಮಾಡಿದ್ದು, ಎಂ2 ಮತ್ತು ಎಂ4 ಪ್ಲಸ್ ವೆರಿಯೆಂಟ್ ಗಳ ಖರೀದಿಯ ಮೇಲೆ ಹೆಚ್ಚಿನ ಆಫರ್ ಸಿಗಲಿದೆ.
ಇದನ್ನೂ ಓದಿ: ಇನೋವಾ ಕ್ರಿಸ್ಟಾದಲ್ಲಿ ಮತ್ತೆ ಡೀಸೆಲ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ!
ಥಾರ್
ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಆಫ್ ರೋಡ್ ಎಸ್ ಯುವಿ ಮಾದರಿಯಾದ ಥಾರ್ ಖರೀದಿಯ ಮೇಲೂ ಆಫರ್ ನೀಡುತ್ತಿದೆ. ವಿವಿಧ ವೆರಿಯೆಂಟ್ ಆಧರಿಸಿ ಕಂಪನಿಯು ರೂ. 20 ಸಾವಿರ ಆಫರ್ ನೀಡುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮಾದರಿಗಳ ಮೇಲೆ ತಲಾ ರೂ. 20 ಸಾವಿರದಷ್ಟು ಆಫರ್ ನೀಡುತ್ತಿದೆ.
ಈ ಕಾರುಗಳಿಲ್ಲ ಆಫರ್
ಹೊಸ ಆಫರ್ ಗಳಲ್ಲಿ ಮಹೀಂದ್ರಾ ಕಂಪನಿಯು ಎಕ್ಸ್ ಯುವಿ300, ಬೊಲೆರೊ ನಿಯೋ, ಬೊಲೆರೊ, ಥಾರ್, ಮರಾಜೊ ಹೊರತುಪಡಿಸಿ ಸ್ಕಾರ್ಪಿಯೋ ಎನ್, ಸ್ಕಾರ್ಪಿಯೊ ಕ್ಲಾಸಿಕ್ ಮತ್ತು ಎಕ್ಸ್ ಯುವಿ700 ಕಾರುಗಳ ಮೇಲೆ ಯಾವುದೇ ಆಫರ್ ನೀಡಿಲ್ಲ.
Published On - 8:08 pm, Wed, 7 December 22